ಬಾಗಲಕೋಟೆಯ 16ರ ಪೋರನಿಗೆ ಏಷ್ಯಾ ಬುಕ್ ಆಫ್ ರೆಕಾರ್ಡ್ ಗೌರವ
Team Udayavani, Dec 18, 2020, 3:24 PM IST
ಬಾಗಲಕೋಟೆ: ಮಾಹಿತಿ ತಂತ್ರಜ್ಞಾನ ವಿಷಯದಲ್ಲಿ ಶಿಕ್ಷಕರಿಗೇ ತರಬೇತಿ ಕೊಟ್ಟ ಬಾಗಲಕೋಟೆಯ 16 ವರ್ಷದ ಬಾಲಕ ಏಷ್ಯಾ ಬುಕ್ ಆಫ್ ರೆಕಾರ್ಡ್ ಮತ್ತು ಇಂಡಿಯಾ ಬುಕ್ ಆಫ್ ರೆಕಾರ್ಡ್ ಮಾಡಿದ್ದಾನೆ. ಮೊಹ್ಮದ ಅಜರುದ್ದೀನ್ ಬಡೇಖಾನವರ ಸಾಧಕ ಬಾಲಕ.
1ರಿಂದ 10ನೇ ತರಗತಿವರೆಗೆ ಬಾಗಲಕೋಟೆಯಕೇಂದ್ರೀಯ ವಿದ್ಯಾಲಯದಲ್ಲಿ ವ್ಯಾಸಂಗಮಾಡಿದ ಈತ, ಸದ್ಯ ಮಂಗಳೂರಿನ ಎಕ್ಸ್ ಪರ್ಟ್ ಗ್ರುಪ್ ಆಫ್ ಇನ್‌ಸ್ಟಿಟ್ಯೂಟ್ ನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದಾನೆ. ಈತನ ತಂದೆ ರಸೂಲ್‌ಸಾಹೇಬ್ ಬಡೇಖಾನವರ ನವನಗರದ ಆದರ್ಶವಿದ್ಯಾಲಯದಲ್ಲಿ ಶಿಕ್ಷಕರಾಗಿದ್ದು, ತಾಯಿ ನುಜರತ್ ಪರವೀಣ ಖತೀಬ್ ಕೂಡ ಸರ್ಕಾರಿ ಉರ್ದು ಶಾಲೆ ನಂ.10 ರಲ್ಲಿ ಶಿಕ್ಷಕಿಯಾಗಿದ್ದಾರೆ.
16 ವರ್ಷದ ಬಾಲಕ ಮೊಹ್ಮದ ಅಜರುದ್ದೀನ್‌ಗೆ ಚಿಕ್ಕಂದಿನಿಂದಲೂ ಮಾಹಿತಿ ತಂತ್ರಜ್ಞಾನ ವಿಷಯದ ಮೇಲೆ ವಿಶೇಷ ಆಸಕ್ತಿ. ಹೀಗಾಗಿ 2018ರಲ್ಲಿ8ನೇ ತರಗತಿ ಇದ್ದಾಗಲೇ ಕೇಂದ್ರೀಯ ವಿದ್ಯಾಲಯ ಸಂಘಟನಾದಿಂದ ಮೈಸೂರಿನಲ್ಲಿ ನಡೆದ ಮಾಹಿತಿ ತಂತ್ರಜ್ಞಾನ ತರಬೇತಿಯಲ್ಲಿ ವಿಶೇಷ ತರಬೇತಿ ಪಡೆದಿದ್ದ. ಆಗಲೂ ಈತನಿಗೆ ಪ್ರಶಸ್ತಿ ಹೆಗಲೇರಿತ್ತು.
4 ಸಾವಿರಕ್ಕೂ ಹೆಚ್ಚು ಶಿಕ್ಷಕರಿಗೆ ತರಬೇತಿ: ಶಿಕ್ಷಕರು, ವಿಶೇಷ ಸಂಪನ್ಮೂಲ ವ್ಯಕ್ತಿಗಳು ಮಕ್ಕಳಿಗೆ ತರಬೇತಿ ನೀಡುವುದು ಸಾಮಾನ್ಯ. ಆದರೆ, ಈ 16ರ ಪೋರ ಮೊಹ್ಮದ ಅಜರುದ್ದೀನ್ ಬಡೇಖಾನವರ, ಶಿಕ್ಷಕರಿಗೇ ತರಬೇತಿ ನೀಡಿ ಇಡೀ ದೇಶದ ಗಮನ ಸೆಳೆದಿದ್ದಾನೆ. ಕೋವಿಡ್ ಹಿನ್ನೆಲೆಯಲ್ಲಿ ದೇಶದಲ್ಲಿ ಲಾಕ್‌ಡೌನ್ ಜಾರಿಗೊಂಡಾಗ ಶಿಕ್ಷಕರು ಮಾಹಿತಿತಂತ್ರಜ್ಞಾನ ಬಳಸಿಕೊಂಡು ಮಕ್ಕಳಿಗೆ ವಿದ್ಯಾಭ್ಯಾಸ ನಡೆಸಲು ಹಲವು ತೊಡಕುಉಂಟಾಗಿದ್ದವು. ಆ ವಿಷಯದ ಕುರಿತು ವಿಶೇಷ ಆಸಕ್ತಿ ವಹಿಸಿ ಅಧ್ಯಯನ
ಮಾಡಿದ್ದ ಮೊಹ್ಮದ ಅಜರುದ್ದೀನ್, ದೇಶದ ವಿವಿಧ ಭಾಗದ ಸುಮಾರು 4 ಸಾವಿರಕ್ಕೂ ಹೆಚ್ಚು ಶಿಕ್ಷಕರಿಗೆ ಮಾಹಿತಿ ತಂತ್ರಜ್ಞಾನ ಬಳಕೆ, ಸಮಸ್ಯೆಗಳ ನಿವಾರಣೆ ಹಾಗೂ ಆನ್‌ಲೈನ್ ಮೂಲಕ ಪರಿಣಾಮಕಾರಿ ಪಾಠ ಬೋಧನೆ ವಿಧಾನ ಕುರಿತು ತರಬೇತಿ ನೀಡಿದ್ದ. ಹೀಗಾಗಿ ಆತ ಇದೀಗ ಕಂಪ್ಯೂಟರ್ ಕೋಡಿಂಗ್‌ನಲ್ಲಿ ವಿಶ್ವದಾಖಲೆ ಮಾಡಿದ್ದಾನೆ. ಈತನ ಹೆಸರೀಗ ಏಷ್ಯಾ ಬುಕ್ ಆಫ್ ರೆಕಾರ್ಡ್ ಮತ್ತು ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲಾಗಿದೆ.
ಬಾಗಲಕೋಟೆಯಲ್ಲಿದ್ದೇ ಈ ಸಾಧನೆ: ಬಾಲಕ ಮೊಹ್ಮದ ಅಜರುದ್ದೀನ್ ಸದ್ಯ ಬಾಗಲಕೋಟೆ ನವನಗರದ ಸೆಕ್ಟರ್ ನಂ.2ರಲ್ಲಿ ತಂದೆ-ತಾಯಿ ಜತೆಗೆಗಿದ್ದು, ತನ್ನಪಿಯುಸಿ ತರಗತಿಗಳನ್ನು ಆನ್‌ಲೈನ್‌ನಲ್ಲೇ ಪಡೆಯುತ್ತಿದ್ದಾನೆ. ದೇಶಾದ್ಯಂತ ಲಾಕ್‌ಡೌನ್ ಜಾರಿಯಾದ ಬಳಿಕ ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿ ನಡೆಸುವ ವೇಳೆಆಗುವ ಸಮಸ್ಯೆ ಕುರಿತು ಪರಿಹಾರ ಕುರಿತು ಲಖೌನ್‌ನ 1 ಮಾರ್ಕ್ಸ್ ಸೆಲ್ಯೂಶೆನ್ ಸಂಸ್ಥೆ ಸೆ.4ರಿಂದ 8ರವರೆಗೆ ಒಟ್ಟು ಐದು ದಿನಗಳ ರಾಷ್ಟ್ರೀಯ ವೆಬಿನಾರ್ ನಡೆಸಿತ್ತು.
ಈ ವೆಬಿನಾರ್‌ನಲ್ಲಿ ಹೌ ಟು ಕ್ರಿಯೆಟ್ ಅಡ್ಮಿಟೆಟ್ ವಿಡಿಯೋಸ್ ಆ್ಯಸ್ ರಿಸೋರ್ಸ್ ಪರ್ಸ್‌ನ್ ವಿಷಯದ ಕುರಿತು ದೇಶದ 4 ಸಾವಿರಕ್ಕೂ ಹೆಚ್ಚು ಶಿಕ್ಷಕರಿಗೆ ತರಬೇತಿ ನೀಡಿದ್ದ. ಈ ತರಬೇತಿ ಪರಿಣಾಮಕಾರಿಯಾಗಿದೆ. ಈ ಬಾಲಕನ ಸಾಧನೆ ಇಂಡಿಯಾಮತ್ತು ಏಷ್ಯಾ ಬುಕ್ ಆಫ್ ರೆಕಾರ್ಡ್‌ಗೆ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Politicss; 1008 ಸಾಧುಸಂತರ ಪಾದಪೂಜೆ ಮೂಲಕ ಕ್ರಾಂತಿವೀರ ಬ್ರಿಗೇಡ್ ಗೆ ಚಾಲನೆ: ಈಶ್ವರಪ್ಪ
India: ಒಂದು ದೇಶ ಒಂದು ಚುನಾವಣೆ ಜಾರಿ ಆಗಲಿ: ಪೇಜಾವರ ಸ್ವಾಮೀಜಿ
Rabkavi Banahatti: ಲೋಕ ಅದಾಲತ್ ನಲ್ಲಿ ಒಂದಾದ ದಂಪತಿಗಳು
ವಿಳಾಸ ಕೇಳುವ ನೆಪದಲ್ಲಿ ವ್ಯಕ್ತಿಯ ಕೊರಳಲ್ಲಿದ್ದ ಚಿನ್ನದ ಚೈನ್ ಕದ್ದ ಅಪರಿಚಿತ ವ್ಯಕ್ತಿ
Mudhol: ಬಸ್ ಗೆ ಡಿಕ್ಕಿ ಹೊಡೆದ ಬೈಕ್… ಸವಾರರಿಗೆ ಗಂಭೀರ ಗಾಯ
MUST WATCH
ಹೊಸ ಸೇರ್ಪಡೆ
Telugu actor: ಸಹ ನಟಿಗೆ ಲೈಂಗಿಕ ಕಿರುಕುಳ; ಖ್ಯಾತ ನಟನ ಬಂಧನ
Ambedkar row: ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜಕೀಯ ಬಿಟ್ಟು ಹೋಗಲಿ ಎಂದ ಲಾಲು ಪ್ರಸಾದ್
ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಎಲ್ಲಿ…? ಇಲ್ಲಿದೆ ನೋಡಿ ಮಾಹಿತಿ
Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.