ಬಲ ಕೊಡಿ; ಇಲ್ಲವೇ ರದ್ದು ಮಾಡಿ

ತಾಪಂ ರದ್ದತಿ ಕುರಿತು ಸದಸ್ಯರಲ್ಲೇ ಭಿನ್ನ ಅಭಿಪ್ರಾಯ­ !ಕಿಚನ್‌ ಗಾರ್ಡನ್‌ಗೆ ಅನುದಾನ ಹೆಚ್ಚಿಸಿ

Team Udayavani, Mar 5, 2021, 8:48 PM IST

TP

ಬಾಗಲಕೋಟೆ: ಗ್ರಾಮೀಣ ಭಾಗದ ಎಲ್ಲರೀತಿಯ ಅಭಿವೃದ್ಧಿ ಕಾರ್ಯಗಳು ಜಿಪಂ ಹಾಗೂ ಗ್ರಾಪಂನಿಂದಲೇ ನಡೆಯುತ್ತಿವೆ. ತಾಲೂಕು ಪಂಚಾಯಿತಿ ವ್ಯವಸ್ಥೆ ಕೇವಲ ಸಭೆ-ಸಮಾರಂಭಗಳಿಗೆ ಮಾತ್ರ ಸಿಮೀತವಾಗಿದೆ.

ಹಳ್ಳಿ ಜನರು ಯಾವುದೇಅಭಿವೃದ್ಧಿ ಕಾರ್ಯಕ್ಕೆ ಅನುದಾನ ಕೇಳಿದರೂ ದೊರೆಯುತ್ತಿಲ್ಲ. ತಾಪಂ ವ್ಯವಸ್ಥೆಗೆ ಬೆಲೆಯೇ ಇಲ್ಲದಂತಾಗಿದೆ. ತಾಪಂ ವ್ಯವಸ್ಥೆ ಬಲಪಡಿಸಿ, ಇಲ್ಲವೇ ರದ್ದುಗೊಳಿಸಿ ಬಿಡಿ. ನವನಗರದ ತಾಪಂ ಸಭಾ ಭವನದಲ್ಲಿ ನಡೆದ ಪ್ರಸಕ್ತ ಐದು ವರ್ಷದ ಆಡಳಿತ ಮಂಡಳಿಯ ಕೊನೆಯ ಸಾಮಾನ್ಯ ಸಭೆಯಲ್ಲಿ ಈ ಕುರಿತು ಬಿಸಿ ಬಿಸಿಚರ್ಚೆ ನಡೆಯಿತು.

ನೀಡಿದ ಭರವಸೆ ಈಡೇರಿಸಲು ಆಗಿಲ್ಲ: ನಾವು ಐದು ವರ್ಷಗಳಿಂದ ಬಾಗಲಕೋಟೆ ತಾಪಂ. ವ್ಯಾಪ್ತಿಯಲ್ಲಿ ಅಭಿವೃದ್ಧಿ, ಅನುದಾನಕ್ಕಾಗಿ ಎಲ್ಲ ರೀತಿಯಿಂದಲೂ ಪ್ರಯತ್ನಿಸಿದ್ದೇವೆ. ನಮ್ಮ ನಿರೀಕ್ಷೆ, ಜನರಿಗೆ ನೀಡಿದ ಭರವಸೆಯಂತೆ ಕೆಲಸ ಮಾಡಲು ಆಗಿಲ್ಲ. ಗ್ರಾಮ ಪಂಚಾಯಿತಿಗೆ ಇರುವಷ್ಟು ಶಕ್ತಿ, ಅನುದಾನವೂ ತಾಲೂಕು ಪಂಚಾಯಿತಿಗೆ ಇಲ್ಲ. ಆಡಳಿತ ವಿಕೇಂದ್ರಿಕರಣ ಕೇವಲ ಮಾತಿಗೆ ಸಿಮೀತವಾಗಿದೆ.ಹೀಗಾಗಿ ತಾಪಂ ವ್ಯವಸ್ಥೆಯೇ ರದ್ದುಗೊಳಿಸುವುದು ಸೂಕ್ತ ಎಂದು ಕೆಲ ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸಿದರೆ, ಇನ್ನೂ ಕೆಲವರು ಒಂದು ಜಿಲ್ಲೆಯಲ್ಲಿ ತಾಲೂಕು ಇದ್ದರೆ, ತಾಲೂಕು ಪಂಚಾಯಿತಿಗಳೂ ಇರಬೇಕು. ಅವುಗಳನ್ನು ಬಲಪಡಿಸಬೇಕು ಎಂದು ಹಲವರು ಹೇಳಿಕೊಂಡರು.

ತಾಪಂ ವ್ಯವಸ್ಥೆ ಬಲಪಡಿಸುವ ಹಾಗೂ ರದ್ದುಪಡಿಸುವ ಕುರಿತು ಅಧ್ಯಕ್ಷ ಚನ್ನನಗೌಡಪರನಗೌಡ, ಉಪಾಧ್ಯಕ್ಷ ಸಂಗಣ್ಣ ಮುಧೋಳ ಸೇರಿದಂತೆ ಕಾಂಗ್ರೆಸ್‌-ಬಿಜೆಪಿ ಸದಸ್ಯರು ಪಕ್ಷಭೇದ ಮರೆತು ಸಮಗ್ರ ಚರ್ಚೆ ನಡೆಸಿದರು.

ಸಭೆಗೆ ಬರಲು ಸೀಮಿತರಲ್ಲ: ನಾವು ಕೇವಲ ಸಭೆ-ಸಮಾರಂಭಕ್ಕೆ ಸಿಮೀತರಾಗಿದ್ದೇವೆ. ಆಡಳಿತಾತ್ಮಕ ಶಕ್ತಿಯೇ ನೀಡಿಲ್ಲ. ಗ್ರಾ.ಪಂ ಮೂಲಕವೇ ಎಲ್ಲ ಕೆಲಸನಡೆಯುತ್ತಿವೆ. ತಾ.ಪಂ. ಅವಶ್ಯಕತೆ ಇಲ್ಲ ಎಂಬಭಾವನೆ ಎಲ್ಲೆಡೆ ಬರುತ್ತಿದೆ. ಹೀಗಾಗಿ ಈ ವ್ಯವಸ್ಥೆಯನ್ನೇ ರದ್ದುಪಡಿಸಿ ಎಂದು ಕೆಲ ಸದಸ್ಯರು ಹೇಳಿದರು .ಅಧ್ಯಕ್ಷ ಚನ್ನನಗೌಡ ಪರನಗೌಡರ ಮಾತನಾಡಿ,ತಾಲೂಕು ಪಂಚಾಯಿತಿ ಮೂಲಕ ಕೆಲಸ ಮಾಡಲು ಸಾಕಷ್ಟು ಅವಕಾಶ ಇವೆ. ಅನುದಾನ ಕಡಿಮೆ ಇದೆ ಎಂಬ ಕಾರಣಕ್ಕೆ ತಾಪಂ ರದ್ದುಪಡಿಸುವ ಸೂಕ್ತವಲ್ಲ. ತಾಲೂಕು ಮಟ್ಟದಲ್ಲಿ ಆಡಳಿತಕ್ಕೆ ಒಂದು ವೇದಿಕೆಯಾಗಿ ತಾಪಂ. ಇರಬೇಕು ಎಂದರು.

ತಾಲೂಕಿನಲ್ಲಿ ಬಾಲ ವಿಕಾಸ ಸಮಿತಿಗಳುಹೆಸರಿಗೆ ಮಾತ್ರ ಇವೆ. ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿಲ್ಲ.  ಅಂಗನವಾಡಿ ಕೇಂದ್ರಗಳಿಂದ ಸಮರ್ಪಕವಾದ ಆಹಾರ ಪೂರೈಕೆ ಆಗುತ್ತಿಲ್ಲ. ಈಬಗ್ಗೆ ಗಮನ ಹರಿಸಬೇಕು. 5 ವರ್ಷ ಅವಧಿಯಲ್ಲಿಸಾಕಷ್ಟು ಕೆಲಸ ಮಾಡಲಾಗಿದೆ. ಅಧ್ಯಕ್ಷನಾಗಿ ಉತ್ತಮ ಕೆಲಸ ಮಾಡಿದ ತೃಪ್ತಿ ಇದೆ ಎಂದು ಅಧ್ಯಕ್ಷ ಚನ್ನನಗೌಡಪರನಗೌಡರ ಹೇಳಿದರು.

ಕಿಚನ್‌ ಗಾರ್ಡನ್‌ಗೆ ಅನುದಾನ ಹೆಚ್ಚಿಸಿ: ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ಪೌಷ್ಠಿಕ ಆಹಾರ ನೀಡಲು ಪ್ರತಿಯೊಂದು ಅಂಗನವಾಡಿ ಕೇಂದ್ರದಲ್ಲಿ ಕಿಚನ್‌ ಕಾರ್ಡನ್‌ ರೂಪಿಸಲು ಕೇವಲ 1 ಸಾವಿರ ಅನುದಾನ ನಿಗದಿ ಮಾಡಿದೆ. ಈ ಅನುದಾನ ಸಾಲುತ್ತಿಲ್ಲ. ಕಿಚನ್‌ ಗಾರ್ಡನ್‌ ನಿರ್ಮಾಣಕ್ಕೆ ಅನುದಾನಹೆಚ್ಚಿಸಬೇಕು. ಕೇವಲ 1 ಸಾವಿರದಲ್ಲಿ ಕಿಚನ್‌ ಗಾರ್ಡನ್‌ ನಿರ್ಮಿಸಿ ಎಂದು ಸರ್ಕಾರ ಸೂಚಿಸಿದೆ. ನಿರ್ಮಾಣ ಮಾಡುವಲ್ಲಿ ನಿರ್ಲಕ್ಷ್ಯ ಮಾಡಿದರೆ ಅಂಗನವಾಡಿಕಾರ್ಯಕರ್ತೆಯರನ್ನು ಅಮಾನತು ಮಾಡಲಾಗುತ್ತಿದೆಎಂದು ಸದಸ್ಯ ಸಲೀಮ್‌ ಶೇಖ ಹೇಳಿದರು.ಸದಸ್ಯೆ ಲಕ್ಷಿ$¾à ಪೂಜಾರ ಮಾತನಾಡಿ, ಉದಗಟ್ಟಿಗ್ರಾಮದಲ್ಲಿ ಒಂದೇ ಅಂಗನವಾಡಿ ಕೇಂದ್ರದಲ್ಲಿ ಇಬ್ಬರುಕಾರ್ಯಕರ್ತೆಯರು ಕೆಲಸ ಮಾಡುತ್ತಿದ್ದಾರೆ. ಈ ಸಮಸ್ಯೆ 5 ವರ್ಷದಿಂದ ಹೇಳಿದರೂ ಯಾರೂ ಕ್ಯಾರೇ ಅನ್ನುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.ತಾಪಂ ಉಪಾಧ್ಯಕ್ಷ ಸಂಗಣ್ಣ ಮುಧೋಳ,ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಬಸವರಾಜಕೆಂಜೋಡಿ, ತಾಪಂ ಇಒ ಎನ್‌.ವೈ.ಬಸರಿಗೀಡದ,ಸದಸ್ಯರಾದ ರಾಜಶೇಖರ ಅಂಗಡಿ, ಪರಶುರಾಮಛಬ್ಬಿ, ನಿಂಗಪ್ಪ ಮಾಗನೂರ, ಇಒ ಎನ್‌.ವೈ.ಬಸರಿಗಿಡದ ಮುಂತಾದವರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು.

ಟಾಪ್ ನ್ಯೂಸ್

November 20: ಲಾವೋಸ್‌ನಲ್ಲಿ ಭಾರತ, ಚೀನ ರಕ್ಷಣ ಸಚಿವರ ಸಭೆ

November 20: ಲಾವೋಸ್‌ನಲ್ಲಿ ಭಾರತ, ಚೀನ ರಕ್ಷಣ ಸಚಿವರ ಸಭೆ

muslim marriage

Marriage registration ಪ್ರಮಾಣಪತ್ರ ನೀಡುವ ಅಧಿಕಾರ ವಕ್ಫ್ ಬೋರ್ಡ್‌ಗೆ ಎಲ್ಲಿದೆ?

1-libbb

Libya; 8 ವರ್ಷಗಳ ಬಳಿಕ ಲಿಬಿಯಾಕ್ಕೆ ತೆರಳಲು ಭಾರತೀಯರಿಗೆ ಅನುಮತಿ

sidda dkshi

CM-DCM ಮಹಾರಾಷ್ಟ್ರ ಚುನಾವಣ ಪ್ರಚಾರದಲ್ಲಿ ಭಾಗಿ

Iran: ಹಿಜಾಬ್‌ ನಿರಾಕರಿಸಿದರೆ ವಿಶೇಷ ಕ್ಲಿನಿಕ್‌: ಇರಾನ್‌ ತೀರ್ಮಾನಕ್ಕೆ ಆಕ್ರೋಶ

Iran: ಹಿಜಾಬ್‌ ನಿರಾಕರಿಸಿದರೆ ವಿಶೇಷ ಕ್ಲಿನಿಕ್‌: ಇರಾನ್‌ ತೀರ್ಮಾನಕ್ಕೆ ಆಕ್ರೋಶ

HDK (3)

Siddaramaiah; ಕೊಳ್ಳೆ ಹೊಡೆಯುತ್ತಿದ್ದರೂ ನಿಮ್ಮನ್ನು ಮುಟ್ಟಬಾರದಾ: ಎಚ್‌ಡಿಕೆ

1-sugama

Music; ಸುಗಮ ಸಂಗೀತಕ್ಕೆ ನವೋದಯ ಸಾಹಿತ್ಯ ಬುನಾದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಾಡಂಚಿನ ರೈತರ ಅರಣ್ಯರೋದನ; ಬೇರೆಯವರ ಜಮೀನಿನಲ್ಲಿ ದುಡಿಯಬೇಕಾದ ಸ್ಥಿತಿ

ಕಾಡಂಚಿನ ರೈತರ ಅರಣ್ಯರೋದನ; ಬೇರೆಯವರ ಜಮೀನಿನಲ್ಲಿ ದುಡಿಯಬೇಕಾದ ಸ್ಥಿತಿ

ಕೇವಲ 12 ರೂ.ಗೆ ಬಿಸಿ ಜುನುಕಾ ರೊಟ್ಟಿ ಊಟ:!ಶಿಕ್ಷಕ ಬಸವರಾಜ ಜಾಲೋಜಿ ನಿಸ್ವಾರ್ಥ ಸೇವೆ

ಕೇವಲ 12 ರೂ.ಗೆ ಬಿಸಿ ಜುನುಕಾ ರೊಟ್ಟಿ ಊಟ:!ಶಿಕ್ಷಕ ಬಸವರಾಜ ಜಾಲೋಜಿ ನಿಸ್ವಾರ್ಥ ಸೇವೆ

ಲೋಕಾಪುರ: ಬಿಡಾಡಿ ದನಗಳ ಕಾಟಕ್ಕೆ ಜನ ಹೈರಾಣ

ಲೋಕಾಪುರ: ಬಿಡಾಡಿ ದನಗಳ ಕಾಟಕ್ಕೆ ಜನ ಹೈರಾಣ

3-

Mahalingpur: 2020ರ ಪುರಸಭೆ ಗಲಾಟೆ ಪ್ರಕರಣ: ಮರು ತನಿಖೆಗೆ ಕೋರ್ಟ್ ಆದೇಶ

ಬಾಗಲಕೋಟೆ: ಸರ್ಕಾರಿ ಕಚೇರಿ-ಆಶ್ರಯ ಮನೆಗಳೂ ವಕ್ಫ್ ಆಸ್ತಿ!

ಬಾಗಲಕೋಟೆ: ಸರ್ಕಾರಿ ಕಚೇರಿ-ಆಶ್ರಯ ಮನೆಗಳೂ ವಕ್ಫ್ ಆಸ್ತಿ!

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

November 20: ಲಾವೋಸ್‌ನಲ್ಲಿ ಭಾರತ, ಚೀನ ರಕ್ಷಣ ಸಚಿವರ ಸಭೆ

November 20: ಲಾವೋಸ್‌ನಲ್ಲಿ ಭಾರತ, ಚೀನ ರಕ್ಷಣ ಸಚಿವರ ಸಭೆ

muslim marriage

Marriage registration ಪ್ರಮಾಣಪತ್ರ ನೀಡುವ ಅಧಿಕಾರ ವಕ್ಫ್ ಬೋರ್ಡ್‌ಗೆ ಎಲ್ಲಿದೆ?

1-libbb

Libya; 8 ವರ್ಷಗಳ ಬಳಿಕ ಲಿಬಿಯಾಕ್ಕೆ ತೆರಳಲು ಭಾರತೀಯರಿಗೆ ಅನುಮತಿ

sidda dkshi

CM-DCM ಮಹಾರಾಷ್ಟ್ರ ಚುನಾವಣ ಪ್ರಚಾರದಲ್ಲಿ ಭಾಗಿ

police

Kumbala: ಸಂತ್ರಸ್ತೆಯ ತಾಯಿ ಆತ್ಮಹ*ತ್ಯೆ: ಸಚಿತಾ ರೈ ವಿರುದ್ಧ ಮತ್ತೊಂದು ದೂರು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.