ಉತ್ತಮ ಆರೋಗ್ಯಕ್ಕೆ ಆಯುರ್ವೇದ ಮದ್ದು; ಸೋಮಶೇಖರ
2-3 ದಿನಕ್ಕೊಮ್ಮೆ ಸ್ವಚ್ಛವಾಗಿಟ್ಟುಕೊಂಡರೆ ಡೆಂಗ್ಯೂ ಚಿಕುನ್ ಗುನ್ಯಾ ತಡೆಗಟ್ಟಬಹುದು.
Team Udayavani, Feb 15, 2023, 2:42 PM IST
ಬಾಗಲಕೋಟೆ : ಉತ್ತಮ ಆರೋಗ್ಯಕ್ಕೆ ಆಯುರ್ವೇದ ಮದ್ದಾಗಿದ್ದು, ಆಯುಷ ಇಲಾಖೆಯ ಯೋಜನೆಗಳ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಚಿಕ್ಕಯರನಕೇರಿ ಗ್ರಾಮದ ಮುಖಂಡ ಸೋಮಶೇಖರ ಬಲಕುಂದಿ ಹೇಳಿದರು.
ಹುನಗುಂದ ತಾಲೂಕಿನ ಚಿಕ್ಕಯರನಕೇರಿ ಗ್ರಾಮದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಆಯುಷ ಇಲಾಖೆ, ಕರಡಿಯ ತಕ್ಷಶಿಲಾ ಸಾಮಾಜಿಕ ಹಾಗೂ ಮಹಿಳಾ ಅಭಿವೃದ್ದಿ ಸಂಸ್ಥೆ, ನಾಗೂರ ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ಉಚಿತ ಆಯುಷ ಸೇವಾ ಗ್ರಾಮ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಆರೋಗ್ಯವನ್ನು ಹಣದಿಂದ ಕೊಳ್ಳಲು ಸಾದ್ಯವಿಲ್ಲ. ಈ ಹಿಂದೆ ರೋಗ ರುಜಿನಗಳ ಪ್ರಮಾಣ ಕಡಿಮೆ ಇತ್ತು. ಏಕೆಂದರೆ, ಸತ್ವಯುತ, ಪೌಷ್ಟಿಕ ಆಹಾರ ಸೇವಿಸುತ್ತಿದ್ದರು. ಯೋಗ ಆರೋಗ್ಯ ಕಾಪಾಡಿಕೊಳ್ಳಲು ಸಹಕಾರಿಯಾಗಿದೆ ಎಂದರು.
ಜಿಲ್ಲಾ ಆಯುಷ ಅಧಿಕಾರಿ ಅಕ್ಕಮಹಾದೇವಿ ಗಾಣಿಗೇರ ಮಾತನಾಡಿ, ಸತ್ವಯುತ ಆಹಾರ ಸೇವನೆ, ವ್ಯಾಯಾಮ ಧ್ಯಾನ ವಿಹಾರ ದಿನನಿತ್ಯ ತಮ್ಮ ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಯಾವುದೇ ರೋಗಗಳು ಬರುವುದಿಲ್ಲ. ನಮ್ಮ ಆಯುಷ್ ವೈದ್ಯಾ ಕಾರಿಗಳು 15 ದಿನಕ್ಕೊಮ್ಮೆ ತಮ್ಮ ಊರಿಗೆ ಬಂದು ಭೇಟಿ ನೀಡಿ ಆರೋಗ್ಯ ತಪಾಸಣೆ ಮಾಡಿ ಚಿಕಿತ್ಸೆ ನೀಡಲಿದ್ದಾರೆ.
ಯೋಜನಾ ಘಟಕಗಳಾದ ಮನೆ ಮದ್ದು ಪ್ರಾತ್ಯಕ್ಷಿಕೆ, ಆಯುಷ್ ಅರಿವು ಕಾರ್ಯಕ್ರಮ, ಔಷಧಿ ಸಸ್ಯಗಳ ಮಾಹಿತಿ ಹಾಗೂ ವಿತರಣೆ, ಆಯುಷ್ ಐಇಸಿ ವಸ್ತುಗಳ ವಿತರಣೆ, ದಿನಚರ್ಯ ಮತ್ತು ಯೋಗಾಭ್ಯಾಸ ಮಾಡಿಸಲಾಗುತ್ತದೆ. ಎಲ್ಲ ಖಾಯಿಲೆಗಳಿಗೆ ಚಿಕಿತ್ಸೆ ನೀಡಲಾಗುವುದು ಎಂದರು. ಆರೋಗ್ಯ ಸಹಾಯಕ ಸಣಕಲ್ಲ ಮಾತನಾಡಿ, ಸಾಂಕ್ರಾಮಿಕ ರೋಗಗಳಾದ ಡೆಂಗ್ಯೂ ಚಿಕುನ್ ಗುನ್ಯಾ ರೋಗದಿಂದ ಬಳಲುತ್ತಿದ್ದು, ನೀರಿನ ಪರಿಕರಗಳನ್ನು 2-3 ದಿನಕ್ಕೊಮ್ಮೆ ಸ್ವಚ್ಛವಾಗಿಟ್ಟುಕೊಂಡರೆ ಡೆಂಗ್ಯೂ ಚಿಕುನ್ ಗುನ್ಯಾ ತಡೆಗಟ್ಟಬಹುದು.
ಅಸಾಂಕ್ರಾಮಿಕ ರೋಗಗಳಾದ ರಕ್ತದೊತ್ತಡ, ಸಕ್ಕರೆ ಕಾಯಿಲೆ ಈ ರೋಗಗಳು ಅನಿಯಮಿತ ಜೀವನ ಶೆ„ಲಿ, ಆಹಾರ ಪದ್ಧತಿ ಹಾಗೂ ಮಾನಸಿಕ ಒತ್ತಡದಿಂದ ಬರುತ್ತವೆ. ಆದರೆ ಸರಿಯಾದ ಜೀವನ ಶೆ„ಲಿ, ಆಹಾರ ಪದ್ಧತಿ ಮತ್ತು ಮನಸ್ಸನ್ನು ಪ್ರಸನ್ನವಾಗಿಟ್ಟುಕೊಂಡಲ್ಲಿ ಈ ಅಸಾಂಕ್ರಾಮಿಕ ರೋಗಗಳನ್ನು ದೂರವಿಡಬಹುದಾಗಿದೆ ಎಂದರು.
ಕಾರ್ಯಕ್ರಮವನ್ನು ರಕ್ಕಸಗಿ ಗ್ರಾ.ಪಂ ಸದಸ್ಯ ಯಲಗೂರಪ್ಪ ಗರೇಬಾಳ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಗ್ರಾಮದ ಮುಖಂಡರಾದ ಸೋಮಪ್ಪಾ ಪೂಜಾರಿ, ಶಂಕರಗೌಡ ಗೌಡರ, ಶುಶ್ರೂಷ ಅಧಿಕಾರಿ ಸಿದ್ದಲಿಂಗ ಗೌಡರ ಸೇರಿದಂತೆ ಇತರರು ಉಪಸ್ಥಿತರಿದ್ದರು. ಆಯುಷ ಇಲಾಖೆಯ ತಾಲೂಕಾ ಅಧಿಕಾರಿ ಡಾ|ಚಂದ್ರಕಾಂತ ರಕ್ಕಸಗಿ ಎಲ್ಲರನ್ನು ಸ್ವಾಗತಿಸಿದರು. ಚಿತ್ತವಾಡಗಿ ಸರಕಾರಿ ಆಯುರ್ವೇದ ಚಿಕಿತ್ಸಾಲಯದ ವೈದ್ಯಾಧಿಕಾರಿ ಡಾ|ಶಿವಾನಂದ ನಿಡಗುಂದಿ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಬಕವಿ-ಬನಹಟ್ಟಿ: ಸಚಿವರಿಂದ ಬೇಡಿಕೆ ಈಡೇರಿಸುವ ಭರವಸೆ… ತಿಂಗಳ ಬಳಿಕ ನೇಕಾರರ ಹೋರಾಟ ಅಂತ್ಯ
K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ
Politicss; 1008 ಸಾಧುಸಂತರ ಪಾದಪೂಜೆ ಮೂಲಕ ಕ್ರಾಂತಿವೀರ ಬ್ರಿಗೇಡ್ ಗೆ ಚಾಲನೆ: ಈಶ್ವರಪ್ಪ
India: ಒಂದು ದೇಶ ಒಂದು ಚುನಾವಣೆ ಜಾರಿ ಆಗಲಿ: ಪೇಜಾವರ ಸ್ವಾಮೀಜಿ
Rabkavi Banahatti: ಲೋಕ ಅದಾಲತ್ ನಲ್ಲಿ ಒಂದಾದ ದಂಪತಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.