Bagalkot; ನಗರಸಭೆ ಆಯುಕ್ತರ ಹುದ್ದೆಗೆ ಇಬ್ಬರ ಕಿತ್ತಾಟ
Team Udayavani, Oct 16, 2023, 10:54 AM IST
ಬಾಗಲಕೋಟೆ: ಇಲ್ಲಿನ ಬಾಗಲಕೋಟೆ ನಗರಸಭೆ ಆಯುಕ್ತರ ಹುದ್ದೆಗೆ ಇಬ್ಬರು ಕೆ.ಎಸ್.ಎಂ.ಎಸ್ ಅಧಿಕಾರಿಗಳು ಕಿತ್ತಾಡುವ ಪ್ರಸಂಗ ಸೋಮವಾರ ಬೆಳಗ್ಗೆ ನಡೆದಿದೆ.
ನಗರಸಭೆ ಆಯುಕ್ತರನ್ನಾಗಿ ರಮೇಶ ಜಾಧವ ಅವರನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿ ಆದೇಶಿಸಿತ್ತು. ಕಳೆದೊಂದು ವರ್ಷದಿಂದ ಆ ಹುದ್ದೆಯಲ್ಲಿದ್ದ ಆರ್.ವಾಸಣ್ಣ, ಕೆಎಟಿ ನ್ಯಾಯಾಲಯದ ಮೊರೆ ಹೋಗಿದ್ದರು. ಅವರ ವರ್ಗಾವಣೆಗೆ ನ್ಯಾಯಾಲಯ ತಡೆ ನೀಡಿದೆ ಎಂದು ಹೇಳಿರುವ ವಾಸಣ್ಣ, ಸೋಮವಾರ ಬೆಳಗ್ಗೆ 10ಕ್ಕೆ ಕಚೇರಿಗೆ ಬಂದು, ಆಯುಕ್ತರ ಕುರ್ಚಿಯಲ್ಲಿ ಕುಳಿತಿದ್ದರು.
ಬಳಿಕ ಕಚೇರಿಗೆ ಬಂದ ಮತ್ತೊಬ್ಬ ಆಯುಕ್ತ ರಮೇಶ ಜಾಧವ ಇವರನ್ನು ಕಂಡು ಶಾಕ್ ಗೆ ಒಳಗಾದರು. ‘ಯಾಕ್ರಿ ನೀವ್ಯಾಕ್ ನನ್ನ ಕುರ್ಚಿಯಲ್ಲಿ ಕುಳಿತೀರಿ’ ಎಂದು ಪ್ರಶ್ನಿಸಿದಾಗ, ನನಗೆ ನ್ಯಾಯಾಲಯದ ಆದೇಶವಾಗಿದೆ ಎಂದು ಉತ್ತರಿಸಿದ್ದಾರೆ.
ಆದೇಶ ತೋರಿಸಿ ಎಂದು ಕೇಳಿದರೂ ತೋರಿಸಿಲ್ಲ ಎಂದು ಅಧಿಕಾರಿ ಜಾಧವ ಹೇಳಿದ್ದಾರೆ.
ಡಿಎಚ್ಓ ಹುದ್ದೆ ಕುರ್ಚಿ ಕಿತ್ತಾಟ ಮುಗಿಯಿತು ಎನ್ನುವಷ್ಟರಲ್ಲಿ ಈಗ ನಗರಸಭೆ ಆಯುಕ್ತರ ಸರದಿ ಶುರುವಾಗಿದೆ. ಒಂದೇ ಚೇಂಬರ್ ನಲ್ಲಿ ಇಬ್ನರು ಅಧಿಕಾರಿಗಳು ಕುಳಿತಿದ್ದು, ಸಿಬ್ಬಂದಿಗೆ, ಯಾರ ಮಾತು ಕೇಳಬೇಕು ಎಂಬ ಪೀಕಲಾಟ ಶುರುವಾಗಿದೆ.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರ್ತಿದ್ದಂತೆ ವರ್ಗವಾಣೆಯಾಗಿದ್ದ ಆರ್ ವಾಸನ್, ವರ್ಗಾವಣೆ ಪ್ರಶ್ನಿಸಿ ಕೆಇಟಿ ಮೆಟ್ಟಿಲೇರಿದ್ದರು. ಕಳೆದ ಆಗಷ್ಟ ಆಗಷ್ಟ್ 12 ರಂದು ಆರ್ ವಾಸನ್ ಅವರ ವರ್ಗವಾಣೆಯಾಗಿತ್ತು. ನಂತರ ರಮೇಶ್ ಜಾಧವ್ ನಗರಸಭಾ ಆಯುಕ್ತರಾಗಿ ಸರ್ಕಾರದಿಂದ ನಿಯುಕ್ತಿಗೊಂಡಿದ್ದರು.
ಸರ್ಕಾರಿ ಆದೇಶ ತಗೆದುಕೊಂಡು ಬಂದು ಹುದ್ದೆಗೆ ಬರಲಿ ಎಂದು ಆಯುಕ್ತ ರಮೇಶ್ ಜಾಧವ್ ವಾದ ಮಾಡುತ್ತಿದ್ದಾರೆ. ಕೆಇಟಿ ಯಿಂದ ಆದೇಶ ತಗೊಂಡು ಬಂದಿರುವೆ ಎಂದು ಹಿಂದಿನ ನಗರಸಭಾ ಆಯುಕ್ತ ಆರ್ ವಾಸನ್ ಪ್ರತಿವಾದಿಸುತ್ತಿದ್ದಾರೆ.
ಒಟ್ಟಾರೆ ಇಬ್ಬರು ಅಧಿಕಾರಿಗಳ ಕುರ್ಚಿ ಕಿತ್ತಾಟ ಕಂಡು ನಗರಸಭೆ ಸಿಬ್ಬಂದಿ ಗಲಿಬಿಲಿಗೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Chikkamagaluru: ಆಕಸ್ಮಿಕ ಬೆಂಕಿ ತಗುಲಿ ಸಂಪೂರ್ಣ ಸುಟ್ಟು ಭಸ್ಮವಾದ ಗುಡಿಸಲು
Eye Surgeries: ವೈದ್ಯಕೀಯ ಪದವಿ ಪೂರ್ಣಗೊಳಿಸದೇ 44 ಕಣ್ಣಿನ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯ
Perth test: ಜೈಸ್ವಾಲ್-ರಾಹುಲ್ ಅಜೇಯ ಆಟ; ಪರ್ತ್ ನಲ್ಲಿ ಭಾರತದ ಮೇಲಾಟ
Mother: ಅಮ್ಮನ ಜೀವನವೇ ಆದರ್ಶ
Belagavi: ಗ್ಯಾರಂಟಿ ವಿರೋಧಿಸಿದ ವಿಪಕ್ಷಗಳಿಗೆ ಸ್ಪಷ್ಟ ಉತ್ತರ ನೀಡಿದ ಮತದಾರ: ಹೆಬ್ಬಾಳ್ಕರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.