ಬನಶಂಕರಿ ಹೊಂಡಕ್ಕೆ ಸಿಗುತ್ತಾ ಶಾಶ್ವತ ನೀರು?

Team Udayavani, Jan 5, 2019, 10:16 AM IST

5-january-14.jpg

ಬಾಗಲಕೋಟೆ: ಉತ್ತರ ಕರ್ನಾಟಕದ ಬಹುದೊಡ್ಡ ಜಾತ್ರೆ ಎಂದೇ ಕರೆಸಿಕೊಳ್ಳುವ ಬನಶಂಕರಿ ಜಾತ್ರೆ ಸಮೀಪಿಸುತ್ತಿದೆ. ಈ ಜಾತ್ರೆಗೆ ಬರುವ ಲಕ್ಷಾಂತರ ಭಕ್ತರಿಗೆ ನೀರಿನ ಕೊರತೆ, ದೇವಸ್ಥಾನದ ಮುಂದಿನ ಹೊಂಡಕ್ಕೆ ನೀರು ತುಂಬಿಸುವ ಮಹತ್ವದ ಜವಾಬ್ದಾರಿ ಯಾರು ನಿಭಾಯಿಸುತ್ತಾರೆ ಎಂಬ ಪ್ರಶ್ನೆ ಬಾದಾಮಿ ಜನರಲ್ಲಿ ಕಾಡುತ್ತಿದೆ.

ಹೌದು, ಕಳೆದ ಮೂರು ವರ್ಷಗಳಿಂದ ಬನಶಂಕರಿ ದೇವಿಯ ಜಾತ್ರೆಗೆ ಬಂದಿದ್ದ ಲಕ್ಷಾಂತರ ಭಕ್ತರು, ನೀರಿಲ್ಲದೇ ಸಮಸ್ಯೆ ಅನುಭವಿಸಿದ್ದರು. ಪವಿತ್ರ ಸ್ಥಾನ ಮಾಡಿ, ದೇವಿಯ ದರ್ಶನ ಪಡೆಯಬೇಕೆಂಬ ಭಕ್ತಿ-ಭಾವದಿಂದ ಬಂದಿದ್ದ ಜನರು, ಬನಶಂಕರಿ, ಬಾದಾಮಿ, ಮಹಾಕೂಟ, ಮಲಪ್ರಭಾ ನದಿ ಸುತ್ತ ನೀರು ಹುಡುಕುತ್ತ ತೆರಳುತ್ತಿದ್ದ ದೃಶ್ಯಗಳು ಕಾಣುತ್ತಿದ್ದವು. ಬನಶಂಕರಿ ಜಾತ್ರೆಗೆ ಬಂದವರು, ಮಹಾಕೂಟದಲ್ಲಿ ಸ್ನಾನ ಮಾಡುವ ಪರಿಸ್ಥಿತಿ ಬಂದಿತ್ತು.

ಪಕ್ಕದಲ್ಲೇ ನೀರು: ಚೋಳಚಗುಡ್ಡ ಗ್ರಾ.ಪಂ. ವ್ಯಾಪ್ತಿಯಲ್ಲಿ ಬರುವ ಐತಿಹಾಸಿಕ ಕ್ಷೇತ್ರ ಬನಶಂಕರಿ ದೇವಾಲಯದಲ್ಲಿ ದೊಡ್ಡ ಹೊಂಡವಿದೆ. ಇದನ್ನು ಹರಿದ್ರಾತೀರ್ಥ ಎಂದೂ ಕರೆಯಲಾಗುತ್ತದೆ. ಹಿಂದೆ ಇಲ್ಲಿನ ಜಾತ್ರೆಗೆ ಬರುವ ಲಕ್ಷಾಂತರ ಜನರು, ಇದೇ ಹೊಂಡದಲ್ಲಿ ಪವಿತ್ರ ಸ್ಥಾನ ಮಾಡಿ, ದೇವಿಯ ದರ್ಶನಕ್ಕೆ ಹೋಗುತ್ತಿದ್ದರು. ಆದರೆ, ಈ ಹೊಂಡ, ಕಳೆದ 3 ವರ್ಷಗಳಿಂದ ಹನಿ ನೀರಿಲ್ಲದೇ ಬಣಗುಡುತ್ತಿದೆ. ಪಕ್ಕದಲ್ಲೇ ಕೇವಲ 2 ಕಿ.ಮೀ. ಅಂತರದಲ್ಲಿ ಮಲಪ್ರಭಾ ನದಿ ಇದೆ. ಆದರೆ, ಈವರೆಗೆ ಆಡಳಿತ ನಡೆಸಿದ ಜನಪ್ರತಿನಿಧಿಗಳು, ಈ ಹೊಂಡಕ್ಕೆ ನೀರು ತುಂಬಿಸುವ ಕೆಲಸ ಮಾಡಿಲ್ಲ ಎಂದರೆ, ಅವರೆಲ್ಲರಿಗೆ ಕ್ಷೇತ್ರದ ಬಗ್ಗೆ ಎಷ್ಟೊಂದು ಇಚ್ಛಾಶಕ್ತಿ ಎದೆ ಎಂಬುದು ತೋರಿಸುತ್ತದೆ. 2 ಕಿ.ಮೀ. ಅಂತರದಲ್ಲಿರುವ ನೀರು ತರುವುದು ಕಷ್ಟವೇನಲ್ಲ. ಆದರೆ, ಅದು ಈವರೆಗೆ ಸಾಧ್ಯವಾಗಿಲ್ಲ.

61 ಲಕ್ಷ ಖರ್ಚು: ಬನಶಂಕರಿ ಹೊಂಡಕ್ಕೆ ನೀರು ತುಂಬಿಸುವ ಪ್ರಯತ್ನ ಈಗ ನಡೆಯುತ್ತಿದೆ. ಬನಶಂಕರಿ ಸಮೀಪದ ನಾಗರಾಳ ಗ್ರಾಮದ ಬಳಿ, ಮಲಪ್ರಭಾ ನದಿಯಲ್ಲಿ ಈ ಹಿಂದೆ ಸ್ಥಾಪಿಸಿದ್ದ ಜಾಕ್‌ವೆಲ್‌ (ಬಾದಾಮಿ ಪಟ್ಟಣಕ್ಕೆ ಕುಡಿಯು ನೀರು ಪೂರೈಕೆ ಯೋಜನೆ)ನಿಂದ ನೀರು ತರಲು ಕಾಮಗಾರಿ ನಡೆದಿದೆ. ಈ ಜಾಕ್‌ವೆಲ್‌ ಬಾದಾಮಿ ಜನತೆಗೆ ನೀರು ಕೊಡುವ ಉದ್ದೇಶದಿಂದ ನಿರ್ಮಿಸಿ, ಬಾದಾಮಿ ವರೆಗೆ ಪೈಪ್‌ಲೈನ್‌ ಅಳವಡಿಸಿದರೂ, ನೀರು ಬಂದಿದ್ದು ಮಾತ್ರ ಕೆಲವೇ ಕೆಲದಿನ ಮಾತ್ರ. ಹೀಗಾಗಿ ನಿರುಪಯುಕ್ತವಾಗಿದ್ದ ನಾಗರಾಳ ಬಳಿಯ ಜಾಕ್‌ವೆಲ್‌, ಪುನಃ ಸದ್ಬಳಕೆ ಮಾಡಿಕೊಂಡು, ಅದೇ ಪೈಪ್‌ಲೈನ್‌ ಮೂಲಕ ಬನಶಂಕರಿ ಹೊಂಡಕ್ಕೆ ನೀರು ಹರಿಸಲು ಎಂಎಲ್‌ಬಿಸಿ ಯೋಜನೆಯಿಂದ ನಡೆಯುತ್ತಿದೆ. ಅದಕ್ಕಾಗಿ 61 ಲಕ್ಷ ರೂ. ಪ್ರತ್ಯೇಕವಾಗಿ ಖರ್ಚು ಮಾಡಲಾಗುತ್ತಿದೆ.

ವಿಶೇಷ ವರದಿ

ಟಾಪ್ ನ್ಯೂಸ್

cOurt

Putturu: ಬಾಲಕಿಯೊಂದಿಗೆ ಅನುಚಿತ ವರ್ತನೆ: ಆರೋಪಿಗೆ ಶಿಕ್ಷೆ, ದಂಡ

Sulya-Elephant

Sulya: ಆನೆಗುಂಡಿ: ಹೆದ್ದಾರಿ ಬದಿ ಎರಡು ಕಾಡಾನೆ ಸಂಚಾರ

Udupi: ಗೀತಾರ್ಥ ಚಿಂತನೆ-92: ಮಾನಸಿಕ ನಿದ್ದೆಯಿಂದ ಹೊರಬರಲು “ಉತ್ತಿಷ್ಠ’ ಕರೆ

Udupi: ಗೀತಾರ್ಥ ಚಿಂತನೆ-92: ಮಾನಸಿಕ ನಿದ್ದೆಯಿಂದ ಹೊರಬರಲು “ಉತ್ತಿಷ್ಠ’ ಕರೆ

America; ಮೈಸೂರು ಯೋಗ ಗುರು ಶರತ್‌ ಜೋಯಿಸ್‌ ನಿಧನ

America; ಮೈಸೂರು ಯೋಗ ಗುರು ಶರತ್‌ ಜೋಯಿಸ್‌ ನಿಧನ

Priyank Kharge: ಇ-ಸ್ವತ್ತು ಗೊಂದಲ ನಿವಾರಣೆಗೆ ಕಾರ್ಯಪಡೆ

Priyank Kharge: ಇ-ಸ್ವತ್ತು ಗೊಂದಲ ನಿವಾರಣೆಗೆ ಕಾರ್ಯಪಡೆ

JDS protest: ಎಚ್‌ಡಿಕೆ ಕರಿಯ: ಜಮೀರ್‌ ವಿರುದ್ಧ ಆಕ್ರೋಶ; ಸಂಪುಟದಿಂದ ಕೈಬಿಡಲು ಆಗ್ರಹ

JDS protest: ಎಚ್‌ಡಿಕೆ ಕರಿಯ: ಜಮೀರ್‌ ವಿರುದ್ಧ ಆಕ್ರೋಶ; ಸಂಪುಟದಿಂದ ಕೈಬಿಡಲು ಆಗ್ರಹ

ಚುನಾವಣೆ ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪಚುನಾವಣೆ ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪ

BY Election; ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೇವಲ 12 ರೂ.ಗೆ ಬಿಸಿ ಜುನುಕಾ ರೊಟ್ಟಿ ಊಟ:!ಶಿಕ್ಷಕ ಬಸವರಾಜ ಜಾಲೋಜಿ ನಿಸ್ವಾರ್ಥ ಸೇವೆ

ಕೇವಲ 12 ರೂ.ಗೆ ಬಿಸಿ ಜುನುಕಾ ರೊಟ್ಟಿ ಊಟ:!ಶಿಕ್ಷಕ ಬಸವರಾಜ ಜಾಲೋಜಿ ನಿಸ್ವಾರ್ಥ ಸೇವೆ

ಲೋಕಾಪುರ: ಬಿಡಾಡಿ ದನಗಳ ಕಾಟಕ್ಕೆ ಜನ ಹೈರಾಣ

ಲೋಕಾಪುರ: ಬಿಡಾಡಿ ದನಗಳ ಕಾಟಕ್ಕೆ ಜನ ಹೈರಾಣ

3-

Mahalingpur: 2020ರ ಪುರಸಭೆ ಗಲಾಟೆ ಪ್ರಕರಣ: ಮರು ತನಿಖೆಗೆ ಕೋರ್ಟ್ ಆದೇಶ

ಬಾಗಲಕೋಟೆ: ಸರ್ಕಾರಿ ಕಚೇರಿ-ಆಶ್ರಯ ಮನೆಗಳೂ ವಕ್ಫ್ ಆಸ್ತಿ!

ಬಾಗಲಕೋಟೆ: ಸರ್ಕಾರಿ ಕಚೇರಿ-ಆಶ್ರಯ ಮನೆಗಳೂ ವಕ್ಫ್ ಆಸ್ತಿ!

ಅನ್ನದಾತರ ನೋವಿಗೆ ಮಿಡಿಯದ ಜಿಲ್ಲಾಡಳಿತ; ರೈತರ ಅಹೋರಾತ್ರಿ ಧರಣಿ

ಅನ್ನದಾತರ ನೋವಿಗೆ ಮಿಡಿಯದ ಜಿಲ್ಲಾಡಳಿತ; ರೈತರ ಅಹೋರಾತ್ರಿ ಧರಣಿ

MUST WATCH

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

ಹೊಸ ಸೇರ್ಪಡೆ

cOurt

Putturu: ಬಾಲಕಿಯೊಂದಿಗೆ ಅನುಚಿತ ವರ್ತನೆ: ಆರೋಪಿಗೆ ಶಿಕ್ಷೆ, ದಂಡ

Sulya-Elephant

Sulya: ಆನೆಗುಂಡಿ: ಹೆದ್ದಾರಿ ಬದಿ ಎರಡು ಕಾಡಾನೆ ಸಂಚಾರ

Udupi: ಗೀತಾರ್ಥ ಚಿಂತನೆ-92: ಮಾನಸಿಕ ನಿದ್ದೆಯಿಂದ ಹೊರಬರಲು “ಉತ್ತಿಷ್ಠ’ ಕರೆ

Udupi: ಗೀತಾರ್ಥ ಚಿಂತನೆ-92: ಮಾನಸಿಕ ನಿದ್ದೆಯಿಂದ ಹೊರಬರಲು “ಉತ್ತಿಷ್ಠ’ ಕರೆ

America; ಮೈಸೂರು ಯೋಗ ಗುರು ಶರತ್‌ ಜೋಯಿಸ್‌ ನಿಧನ

America; ಮೈಸೂರು ಯೋಗ ಗುರು ಶರತ್‌ ಜೋಯಿಸ್‌ ನಿಧನ

Priyank Kharge: ಇ-ಸ್ವತ್ತು ಗೊಂದಲ ನಿವಾರಣೆಗೆ ಕಾರ್ಯಪಡೆ

Priyank Kharge: ಇ-ಸ್ವತ್ತು ಗೊಂದಲ ನಿವಾರಣೆಗೆ ಕಾರ್ಯಪಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.