ತಂದೆ-ತಾಯಿ ಸುಸಂಸ್ಕೃತ ಸಮಾಜದ ನಿರ್ಮಾಪಕರು
Team Udayavani, Oct 14, 2021, 2:23 PM IST
ಮಹಾಲಿಂಗಪುರ: ತಂದೆ-ತಾಯಿಗಳೇ ಸುಸಂಸ್ಕೃತಸಮಾಜದ ನಿರ್ಮಾಪಕರಾಗಿರುವುದರಿಂದ ತಮ್ಮಮಕ್ಕಳಿಗೆ ಚಿಕ್ಕವಯಸ್ಸಿನಿಂದಲೂ ಉತ್ತಮ ಸಂಸ್ಕೃತಿಮತ್ತು ಸಂಸ್ಕಾರ ಕೊಟ್ಟು ಭವಿಷ್ಯದಲ್ಲಿ ಮಕ್ಕಳನ್ನುಸಮಾಜ ಮತ್ತು ದೇಶದ ಮಾದರಿ ಪ್ರಜೆಗಳನ್ನಾಗಿಬೆಳೆಸಬೇಕು ಎಂದು ಪ್ರವಚನಕಾರ ಇಬ್ರಾಹಿಂಸುತಾರ ಹೇಳಿದರು.
ಪಟ್ಟಣದ ಬನಶಂಕರಿ ದೇವಸ್ಥಾನದಲ್ಲಿನಡೆಯುತ್ತಿರುವ 31ನೇ ವರ್ಷದ ನವರಾತ್ರಿಯದೇವಿ ಪುರಾಣದ ಏಳನೇ ದಿನದ ಪ್ರವಚನಕಾರ್ಯಕ್ರಮದಲ್ಲಿ ಭಾಗವಹಿಸಿ ಅವರುಮಾತನಾಡಿದರು.ಮನುಷ್ಯ ಹುಟ್ಟು ಸಾವಿನ ನಡುವಿನಬದುಕನ್ನು ಸಾರ್ಥಕಗೊಳಿಸಿಕೊಳ್ಳಲು ಸಂಸ್ಕೃತಿ,ಸಂಸ್ಕಾರ ಮತ್ತು ಅಧ್ಯಾತ್ಮ ಅವಶ್ಯಕವಾಗಿದೆ.ಮಹಾಲಿಂಗಪುರ ಧಾರ್ಮಿಕ ಮತ್ತು ಅಧ್ಯಾತ್ಮದ ತವರೂರು, ಇಲ್ಲಿ ನಡೆಯುತ್ತಿರುವ ಅದ್ಧೂರಿನವರಾತ್ರಿ ಉತ್ಸವ ಮಾದರಿ ಕಾರ್ಯಕ್ರಮವಾಗಿದೆ ಎಂದರು.
ಸಾನ್ನಿಧ್ಯ ವಹಿಸಿದ್ದ ಸಿದ್ದಾರೂಢ ಬ್ರಹ್ಮವಿದ್ಯಾಶ್ರಮದ ಸಹಜಾನಂದಸ್ವಾಮೀಜಿ ಮಾತನಾಡಿ, ಮನಸ್ಸು, ಹೃದಯಪರಿಶುದ್ಧಗೊಳ್ಳಲು ದೇವಿಪುರಾಣ,ಮಹಾತ್ಮರ ಪ್ರವಚನ ಸೇರಿದಂತೆ ಧಾರ್ಮಿಕಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ಭಾಗವಹಿಸುವಜತೆಗೆ ನೀತಿ, ಪ್ರೀತಿಯಿಂದ ಬದುಕಿ.ಪವಿತ್ರವಾದ ಮಾನವ ಜನ್ಮದ ಸಾರ್ಥಕತೆಗೆ ಶ್ರಮಿಸಬೇಕು.
ಪ್ರತಿಯೊಂದು ಮನೆಯಿಂದಲೇಸಂಸ್ಕೃತಿ-ಸಂಸ್ಕಾರ ಆರಂಭವಾಗಬೇಕು.ಮುಖ್ಯವಾಗಿ ಮಕ್ಕಳಿಗೆ ಇಂದು ಶಿಕ್ಷಣಜತೆಗೆ ಅಧ್ಯಾತ್ಮ ಮತ್ತು ದೇಶಾಭಿಮಾನದಸಂಸ್ಕೃತಿ-ಸಂಸ್ಕಾರ ಕಲಿಸಬೇಕು ಎಂದರು.ದೇವಿ ಪುರಾಣ ಆಧರಿಸಿ ಪ್ರವಚನನೀಡಿದ ಮೂಡಲಗಿಯ ಸೋಮಶೇಖರಯ್ಯಕಂಟಿಕಾರಮಠ ಮಾತನಾಡಿ, ಅಧ್ಯಾತ್ಮಮತ್ತು ಧಾರ್ಮಿಕ ಕ್ಷೇತ್ರದಲ್ಲಿ ಹೆಸರುವಾಸಿಮಹಾಲಿಂಗಪುರ ಪುಣ್ಯಭೂಮಿಯಾಗಿದೆ.ಮನುಷ್ಯನ ಮನ:ಶಾಂತಿಗೆ ಧರ್ಮಸಭೆ ಮತ್ತುಧರ್ಮಾಚರಣೆಗಳು ಅಗತ್ಯವಾಗಿವೆ.
ಮಹಾತ್ಮರವಾಣಿಯಲ್ಲಿನ ಸಂದೇಶಗಳನ್ನು ನಮ್ಮ ಜೀವನದಲ್ಲಿಅಲ್ಪಮಟ್ಟಿಗಾದರೂ ಅಳವಡಿಸಿಕೊಳ್ಳಬೇಕುಎಂದರು. ಹೊಸೂರಿನ ಪರಮಾನಂದ ಸ್ವಾಮೀಜಿಭಾಗವಹಿಸಿದ್ದರು. ರಾಜ್ಯ ಸರ್ಕರದಿಂದಪ್ರಸಕ್ತಸಾಲಿನ ರಾಜ್ಯಮಟ್ಟದ ಆದರ್ಶ ಶಿಕ್ಷಕಿಪ್ರಶಸ್ತಿ ಪಡೆದ ಸಪನಾ ಅನಿಗೋಳ ಅವರನ್ನುಸನ್ಮಾನಿಸಲಾಯಿತು. ಶೋಭಾ ಚಂದ್ರಶೇಖರಹುಣಶ್ಯಾಳ ಅವರಿಂದ ಮುತ್ತೆ$çದೆಯರಿಗೆಉಡಿತುಂಬುವ ಕಾರ್ಯಕ್ರಮ ಜರುಗಿತು.
ಹೊಸಪೇಟಿಯ ಡಾ| ಬಸವರಾಜ ಬನ್ನೂರಅವರಿಂದ ಹಾಸ್ಯಕಾರ್ಯಕ್ರಮ ಹಾಗೂಮಕ್ಕಳಿಂದ ಭರತನಾಟ್ಯ, ಯುವ ಪ್ರತಿಭೆ ರಾಜುಸಿದ್ದಾಪುರ ಅವರಿಂದ ಗಾಯನ ಕಾರ್ಯಕ್ರಮಜರುಗಿದವು. ಸಿದ್ದು ದಢೂತಿ ಬಂಧುಗಳುಹಾಗೂ ಕಿರಗಟಗಿ ಬಂಧುಗಳು ಪ್ರಸಾದ ವ್ಯವಸ್ಥೆಮಾಡಿದ್ದರು.
ಹಿರಿಯರಾದ ಡಾ| ಎಂ.ಎಸ್. ಅಂಬಿ,ಡಾ| ಪದ್ಮಜೀತ ನಾಡಗೌಡಪಾಟೀಲ, ಮಲ್ಲಪ್ಪಭಾವಿಕಟ್ಟಿ, ಲಕ್ಕಪ್ಪ ಚಮಕೇರಿ, ಸಿದಗಿರೆಪ್ಪಕಾಗಿ, ಶ್ರೀಶೈಲಪ್ಪ ಬಾಡನವರ, ನಾರಾಯಣಕಿರಗಿ, ಮಹಾಲಿಂಗ ಮನವಾಡೆ, ಮಹಾದೇವಹುಣಶ್ಯಾಳ, ರವಿ ಜವಳಗಿ, ವಿನೋದ ಚಮಕೇರಿ,ಗುರುಪಾದ ಅಂಬಿ, ಬಿ.ಸಿ. ಪೂಜಾರಿ, ಈಶ್ವರಚಮಕೇರಿ, ಸುನೀಲ ಜಮಖಂಡಿ, ಬಸವರಾಜಹುಲ್ಯಾಳ, ಸತೀಶ ಸೋರಗಾಂವಿ, ಚಂದ್ರು ಕಾಗಿ,ಸಂಜು ಜಮಖಂಡಿ, ಚಂದ್ರು ಕದ್ದಿಮನಿ, ಪ್ರಕಾಶಬಾಡನವರ, ಅಶೋಕ ಬಾಣಕಾರ, ಸುದರ್ಶನಹಿಕಡಿ, ವಹಾಂತೇಶ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.