ರೈತರಿಂದ ನೇರ ಗ್ರಾಹಕರಿಗೆ: ಹಾಪ್‌ಕಾಮ್ಸ್ ಮಳಿಗೆ ಆರಂಭ
Team Udayavani, Apr 13, 2020, 4:50 PM IST
ಬಾಗಲಕೋಟೆ: ವಿದ್ಯಾಗಿರಿಯಲ್ಲಿ ಹಾಪ್‌ಕಾಮ್ಸ್ ಮಳಿಗೆಗೆ ಶಾಸಕ ಡಾ| ವೀರಣ್ಣ ಚರಂತಿಮಠ ಚಾಲನೆ ನೀಡಿದರು.
ಬಾಗಲಕೋಟೆ: ಕೋವಿಡ್ ಭೀತಿ ಹಿನ್ನೆಲೆಯಲ್ಲಿ ಲಾಕ್‌ಡೌನ್ ಘೋಷಿಸಿದ್ದು, ರೈತರು ಬೆಳೆದ ಹಣ್ಣು ಮತ್ತು ತರಕಾರಿಗಳನ್ನು ರೈತರಿಂದಲೇ ನೇರವಾಗಿ ಹಾಪ್‌ಕಾಮ್ಸ್ ಮೂಲಕ ಖರೀದಿಸಲಾಗುತ್ತಿದೆ ಎಂದು ಶಾಸಕ ಡಾ|ವೀರಣ್ಣ ಚರಂತಿಮಠ ತಿಳಿಸಿದರು.
ವಿದ್ಯಾಗಿರಿಯ 12ನೇ ಕ್ರಾಸ್‌ನಲ್ಲಿಂದು ಜಿಲ್ಲಾ ತೋಟಗಾರಿಕೆ ಬೆಳೆಗಾರರ ಸಹಕಾರಿ ಮಾರಾಟ ಮತ್ತು ಸಂಸ್ಕರಣಾ ಸಂಘ ನಿಯಮಿತ (ಹಾಪ್ ಕಾಮ್ಸ್) ಹಾಗೂ ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ತೆರೆಯಲಾದ ಹಾಪ್ ಕಾಮ್ಸ್ ಮಳಿಗೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಹಾಪ್‌ಕಾಮ್ಸ್ ಮಳಿಗೆ ಮೂಲಕ ಉತ್ತಮ ಗುಣಮಟ್ಟದ ಹಣ್ಣು ಮತ್ತು ತರಕಾರಿಗಳನ್ನು ರೈತರಿಂದ ನೇರವಾಗಿ ಖರೀದಿಸಿ ಸಾರ್ವಜನಿಕರಿಗೆ ಯೋಗ್ಯ ಬೆಲೆಯಲ್ಲಿ ಮಾರಾಟ ಮಾಡಲಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆಯಲು ತಿಳಿಸಿದರು. ಜಿಲ್ಲೆಯಲ್ಲಿ ಕೋವಿಡ್ ಹರಡುವುದನ್ನು ತಡೆಯಲು ಲಾಕ್‌ಡೌನ್ ಆಗಿರುವ ಕಾರಣ ಜನ ಮನೆಯಿಂದ ಹೊರಬಾರದಂತೆ ಸರಕಾರ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ. ಈ ಸ್ಥಿತಿಯಲ್ಲಿ ಸಾರ್ವಜನಿಕರು ದೈನಂದಿನ ಅಗತ್ಯ ವಸ್ತು ಖರೀದಿಸಲು ಪರದಾಡುವಂತಾಗಿದೆ. ವಿದ್ಯಾಗಿರಿಯಲ್ಲಿ ತೆರೆಯಲಾದ ಮಳಿಗೆ ಪ್ರತಿದಿನ ಬೆಳಗ್ಗೆ 8ರಿಂದ 11.30 ಹಾಗೂ ಮ. 4.30ರಿಂದ 7 ಗಂಟೆಯವರೆಗೆ ತೆರೆದಿರುತ್ತದೆ ಎಂದರು.
ಜನರಿಗೆ ವ್ಯಾನ್ ಮೂಲಕ ತಾಜಾ ತರಕಾರಿ ಹಾಗೂ ಹಣ್ಣು ಮಾರುವ ವ್ಯವಸ್ಥೆಯನ್ನು ಕೂಡಾ ಆರಂಭಿಸಲಾಗಿದೆ. ರೈತರಿಂದ ತೋಟಗಾರಿಕೆ ಉತ್ಪನ್ನಗಳನ್ನು ಖರೀದಿಸಿ, ನೇರವಾಗಿ ಗ್ರಾಹಕರಿಕೆ ತಲುಪಿಸುವ ಈ ಕಾರ್ಯಕ್ಕೆ ನಗರದ ಜನರು ಸಹಕರಿಸಿ ಕೋವಿಡ್ ಹರಡದಂತೆ ನಾಗರಿಕರು ಸಾಮಾಜಿಕ ಅಂತರ ಕಾಯ್ದುಕೊಂಡು ಮುಖಕ್ಕೆ ಮಾಸ್ಕ್ ಧರಿಸಿ, ಬಟ್ಟೆ ಬ್ಯಾಗ್ ತಂದು ಖರೀದಿಸಲು ತೋಟಗಾರಿಕೆ ಉಪನಿರ್ದೇಶಕ ಪ್ರಭುರಾಜ ಹಿರೇಮಠ ಮನವಿ ಮಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Kollegala: ಎತ್ತಿನಗಾಡಿಗೆ ಸಾಮ್ರಾಟ್ ಟರ್ಬೇ ವಾಹನ ಡಿಕ್ಕಿ; ಎತ್ತು ಸಾವು
Udupi: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್; ಉಡುಪಿ ಮಹಿಳಾ ವಿಭಾಗ ಆರಂಭ
ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!
Davanagere: ಕಾಂತರಾಜ್ ವರದಿ ಸ್ವೀಕರಿಸಿ ಬಹಿರಂಗಪಡಿಸಿ: ಸಿಎಂಗೆ ಆಂಜನೇಯ ಮನವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.