ಬಾಗಲಕೋಟೆ : ಪ್ರೇಮಿಗಳನ್ನು ಒಂದು ಮಾಡುವುದಾಗಿ ನಂಬಿಸಿ ಕರೆದೊಯ್ದು ಮರ್ಯಾದಾ ಹತ್ಯೆ
Team Udayavani, Oct 19, 2022, 7:42 AM IST
ಬಾಗಲಕೋಟೆ: ಅನ್ಯ ಜಾತಿಯ ಯುವಕನೊಂದಿಗೆ ಪ್ರೀತಿಸಿದ್ದಾಳೆ ಎನ್ನುವ ಕಾರಣಕ್ಕೆ ತಂದೆಯೇ ಮಗಳನ್ನು ಕೊಲೆ ಮಾಡಿಸಿದ ಘಟನೆ ತಾಲೂಕಿನ ಬೇವಿನಮಟ್ಟಿ ಗ್ರಾಮದಲ್ಲಿ ನಡೆದಿದ್ದು, ಘಟನಾ ವಿಷಯ ತಡವಾಗಿ ಬೆಳಕಿಗೆ ಬಂದಿದೆ.
ಕೊಲೆಯಾದ ಯುವ ಜೋಡಿಗಳನ್ನು ವಿಶ್ವನಾಥ ನೆಲಗಿ( 21) ಹಾಗೂ 17 ವರ್ಷದ ಅಪ್ರಾಪ್ತ ಬಾಲಕಿ ಎಂದು ಗುರುತಿಸಲಾಗಿದೆ. ಈ ಘಟನೆಗೆ ಅಪ್ರಾಪ್ತ ಬಾಲಕಿಯ ತಂದೆ ಬೇವಿನಮಟ್ಟಿಯ ಪರಸಪ್ಪ ಕರಡಿ ಈ ಮರ್ಯಾದಿ ಹತ್ಯಯ ಮೂಲ ರೂವಾರಿ ಎನ್ನವುದು ಅಚ್ಚರಿಗೆ ಕಾರಣವಾಗಿದೆ. ಘಟನೆಯಲ್ಲಿ ಭಾಗಿಯಾದ ಆರೋಪಿಗಳಾದ ಅಪ್ರಾಪ್ತ ಬಾಲಕಿ ತಂದೆ ಪರಸಪ್ಪ ಕರಡಿ, ಸಂಬಂಧಿಕರಾದ ರವಿ ದುಂಡಪ್ಪ ಹುಲ್ಲನ್ನವರ, ಹನುಮಂತ ಸಿದ್ದಪ್ಪ ಮಲ್ಲಾಡದ, ಬೀರಪ್ಪ ಯಲ್ಲಪ್ಪ ದಳವಾಯಿ ಬಂಧಿತರು.
ಅನ್ಯ ಜಾತಿಯುವಕನ ಪ್ರೀತಿಯಿಂದ ದೂರ ಉಳಿಯುವಂತೆ ಕುಟುಂಬಸ್ಥರು ಬಾಲಕಿಗೆ ಅನೇಕ ಸಾರಿ ಬುದ್ದಿವಾದ ಹೇಳಿದ್ದರು. ಅಲ್ಲದೆ ಪ್ರೇಮಿ ವಿಶ್ವನಾಥ ಅಶೋಕ ನೆಲಗಿಗೂ ಎಚ್ಚರಿಕೆ ಕೊಟ್ಟು ಒಂದು ಸಾರಿ ಹಲ್ಲೆ ಮಾಡಿದ್ದರು. ಈ ವಿಷಯ ಗೊತ್ತಾಗಿ ವಿಶ್ವನಾಥ ಅವನ್ನನು ಕಾಸರಗೋಡಿಗೆ ಕೆಲಸಕ್ಕಾಗಿ ಕಳುಹಿಸಿದ್ದರು. ಆದರು ಸಹ ಇಬ್ಬರು ಪ್ರೀತಿ ಮೊಬೈಲ್ ಮೂಲಕ ಮುಂದುವರೆದಿತ್ತು. ಇದು ಕರಡಿ ಕುಟುಂಬಕ್ಕೆ ತೀವ್ರ ಬೇಸರ ಹಾಗೂ ಆಕ್ರೋಶಕ್ಕೆ ಕಾರಣವಾಗಿತ್ತು.
ಅನ್ಯ ಜಾತಿಯ ಹುಡುಗನ ಜೊತೆ ಪ್ರೀತಿಯಿಂದ ಹೊರಬಾರದ ಹಿನ್ನೆಲೆಯಲ್ಲಿ ಹುಡುಗಿಯ ಕುಟುಂಬದವರು ಹಾಗೂ ಸಂಬಂಧಿಕರು ಸೇರಿ ಪ್ರೇಮಿಗಳಿಬ್ಬರನ್ನು ಕೊಲೆ ಮಾಡಿ
ನದಿಗೆ ಎಸೆದಿದ್ದಾರೆ. ಇದು ವರೆಗೆ ಶವಗಳು ಪತ್ತೆಯಾಗಿಲ್ಲ.
ಪ್ರೀತಿಯ ಬಲೆಯಿಂದ ಮಗಳು ಹೊರಬರಲ್ಲ ಎಂದು ಗೊತ್ತಾಗಿ, ಕೊಲೆ ಮಾಡುವ ಉದ್ದೇಶದಿಂದಲೇ ಪ್ರೇಮಿಯ ಜೊತೆಗೆ ಮದುವೆ ಮಾಡುವುದಾಗಿ ನಂಬಿಸಿ, ಅಪ್ರಾಪ್ತೆಯ ಮೂಲಕ ಯುವಕನನ್ನು ಕರೆಯಿಸಿ, ಎರಡು ಪ್ರತ್ಯೇಕ ವಾಹನದಲ್ಲಿ ಕರೆದುಕೊಂಡು ದಾರಿ ಮಧ್ಯ ವಾಹನದಲ್ಲಿ ಇಬ್ಬರನ್ನು ಭೀಕರವಾಗಿ ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ : ಪಿಎಂ ಮೋದಿ ಅವರಿಂದ ದೇಶಿ ನಿರ್ಮಿತ ತರಬೇತಿ ವಿಮಾನ ಎಚ್‌ಟಿಟಿ-40 ಲೋಕಾರ್ಪಣೆ
ಘಟನೆ ನಡೆದಿದ್ದು ಹೇಗೆ..? :
ಬೇವಿನಮಟ್ಟಿ ಗ್ರಾಮದ ಒಂದು ಜಾತಿಯ ಅಪ್ರಾಪ್ತ ಹುಡುಗಿ ಅದೇ ಗ್ರಾಮದ ವಿಶ್ವನಾಥ ನೆಲಗಿ(24) ಯುವಕ ಕಳೆದ ಎರಡ್ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದಾರು. ಈ ವಿಷಯ ಬಾಲಕಿ ಕುಟುಂಬಸ್ಥರು ಒಪ್ಪಲಿಲ್ಲ. ಬುದ್ದಿಮಾತು ಹೇಳಿದ್ದರು ಬಾಲಕಿ ಕೇಳಿರಲಿಲ್ಲ. ಅಲ್ಲದೆ ವಿಶ್ವನಾಥ ಮೇಲೆ ಹಲ್ಲೆ ನಡೆಸಿದ್ದರಿಂದ ಅವರು ಕುಟುಂಬಸ್ಥರು ಅವನನ್ನು ಬೇರೆಡೆ ಕೆಲಸಕ್ಕೆ ಕಳುಹಿಸಿದ್ದರು.
ಆದರು ಕೂಡಾ ಮೊಬೈಲ್ ಮೂಲಕ ಪ್ರೇಮಿಗಳು ಸಂಪರ್ಕದಲ್ಲಿ ಇದ್ದರು. ಹುಡುಗಿಯ ಮನೆಯವರು ಮೊಬೈಲ್ ನೋಡುತ್ತಿದ್ದಾಗ ವಿಶ್ವನಾಥನ ಮೆಸೇಜ್ ಕಂಡು ಬಂದಿತ್ತು. ಇದರಿಂದ ಆಕ್ರೋಶಗೊಂಡ ಹುಡುಗಿ ಮನೆಯವರು ನಿಮ್ಮಿಬ್ಬರನ್ನು ಒಂದು ಮಾಡುತ್ತೇವೆ ಅಂತ ನಂಬಿಸಿ. ಆಕೆಯ ಕಡೆಯಿಂದ ಯುವಕನಿಗೆ ಊರಿಗೆ ಬರುವಂತೆ ಕರೆ ಮಾಡಿಸಿದ್ದಾರೆ. ವಿಶ್ವನಾಥ ಕಾಸರಗೂಡನಿಂದ ಗದಗ ಜಿಲ್ಲೆಯ ನರಗುಂದ ಕಡೆ ಬರುವಾಗ. ನಿನ್ನನ್ನು ಆತನ ಜೊತೆ ಬಿಟ್ಟು ಬರೋದಾಗಿ ಹೇಳಿದ ಅಪ್ರಾಪ್ತೆಯ ಮಾವ ಬಾಗಪ್ಪ, ಆಕೆಯ ಸಹೋದರ(ಚಿಕ್ಕಮ್ಮ ಮಗ)ರವಿ ಹುಲ್ಲಣ್ಣವರ, ಮಾವಂದಿರಾದ ಹನುಮಂತ ಮಲ್ನಾಡದ, ಬೀರಪ್ಪ ದಳವಾಯಿ ಆಕೆಯ ಜೊತೆ ತೆರಳಿದ್ದಾರೆ.
ಸೆಪ್ಟೆಂಬರ್ 30 ರಂದು ರಾತ್ರಿ ಒಂದು ಬೊಲೆರೊ ಹಾಗೂ ಟಾಟಾ ಏಸ್ ತೆಗೆದುಕೊಂಡು ಗದಗ ಜಿಲ್ಲೆಯ ನರಗುಂದ ಕಡೆ ಹೋಗ್ತಾರೆ. ಅಲ್ಲಿ ಬಸ್ ನಿಲ್ದಾಣದಿಂದ ವಿಶ್ವನಾಥನನ್ನು ಬೊಲೆರೊ ವಾಹನದಲ್ಲಿ ಹಾಕಿಕೊಂಡು ಅ. 1 ರಂದು ಬೆಳಗಿನ ಜಾವ ಬೊಲೆರೊ ವಾಹನದಲ್ಲಿದ್ದ ವಿಶ್ವನಾಥ ಮರ್ಮಾಂಗಕ್ಕೆ ಹಾಗೂ ಎದೆಗೆ ಕಲ್ಲಿನಿಂದ ಹೊಡೆದು ಕೊಲೆ ಮಾಡಿದ್ದಾರೆ ಟಾಟಾ ಏಸ್‌ನಲ್ಲಿದ್ದ ರಾಜೇಶ್ವರಿಯ ಕತ್ತನ್ನು ವೇಲ್ ನಿಂದ ಬಿಗಿದು ಕೊಲೆ ಮಾಡಿದ್ದರೆ. ನಂತರ ವಿಜಯಪುರ ಜಿಲ್ಲೆ ಆಲಮಟ್ಟಿ ರಸ್ತೆ ಸೇತುವೆಯಿಂದ ಕೃಷ್ಣಾ ನದಿಗೆ ಶವ ಎಸೆದಿದ್ದಾರೆ.
ನಂತರ ನಾಪತ್ತೆ ಕುರಿತು ದೂರು ನೀಡಿದಾಗ ಪೊಲೀಸರ ತನಿಖೆಯಲ್ಲಿ ಪ್ರಕರಣ ಬೆಳಕಿಗೆ ಬಂದಿದೆ. ತನಿಖೆ ಪೂರ್ಣ ಬಳಿಕ ನಿಜವಾದ ಘಟನೆಯ ಹಿನ್ನೆಲೆ
ಹೊರಗೆ ಬರಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Amit Shah ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ: ಬಿ.ಕೆ. ಹರಿಪ್ರಸಾದ್
Mandya: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 46 ಮಂದಿ ಸಾಧಕರಿಗೆ ಸಮ್ಮಾನ
Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್ ಆಕ್ರೋಶ
Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ
Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.