ಮತ್ತೆ ಆರಂಭಗೊಂಡ ಬಾದಾಮಿ ಶುಗರ್ಸ್


Team Udayavani, Feb 10, 2021, 4:43 PM IST

ಮತ್ತೆ ಆರಂಭಗೊಂಡ ಬಾದಾಮಿ ಶುಗರ್ಸ್

ಬಾಗಲಕೋಟೆ: ಕಳೆದ ಸುಮಾರು ಹತ್ತಕ್ಕೂ ವರ್ಷಗಳ ಹಿಂದೆ ಸ್ಥಗಿತಗೊಂಡಿದ್ದ ಜಿಲ್ಲೆಯ ಬಾದಾಮಿತಾಲೂಕಿನ ಬಾದಾಮಿ ಶುಗರ್ ಮಂಗಳವಾರದಿಂದ  ಪುನಾರಂಭಗೊಂಡಿದ್ದು, ಬಾದಾಮಿ ತಾಲೂಕಿನ ರೈತರಲ್ಲಿ ಹರ್ಷ ತಂದಿದೆ.

ಕಾರ್ಖಾನೆಯ ಆವರಣದಲ್ಲಿ ಮಂಗಳವಾರ ಎಂಆರ್‌ಎನ್‌ (ನಿರಾಣಿ) ಉದ್ಯಮ ಸಮೂಹದ ಕಾರ್ಯ ನಿರ್ವಾಹಕ ನಿರ್ದೇಶಕ ಸಂಗಮೇಶ ನಿರಾಣಿಕಬ್ಬು ನುರಿಸುವ ಪ್ರಕ್ರಿಯೆಗೆ ಚಾಲನೆ ನೀಡಿದರು.

ರೈತರಲ್ಲಿ ಹರ್ಷ: ಕಳೆದ ಹಲವು ವರ್ಷಗಳಿಂದ ಸ್ಥಗಿತಗೊಂಡಿದ್ದ ಬಾದಾಮಿ ಶುಗರÕ ಕಾರ್ಖಾನೆ ಪುನಾರಂಭಗೊಂಡಿದೆ. ಇದರಿಂದ ಭಾಗದ ರೈತರಲ್ಲಿಹರ್ಷ ತಂದಿದೆ. ನಿರಾಣಿ ಉದ್ಯಮ ಸಮೂಹ ರೈತರ ಹಿತದೃಷ್ಟಿಯಿಂದ ಈ ಕಾರ್ಖಾನೆ ಆರಂಭಿಸಿದ್ದು, ಈ ಭಾಗದ ಕಬ್ಬು ಬೆಳೆಗಾರರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.

10ವರ್ಷಕ್ಕೂ ಹೆಚ್ಚು ಕಾಲ ಬಂದ್‌ ಆಗಿದ್ದ ಈ ಕಾರ್ಖಾನೆಯನ್ನು ನಿರಾಣಿ ಉದ್ಯಮ ಸಮೂಹವು ತನ್ನ ಸುಪರ್ದಿಗೆ ತೆಗೆದುಕೊಂಡು ಅತ್ಯಂತ ಕಡಿಮೆ ಅವಧಿಯಲ್ಲಿ ಕಾರ್ಖಾನೆಯನ್ನು ಸಿದ್ದಪಡಿಸಿ ಕಬ್ಬು ನುರಿಸಲು ಆರಂಭಿಸಿರುವುದು ಒಂದುದಾಖಲೆಯಾಗಿದೆ. ಬರಡು ಭೂಮಿಗೆ ನೀರಾವರಿಹಾಗೂ ರೈತರು ಬೆಳೆದ ಕಬ್ಬಿಗೆ ಮಾರುಕಟ್ಟೆ ಕಲ್ಪಿಸಲು ನಿರಾಣಿ ಉದ್ಯಮ ಸಮೂಹ ಸದಾ ರೈತರೊಂದಿಗಿದೆಎಂದು ಹೇಳಿದರು.

ಬೀಳಗಿ ಮತಕ್ಷೇತ್ರ ವ್ಯಾಪ್ತಿಯಲ್ಲಿ 1 ಲಕ್ಷ ಎಕರೆ ನೀರಾವರಿ ಕಲ್ಪಿಸುವುದು ಸಚಿವ ಮುರುಗೇಶ ನಿರಾಣಿಅವರ ಸಂಕಲ್ಪವಾಗಿದೆ. ಈಗಾಗಲೇ ಬಾದಾಮಿ ತಾಲೂಕಿನಲ್ಲಿ ಹೆರಕಲ್‌ ಏತ ನೀರಾವರಿ ಮೂಲಕ 40ಸಾವಿರ ಎಕರೆಗೆ ನೀರಾವರಿ ಸೌಕರ್ಯ ನೀಡಲಾಗಿದೆ. ಬಾದಾಮಿ ಶಾಸಕರೂ ಆಗಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಈ ಭಾಗದ ನೀರಾವರಿಗಾಗಿವಿಶೇಷ ಪ್ರಯತ್ನ ಮಾಡಿದ್ದು, ಹಲವಾರು ಯೋಜನೆಗಳನ್ನು ಕಾರ್ಯಗತಗೊಳಿಸಿದ್ದಾರೆ. ಈ ಭಾಗವು ಹಸಿರಿನಿಂದ ಕಂಗೊಳಿಸಬೇಕು. ರೈತರು ಕಬ್ಬು ಬೆಳೆಯಬೇಕು. ಆರ್ಥಿಕವಾಗಿ ಸದೃಢರಾಗಬೇಕು ಎಂಬುದು ಸಿದ್ದರಾಮಯ್ಯ ಹಾಗೂ ಮುರುಗೇಶ ನಿರಾಣಿ ಅವರ ಆಶಯವಾಗಿದೆ ಎಂದು ಹೇಳಿದರು.

ಕಬ್ಬು ಬೆಳೆಯುವ ರೈತರಿಗೆ ನಿಶ್ಚಿತ ಮಾರುಕಟ್ಟೆ ಒದಗಿಸುವ ಮಹಾದಾಸೆಯಿಂದ ನಿರಾಣಿ ಸಮೂಹ ಈಭಾಗದಲ್ಲಿ ಎಂ.ಆರ್‌.ಎನ್‌, ಕೇದಾರನಾಥ ಹಾಗೂ ಬಾದಾಮಿ ಸಕ್ಕರೆ ಕಾರ್ಖಾನೆ ಆರಂಭಿಸಿದೆ. ಆ ಮೂಲಕ3ನೇ ಕಾರ್ಖಾನೆ ಈಗ ಕಾರ್ಯಾರಂಭ ಮಾಡಿದೆ. ಎಂದು ಹೇಳಿದರು.

48ಗಂಟೆಯಲ್ಲಿ ಬಿಲ್‌ ಪಾವತಿಗೆ ವ್ಯವಸ್ಥೆ: ರೈತರಿಗೆ ಸಮಯಕ್ಕೆ ಸರಿಯಾಗಿ ಬಿಲ್‌ ಪಾವತಿ ಮಾಡುವ ಮೂಲಕ ರೈತನ ಶ್ರಮಕ್ಕೆ ತಕ್ಕ ಆದಾಯ ದೊರೆಯುವಂತೆಮಾಡುವುದು ನಿರಾಣಿ ಸಮೂಹದ ಮೊದಲ ಆದ್ಯತೆಯಾಗಿದೆ. ಈ ಹಂಗಾಮಿನಲ್ಲಿ ಎಂಆರ್‌ಎನ್‌ ಸಕ್ಕರೆ ಕಾರ್ಖಾನೆಗೆ ಕಬ್ಬು ಪೂರೈಸುತ್ತಿರುವ ರೈತರಿಗೆಜ.31 ರವರೆಗೆ ಹಾಗೂ ಕೇದಾರನಾಥ ಶುಗರ್ ಕಬ್ಬು ಪೂರೈಸುತ್ತಿರುವ ರೈತರಿಗೆ ಫೆ.7 ರವರೆಗಿನ ಬಿಲ್ಲುಗಳನ್ನು ರೈತರ ಬ್ಯಾಂಕ್‌ ಖಾತೆಗೆ ಜಮಾ ಮಾಡಲಾಗಿದೆ. ಅದರಂತೆ ಬಾದಾಮಿ ಶುಗರ್ಗೆ ಕಬ್ಬು ಕಳಿಸುವ ರೈತರಿಗೆ ಕಬ್ಬು ಪೂರೈಸಿದ 48 ಗಂಟೆಗಳಲ್ಲಿ ಬಿಲ್‌ ಪಾವತಿ ಮಾಡಲಾಗುವುದು ಎಂದು ತಿಳಿಸಿದರು.

ಹಿರಿಯ ಮುಖಂಡ ಪಿ.ಆರ್‌. ಗೌಡರ ಮಾತನಾಡಿ, ಹಲವಾರು ಸ್ಥಗಿತಗೊಂಡ ಕಾರ್ಖಾನೆಗಳಿಗೆ ಮರುಜೀವ ನೀಡಿ ಯಶಸ್ವಿಯಾಗಿರುವ ಸಚಿವ ಮುರುಗೇಶ ನಿರಾಣಿಯ ಅವರ ಮಾರ್ಗದರ್ಶನದಲ್ಲಿ ಬಾದಾಮಿ ಶುಗರ್ ಇನ್ನು ಮುಂದೆ ನಿರಾಂತಕವಾಗಿ ಕಾರ್ಯ ನಿರ್ವಹಿಸಲಿದೆ. ಈ ಭಾಗದ ರೈತರ ಸೇವೆಯಕಾರ್ಯದಲ್ಲಿ ನಿರತವಾಗಲಿದೆ ಎಂದು ಹೇಳಿದರು. ಮುಖಂಡ ಮಧು ಯಡ್ರಾಮಿ ಮಾತನಾಡಿ,ಬಾದಾಮಿ ತಾಲೂಕಿನಲ್ಲಿ ನಿರಾಣಿ ಸಮೂಹ 3ಕಾರ್ಖಾನೆ ಪ್ರಾರಂಭಿಸಿರುವುದರಿಂದ ರೈತರಿಗೆ ಅನುಕೂಲವಾಗುವ ಜತೆಗೆ ಈ ಭಾಗದ ಯುವಕರಿಗೆ ಸ್ಥಳಿಯವಾಗಿ ಉದ್ಯೋಗಾವಕಾಶಗಳು ಸೃಷ್ಟಿಯಾಗಿವೆ. ಇದು ಬಾದಾಮಿ ತಾಲೂಕಿನ ಆರ್ಥಿಕ ವಿಕಾಸಕ್ಕೆ ನಾಂದಿಯಾಗಲಿದೆ ಎಂದು ತಿಳಿಸಿದರು.

ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕ ರವಿಕಾಂತ ಪಾಟೀಲ ಮಾತನಾಡಿ ಕಾರ್ಮಿಕರು ಹಾಗೂ ಅಧಿಕಾರಿಗಳ ಅವಿರತ ಶ್ರಮದಿಂದ ಮುಚ್ಚಿದ ಕಾರ್ಖಾನೆಯನ್ನು ಕಡಿಮೆ ಅವಧಿಯಲ್ಲಿ ಪುನರಾರಂಭ ಮಾಡಲು ಸಹಕಾರಿಯಾಗಿದೆ. ಬಾದಾಮಿ ಭಾಗದ ರೈತರ ಪಾಲಿಗೆ ವರದಾನವಾಗಲಿರುವ ಕಾರ್ಖಾನೆಯಅಭಿವೃದ್ದಿಗೆ ಕೈಜೋಡಿಸಬೇಕು ಎಂದರು. ಬೀಳಗಿ ಬಿಜೆಪಿ ಘಟಕದ ಅಧ್ಯಕ್ಷ ಈರಣ್ಣ ಗಿಡ್ಡಪ್ಪಗೋಳ, ಮುಖಂಡರಾದ ಮಹೆಂದ್ರ ಪಾಟೀಲ, ಮುಚಖಂಡಯ್ಯ ಹಂಗರಗಿ, ಆರ್‌.ವಿ. ವಟ್ನಾಳ ಮುಂತಾದವರು ಉಪಸ್ಥಿತರಿದ್ದರು.

ಟಾಪ್ ನ್ಯೂಸ್

1-kkk

ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಇನ್ನು ಕರಾವಳಿ ಪ್ರದೇಶಾಭಿವೃದ್ಧಿ ಮಂಡಳಿಯಾಗಿ ಕಾರ್ಯನಿರ್ವಹಣೆ

1-stamp

Stamp Paper; ನಕಲಿ ಹಾವಳಿಗೆ ತಡೆ: ಎ.1ರಿಂದ ಡಿಜಿಟಲ್‌ ಪಾವತಿ ಪದ್ಧತಿ ಜಾರಿ

1-manmohan

Belagavi; ಕಾಂಗ್ರೆಸ್‌ ಅಧಿವೇಶನ ಶತಮಾನೋತ್ಸವ: ಮಾಜಿ ಪ್ರಧಾನಿ ನಿಧನದಿಂದ ಆಘಾತ

ct rav

BJP ದೂರು ಬೆನ್ನಲ್ಲೇ ಗೆಹ್ಲೋಟ್‌ ಅಖಾಡಕ್ಕೆ; ಸಿ.ಟಿ.ರವಿಗೆ ರಾಜ್ಯಪಾಲ ಬುಲಾವ್‌?

1-spo

Mangaluru; ಶೀಘ್ರವೇ ರಾತ್ರಿಯೂ ಪ್ರವಾಸಿಗರಿಗೆ ಬೀಚ್‌ಗೆ ಪ್ರವೇಶ

1-klr

Koteshwara: ಹುತಾತ್ಮ ಯೋಧ ಅನೂಪ್‌ ಪೂಜಾರಿ ಮನೆಗೆ ಖಾದರ್‌, ಸೊರಕೆ ಭೇಟಿ

1-busss

ನಾಡಿದ್ದು ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜತೆ ರಾಜಿ ಸಭೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10

Bagalkot : ಸಕಲ ಸರ್ಕಾರಿ ಗೌರವಗಳೊಂದಿಗೆ ಯೋಧ ಮಹೇಶ್ ಮರೆಗೊಂಡ ಅಂತ್ಯಸಂಸ್ಕಾರ

ಪತ್ನಿ ಊರಿನತ್ತ ಪ್ರಯಾಣ ಬೆಳೆಸಿದರೆ… ಸಾವಿನ ಮನೆಯ ಕದ ತಟ್ಟಿದ ಯೋಧ ನಾಗಪ್ಪ ಮರೆಗೊಂಡ

ಪತ್ನಿ ಊರಿನತ್ತ ಪ್ರಯಾಣ ಬೆಳೆಸಿದರೆ… ಸಾವಿನ ಮನೆಯ ಕದ ತಟ್ಟಿದ ಯೋಧ ನಾಗಪ್ಪ ಮರೆಗೊಂಡ

4-soldier

Mahalingpur: ಇಂದು ಮೃತ ಯೋಧ ಮಹೇಶ ಅಂತ್ಯಕ್ರಿಯೆ; ಯೋಧನ ಮನೆಗೆ ಸಚಿವ ತಿಮ್ಮಾಪುರ ಭೇಟಿ

Mudhola

Mudhola: ಸಿಲಿಂಡರ್ ಸ್ಫೋಟ: ಹೊತ್ತಿ ಉರಿದ ಮನೆ

Banahatti: ತಾಂತ್ರಿಕ ಸೌಲಭ್ಯಗಳನ್ನು ನೀಡುವ ನಿಟ್ಟಿನಲ್ಲಿ ಬದ್ಧಳಾಗಿದ್ದೇನೆ: ಉಮಾಶ್ರೀ

Banahatti: ತಾಂತ್ರಿಕ ಸೌಲಭ್ಯಗಳನ್ನು ನೀಡುವ ನಿಟ್ಟಿನಲ್ಲಿ ಬದ್ಧಳಾಗಿದ್ದೇನೆ: ಉಮಾಶ್ರೀ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-havya

Havyaka Sammelana; ಹೆಚ್ಚು ಮಕ್ಕಳನ್ನು ಹೆರಿ, ಮಠ ಸಲಹುತ್ತದೆ: ಸ್ವಾಮೀಜಿ ಕರೆ

1-kkk

ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಇನ್ನು ಕರಾವಳಿ ಪ್ರದೇಶಾಭಿವೃದ್ಧಿ ಮಂಡಳಿಯಾಗಿ ಕಾರ್ಯನಿರ್ವಹಣೆ

1-manmohan

Belagavi; ಕಾಂಗ್ರೆಸ್‌ ಅಧಿವೇಶನ ಶತಮಾನೋತ್ಸವ: ಮಾಜಿ ಪ್ರಧಾನಿ ನಿಧನದಿಂದ ಆಘಾತ

1-stamp

Stamp Paper; ನಕಲಿ ಹಾವಳಿಗೆ ತಡೆ: ಎ.1ರಿಂದ ಡಿಜಿಟಲ್‌ ಪಾವತಿ ಪದ್ಧತಿ ಜಾರಿ

29

Kabaddi: ಇಂದು ಸೀನಿಯರ್‌ ಕಬಡ್ಡಿ ತಂಡದ ಆಯ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.