ಬಾಗಲಕೋಟೆ: ಕೌಶಲ್ಯಯುತವಾಗಿ ಬಳಸುವ ಕಲೆ ಕರಗತ ಮಾಡಿಕೊಳ್ಳಲಿ

ಉದ್ಯೋಗ ಹುಡುಕುವುದು ಪ್ರತಿಯೊಬ್ಬರ ಜೀವನದಲ್ಲಿ ಒಂದು ದುರಂತ ಕತೆಯಂತಾಗುತ್ತಿತ್ತು

Team Udayavani, Jul 15, 2023, 11:03 AM IST

ಬಾಗಲಕೋಟೆ: ಕೌಶಲ್ಯಯುತವಾಗಿ ಬಳಸುವ ಕಲೆ ಕರಗತ ಮಾಡಿಕೊಳ್ಳಲಿ

ಬಾಗಲಕೋಟೆ: ನೀವು ಯಾವ ಪದವಿ ಪಡೆದಿದ್ದೀರಿ ಅನ್ನುವುದಕ್ಕಿಂತ ಪಡೆದ ಆ ಶಿಕ್ಷಣವನ್ನು ಎಷ್ಟು ಮತ್ತು ಹೇಗೆ
ಕೌಶಲ್ಯಯುಕ್ತವಾಗಿ ಬಳಸುತ್ತಿದ್ದೀರಿ ಎಂಬುದರ ಮೇಲೆ ನಿಮ್ಮ ಉದ್ಯೋಗ ನಿರ್ಧರಿತವಾಗಿರುತ್ತದೆ ಎಂದು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಗುರುಪಾದ ಹಿರೇಮಠ ಹೇಳಿದರು.

ನಗರದ ಬಿವಿವಿ ಸಂಘದ ಬಸವೇಶ್ವರ ವಿಜ್ಞಾನ ಕಾಲೇಜಿನ ಐಕ್ಯುಎಸಿ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಿಶ್ವ ಯುವಕೌಶಲ್ಯ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ಕ್ಯಾಂಪಸ್‌ ಫೂಲ್‌ ಡ್ರೈವ್‌ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಲಿಕಾ ಹಂತದಲ್ಲಿನ ಪಠ್ಯ ಮತ್ತು ಪಠ್ಯೇತರ ವಿಷಯಗಳನ್ನು ಕೌಶಲ್ಯಯುತವಾಗಿ ಬಳಸುವ ಕಲೆ ಕರಗತ ಮಾಡಿಕೊಳ್ಳಬೇಕು. ಆ
ಕೌಶಲ್ಯಗಳೆ ನಿಮ್ಮ ಉದ್ಯೋಗ ಹುಡುಕಾಟದ ಸಂದರ್ಭದ ಸಂದರ್ಶನದ ವೇಳೆ ಸಹಾಯಕ್ಕೆ ಬರಲಿದೆ ಎಂದರು.

ಕೋಟ್ಯಂತರ ಬಂಡವಾಳ ಹಾಕಿ ಕಂಪನಿಗಳು ತಮ್ಮ ಉದ್ಯಮ ಆರಂಭಿಸಿರುತ್ತವೆ. ಆ ಕೋಟ್ಯಾಂತರ ರೂ.ಗಳಿಗೆ ಪ್ರತಿಶತ ಲಾಭ
ತರುವ ಸಂಪನ್ಮೂಲಗಳನ್ನು ಕಂಪನಿಗಳು ಹುಡುಕುತ್ತಿರುತ್ತವೆ. ತಮ್ಮ ಕಂಪನಿಯಲ್ಲಿ ಉದ್ಯೋಗ ನೀಡಿದರೆ ಈ ಯುವಕನಿಂದ
ಎಷ್ಟು ಉಪಯುಕ್ತವಾಗಲಿದೆ ಎಂಬುದನ್ನು ತಿಳಿಯಲು ಸಂದರ್ಶನವೇ ಅತ್ಯಂತ ಮಹತ್ವದ ಹೆದ್ದಾರಿಯಾಗಿದ್ದು, ಒಟ್ಟು ಐದು
ಕಂಪನಿಗಳು ಇಲ್ಲಿ ಸಂದರ್ಶನ ಮಾಡಲಿದ್ದು, ಇಲ್ಲಿ ಕೌಶಲ್ಯಪೂರ್ಣ ಯುವ ಸಮುದಾಯಕ್ಕೆ ಇದು ಸದ್ಬಳಕೆಯಾಗಲಿ ಎಂದರು.

ಉದ್ಯೋಗ ವಿನಿಮಯ ಕೇಂದ್ರದ ಜಿಲ್ಲಾ ಸಹಾಯಕ ಅಧಿಕಾರಿ ಕಿರಣ್‌ ಮಂಡಿ ಮಾತನಾಡಿ, ಜಿಲ್ಲಾ ಉದ್ಯೋಗ ವಿನಿಮಯ
ಕೇಂದ್ರಕ್ಕೆ ತನ್ನದೇ ಆದ ಇತಿಹಾಸವಿದ್ದು, ಉದ್ಯೋಗ ಹುಡುಕುತ್ತಿರುವವರು ಮತ್ತು ಉದ್ಯೋಗ ನೀಡುವವರ ಮಧ್ಯದ
ಕೊಂಡಿಯಾಗಿ ಮಹತ್ವದ ಕಾರ್ಯ ಮಾಡುತ್ತದೆ. ವಿದ್ಯಾರ್ಥಿಗಳು, ಉದ್ಯೋಗ ಅರಸುತ್ತಿರುವವರು ಇಲಾಖೆಯೊಂದಿಗೆ
ಸಂಪರ್ಕ ಹೊಂದಿದರೆ ತುಂಬ ಒಳಿತು ಎಂದು ತಿಳಿಸಿದರು.

ಕಾಲೇಜು ಆಡಳಿತ ಮಂಡಳಿಯ ಪದನಿಮಿತ್ತ ಕಾರ್ಯದರ್ಶಿ ಮತ್ತು ಪ್ರಾಚಾರ್ಯ ಡಾ|ಎಸ್‌.ಎಂ. ಗಾಂವಕರ್‌ ಮಾತನಾಡಿ, 80ರ ದಶಕದಲ್ಲಿ ಉದ್ಯೋಗ ಹುಡುಕುವುದು ಪ್ರತಿಯೊಬ್ಬರ ಜೀವನದಲ್ಲಿ ಒಂದು ದುರಂತ ಕತೆಯಂತಾಗುತ್ತಿತ್ತು. ಆದರೆ, ಈಗ ಕಾಲ ಬದಲಾಗಿದ್ದು, ನೀವು ಇರುವಲ್ಲಿಗೆ ಉದ್ಯೋಗ ನೀಡುವವರು ಹುಡುಕಿಕೊಂಡು ಬಂದು ಸಂದರ್ಶನದ ಮೂಲಕ ಆಯ್ಕೆ ಗೊಳಿಸುತ್ತಿರುವುದು ಹರ್ಷದ ವಿಷಯ ಎಂದರು.

ಐಕ್ಯೂಎಸಿ ಸಂಯೋಜಕ ಡಾ|ಡಿ.ಎಸ್‌. ಲಮಾಣಿ, ವಿದ್ಯಾರ್ಥಿ ಕಲ್ಯಾಣ ಅಧಿಕಾರಿ ಪ್ರೊ.ಆರ್‌.ಎಲ್‌. ಕಾತರಕಿ, ಬಿಸಿಎ ವಿಭಾಗದ
ಮುಖ್ಯಸ್ಥ ಪ್ರವೀಣ ಅಕ್ಕಿಮರಡಿ, ವಿಭಾಗದ ತರಬೇತಿ ಮತ್ತು ನಿಯೋಜನೆ ಅಧಿಕಾರಿ ನೈನಾ ಕಲ್ಯಾಣಶೆಟ್ಟಿ ಮುಂತಾದವರು
ಉಪಸ್ಥಿತರಿದ್ದರು. ಶುಭಾ ಎಂ.ಡಿ ಅತಿಥಿಗಳನ್ನು ಪರಿಚಯಿಸಿದರು. ಶಿವಲೀಲಾ ವಡ್ಡರ ಕಾರ್ಯಕ್ರಮ ನಿರೂಪಿಸಿದರು. ಪ್ರವೀಣ
ಅಕ್ಕಿಮರಡಿ ವಂದಿಸಿದರು.

ಟಾಪ್ ನ್ಯೂಸ್

KSRTC

Ayudha Pooje: ಬಸ್‌, ಯಂತ್ರೋಪಕರಣ ಪೂಜೆಗೆ 250 ರೂ.: ಕೆಎಸ್‌ಆರ್‌ಟಿಸಿ

Udupi: ಗೀತಾರ್ಥ ಚಿಂತನೆ-60: ಬಣ್ಣ-ಮನಸ್ಸು-ನಡೆ- ನಡಿಗೆ….

Udupi: ಗೀತಾರ್ಥ ಚಿಂತನೆ-60: ಬಣ್ಣ-ಮನಸ್ಸು-ನಡೆ- ನಡಿಗೆ….

High-Court

High Court Order: ಹಳೆ ಸಂಹಿತೆ ಸಿಆರ್‌ಪಿಸಿಯ ಮೊದಲ ಎಫ್ಐಆರ್‌ ರದ್ದು!

High-Court

Renukaswamy Case: ಕೈದಿಗಳ ಸ್ಥಳಾಂತರ ವೇಳೆ ಕೋರ್ಟ್‌ ವಿವೇಚನೆ ಬಳಸಬೇಕು

Mangaluru: ಉಳಿಯ ದ್ವೀಪ ಮರಳುಗಾರಿಕೆ ನಿಷೇಧ

Mangaluru: ಉಳಿಯ ದ್ವೀಪ ಮರಳುಗಾರಿಕೆ ನಿಷೇಧ

Kundapura: ರೈಲು ಢಿಕ್ಕಿ ಹೊಡೆದು ಚಿರತೆ ಸಾ*ವು

Kundapura: ರೈಲು ಢಿಕ್ಕಿ ಹೊಡೆದು ಚಿರತೆ ಸಾ*ವು

Rain: ಇಂದು “ಎಲ್ಲೋ ಅಲರ್ಟ್‌’; ಕರಾವಳಿಯಲ್ಲಿ ತುಸು ಬಿಡುವು ನೀಡಿದ ಮಳೆ

Rain: ಇಂದು “ಎಲ್ಲೋ ಅಲರ್ಟ್‌’; ಕರಾವಳಿಯಲ್ಲಿ ತುಸು ಬಿಡುವು ನೀಡಿದ ಮಳೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8

Kaladgi:ಜೆಸಿಬಿಚಾಲಕನ ನಿರ್ಲಕ್ಷ್ಯ ಕಾಮಗಾರಿ;ಪೈಪ್ ಲೈನ್ ಒಡೆದು ಸಾಕಷ್ಟು ಪ್ರಮಾಣದ ನೀರುಪೋಲು

Mudhol: ಕಾರು ಅಪಘಾತ… ಜಾನಪದ‌ ಕಲಾವಿದ ಗುರುರಾಜ ಹೊಸಕೋಟಿ ಅವರಿಗೆ ಗಾಯ

Mudhol: ಕಾರು ಅಪಘಾತ… ಜಾನಪದ‌ ಕಲಾವಿದ ಗುರುರಾಜ ಹೊಸಕೋಟಿ ಅವರಿಗೆ ಗಾಯ

Gram panchayat: ಸ್ಥಾನ ಬಿಟ್ಟುಕೊಡದ ಉಪಾಧ್ಯಕ್ಷೆ ವಿರುದ್ದ ಕೆಂಡಾಮಂಡಲಳಾದ ಸದಸ್ಯೆ

Gram panchayat: ಸ್ಥಾನ ಬಿಟ್ಟುಕೊಡದ ಉಪಾಧ್ಯಕ್ಷೆ ವಿರುದ್ದ ಕೆಂಡಾಮಂಡಲಳಾದ ಸದಸ್ಯೆ

MUDA Case: ವಿಪಕ್ಷಗಳಿಂದ ಸಿಎಂ ಶಕ್ತಿ ಜನಪ್ರೀಯತೆ ಕುಗ್ಗಿಸುವ ಪ್ರಯತ್ನ: ಉಮಾಶ್ರೀ

MUDA Case: ವಿಪಕ್ಷಗಳಿಂದ ಸಿಎಂ ಶಕ್ತಿ ಜನಪ್ರಿಯತೆ ಕುಗ್ಗಿಸುವ ಪ್ರಯತ್ನ: ಉಮಾಶ್ರೀ

12-mudhol

Muda ಸೈಟ್ ಹಿಂತಿರುಗಿಸಿರುವ ಸಿದ್ದರಾಮಯ್ಯ ಪತ್ನಿಯ ಕ್ರಮಕ್ಕೆ ತಿಮ್ಮಾಪುರ ಪ್ರತಿಕ್ರಿಯೆ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

KSRTC

Ayudha Pooje: ಬಸ್‌, ಯಂತ್ರೋಪಕರಣ ಪೂಜೆಗೆ 250 ರೂ.: ಕೆಎಸ್‌ಆರ್‌ಟಿಸಿ

Udupi: ಗೀತಾರ್ಥ ಚಿಂತನೆ-60: ಬಣ್ಣ-ಮನಸ್ಸು-ನಡೆ- ನಡಿಗೆ….

Udupi: ಗೀತಾರ್ಥ ಚಿಂತನೆ-60: ಬಣ್ಣ-ಮನಸ್ಸು-ನಡೆ- ನಡಿಗೆ….

High-Court

High Court Order: ಹಳೆ ಸಂಹಿತೆ ಸಿಆರ್‌ಪಿಸಿಯ ಮೊದಲ ಎಫ್ಐಆರ್‌ ರದ್ದು!

High-Court

Renukaswamy Case: ಕೈದಿಗಳ ಸ್ಥಳಾಂತರ ವೇಳೆ ಕೋರ್ಟ್‌ ವಿವೇಚನೆ ಬಳಸಬೇಕು

Mangaluru: ಉಳಿಯ ದ್ವೀಪ ಮರಳುಗಾರಿಕೆ ನಿಷೇಧ

Mangaluru: ಉಳಿಯ ದ್ವೀಪ ಮರಳುಗಾರಿಕೆ ನಿಷೇಧ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.