ರೈಲ್ವೆ ಬಸ್ ಸಂಚಾರ ಪುನಾರಂಭ
Team Udayavani, Mar 17, 2020, 4:47 PM IST
ಕಲಾದಗಿ: ಬಾಗಲಕೋಟೆ-ಕುಡಚಿ ರೈಲ್ವೆ ಮಾರ್ಗ ಖಜ್ಜಿಡೋಣಿವರೆಗೆ ಮುಕ್ತಾಯಗೊಂಡಿದ್ದು, 2018 ಜೂನ್ 15ರಂದು ಶುಭಾರಂಭ ಮಾಡಿದ್ದ ರೈಲ್ ಬಸ್ ತನ್ನ ಸಂಚಾರವನ್ನು ಆಗ ಆರೇಳು ತಿಂಗಳಲ್ಲಿ ನಿಲ್ಲಿಸಿತ್ತು. ಈಗ ಮತ್ತೆ ಸೋಮವಾರ ಸಂಚಾರ ಪುನರಾಂಭ ಮಾಡಿದೆ.
ಬೆಳಗ್ಗೆ 7.45ಕ್ಕೆ ಬಾಗಲಕೋಟೆ ರೈಲ್ವೆ ಸ್ಟೇಶನನಿಂದ ಬಿಟ್ಟ ರೈಲ್ ಬಸ್ ನವನಗರ, ಸೂಳಿಕೇರಿ, ಕೆರಕಲಮಟ್ಟಿ, ಹಿರೇಶೆಲ್ಲಿಕೇರಿ, ಖಜ್ಜಿಡೋಣಿಗೆ 9.30ಕ್ಕೆ ಬಂದು ತಲುಪಿತು. ಮತ್ತೆ ಆರಂಭಗೊಂಡ ರೈಲ್ವೆ$ ಬಸ್‌ನ ಮೊದಲ ದಿನ ಪ್ರಯಾಣಿಕರಿಲ್ಲದೆ ಸಂಚಾರ ನಡೆಸಿದ್ದು ಕಂಡು ಬಂತು. ಬಾಗಲಕೋಟೆಯಿಂದ ಖಜ್ಜಿಡೋಣಿವರೆಗೆ 7 ಟಿಕೆಟ್ ಪಡೆದು ಪ್ರಯಾಣಿಕರು ಸಂಚರಿಸಿದ್ದರು. ಖಜ್ಜಿಡೋಣಿಗೆ ರೈಲು ಬಸ್ ಬರುತ್ತಿದಂತೆ ಅಲ್ಲಿದ್ದ ಸ್ಥಳೀಯರು ರೈಲ್ ಬಸ್ಸನ್ನು ವೀಕ್ಷಣೆ ಮಾಡಿ ಸಂಚಾರ ಪುನಾರಂಭ ಮಾಡಿದ್ದಕ್ಕೆ ಸಂತಸಗೊಂಡರು. 10 ಗಂಟೆಗೆ ಖಜ್ಜಿಡೋಣಿಯಿಂದ ಬಾಗಲಕೋಟೆಗೆ ನಗರದ ಕಡೆಗೆ ಪ್ರಯಾಣಿಕರು ಪ್ರಯಾಣ ಬೆಳೆಸಿದರು.
ಬಾಗಲಕೋಟೆಯಿಂದ ಖಜ್ಜಿಡೋಣಿಯವರೆಗೂ ಐದು ಸ್ಟೇಶನ್ ಗಳು ಬರುತ್ತವೆ.ಯಾವುದೇ ಸ್ಟೇಶನ್‌ವರೆಗೂ ಸಂಚಾರ ಮಾಡಿದರೂ 10 ರೂಪಾಯಿ. ಸೋಮವಾರ ಪುನಾರಂಭಗೊಂಡ ರೈಲು ಬಸ್ ಸಂಚಾರದಲ್ಲಿ ಬಾಗಲಕೋಟೆಯಿಂದ ಖಜ್ಜಿಡೋಣಿವರೆಗೂ 7 ಟಿಕೆಟ್ ಪಡೆದಿದ್ದರು. ಪ್ರಯಾಣಿಕರು ರೈಲು ಬಸ್ ಸಂಚಾರದ ಅನುಕೂಲ ಸೌಲಭ್ಯ, ರೈಲು ಬಸ್ ಪ್ರಯಾಣ ಸಂಚಾರ ಸದ್ಬಳಕೆ ಮಾಡಿಕೊಳ್ಳಬೇಕು. –ಲಕ್ಷ್ಮಣ ಯಲಗನ್ನವರ, ರೈಲ್ ಬಸ್ ಟಿಸಿ, ಬಾಗಲಕೋಟೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.