136 ಜನರ ಮಾದರಿ ಪರೀಕ್ಷೆಗೆ
ಈವರೆಗೆ 246 ಜನರ ಪರೀಕ್ಷೆ 101 ಜನರಿಗೆ ನೆಗೆಟಿವ್-8 ಪಾಸಿಟಿವ್
Team Udayavani, Apr 11, 2020, 1:44 PM IST
ಬಾಗಲಕೋಟೆ : ಸದಾ ಜನರಿಂದ ತುಂಬಿರುತ್ತಿದ್ದ ವಲ್ಲಭಬಾಯಿ ವೃತ್ತ
ಬಾಗಲಕೋಟೆ: ಕೋವಿಡ್ ಮಹಾಮಾರಿಗೆ ಈಗಾಗಲೇ ಒಬ್ಬ ವೃದ್ಧ ಮೃತಪಟ್ಟಿದ್ದು, ನ್ನೂ ಏಳು ಜನರಿಗೆ ಈ ರೋಗ ವಿಸ್ತರಿಸಿಕೊಂಡಿರುವುದು ದೃಢಪಟ್ಟಿದೆ. ಬೆನ್ನಲ್ಲೆ ಮತ್ತೆ 136 ಜನರ ಗಂಟಲು ದ್ರವ ಹಾಗೂ ರಕ್ತದ ಮಾದರಿ ಪರೀಕ್ಷೆಗೆ ಕಳುಹಿಸಲಾಗಿದೆ. ಬಾಗಲಕೋಟೆಯ ಸೋಂಕಿತರು ಹಾಗೂ ಮುಧೋಳದ ಸೋಂಕಿತನೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದ ಒಟ್ಟು
34 ಜನರನ್ನೂ ತಪಾಸಣೆಗೊಳಪಡಿಸಿದ್ದು, ಅವರನ್ನು ಜಿಲ್ಲಾ ಆಸ್ಪತ್ರೆಯಲ್ಲಿ ಇರಿಸಲಾಗಿದೆ. 531 ಜನರ ಮೇಲೆ ನಿಗಾ: ದೇಶ, ವಿದೇಶ ಹಾಗೂ ಹೊರ ರಾಜ್ಯದಿಂದ ಬಂದಿರುವ ಒಟ್ಟು 531 ಜನರ ಮೇಲೆ ನಿಗಾ ಇರಿಸಲಾಗಿದ್ದು, ಬಾದಾಮಿ ಮತ್ತು ಹುನಗುಂದದಲ್ಲಿ ಪರಿಹಾರ ಕೇಂದ್ರದಲ್ಲಿ ಕೇರಳದಿಂದ ಬಂದಿರುವ 121 ಜನರಿಗೆ ತಾತ್ಕಾಲಿಕ ಆಶ್ರಯ ಕಲ್ಪಿಸಲಾಗಿದೆ. ಅಲ್ಲದೇ ಜಿಲ್ಲೆಯ ವಿವಿಧೆಡೆ 268 ಜನರು, ಮನೆಯಲ್ಲಿಯೇ ಪ್ರತ್ಯೇಕವಾಗಿದ್ದಾರೆ.
ದೆಹಲಿಯ ತಬ್ಲಿಘಿ ಜಮಾತ್ ಧರ್ಮ ಸಭೆಗೆ ಹೋಗಿ ಬಂದಿರುವ 25 ಜನರ ಮೇಲೂ ತೀವ್ರ ನಿಗಾ ಇಡಲಾಗಿದ್ದು, ಈಗಾಗಲೇ ಅವರ ಗಂಟಲು ದ್ರವ ತಪಾಸಣೆಗೆ ಒಳಪಡಿಸಿದ್ದು, 24 ಜನರ ವರದಿ ನೆಗೆಟಿವ್ ಬಂದಿದೆ. ಒಬ್ಬರ ವರದಿ ಬರಬೇಕಿದೆ. ಮಹಾರಾಷ್ಟ್ರದ ಮಾಲೇಗಾವ ಹಾಗೂ ಅಜ್ಮೀರದಿಂದ ಬಂದಿರುವ 15 ಜನರ ಮೇಲೆ ನಿಗಾ ವಹಿಸಲಾಗಿದೆ. ಇತರೆ ವಿವಿಧ ಪ್ರಕರಣಗಳಡಿ 10 ಜನರು ಜಿಲ್ಲಾ ಆಸ್ಪತ್ರೆಯಲ್ಲಿದ್ದಾರೆ ಎಂದು ಜಿಲ್ಲಾಧಿಕಾರಿ ಕ್ಯಾ. ಡಾ|ರಾಜೇಂದ್ರ ತಿಳಿಸಿದ್ದಾರೆ.
246 ಜನರ ಪರೀಕ್ಷೆ: ಜಿಲ್ಲೆಯಲ್ಲಿ ಸೋಂಕಿತರು ಕಂಡು ಬರುವ ಮುಂಚೆ ಹಾಗೂ ಬಳಿಕ ಈ ವರೆಗೆ ಒಟ್ಟು 246 ಜನರ ಗಂಟಲು ಮಾದರಿ ಮತ್ತು ರಕ್ತ ಪರೀಕ್ಷೆಗೆ ಕಳುಹಿಸಲಾಗಿದೆ. ಅದರಲ್ಲಿ 101 ಜನರಿಗೆ ನೆಗೆಟಿವ್ ಬಂದಿದ್ದು, 8 ಜನರಿಗೆ ಪಾಜಿಟಿವ್ ಬಂದಿದೆ. ಅದರಲ್ಲಿ ಓರ್ವ ವೃದ್ಧ ಮೃತಪಟ್ಟಿದ್ದಾರೆ. ಒಂದು ಸ್ಯಾಂಪಲ್ ರಿಜೆಕ್ಟ್ ಆಗಿದ್ದು, ಇನ್ನೂ 136 ಜನರ ವರದಿ ಬರಬೇಕಿದೆ ಎಂದು ಹೇಳಿದ್ದಾರೆ. ಅಲ್ಲದೇ ಈಗಾಗಲೇ 28 ದಿನಗಳ ಕ್ವಾರಂಟೈನ್ ಅವಧಿಯನ್ನು 27 ಜನರು ಪೂರ್ಣಗೊಳಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ| ರಾಜೇಂದ್ರ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ration Card: ಅನರ್ಹರಿಗೆ ಬಿಪಿಎಲ್ ಕಾರ್ಡ್ ಕೊಡಲ್ಲ, ಅರ್ಹರಿಗೆ ತಪ್ಪಿಸಲ್ಲ: ಸಿದ್ದರಾಮಯ್ಯ
Bagalakote: ಅನರ್ಹರ ಬಿಪಿಎಲ್ ಕಾರ್ಡ್ ಗಳು ಮಾತ್ರ ರದ್ದು: ಸಿಎಂ ಸಿದ್ದರಾಮಯ್ಯ
ಕಾಡಂಚಿನ ರೈತರ ಅರಣ್ಯರೋದನ; ಬೇರೆಯವರ ಜಮೀನಿನಲ್ಲಿ ದುಡಿಯಬೇಕಾದ ಸ್ಥಿತಿ
ಕೇವಲ 12 ರೂ.ಗೆ ಬಿಸಿ ಜುನುಕಾ ರೊಟ್ಟಿ ಊಟ:!ಶಿಕ್ಷಕ ಬಸವರಾಜ ಜಾಲೋಜಿ ನಿಸ್ವಾರ್ಥ ಸೇವೆ
ಲೋಕಾಪುರ: ಬಿಡಾಡಿ ದನಗಳ ಕಾಟಕ್ಕೆ ಜನ ಹೈರಾಣ
MUST WATCH
ಹೊಸ ಸೇರ್ಪಡೆ
Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.