ಬೆಳಕಾಯಿತು ಬಾಗಲಕೋಟೆ @75


Team Udayavani, Mar 7, 2021, 6:44 PM IST

bagalakote

ಬಾಗಲಕೋಟೆ: ಕೋವಿಡ್ ಎಂಬ ಮಹಾಮಾರಿಕಾಲಿಟ್ಟಾಗ ಇಡೀ ದೇಶವೇ ಲಾಕ್‌ಡೌನ್‌ ಆಯಿತು.ಯಾರೂ ಮನೆಬಿಟ್ಟು ಹೊರ ಬರಲಿಲ್ಲ. ಸಾಹಿತ್ಯ,ಸಂಗೀತ, ಸಿನೆಮಾ, ನಾಯಕ ರಂಗ ಮಂದಿರಗಳುಸ್ಥಗಿತಗೊಂಡವು. ಆಗ ಹುಟ್ಟಿಕೊಂಡಿದ್ದೇ ಬೆಳಕಾಯಿತುಬಾಗಲಕೋಟೆ ಎಂಬ ಅದ್ಭುತ ಪರಿಕಲ್ಪನೆ. ಈ ಕಲ್ಪನೆಗೆಈಗ ಇಡೀ ಕರ್ನಾಟಕ ಅಷ್ಟೇ ಅಲ್ಲ, ವಿಶ್ವದೆಲ್ಲೆಡೆ ಇರುವಕನ್ನಡಿಗರ ಮೆಚ್ಚುಗೆ.

ಜತೆಗೆ ಹಲವರ ಆನಂದ ಭಾಷ್ಪ.ಹೌದು. ಸದ್ಯ ಬೆಂಗಳೂರಿನಲ್ಲಿರುವಡಾ|ರಾಜಶೇಖರ ಮಠಪತಿ ಮತ್ತು ನಗರದ ಖ್ಯಾತಜಾನಪದ ಸಾಹಿತಿ ಡಾ| ಪ್ರಕಾಶ ಖಾಡೆ ಅವರು ಲಾಕ್‌ಡೌನ್‌ ವೇಳೆ ಏನಾದರೂ ಮಾಡಬೇಕೆಂಬುದರಬಗ್ಗೆ ಚರ್ಚಿಸಿದ್ದರು. ಆಗ ಮಧುರ ಚನ್ನ ಅವರು”ಬೆಳಕಾಯಿತು ಬಾಗಲಕೋಟೆ’ ಹೆಸರಿನ ಫೇಸ್‌ಅಕೌಂಟ್‌ ಓಪನ್‌ ಮಾಡಿ, ಆ ಮೂಲಕ ಅವಿಭಜಿತವಿಜಯಪುರ ಜಿಲ್ಲೆಯಲ್ಲಿ ಕಳೆದ ಶತಮಾನದಲ್ಲಿ ಸಾಧನೆಮಾಡಿ ಹೋದ ಸಾಧಕರ ಪರಿಚಯ ಹಾಗೂ ಸ್ಮರಿಸುವಸರಣಿ ಉಪನ್ಯಾಸ ಮಾಲೆ ಆರಂಭಿಸೋಣ ಎಂದರು.ಮಧುರ ಚನ್ನರು ಅನಾರೋಗ್ಯಕ್ಕೆ ಒಳಗಾದಾಗ,ಬಾಗಲಕೋಟೆ ಆಶ್ರಮವೊಂದಕ್ಕೆ ಬಂದು ನೆಲೆಸಿದ್ದರು.

ಅವರು ಪೂರ್ಣ ಗುಣಮುಖರಾದ ಬಳಿಕ ಹೊರಹಾಕಿದ್ದ ಶಬ್ಧವೇ ಬೆಳಕಾಯಿತು ಬಾಗಲಕೋಟೆಎಂಬ ಪದ. ಅವರಿಗೆ ಇಲ್ಲಿ ಹಲವು ರೀತಿಯಜ್ಞಾನೋದಯವೂ ಆಯಿತು. ಮುಂದೆ ಅವರುಹಲಸಂಗಿ ಗೆಳೆಯರ ಬಳಗದಿಂದ ನಾಡಿನಾದ್ಯಂತಹೆಸರು ಮಾಡಿದ್ದರು. ಆ ಹಲಸಂಗಿ ಗೆಳೆಯರ ಬಳಗದಮಾದರಿಯಲ್ಲೇ ಈಗ ಡಾ| ಪ್ರಕಾಶ ಖಾಡೆ ಅವರುಹಲವು ಸಾಹಿತಿಗಳು, ಬರಹಗಾರರು, ಚಿಂತರಕನ್ನುಒಂದೇ ವೇದಿಕೆಯಡಿ ತಂದು, ಸಾಧಕರ ಸ್ಮರಿಸಲುಪ್ರಮುಖ ಕಾರಣರಾಗುತ್ತಿದ್ದಾರೆ.

ಇಂದು 75ನೇ ಸಾಧಕರ ಸ್ಮರಣೆ: ಲಾಕ್‌ಡೌನ್‌ ವೇಳೆ2020ರ ಜುಲೈ 3ರಂದು ದಿ.ಸ.ಸ. ಮಾಳವಾಡಅವರ ಕುರಿತ ಡಾ| ವೈ.ಎಂ. ಯಾಕೊಳ್ಳಿ ಅವರಿಂದಆರಂಭಗೊಂಡ ಮೊದಲ ಸರಣಿ ಉಪನ್ಯಾಸ ಇಂದು75ನೇ ಸರಣಿಗೆ ತಲುಪಿದೆ. ಮಾ.7ರಂದು ಬೆಳಗ್ಗೆ 8ಕ್ಕೆನಗರದ ಮಹಿಳಾ ಸಾಹಿತಿ ಗೀತಾ ದಾನಶೆಟ್ಟಿ ಅವರುಕೌಜಲಗಿ ನಿಂಗಮ್ಮ ಎಂಬ ಸಾಧಕಿಯ ಪರಿಚಯಉಪನ್ಯಾಸ ನೀಡಲಿದ್ದಾರೆ.ಕಳೆದ ಶತಮಾನ ಮತ್ತು ಅದಕ್ಕೂ ಮುಂಚೆ ಅವಳಿಜಿಲ್ಲೆಯಲ್ಲಿ ಆಗಿ ಹೋದ ಸಾಧಕರ ಸ್ಮರಣೆ ಹಾಗೂಇಂದಿನ ಯುವ ಪೀಳಿಗೆಗೆ ಪರಿಚಯಿಸುವುದೇ ಈಬೆಳಕಾಯಿತು ಬಾಗಲಕೋಟೆ ಕಾರ್ಯದ ಮುಖ್ಯಉದ್ದೇಶ.

ಈ ಪ್ರಯತ್ನಕ್ಕೆ ಜರ್ಮನ್‌, ಅಮೆರಿಕ,ಆಸ್ಟ್ರೇಲಿಯಾ ಸೇರಿದಂತೆ ವಿಶ್ವದೆಲ್ಲೆಡೆ ಇರುವ ವಿಶ್ವಕನ್ನಡಿಗರಲ್ಲಿ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈಕಾರ್ಯದ ಮೂಲಕ ಸ್ಮರಣೆ ಮಾಡಿಕೊಂಡ ಸಾಧಕರಮಕ್ಕಳು, ಮೊಮ್ಮಕ್ಕಳು, ಡಾ|ಪ್ರಕಾಶ ಖಾಡೆ ಅವರಿಗೆಕರೆ ಮಾಡಿ, ನಮ್ಮವರ ಸಾಧನೆ ನಮಗೇ ಗೊತ್ತಿರಲಿಲ್ಲ.ನೀವು ಅತ್ಯುತ್ತಮ ಕಾರ್ಯ ಮಾಡುತ್ತಿದ್ದೀರಿ.ಕುಟುಂಬದ ಪರವಾಗಿ ಶರಣು ಎಂದು ಹೇಳಿ ಆನಂದಭಾಷ್ಪ ಕೂಡ ಹಾಕಿದ್ದಾರೆ.ಜಾತಿ-ಅಂತಸ್ತು ಮೀರಿದ ವೇದಿಕೆ: ಫೇಸ್‌ಬುಕ್‌ ಎಂಬಬಯಲು ವಿವಿಯಡಿ ನಡೆಯುತ್ತಿರುವ ಕಾರ್ಯದಲ್ಲಿಯಾವುದೇ ಜಾತಿ, ಅಂತಸ್ತು, ಅಹಂಕಾರ ಯಾವುದೂಇಲ್ಲ.

ಪ್ರತಿಯೊಬ್ಬರೂ ಅವಕಾಶ ನೀಡಲಾಗುತ್ತಿದೆ.ಒಬ್ಬೊಬ್ಬ ಸಾಧಕರ ಕುರಿತು ಒಬ್ಬೊಬ್ಬ ಕವಿ-ಸಾಹಿತಿಅಥವಾ ಸಾಮಾನ್ಯ ವ್ಯಕ್ತಿಯೂ ಪರಿಚಯಮಾಡಿಕೊಡಬೇಕು. ಅದು ಫೇಸ್‌ಬುಕ್‌ ಲೈವ್‌ಮೂಲಕ ಕರ್ನಾಟಕ ಅಷ್ಟೇ ಅಲ್ಲ ವಿಶ್ವದ ಕನ್ನಡಿಗರೂಕೇಳುತ್ತಿದ್ದಾರೆ. ಹಲವು ಸಾಧಕರ ಸರಣಿ ಪರಿಚಯವನ್ನು22ಸಾವಿರಕ್ಕೂ ಹೆಚ್ಚು ಜನ ವೀಕ್ಷಣೆ ಮಾಡಿರುವುದುಬೆಳಕಾಯಿತು ಬಾಗಲಕೋಟೆಯ ಹೆಮ್ಮೆಯೇ ಸರಿ.ಶ್ರೀಗಳಿಗೆ ಪ್ರೇರಣೆ ಆಯ್ತು: ಈ ಪ್ರಯತ್ನ ಹಲವರಿಗೆಪ್ರೇರಣೆ ಕೂಡ ಆಗಿದೆ.

ಗದಗ ಕಪ್ಪತಗುಡ್ಡದನಂದಿವೇರಿಮಠದ ಶ್ರೀ ಶಿವಕುಮಾರ ಶ್ರೀಗಳು,ಇದೇ ಸರಣಿ ಉಪನ್ಯಾಸದಲ್ಲಿ ಹಾನಗಲ್‌ ಕುಮಾರಶಿವಯೋಗಿಗಳ ಬದುಕು-ಸಾಧನೆ ಕುರಿತು ಫೇಸ್‌ಲೈಕ್‌ ಮೂಲಕ ಮೊದಲ ಬಾರಿಗೆ ಮಾತನಾಡಿದ್ದರು.ಬಳಿಕ ಅವರು ಅದೇ ಮಾರ್ಗದಡಿ ಒಂದೂವರೆತಿಂಗಳು ತಮ್ಮ ಪ್ರವಚನ ಕೂಡ ನೀಡಿದ್ದರು.

ವಿಜಯಪುರ ಫ.ಗು. ಸಿದ್ದಾಪುರ, ಮುಧೋಳದಸಾಹಿತಿ ಮಲ್ಲಿಕಾರ್ಜುನ ಹೆಗ್ಗಳಗಿ ಸೇರಿದಂತೆ ಈ ವರೆಗೆಉಪನ್ಯಾಸ ನೀಡಿದ 74 ಜನರೂ ಈ ಕಾರ್ಯವನ್ನುಮೆಚ್ಚಿಕೊಂಡು, ಅವರ ವೈಯಕ್ತಿಕ ಫೇಸ್‌ಬುಕ್‌ಮೂಲಕ ಸಾಹಿತ್ಯಾಭಿರುಚಿಯ ಕಾರ್ಯದಲ್ಲಿತೊಡಗಿದ್ದಾರೆ. ಇನ್ನು ಕೆಲವರು ಫೇಸ್‌ಬುಕ್‌ ಅಕೌಂಟ್‌ಇಲ್ಲದವರಿಗೆ ಈ ಕಾರ್ಯದಲ್ಲಿ ತೊಡಗಿಸಿಕೊಳ್ಳಲುಡಾ|ಖಾಡೆ ನಿರಂತರ ಪ್ರಯತ್ನಿಸಿರುವುದು,ಬೆಳಕಾಯಿತು ಬಾಗಲಕೋಟೆ, ಜನಪರವಾಗಲುಕಾರಣವಾಗಿದೆ.

ಡಾ| ರಾಗಂ ಮತ್ತು ತಾವುಚಿಂತನೆ ಮಾಡಿದಾಗಹುಟ್ಟಿಕೊಂಡಿದ್ದೇಬೆಳಕಾಯಿತುಬಾಗಲಕೋಟೆ ಪರಿಕಲ್ಪನೆ.ಡಾ|ಬಿ.ಆರ್‌. ಪೊಲೀಸ್‌ಪಾಟೀಲರ ಮಾರ್ಗದರ್ಶನದೊಂದಿಗೆ ಕಳೆದಜುಲೈನಿಂದ ಈ ಕಾರ್ಯ ನಡೆಯುತ್ತಿದೆ. ಇದಕ್ಕೆವಿಶ್ವದೆಲ್ಲೆಡೆ ಇರುವ ಕನ್ನಡಿಗರು ಮೆಚ್ಚುಗೆವ್ಯಕ್ತಪಡಿಸಿದ್ದಾರೆ. ನಾವು ಸ್ಮರಿಸಿದ ಸಾಧಕರಮಕ್ಕಳು, ಮೊಮ್ಮಕ್ಕಳು ಕರೆ ಮಾಡಿ ಆನಂದಭಾಸ್ಪ ಕೂಡ ಹಾಕಿದ್ದಾರೆ. ಇದರಿಂದ ನಾವುಮಾಡಿದ ಕಾರ್ಯದ ಕುರಿತು ಹೆಮ್ಮೆ ಎನಿಸಿದೆ.

ಡಾ|ಪ್ರಕಾಶ ಖಾಡೆ, ಸಾಹಿತಿ-ಬೆಳಕಾಯಿತು ಬಾಗಲಕೋಟೆಯ ಸಂಯೋಜಕ

 

ಶ್ರೀಶೈಲ ಕೆ. ಬಿರಾದಾರ

ಟಾಪ್ ನ್ಯೂಸ್

11-venur

Venur; ಚಿರತೆ ಓಡಾಟ; ಸಾರ್ವಜನಿಕರಲ್ಲಿ ಆತಂಕ; ಅರಣ್ಯಾಧಿಕಾರಿ- ಸಾರ್ವಜನಿಕರ ಸಭೆ

9

Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ

governer

Governor: ಮಣಿಪುರದ 19 ನೇ ರಾಜ್ಯಪಾಲರಾಗಿ ಅಜಯ್ ಭಲ್ಲಾ ಪ್ರಮಾಣ ವಚನ ಸ್ವೀಕಾರ

Bidar; ಗುತ್ತಿಗೆದಾರ ಸಚಿನ್‌ ಕೇಸ್;‌ ತನಿಖೆ ಆರಂಭಿಸಿದ ಸಿಐಡಿ ತಂಡ

Bidar; ಗುತ್ತಿಗೆದಾರ ಸಚಿನ್‌ ಕೇಸ್;‌ ತನಿಖೆ ಆರಂಭಿಸಿದ ಸಿಐಡಿ ತಂಡ

Explainer: HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್‌ ಮಾದರಿಯ ಎಚ್‌ ಎಂಪಿವಿ ವೈರಸ್?‌

Explainer:HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್‌ ಮಾದರಿಯ ಎಚ್‌ ಎಂಪಿವಿ ವೈರಸ್?‌

Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್ಸ್… ಅಂತ್ಯಕ್ರಿಯೆಗೆ ತಯಾರಿ ನಡೆಸಿದ್ದರು

Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್… ರಸ್ತೆಯಲ್ಲೇ ನಡೆಯಿತು ಪವಾಡ

Public Picture; ಪ್ರೇಕ್ಷಕ ಏನು ಬಯಸುತ್ತಾನೆ ಗೊತ್ತಾ?

Public Picture; ಪ್ರೇಕ್ಷಕ ಏನು ಬಯಸುತ್ತಾನೆ ಗೊತ್ತಾ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6-kulageri-cross

Kulageri Cross: ಹೂಳು ತುಂಬಿದ ಕಾಲುವೆ…ಪೋಲಾಗುತ್ತಿದೆ ಮಲಪ್ರಭಾ ಎಡದಂಡೆ ಕಾಲುವೆ ನೀರು…

New year : ಬಾಗಲಕೋಟೆ ಜಿಲ್ಲೇಲಿ ಅಭಿವೃದ್ಧಿ ಬಾಗಿಲು ತೆರೆಯಲಿ-ಸ್ಥಳಾಂತರವಾಗಬೇಕಿದೆ ಐಹೊಳೆ!

New year : ಬಾಗಲಕೋಟೆ ಜಿಲ್ಲೇಲಿ ಅಭಿವೃದ್ಧಿ ಬಾಗಿಲು ತೆರೆಯಲಿ-ಸ್ಥಳಾಂತರವಾಗಬೇಕಿದೆ ಐಹೊಳೆ!

9-rabakavi

Rabakavi: ಬ್ರಹ್ಮಾನಂದ ಉತ್ಸವ; ಗಮನ ಸೆಳೆದ ರೊಟ್ಟಿ ಜಾತ್ರೆ

10

Bagalkot : ಸಕಲ ಸರ್ಕಾರಿ ಗೌರವಗಳೊಂದಿಗೆ ಯೋಧ ಮಹೇಶ್ ಮರೆಗೊಂಡ ಅಂತ್ಯಸಂಸ್ಕಾರ

ಪತ್ನಿ ಊರಿನತ್ತ ಪ್ರಯಾಣ ಬೆಳೆಸಿದರೆ… ಸಾವಿನ ಮನೆಯ ಕದ ತಟ್ಟಿದ ಯೋಧ ನಾಗಪ್ಪ ಮರೆಗೊಂಡ

ಪತ್ನಿ ಊರಿನತ್ತ ಪ್ರಯಾಣ ಬೆಳೆಸಿದರೆ… ಸಾವಿನ ಮನೆಯ ಕದ ತಟ್ಟಿದ ಯೋಧ ನಾಗಪ್ಪ ಮರೆಗೊಂಡ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

11-venur

Venur; ಚಿರತೆ ಓಡಾಟ; ಸಾರ್ವಜನಿಕರಲ್ಲಿ ಆತಂಕ; ಅರಣ್ಯಾಧಿಕಾರಿ- ಸಾರ್ವಜನಿಕರ ಸಭೆ

9

Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ

governer

Governor: ಮಣಿಪುರದ 19 ನೇ ರಾಜ್ಯಪಾಲರಾಗಿ ಅಜಯ್ ಭಲ್ಲಾ ಪ್ರಮಾಣ ವಚನ ಸ್ವೀಕಾರ

Bidar; ಗುತ್ತಿಗೆದಾರ ಸಚಿನ್‌ ಕೇಸ್;‌ ತನಿಖೆ ಆರಂಭಿಸಿದ ಸಿಐಡಿ ತಂಡ

Bidar; ಗುತ್ತಿಗೆದಾರ ಸಚಿನ್‌ ಕೇಸ್;‌ ತನಿಖೆ ಆರಂಭಿಸಿದ ಸಿಐಡಿ ತಂಡ

Prajwal Devaraj; ಶಿವರಾತ್ರಿಗೆ ʼರಾಕ್ಷಸʼ ಅಬ್ಬರ

Prajwal Devaraj; ಶಿವರಾತ್ರಿಗೆ ʼರಾಕ್ಷಸʼ ಅಬ್ಬರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.