![DKSHi-4](https://www.udayavani.com/wp-content/uploads/2025/02/DKSHi-4-415x234.jpg)
![DKSHi-4](https://www.udayavani.com/wp-content/uploads/2025/02/DKSHi-4-415x234.jpg)
Team Udayavani, Nov 19, 2022, 7:52 PM IST
ಕುಳಗೇರಿ ಕ್ರಾಸ್:(ಬಾಗಲಕೋಟೆ) ವಿರೋಧ ಪಕ್ಷದ ನಾಯಕರು ನಮ್ಮ ಶಾಸಕರಾದ ಸಿದ್ಧರಾಮಯ್ಯನವರು ಬದಾಮಿಯಿಂದಲೇ 2023ರ ಚುನಾವಣೆಗೆ ಸ್ಪರ್ಧಿಸಬೇಕು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್. ಬಿ. ಯಕ್ಕಪ್ಪನವರ ಪತ್ರಿಕೆ ಮೂಲಕ ಮನವಿ ಮಾಡಿದ್ದಾರೆ.
ಗ್ರಾಮದ ಪ್ರವಾಸಿ ಮಂದಿರದಲ್ಲಿ ಕರೆಯಲಾಗಿದ್ದ ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿದ ಅವರು, ನಮ್ಮ ಶಾಸಕರಾ ಸಿದ್ದರಾಮಯ್ಯನವರು ಕ್ಷೇತ್ರಕ್ಕೆ ಹಿಂದೆಂದೂ ಆಗದ ಕೆಲಸ ಕಾರ್ಯಗಳನ್ನ ಮಾಡಿದ್ದಾರೆ. ಆಯ್ಕೆಯಾದ ಕೇವಲ ಎರಡು ವರ್ಷದಲ್ಲೇ ಕ್ಷೇತ್ರದ ಜನರ ಬಹುದಿನಗಳ ಬೇಡಿಕೆಗಳನ್ನ ಈಡೇರಿಸಿದ್ದಾರೆ. ರಸ್ತೆ, ನೀರು, ಶಾಲೆ-ಕಾಲೇಜು ಸೇರಿದಂತೆ ನಮ್ಮ ಐತಿಹಾಸಿಕ ಸ್ಥಳಗಳನ್ನು ಸಹ ಅಭಿವೃದ್ಧಿ ಮಾಡಿದ್ದಾರೆ.ಈ ಬಾರಿ ಅವರು ಮಾಡಿದ ಅಭಿವೃದ್ಧಿಯೇ ಅವರನ್ನ ಕೈ ಹಿಡಿಯಲಿದೆ. ಆ ಕಾರಣ ಮಾನ್ಯ ಸಿದ್ಧರಾಮಯ್ಯನವರು ನಮ್ಮ ಬಾದಾಮಿಯಿಂದಲೇ ಸ್ಪರ್ಧೆ ಮಾಡಬೇಕು ಎಂದು ಮನವಿ ಮಾಡಿದರು.
ಮುಖಂಡರಾದ ಶಶಿ ಉದಗಟ್ಟಿ, ರಾಮಣ್ಣ ಡೊಳ್ಳಿನ, ಹನಮಂತ ನರಗುಂದ ಮಾತನಾಡಿ ಈ ಹಿಂದೆ ಚಾಮುಂಡಿ ಕ್ಷೇತ್ರ ಕೈ ಬಿಟ್ಟರೂ…ಬಾದಾಮಿ ಜನತೆ ಮಾತ್ರ ಅವರನ್ನ ಕೈ ಬಿಡಲಿಲ್ಲ… ಕಾರಣ ಪುನರ್ಜನ್ಮ ಕೊಟ್ಟ ಬಾದಾಮಿ ಜನತೆಯನ್ನ ಕೈ ಬಿಡಬಾರದು ಎಂದು ಮನವಿ ಮಾಡಿಕೊಂಡರು. ಒಂದು ವೆಳೆ ಮಾನ್ಯ ಸಿದ್ಧರಾಮಯ್ಯನವರು ಕ್ಷೇತ್ರ ಬಿಟ್ಟು ಹೋದರೆ ಕ್ಷೇತ್ರದಲ್ಲಿ ಭಾರಿ ಗೊಂದಲ ಜೊತೆಗೆ ನಮ್ಮ ಕ್ಷೇತ್ರದ ಜನತೆಗೆ ಸಾಕಷ್ಟು ನೋವು ತೊಂದರೆ ಉಂಟಾಗಲಿದೆ ಎಂದು ಮುಖಂಡರು, ಕಾರ್ಯಕರ್ತರು ತಮ್ಮ ಮನದಾಳದ ಮಾತುಗಳನ್ನ ಬಿಚ್ಚಿಟ್ಟರು.
ಅವರು ಎಲ್ಲೇ ನಿಂತರು ಮೊದಲು ಬಾದಾಮಿ ಕ್ಷೇತ್ರವನ್ನೇ ಆಯ್ಕೆ ಮಾಡಲಿದ್ದಾರೆ ಎಂಬ ವಿಶ್ವಾಸವೂ ನಮಗಿದೆ. ಎಲ್ಲ ಸುದ್ದಿ ವಾಹಿನಿಯಲ್ಲೂ ಬಾದಾಮಿಯೇ ಸೇಫ್ ಎಂಬ ಮಾಹಿತಿ ನೀಡುತ್ತಿದ್ದಾರೆ. ಕ್ಷೇತ್ರದಲ್ಲಿ ಮಾಡಿದ ಕೆಲಸ ಕಾರ್ಯಗಳನ್ನ ಎಲ್ಲ ಪಕ್ಷದವರೂ ನೆನೆಯುತ್ತಿದ್ದಾರೆ ಕ್ಷೇತ್ರದ ಮತದಾರರು ಈ ಬಾರಿ ಅವರನ್ನ ಪಕ್ಷಾತೀತವಾಗಿ ಹೆಚ್ಚು ಮತಗಳಿಂದ ಆಯ್ಕೆ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.
ಸಣ್ಣಬೀರಪ್ಪ ಪೂಜಾರ, ನಾಗಪ್ಪ ಅಡಪಟ್ಟಿ, ಶಶಿಕಾಂತ ಉದಗಟ್ಟಿ, ಬಸವರಾಜ ಬ್ಯಾಹಟ್ಟಿ, ಹನಮಂತ ಹುಡೇದಮನಿ, ಬಸವರಾಜ ಕಟ್ಟಿಕಾರ, ಹನಮಂತ ನರಗುಂದ, ವೆಂಕಣ್ಣ ಹೊರಕೇರಿ, ಶೇಖಪ್ಪ ಪವಾಡಿನಾಯ್ಕರ್, ಲಕ್ಷ್ಮಣ್ ದಾದನಟ್ಟಿ. ಸಣ್ಣಬೀರಪ್ಪ ದ್ಯಾವನಗೌಡ್ರ, ರಾಮಣ್ಣ ಡೊಳ್ಳಿನ, ಕರಿಗೌಡ ಮುಷ್ಟಿಗೇರಿ, ಬಸವರಾಜ ತೂರನೂರ, ಚಂದ್ರಗೌಡ ಪಾಟೀಲ, ಶಿವಪ್ಪ ಅಯ್ಯನ್ನವರ, ಪುಂಡಲಿಕ ಘಟ್ನೂರ್, ಶಿವಾನಂದ ಮಣ್ಣೂರ, ದ್ಯಾಮನಗೌಡ ಪಾಟೀಲ, ಸಿದ್ದಪ್ಪ ಖಾನಾಪೂರ, ಸಿದ್ದಪ್ಪ ಉದ್ದನ್ನವರ, ಹನಮಂತ ಕರಲಿಂಗನ್ನವರ, ಸಕ್ರಪ್ಪ ಕಲ್ಲಾಪೂರ ಸೇರಿದಂತೆ ಸುತ್ತಲಿನ ಗ್ರಾಮದ ಕಾರ್ಯಕರ್ತರು ಮುಖಂಡರು ಹಾಜರಿದ್ದರು.
You seem to have an Ad Blocker on.
To continue reading, please turn it off or whitelist Udayavani.