![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Mar 17, 2020, 5:40 PM IST
ಕೆರೂರ(ಬಾಗಲಕೋಟೆ): ರಸ್ತೆ ಬದಿ ನಿಂತವರ ಮೇಲೆ ಸರಕು ಸಾಗಾಟ ಲಾರಿ ಹರಿದು ಮೂವರು ಸ್ಥಳದಲ್ಲೇ ಮೃತಪಟ್ಟು, ಇನ್ನು ಮೂವರು ಗಂಭೀರ ಗಾಯಗೊಂಡ ಘಟನೆ ಕೆರೂರ ಪಟ್ಟಣದ ಅಮೃತ ಹೊಟೇಲ್ ಬಳಿಯ ರಾಷ್ಟ್ರೀಯ ಹೆದ್ದಾರಿ 218ರಲ್ಲಿ ಮಂಗಳವಾರ ಸಂಭವಿಸಿದೆ.
ಮೃತರಲ್ಲಿ ಓರ್ವನ ಹೆಸರು ತಿಳಿದು ಬಂದಿದ್ದು, ಪಟ್ಟಣದ ಲಕ್ಷ್ಮಣ ಹಾದಿಮನಿ (28) ಎಂದು ಗುರುತಿಸಲಾಗಿದೆ. ಇನ್ನಿಬ್ಬರು ನರಗುಂದ ನಿವಾಸಿಗಳೆಂದು ತಿಳಿದು ಬಂದಿದೆ.
ಹುಬ್ಬಳ್ಳಿಯಿಂದ ಬಾಗಲಕೋಟೆಗೆ ಹೊರಟಿದ್ದ ಎಸ್.ಪಿ.ಆರ್ ಟ್ರಾನ್ಸ್ ಪೋರ್ಟ್ ನ ಸರಕು ಲಾರಿ ಚಾಲಕ ಕುಡಿದ ಮತ್ತಿನಲ್ಲಿ ಲಾರಿಯನ್ನು ವೇಗವಾಗಿ ಓಡಿಸಿದ್ದು, ಈ ಸಂದರ್ಭ ಕೃಷಿ ಸಾಮಗ್ರಿಗಳನ್ನು ಮಾರಾಟ ಮಾಡಿ ತಮ್ಮೂರಿಗೆ ತೆರಳಲು ರಸ್ತೆ ಬದಿ ನಿಂತಿದ್ದ ಜನರ ಮೇಲೆ ಲಾರಿ ಹರಿದಿದೆ. ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಲಾರಿ ಹೊಡೆದ ರಭಸಕ್ಕೆ ದೇಹಗಳು ಸಂಪೂರ್ಣ ಛಿತ್ರಗೊಂಡಿವೆ. ಇನ್ನೂ ಮೂವರ ಸ್ಥಿತಿ ಗಂಭೀರವಾಗಿದ್ದು, ಬಾಗಲಕೋಟೆಯ ಜಿಲ್ಲಾ ಆಸ್ಪತ್ರೆಗೆ ಸೇರಿಸಲಾಗಿದ್ದು ಕೆರೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
You seem to have an Ad Blocker on.
To continue reading, please turn it off or whitelist Udayavani.