ಸುಂದರ ಸಮುದಾಯ ಶೌಚಾಲಯಕ್ಕೆ ಪ್ರಶಸ್ತಿ
Team Udayavani, Dec 3, 2019, 5:07 PM IST
ಬಾಗಲಕೋಟೆ: ಗ್ರಾಮೀಣ ಭಾಗದಲ್ಲಿ ಶೌಚಾಲಯ ಬಳಕೆ ಹಾಗೂ ಸ್ವತ್ಛತೆ ಕುರಿತು ಜಾಗೃತಿ ಮೂಡಿಸುವ ಜತೆಗೆ ಬಳಕೆಗೆ ಉತ್ತೇಜನ ನೀಡಲು ಕೇಂದ್ರ ಸರ್ಕಾರ ಪ್ರಶಸ್ತಿ ನೀಡಲು ಮುಂದಾಗಿದೆ.
ಹೌದು, ಸ್ವಚ್ಛ ಭಾರತ ಮಿಷಯನ್ (ಗ್ರಾಮೀಣ) ಯೋಜನೆಯಡಿ ಸ್ವಚ್ಛ, ಸುಂದರ ಸಮುದಾಯ ಶೌಚಾಲಯ ಆಂದೋಲನ ಕೈಗೊಂಡಿದ್ದು, ಜಿಲ್ಲೆ ಯಲ್ಲಿಗ್ರಾ.ಪಂ.ನಿಂದ ನಿರ್ಮಿಸಿದ ಸಮುದಾಯ ಶೌಚಾಲಯಗಳನ್ನು ಕಡ್ಡಾಯವಾಗಿಬಳಕೆ ಮಾಡಿಸುವ ನಿಟ್ಟಿನಲ್ಲಿ ಈ ಪ್ರಯತ್ನ ನಡೆದಿದ್ದು, ಜಿಲ್ಲೆಯಲ್ಲಿ ಅಷ್ಟೊಂದು ಪ್ರತಿಕ್ರಿಯೆ ವ್ಯಕ್ತವಾಗುತ್ತಿಲ್ಲ ಎನ್ನಲಾಗಿದೆ.
ಎಷ್ಟಿವೆ ಸಮುದಾಯ ಶೌಚಾಲಯ?: ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳಲು ಸ್ಥಳದ ಕೊರತೆ ಇರುವವರಿಗೆ ಹಾಗೂ ಗ್ರಾಮೀಣ ಭಾಗದಲ್ಲಿ ಬಯಲು ಶೌಚ ಮುಕ್ತ ಮಾಡಲು ಜಿಲ್ಲೆಯಲ್ಲಿ ವೈಯಕ್ತಿಕ ಶೌಚಾಲಯಗಳ ಜತೆಗೆ ಸಮುದಾಯ ಶೌಚಾಲಯ ಕೂಡ ನಿರ್ಮಿಸಲಾಗಿದೆ. ಎಸ್ಬಿಎಂ ಅಡಿಯಲ್ಲಿ 230 ಸಮುದಾಯ ಶೌಚಾಲಯಗಳಿದ್ದು, 14ನೇ ಹಣಕಾಸು ಯೋಜನೆ, ಗ್ರಾಪಂ ಅನುದಾನದಡಿ ನಿರ್ಮಿಸಿದಶೌಚಾಲಯ ಸೇರಿ ಸುಮಾರು 595ಕ್ಕೂ ಹೆಚ್ಚು ಸಮುದಾಯ ಶೌಚಾಲಯ ಇವೆ. ಈ ಸಮುದಾಯ ಶೌಚಾಲಯಗಳು, ಬಹುತೇಕ ಕಡೆ ಬಳಕೆಯಾಗುತ್ತಿಲ್ಲ. ಗ್ರಾಮೀಣ ಕುಟುಂಬಗಳು ವೈಯಕ್ತಿಕ ಶೌಚಾಲಯಗಳನ್ನೇ ಬಳಕೆ ಮಾಡುತ್ತಿಲ್ಲ.ಇನ್ನು ಸಮುದಾಯ ಶೌಚಾಲಯ ಬಳಕೆ ಮಾಡುವುದು ದೂರದ ಮಾತು. ಹೀಗಾಗಿ ಸರ್ಕಾರದಿಂದಲೇ ಕಟ್ಟಿದ ಸಮುದಾಯ ಶೌಚಾಲಯ ಸ್ವಚ್ಛ, ಸುಂದರವಾಗಿ ಇಡಬೇಕು. ಜನರು ಅವುಗಳನ್ನು ಬಳಕೆ ಮಾಡುವಂತೆ ನೀರು–ಬೆಳಕಿನ ವ್ಯವಸ್ಥೆ ಮಾಡಬೇಕು. ಈ ರೀತಿ ಕಾಳಜಿ ವಹಿಸಿ ಮಾಡುವ ಗ್ರಾ.ಪಂ.ಗೆ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಪ್ರಶಸ್ತಿ ನೀಡಿ, ಪ್ರೇರೇಪಿಸಲು ಸರ್ಕಾರ ಮುಂದಾಗಿದೆ.
ಸ್ವಚ್ಛ–ಸುಂದರಕ್ಕೆ ಮಾನದಂಡ: ಪ್ರಸಕ್ತ ತಿಂಗಳ 31ರವರೆಗೆ ಈ ಆಂದೋಲನ ನಡೆಯಲಿದ್ದು, ಕೇಂದ್ರ ಸರ್ಕಾರದ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಜಲ ಶಕ್ತಿ ಮಿಷನ್ ಅಡಿಯಲ್ಲಿ ಈ ಆಂದೋಲನ ನಡೆಸುತ್ತಿದೆ. ಸಮುದಾಯ ಶೌಚಾಲಯಗಳ ನಿರ್ಮಾಣ, ಬಣ್ಣ ಬಳಿಯುವುದು, ಅವುಗಳ ನಿರ್ವಹಣೆಗೆ ಮಾಡುವುದರ ಬಗ್ಗೆ ಜಾಗೃತಿ ಮೂಡಿಸಲು ಮಾನದಂಡ ರೂಪಿಸಿದೆ. ಆಯಾ ಗ್ರಾ.ಪಂ. ವ್ಯಾಪ್ತಿಯಲ್ಲಿ ಸಮುದಾಯ ಶೌಚಾಲಯ ಹೊಂದಿರುವ ಶೇಕಡಾವಾರು ಗ್ರಾಮಗಳ ಸಂಖ್ಯೆಗೆ ಶೇ. 50 ಅಂಕ, ಎಸ್‌ಸಿ, ಎಸ್‌ಟಿ ಸಮುದಾಯ ವಾಸಿಸುವ ಕೇಂದ್ರಗಳು, ಶೇ.50ಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ಜನ ವಸತಿ, ಎಸ್‌ಸಿ, ಎಸ್‌ಟಿ ಜನವಸತಿಗಳಲ್ಲಿ ಸಮುದಾಯ ಶೌಚಾಲಯನಿರ್ಮಿಸಲು ಆ್ಯದ್ಯತೆ ನೀಡಿರುವ ಪ್ರಮಾಣಕ್ಕೆ ಶೇ.30 ಅಂಕ, ನಿರ್ಮಾಣ ಮಾಡಲಾಗಿರುವ ಒಟ್ಟುಸಮುದಾಯ ಶೌಚಾಲಯಗಳಿಗೆ ಬಣ್ಣ ಹಚ್ಚಿ ಆಕರ್ಷಕ ಬರಹ ಬರೆಯುವುದಕ್ಕೆ ಶೇ. 20 ಅಂಕ ನೀಡಲಾಗುತ್ತದೆ. ಈ ರೀತಿ ಉತ್ತಮ ಸಾಧನೆ ಮಾಡಿ, ಗ್ರಾಮೀಣ ಜನರನ್ನುಶೌಚಾಲಯ ಬಳಕೆಗೆ ಪ್ರೇರೇಪಿಸುವ ಜಿಲ್ಲೆ, ತಾಲೂಕು, ಗ್ರಾಮ ಪಂಚಾಯಿತಿ ಹಾಗೂ ಗ್ರಾಮಕ್ಕೆ ಕೇಂದ್ರದ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ (ಜಲಶಕ್ತಿ ಮಿಷನ್)ಯಿಂದ ನಗದು ಪುರಸ್ಕಾರ ಒಳಗೊಂಡ ಪ್ರಶಸ್ತಿ ನೀಡಲಾಗುತ್ತದೆ.
ಗ್ರಾಪಂಗಳಿಗೆ ಸೂಚನೆ: ಈ ಅಭಿಯಾನದಡಿ ಗ್ರಾಪಂವ್ಯಾಪ್ತಿಯಲ್ಲಿ ಜಿಪಂ, ತಾಪಂ, ಗ್ರಾ.ಪಂನಿಂದನಿರ್ಮಿಸಿದಸಮುದಾಯ ಶೌಚಾಲಯಗಳಿಗೆ ಬಣ್ಣ ಹಚ್ಚುವುದು, ನೀರು ಬೆಳಕಿನ ವ್ಯವಸ್ಥೆ ಮಾಡುವುದು, ಸುಂದರ ಬರಹ, ಬಣ್ಣ ಹಚ್ಚಿ ಜನರನ್ನು ಆಕರ್ಷಿಸುವಂತೆ ಮಾಡಲು ಜಿಲ್ಲಾ ಪಂಚಾಯಿತಿಯಿಂದ ಜಿಲ್ಲೆಯ 198 ಗ್ರಾಪಂಗಳಿಗೆ ಸೂಚನೆ ನೀಡಲಾಗಿದೆ. ಡಿಸೆಂಬರ್ 31ರವರೆಗೆ ಈ ಅಭಿಯಾನ ನಡೆಯಲಿದ್ದು, ಈ ಅವಧಿಯಲ್ಲಿ ಸಮುದಾಯ ಶೌಚಾಲಯ ಆಂದೋಲನ ಯಶಸ್ವಿಯಾಗಿ ಮಾಡಿ, ಪ್ರತಿ ತಾಲೂಕಿಗೆ ಒಂದರಂತೆ ಆದರೂ ಪ್ರಶಸ್ತಿ ಪಡೆಯಬೇಕು ಎಂಬುದು ಜಿಪಂಗುರಿ. ಆದರೆ, ವೈಯಕ್ತಿಕ ಶೌಚಾಲಯವನ್ನೇ ಬಳಸದ ಜಿಲ್ಲೆಯ ಜನರು, ಸಮುದಾಯ ಶೌಚಾಲಯ ಹೇಗೆ ಬಳಕೆಗೆ ಮುಂದಾಗುತ್ತಾರೆ ಎಂಬುದು ಪ್ರಜ್ಞಾವಂತರ ಪ್ರಶ್ನೆ. ಕೇವಲ ಪ್ರಶಸ್ತಿ ಪಡೆಯಲು, ಕಾಗದದಲ್ಲಿ ಈ ಅಭಿಯಾನ ನಡೆಯದೇ, ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು, ಗ್ರಾಮ ಮಟ್ಟದಲ್ಲಿ ಮನೆಮನೆಗೆ ಜಾಗೃತಿ ತಲುಪಿಸುವ ಕೆಲಸ ಮಾಡಬೇಕು ಎಂಬುದು ಜನರ ಒತ್ತಾಸೆ.
-ಶ್ರೀಶೈಲ ಕೆ. ಬಿರಾದಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Politicss; 1008 ಸಾಧುಸಂತರ ಪಾದಪೂಜೆ ಮೂಲಕ ಕ್ರಾಂತಿವೀರ ಬ್ರಿಗೇಡ್ ಗೆ ಚಾಲನೆ: ಈಶ್ವರಪ್ಪ
India: ಒಂದು ದೇಶ ಒಂದು ಚುನಾವಣೆ ಜಾರಿ ಆಗಲಿ: ಪೇಜಾವರ ಸ್ವಾಮೀಜಿ
Rabkavi Banahatti: ಲೋಕ ಅದಾಲತ್ ನಲ್ಲಿ ಒಂದಾದ ದಂಪತಿಗಳು
ವಿಳಾಸ ಕೇಳುವ ನೆಪದಲ್ಲಿ ವ್ಯಕ್ತಿಯ ಕೊರಳಲ್ಲಿದ್ದ ಚಿನ್ನದ ಚೈನ್ ಕದ್ದ ಅಪರಿಚಿತ ವ್ಯಕ್ತಿ
Mudhol: ಬಸ್ ಗೆ ಡಿಕ್ಕಿ ಹೊಡೆದ ಬೈಕ್… ಸವಾರರಿಗೆ ಗಂಭೀರ ಗಾಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.