ಕುಳಗೇರಿ ಕ್ರಾಸ್: ಡಾಬಾದಲ್ಲಿದ್ದ ನಾಲ್ಕೈದು ಜನರ ಮೇಲೆ ಕಿಡಿಗೇಡಿಗಳ ದಾಳಿ
ಕೆರೂರ ಗಲಾಟೆ ಪ್ರಕರಣ ಬೆನ್ನಲ್ಲೆ ಈ ಘಟನೆ ; ಉದ್ವಿಗ್ನ ಸ್ಥಿತಿ
Team Udayavani, Jul 8, 2022, 7:42 PM IST
ಕುಳಗೇರಿ ಕ್ರಾಸ್: ಗ್ರಾಮದ ಹೊರವಲಯದ ರಾಷ್ಟೀಯ ಹೆದ್ದಾರಿಗೆ ಹೊಂದಿಕೊಂಡ ಕೆರೂರ ಗ್ರಾಮದ ಮಳಗಲಿ ಡಾಬಾದಲ್ಲಿದ್ದ ನಾಲ್ಕೈದು ಜನರ ಮೇಲೆ ಕಿಡಿಗೇಡಿಗಳು ಹಾಡ ಹಗಲೆ ಹಲ್ಲೆ ನಡೆಸಿದ್ದಾರೆ.
ಕೆರೂರ ಗಲಾಟೆ ಪ್ರಕರಣ ಬೆನ್ನಲ್ಲೆ ಈ ಘಟನೆ ನಡೆದಿದ್ದು ಕೆರೂರ ಗಾಲಾಟೆಗೂ ಈ ಪ್ರಕರಣಕ್ಕೂ ಸಂಬಂದ ಇದೆಯಾ ಎಂಬ ಸಂಶಯ ಶುರುವಾಗಿದೆ. ಕೆರೂರ ಗಲಾಟೆಯಲ್ಲಿ ಬಾಗಿಯಾದವನಿಗೆ ಡಾಬಾದಲ್ಲಿ ಆಶ್ರಯ ಕೊಟ್ಟಿದ್ದಾರೆಂಬ ಕಾರಣಕ್ಕೆ ಈ ಗಲಾಟೆ ನಡೆದಿರಬಹುದು ಎಂಬ ಮಾತು ಕೇಳಿಬರುತ್ತಿದೆ.
ಕೆರೂರ ನಿವಾಸಿಗಳಾದ ಮಳಗಲಿ ಎಂಬುವರ ಡಾಬಾ ಇದಾಗಿದ್ದು ಹಾಡ ಹಗಲೆ ನಡೆದ ಗಲಾಟೆಯಲ್ಲಿ ರಾಜೇಸಾಬ, ಹನೀಫ ಹಾಗೂ ಮಲೀಕ್ ಎಂಬುವರಿಗೆ ತಿವ್ರ ಗಾಯಗಳಾಗಿವೆ. ಒಟ್ಟು ಐದು ಜನರಿಗೆ ಗಾಯಗಳಾಗಿದ್ದು ಮೂವರನ್ನು ತಕ್ಷಣ ಅಂಬುಲೆನ್ಸ್ ಮೂಲಕ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಕೆರೂರ ಗಲಾಟೆ ಪ್ರಕರಣ ಬೆನ್ನಲ್ಲೆ ಈ ಹಲ್ಲೆ ನಡೆದಿದ್ದು ಸಾಕಷ್ಟು ಅನುಮಾನಗಳು ಹುಟ್ಟಿಕೊಂಡಿವೆ.
ಸದ್ಯ ಡಾಬಾ ಬಳಿ ಹೆಚ್ಚುವರಿ ಪೊಲೀಸ್ ನಿಯೋಜಿಸಲಾಗಿದೆ. ಘಟನೆ ನಡೆದ ಸ್ಥಳದಲ್ಲಿ ಬಿದ್ದಿದ್ದ ನಾಲ್ಕೈದು ಬಡಿಗೆಗಳನ್ನ ಹಾಗೂ ಡಾಬಾ ಪಕ್ಕದಲ್ಲಿದ್ದ ಕೋಳಿ ಫಾರ್ಮ್ ನಲ್ಲಿನ ಸಿಸಿ ಟಿವಿ ಫೂಟೇಜ್ ಪಡೆದುಕೊಂಡಿದ್ದಾರೆ. ಡಾಬಾದ ಸುತ್ತ ಹೊಲ-ಗದ್ದೆಗಳಲ್ಲಿ ಸಂಚರಿಸಿ ಮಾಹಿತಿ ಕಲೆಹಾಕಿದರು. ಈ ಘಟನೆ ಸಂಬಂದ ಪಟ್ಟಂತೆ ಗ್ರಾಮದ ಕೆಲವರನ್ನ ವಿಚಾರಣೆ ನಡೆಸಲಾಗುತ್ತಿದೆ.
ಘಟನೆ ಬೆನ್ನಲ್ಲೆ ಸ್ಥಳಕ್ಕೆ ಎಸ್.ಪಿ ಜಯಪ್ರಕಾಶ ಭೇಟಿ ನೀಡಿದ್ದು ಹಲ್ಲೆ ನಡೆದ ಸ್ಥಳದಲ್ಲಿ ಪರಿಶೀಲನೆ ನಡೆಸಿದರು. ಘಟನೆ ಬಗ್ಗೆ ಮಾಹಿತಿ ಪಡೆಯುತ್ತಿದ್ದವೆ ಸದ್ಯ ಗಾಯಾಳುಗಳನ್ನ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪತ್ರಿಕೆಗೆ ತಿಳಿಸಿದರು. ಬಾಗಲಕೋಟೆ ಡಿಎಸ್‌ಪಿ ಹೊಸಹಳ್ಳಿ, ಬಾದಾಮಿ ಪ್ರಭಾರಿ ಸಿಪಿಐ ವಿಜಯ ಮುರಗುಂಟಿ, ಪಿಎಸ್‌ಐ ನೇತ್ರಾವತಿ ಪಾಟೀಲ ಸೇರಿದಂತೆ ಅಧಿಕಾರಿಗಳ ತಂಡ ಭೇಟಿ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ
ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು
ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್ ನಕ್ಸಲ್ ಸಾವು
ಹೊಸ ಸೇರ್ಪಡೆ
Thailand ನಲ್ಲಿ ಜೇನಿನ ಆಯುರ್ವೇದ ಔಷಧ ಕಥೆ ಹೇಳಿದ ಅಪ್ಪ,ಮಗಳು
Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Belagavi: ಪೂರ್ಣಾವಧಿ ಅಧಿವೇಶನದಲ್ಲಿ ಸಮಸ್ಯೆಗಳ ಪೂರ್ಣ ಚರ್ಚೆಯಾಗಲಿ: ಡಾ.ಪ್ರಭಾಕರ್ ಕೋರೆ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 38 ಬ*ಲಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.