ಕಾಂಗ್ರೆಸ್ ಶಾಸಕ ಸಿದ್ದು ನ್ಯಾಮಗೌಡ ಅಶ್ಲೀಲ ಆಡಿಯೋ ಬಹಿರಂಗ?
Team Udayavani, Apr 8, 2018, 6:05 AM IST
ಬಾಗಲಕೋಟೆ: ಎಚ್.ವೈ.ಮೇಟಿ ವಿವಾದ ತಣ್ಣಗಾದ ಬೆನ್ನಲ್ಲೇ ಜಿಲ್ಲೆಯ ಜಮಖಂಡಿ ಶಾಸಕ ಸಿದ್ದು ನ್ಯಾಮಗೌಡ, ಮಹಿಳೆಯೊಂದಿಗೆ ಅಶ್ಲೀಲವಾಗಿ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಬಹಿರಂಗಗೊಂಡಿದ್ದು, ಜಿಲ್ಲೆಯ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ.
ಶಾಸಕ ನ್ಯಾಮಗೌಡ ಹಾಗೂ ಮಹಿಳೆಯೊಬ್ಬರು ಒಟ್ಟು 16 ನಿಮಿಷ 8 ಸೆಕೆಂಡುಗಳ ಕಾಲ ಮಾತನಾಡಿದ್ದು, ಆಡಿಯೋದಲ್ಲಿ ಅಶ್ಲೀಲ ಪದಗಳಿವೆ. ಈ ಆಡಿಯೋ, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆ. ಶನಿವಾರ ಸಂಜೆ ಎಸ್ಪಿ ಕಚೇರಿಗೆ ಆಗಮಿಸಿದ ಶಾಸಕ ಸಿದ್ದು ನ್ಯಾಮಗೌಡ, ಎಸ್ಪಿ ಸಿ.ಬಿ. ರಿಷ್ಯಂತ ಅವರಿಗೆ ದೂರು ನೀಡಿದ್ದಾರೆ.
ನನ್ನ ಧ್ವನಿ ಹೋಲುವ ವ್ಯಕ್ತಿ ಮಹಿಳೆಯೊಂದಿಗೆ ಅಶ್ಲೀಲವಾಗಿ ಮಾತನಾಡಿರುವ ಆಡಿಯೋ ಹರಿದಾಡುತ್ತಿದೆ. ಅಂತಹ ಸಂಭಾಷಣೆ ನಾನು ಮಾಡಿಲ್ಲ. ಚುನಾವಣೆ ಸಮಯದಲ್ಲಿ ನನ್ನ ಹೆಸರು ಕೆಡಿಸಲು ಈ ರೀತಿ ಮಾಡಿದ್ದಾರೆ. ಇದರ ಬಗ್ಗೆ ಸಂಪೂರ್ಣ ತನಿಖೆಯಾಗಬೇಕು. ಈ ಕುರಿತು ಎಸ್ಪಿಗೆ ದೂರು ನೀಡಿದ್ದು, ಕ್ರಮ ಕೈಗೊಳ್ಳಲು ದೂರು ಸಲ್ಲಿಸಿದ್ದೇನೆ ಎಂದು ಶಾಸಕ ಸಿದ್ದು ನ್ಯಾಮಗೌಡ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಆ ಸಿದ್ದು ನ್ಯಾಮಗೌಡ ಹೋದ ! :
ಒಟ್ಟು 16.08 ನಿಮಿಷದ ಆಡಿಯೋದಲ್ಲಿ ಮಹಿಳೆಯೇ ಫೋನ್ ಮಾಡಿ ಮಾತನಾಡಿದ್ದಾಳೆ. ಮಹಿಳೆಯ ಧ್ವನಿ ಸ್ಪಷ್ಟವಾಗಿ ಕೇಳುತ್ತಿದ್ದು, ಆ ಕಡೆಯಿಂದ ಶಾಸಕ ನ್ಯಾಮಗೌಡರದ್ದು ಎನ್ನಲಾದ ಧ್ವನಿ ಕೆಲವೊಮ್ಮೆ ಸ್ಪಷ್ಟ, ಕೆಲವೊಮ್ಮೆ ಅಸ್ಪಷ್ಟವಾಗಿ ಕೇಳಿಸುತ್ತದೆ. ಹೀಗಾಗಿ ಇದು ನಕಲಿನಾ, ಅಸಲಿನಾ ಎಂಬ ಚರ್ಚೆ ಜಿಲ್ಲೆಯಲ್ಲಿ ನಡೆಯುತ್ತಿದೆ. ನನ್ನ ಜತೆಗೆ ಮಾತಾಡುದು ಬಿಟ್ಟಿರಿ, ಬಾಳ್ ಸಾರಿ ಫೋನ್ ಮಾಡೀನಿ ಎಂದು ಮಹಿಳೆ ಹೇಳುತ್ತಿದ್ದರೆ, ಆ ಹಿಂದಿನ ಸಿದ್ದು ನ್ಯಾಮಗೌಡ ಹೋದ ಎಂದು ಆ ಕಡೆಯಿಂದ ಹೇಳಲಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Adalat: 39 ಲಕ್ಷ ಕೇಸ್ ಇತ್ಯರ್ಥ; ಪುನಃ ಒಂದಾದ 307 ದಂಪತಿ
ಮೂಲಗೇಣಿದಾರರ ಅರ್ಜಿ ತತ್ಕ್ಷಣ ಇತ್ಯರ್ಥಗೊಳಿಸಲು ಐವನ್ ಮನವಿ
Karnataka Govt.,: ಮಂಗಳೂರಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಮನವಿ
Belagavi: ಎಐಸಿಸಿ ಅಧಿವೇಶನದ ಶತಮಾನೋತ್ಸವಕ್ಕೆ ಅಡ್ಡಿಪಡಿಸಿದರೆ ಕ್ರಮ: ಸಿದ್ದರಾಮಯ್ಯ
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.