1 ಲಕ್ಷ ಮಾಸ್ಕ್ ತಾಲೂಕಾಡಳಿತಕ್ಕೆ ಹಸ್ತಾಂತರ
Team Udayavani, Apr 7, 2020, 6:19 PM IST
ಬಾದಾಮಿ: ಮಾಜಿ ಸಚಿವ ಬಿ.ಬಿ.ಚಿಮ್ಮನಕಟ್ಟಿ ನೇತೃತ್ವದಲ್ಲಿ ಒಂದು ಲಕ್ಷ ಮಾಸ್ಕ್ಗಳನ್ನು ತಾಲೂಕಾಡಳಿತಕ್ಕೆ ಹಸ್ತಾಂತರಿಸಲಾಯಿತು.
ಬಾದಾಮಿ: ಮಾಜಿ ಸಿಎಂ, ಶಾಸಕ ಸಿದ್ದರಾಮಯ್ಯನವರ ನಿರ್ದೇಶನದ ಮೇರೆಗೆ ಸಿದ್ದರಾಮಯ್ಯನವರ ಅಭಿಮಾನಿ ಬಳಗದ ವತಿಯಿಂದ ಮತಕ್ಷೇತ್ರದ 114 ಗ್ರಾಮ ಹಾಗೂ ಮೂರು ಪಟ್ಟಣಗಳ ಜನರಿಗೆ ಪ್ರತಿ ಕುಟುಂಬಕ್ಕೆ ಎರಡರಂತೆ ಮಾಸ್ಕ್ ವಿತರಿಸಲು ಸುಮಾರು ಲಕ್ಷ ಮಾಸ್ಕ್ಗಳನ್ನು ತಾಪಂ ಸಭಾಭವನದಲ್ಲಿ ತಾಲೂಕಾಡಳಿತಕ್ಕೆ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಮಾಜಿ ಸಚಿವ ಬಿ.ಬಿ.ಚಿಮ್ಮನಕಟ್ಟಿ ಮಾತನಾಡಿ, ಮಾರಕ ಕೊರೊನಾ ವೈರಸ್ ಹರಡದಂತೆ ಎಲ್ಲರೂ ಮುಂಜಾಗ್ರತೆ ವಹಿಸಬೇಕಾಗಿದೆ. ಮಾಸ್ಕ್ ಗಳನ್ನು ಗ್ರಾಮೀಣ ಭಾಗದಲ್ಲಿ ಆಶಾ ಮತ್ತು
ಅಂಗನವಾಡಿ ಕಾರ್ಯಕರ್ತರ ಮುಖಾಂತರ ಎಲ್ಲರಿಗೆ ಪಕ್ಷಾತೀತವಾಗಿ ವಿತರಿಸಲು ಕ್ರಮಗಳ ಕೈಗೊಳ್ಳಬೇಕು ಎಂದು ತಹಶೀಲ್ದಾರ್ ಸುಹಾಸ ಇಂಗಳೆ ಮತ್ತು ತಾಪಂ ಇಒ ಡಾ| ಪುನೀತ ಇವರಿಗೆ ಸೂಚಿಸಿದರು. ತಹಶೀಲ್ದಾರ್ ಸುಹಾಸ ಇಂಗಳೆ ಮಾತನಾಡಿ, ಎಲ್ಲ ಮಾಸ್ಕ್ಗಳನ್ನು ತಾಲೂಕಾಡಳಿತ ವತಿಯಿಂದ ಎಲ್ಲ ಗ್ರಾಮೀಣ ಭಾಗದ ಜನರಿಗೆ ಪ್ರತಿ ಕುಟುಂಬಕ್ಕೆ ಎರಡರಂತೆ ವಿತರಿಸಲಾಗುವುದು ಎಂದು ತಿಳಿಸಿದರು. ಮುಖಂಡ ಹೊಳಬಸು ಶೆಟ್ಟರ ಮಾಸ್ಕ್ ವಿತರಣೆ ಕುರಿತು ಮಾಹಿತಿ ನೀಡಿದರು.
ಕಂದಾಯ, ಪೊಲೀಸ್, ತಾಪಂ ಇಲಾಖೆಯ ಸಿಬ್ಬಂದಿಗೆ ಮಾಸ್ಕ್ ವಿತರಿಸಲಾಯಿತು. ಮುಖಂಡರಾದ ಡಾ.ಎಂ.ಎಚ್.ಚಲವಾದಿ, ಎಂ.ಬಿ.ಹಂಗರಗಿ, ಎನ್.ಬಿ.ಬನ್ನೂರ, ಮಹೇಶ ಹೊಸಗೌಡ್ರ, ಎಂ.ಡಿ.ಯಲಿಗಾರ, ರಾಜಮಹ್ಮದ ಬಾಗವಾನ, ಹೊಳಬಸು ಶೆಟ್ಟರ, ಸಂಜಯ ಬರಗುಂಡಿ, ಫಾರೂಖ ದೊಡಮನಿ, ಪಿ.ಆರ್. ಗೌಡರ, ಭೀಮಸೇನ ಚಿಮ್ಮನಕಟ್ಟಿ, ಪರಶುರಾಮ ರೋಣದ ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ration Card: ಅನರ್ಹರಿಗೆ ಬಿಪಿಎಲ್ ಕಾರ್ಡ್ ಕೊಡಲ್ಲ, ಅರ್ಹರಿಗೆ ತಪ್ಪಿಸಲ್ಲ: ಸಿದ್ದರಾಮಯ್ಯ
Bagalakote: ಅನರ್ಹರ ಬಿಪಿಎಲ್ ಕಾರ್ಡ್ ಗಳು ಮಾತ್ರ ರದ್ದು: ಸಿಎಂ ಸಿದ್ದರಾಮಯ್ಯ
ಕಾಡಂಚಿನ ರೈತರ ಅರಣ್ಯರೋದನ; ಬೇರೆಯವರ ಜಮೀನಿನಲ್ಲಿ ದುಡಿಯಬೇಕಾದ ಸ್ಥಿತಿ
ಕೇವಲ 12 ರೂ.ಗೆ ಬಿಸಿ ಜುನುಕಾ ರೊಟ್ಟಿ ಊಟ:!ಶಿಕ್ಷಕ ಬಸವರಾಜ ಜಾಲೋಜಿ ನಿಸ್ವಾರ್ಥ ಸೇವೆ
ಲೋಕಾಪುರ: ಬಿಡಾಡಿ ದನಗಳ ಕಾಟಕ್ಕೆ ಜನ ಹೈರಾಣ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.