ಜನಹಿತ ಟ್ರಸ್ಟ್‌ಸೇವೆ ರಾಜ್ಯಕ್ಕೆ ಮಾದರಿ
Team Udayavani, May 21, 2021, 8:01 PM IST
ಶ್ರೀಶೈಲ ಕೆ. ಬಿರಾದಾರ
ಬಾಗಲಕೋಟೆ: ಕೊರೊನಾ ಎಂಬ ಮಹಾಮಾರಿಯಿಂದ ಹಲವಾರು ಜನ ಹಲವು ರೀತಿ ಸಂಕಷ್ಟ ಎದುರಿಸುತ್ತಿದ್ದಾರೆ. ರಾಜ್ಯ ಸರ್ಕಾರ, ಜಿಲ್ಲಾಡಳಿತಗಳು ಈ ಸೋಂಕು ನಿಯಂತ್ರಣಕ್ಕೆ ಶಕ್ತಿ ಮೀರಿ ಪ್ರಯತ್ನಿಸುತ್ತಿವೆ. ಅದರ ಜತೆಗೆ ಜಿಲ್ಲೆಯ ಹಲವು ಸಂಘ-ಸಂಸ್ಥೆಗಳು, ಗಣ್ಯರು, ಪ್ರಮುಖರು ತಮ್ಮ ಕೈಲಾದ ನೆರವು ನೀಡುವ ಮೂಲಕ ಸಂಕಷ್ಟಕ್ಕೆ ಸ್ಪಂದಿಸುವ ಕಾರ್ಯ ನಡೆಸಿದ್ದಾರೆ.
ಈ ನಿಟ್ಟಿನಲ್ಲಿ ಜಿಲ್ಲೆಯ ಮುಧೋಳ-ಜಮಖಂಡಿಯ ಜನಹಿತ ಟ್ರಸ್ಟ್‌ನ ಸೇವೆ ಇಡೀ ರಾಜ್ಯಕ್ಕೆ ಮಾದರಿಯಾಗಿದೆ. 100 ಬೆಡ್‌ಗಳ ಸರ್ಕಾರಿ ಕೋವಿಡ್ ಕೇರ್ ಸೆಂಟರ್ ಅನ್ನೇ ದತ್ತು ಪಡೆದಿರುವ ಈ ಟ್ರಸ್ಟ್, ಇಲ್ಲಿನ 100 ಜನರಿಗೆ ನಿತ್ಯವೂ ಊಟ, ಶುದ್ಧ ನೀರು ನೀಡಲಾಗುತ್ತಿದೆ. ಉಚಿತ ಔಷಧ, ಮನರಂಜನೆಗೆ ಎಲ್ ಇಡಿ ಟಿವಿ, ಯೋಗ, ಭಜನೆ, ಹಾಡು, ವಿಡಿಯೋ, ಮಹಾಭಾರತ, ಹಲವು ಪೂಜ್ಯರ ಪ್ರವಚನ ಕೇಳಿಸುತ್ತಿದ್ದು, 70 ಸಾವಿರ ಮೌಲ್ಯದ ತುರ್ತು ಆಕ್ಸಿಜನ್ ಕಿಟ್ ಕೂಡ ವ್ಯವಸ್ಥೆ ಮಾಡಿದೆ.
ಪ್ರತಿದಿನ ಸೋಂಕಿತರು ಬಿಡುಗಡೆ ಗೊಂಡು ಹೊಸದಾಗಿ ದಾಖಲಾ ಗುವವರ ಮನಪರಿವರ್ತನೆ, ಸೋಂಕಿನ ಬಗ್ಗೆ ಇರುವ ಭಯ ಹೋಗಲಾಡಿ ಸುತ್ತಿದ್ದು, ಆರೋಗ್ಯ ಸುಧಾರಣೆಗೆ ಅನುಕೂಲವಾಗಿದೆ. 19 ದಿನದಿಂದ ನಿತ್ಯ ಊಟ: ಮುಧೋಳ ಕೇಂದ್ರ ಸ್ಥಾನದಲ್ಲಿರುವ ಜನಹಿತ ಸೇವಾ ಟ್ರಸ್ಟ್ ಸುಮಾರು 80ಕ್ಕೂ ಹೆಚ್ಚು ಸೇವಾ ಕಾರ್ಯಕರ್ತರು, ಪಾಳೆಯ ಮೇಲೆ ನಿತ್ಯ ಸೇವೆಯಲ್ಲಿದ್ದಾರೆ. ಇವರ ಕೇವಲ ಮುಧೋಳಕ್ಕೆ ಮಾತ್ರ ಸೀಮಿತವಾಗಿರದೇ ಜಮಖಂಡಿಗೂ ವಿಸ್ತರಣೆ ಯಾಗಿದೆ.
ಎರಡೂ ತಾಲೂಕು ಕೇಂದ್ರಗಳಲ್ಲಿ ತಲಾ ಸುಮಾರು 300 ಕ್ಕೂ ಹೆಚ್ಚು ಜನ ಜನರಿಗೆ ನಿತ್ಯ ಊಟದ ವ್ಯವಸ್ಥೆ ಮಾಡುತ್ತಿರುವುದು ಹೆಮ್ಮೆಯ ಕಾರ್ಯ. ಎರಡು ತಾಲೂಕು ಕೇಂದ್ರಗಳಲ್ಲಿ ಇರುವ ತಾಲೂಕು ಆಸ್ಪತ್ರೆ, ಕೋವಿಡ್ ಕೇರ್ ಸೆಂಟರ್ ನಲ್ಲಿರುವ ಸೋಂಕಿತರಿಗೆ, ಆಸ್ಪತ್ರೆಗಳ ಎದುರು ಇರುವ ಸೋಂಕಿತರ ಸಂಬಂಧಿಕರಿಗೆ ಊಟ-ನೀರು ಕೊಡಲಾಗುತ್ತಿದೆ.
ಈ ಸೇವೆಗೆ ಜನರು ಆನಂದ ಭಾಷ್ಪ ಸುರಿಸಿ, ಹಾರೈಸುತ್ತಿದ್ದಾರೆ. ಈ ಕಾರ್ಯ ಕಳೆದ ಮೇ 1ರಿಂದ ಆರಂಭಗೊಂಡಿದ್ದು, 19 ದಿನಗಳಿಂದ ನಿತ್ಯ ಮುಂದುವರಿದಿದೆ. ಜನಹಿತ ಸೇವೆಯ ಕಾರ್ಯದ ಬಗ್ಗೆ ಕೇಳಿದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕರ್ನಾಟಕ ಉತ್ತರ ಪ್ರಾಂತ ಪ್ರಚಾರಕ ನರೇಂದ್ರಜಿ ಅವರು ಸ್ವತಃ ಮುಧೋಳಕ್ಕೆ ಬಂದು, ಜನಹಿತ ಟ್ರಸ್ಟ್‌ನ ಎಲ್ಲ ಸೇವಾ ಕಾರ್ಯಕರ್ತರ ಸೇವೆಯನ್ನು ಕೊಂಡಾಡಿ ಹೋಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bagalkot : ಸಕಲ ಸರ್ಕಾರಿ ಗೌರವಗಳೊಂದಿಗೆ ಯೋಧ ಮಹೇಶ್ ಮರೆಗೊಂಡ ಅಂತ್ಯಸಂಸ್ಕಾರ
ಪತ್ನಿ ಊರಿನತ್ತ ಪ್ರಯಾಣ ಬೆಳೆಸಿದರೆ… ಸಾವಿನ ಮನೆಯ ಕದ ತಟ್ಟಿದ ಯೋಧ ನಾಗಪ್ಪ ಮರೆಗೊಂಡ
Mahalingpur: ಇಂದು ಮೃತ ಯೋಧ ಮಹೇಶ ಅಂತ್ಯಕ್ರಿಯೆ; ಯೋಧನ ಮನೆಗೆ ಸಚಿವ ತಿಮ್ಮಾಪುರ ಭೇಟಿ
Mudhola: ಸಿಲಿಂಡರ್ ಸ್ಫೋಟ: ಹೊತ್ತಿ ಉರಿದ ಮನೆ
Banahatti: ತಾಂತ್ರಿಕ ಸೌಲಭ್ಯಗಳನ್ನು ನೀಡುವ ನಿಟ್ಟಿನಲ್ಲಿ ಬದ್ಧಳಾಗಿದ್ದೇನೆ: ಉಮಾಶ್ರೀ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: 16 ವರ್ಷದ ಬಾಲಕ ಮೃತ್ಯು, ಮೃತರ ಸಂಖ್ಯೆ 3ಕ್ಕೆ ಏರಿಕೆ
ನನ್ನ ಮಾರ್ಗದರ್ಶಕರನ್ನು ಕಳೆದುಕೊಂಡಿದ್ದೇನೆ… ಮಾಜಿ ಪ್ರಧಾನಿ ನಿಧನಕ್ಕೆ ರಾಹುಲ್ ಸಂತಾಪ
Gangavathi: 25 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ
Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ
Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.