ಹಣ್ಣು ಬೆಳೆಗಾರರ ಬದುಕೇ ಹಣ್ಣಾಯಿತು !

ಮಾರಲೂ ಆಗ್ಲಿಲ್ಲ-ಗೊಬ್ಬರವೂ ಆಗ್ಲಿಲ್ಲ ಕೆಟ್ಟು ಬಿದ್ದ ಕಲ್ಲಂಗಡಿ-ಬಾಳೆ-ಕುಂಬಳಕಾಯಿ

Team Udayavani, Apr 15, 2020, 7:24 PM IST

15-April-40

ಬಾಗಲಕೋಟೆ: ಕದಾಂಪುರದ ರೈತ ಶಿವಲಿಂಗಪ್ಪ ಗಂಜಿಹಾಳ ಬೆಳೆಸಿದ ಕಲ್ಲಂಗಡಿ ಹಣ್ಣು ಹಾನಿಯಾಗಿದೆ.

ಬಾಗಲಕೋಟೆ: ಜಿಲ್ಲೆಯ ಹಣ್ಣು ಬೆಳೆಗಾರರ ಬದುಕನ್ನು ಕೊರೊನಾ ಮಹಾಮಾರಿ, ಹಣ್ಣುಗಾಯಿ ಮಾಡಿದೆ. ಹೊಲದಲ್ಲಿ ಬೆಳೆದ ಅಪಾರ ಪ್ರಮಾಣದ ಹಣ್ಣು ಬೆಳೆಗಳನ್ನು ಮಾರಲೂ ಆಗಲಿಲ್ಲ. ಇತ್ತ ತಿಪ್ಪೆಗೆ ಸುರಿದು ಗೊಬ್ಬರವೂ ಮಾಡಲಾಗಿಲ್ಲ. ಹೀಗಾಗಿ ಕೈಯಾರೆ ಬೆಳೆದ ಬೆಳೆ ಕಂಡು, ರೈತರು ಕಣ್ಣೀರು ಹಾಕುವ ಪರಿಸ್ಥಿತಿ ಬಂದಿದೆ.

ಹೌದು, ರಾಜ್ಯದಲ್ಲಿ ತೋಟಗಾರಿಕೆ ಬೆಳೆಗೆ ಜಿಲ್ಲೆ ಹೆಸರುವಾಸಿ. ಇದಕ್ಕೆ ಪ್ರೋತ್ಸಾಹ ನೀಡಲೆಂದೇ ಇಲ್ಲಿ ತೋಟಗಾರಿಕೆ ವಿವಿ ಕೂಡ ಸ್ಥಾಪಿಸಲಾಗಿದೆ. ಇಲ್ಲಿನ ಚಿಕ್ಕು, ದಾಳಿಂಬೆ, ದ್ರಾಕ್ಷಿ ದೇಶ- ವಿದೇಶಕ್ಕೂ ರಫ್ತು ಆಗುತ್ತಿದ್ದವು. ಆದರೆ, ಕೊರೊನಾ ಎಂಬ ವೈರಸ್‌, ಹಣ್ಣು ಬೆಳೆಗಾರರ ಬದುಕು ಬರ್ಬರವಾಗಿಸಿದೆ.

ಕೈಯಾರೆ ಕಿತ್ತಿ ಎಸೆದರು: ಭೂಮಿ ಹದ ಮಾಡಿ, ಬೀಜ-ಗೊಬ್ಬರ ಹಾಕಿ ಕೈಯಾರೆ ಆರೈಕೆ ಮಾಡಿ ಉತ್ತಮ ಫಸಲು ಬೆಳೆದಿದ್ದ ರೈತರು, ಕಣ್ಣೀರು ಹಾಕುತ್ತ ತಮ್ಮ ಕೈಯಾರೆ ಕಿತ್ತಿ ಹೊಲದ ಬದುವಿಗೆ ಎಸೆದಿದ್ದಾರೆ. ಜಿಲ್ಲೆಯ ಬಹುತೇಕ ರೈತರ ಹೊಲದ ಬದುಗಳೀಗ ಹಣ್ಣು, ತರಕಾರಿಗಳಿಂದ ತುಂಬಿಕೊಂಡಿವೆ. ಕೆಲವು ಹಣ್ಣುಗಳನ್ನು ತಿಪ್ಪೆಗೆ ಹಾಕಿದರೂ ಅದು ಗೊಬ್ಬರವಾಗಲ್ಲ. ಹೀಗಾಗಿ ಬದುವಿಗೆ ಎಸೆದು, ಕಂಡವರಿಗೆಲ್ಲ ನೋಡಿ ನಮ್ಮ ಬೆಳಿ ಹೆಂಗ್‌ ಆಗ್ಯಾದ್‌ ಎಂದು ಕಣ್ಣು ತೇವ ಮಾಡಿಕೊಳ್ಳುತ್ತಿದ್ದಾರೆ.

ವಿವಿ-ಇಲಾಖೆಗಳೂ ನೆರವು ನೀಡಲಾಗುತ್ತಿಲ್ಲ: ಜಿಲ್ಲೆಯಲ್ಲಿ ತೋಟಗಾರಿಕೆ ವಿವಿ, ತೋಟಗಾರಿಕೆ ಇಲಾಖೆ, ಹಾಪ್‌ಕಾಮ್ಸ್‌, ಎಪಿಎಂಸಿ ಎಲ್ಲವೂ ಇವೆ. ಆದರೂ, ರೈತರ ನೆರವಿಗೆ ಬಾರದಂತಹ ಅನಿವಾರ್ಯ ಪರಿಸ್ಥಿತಿಯಲ್ಲಿವೆ. ಪ್ರತಿವರ್ಷ ಜಿಲ್ಲೆಯಿಂದ ಪಪ್ಪಾಯಿ, ಚಿಕ್ಕು, ದಾಳಿಂಬೆ, ದ್ರಾಕ್ಷಿ, ಬಾಳೆ ಹೀಗೆ ಹಲವು ಹಣ್ಣು ಮತ್ತು ತರಕಾರಿ ಬೆಳೆಗಳನ್ನು ಮುಂಬೈ, ಹೈದ್ರಾಬಾದ್‌, ಮಂಗಳೂರು, ಬೆಂಗಳೂರಿಗೆ ಕಳುಹಿಸಲಾಗುತ್ತಿತ್ತು. ಇದಕ್ಕಾಗಿಯೇ ಹಲವು ವ್ಯಾಪಾರಸ್ಥರೂ ರೈತರೊಂದಿಗೆ ಮೊದಲೇ ಒಪ್ಪಂದ ಮಾಡಿಕೊಂಡಿರುತ್ತಿತ್ತು. ಆದರೆ, ಈ ಬಾರಿ ವ್ಯಾಪಾರಸ್ಥರೂ ಮನೆಬಿಟ್ಟು ಹೊರ ಬಂದಿಲ್ಲ. ಹೀಗಾಗಿ ರೈತರು, ಕಷ್ಟಪಟ್ಟು ಬೆಳೆದ ಬೆಳೆಗಳಲ್ಲ ಮಣ್ಣು ಪಾಲಾಗಿವೆ. ಕಣ್ಣೀರು ಹಾಕಿದ ವೃದ್ಧ ರೈತ: ಸುಮಾರು 2 ಲಕ್ಷ ಸಾಲ ಮಾಡಿ, ಕಲ್ಲಂಗಡಿ ಬೆಳೆದಿದ್ದ ತಾಲೂಕಿನ ಕದಾಂಪುರದ ರೈತ ಶಿವಲಿಂಗಪ್ಪ ಗಂಜಿಹಾಳ, ಹೊಲದಲ್ಲಿ ಕೆಟ್ಟು ಬಿದ್ದ ಕಲ್ಲಂಗಡಿ ನೋಡಿ ಕಣ್ಣೀರು ಹಾಕಿದ ಪ್ರಸಂಗ ಹೃದಯ ಕಲುಕುವಂತಿತು.

ಇದೊಂದು ಅನಿವಾರ್ಯ ಪರಿಸ್ಥಿತಿ. ಸಾಧ್ಯವಾದಷ್ಟು ರೈತರ ನೆರವಿಗೆ ಬರುವ ಕೆಲಸ ಸರ್ಕಾರ ಮಾಡುತ್ತಿದೆ. ಹಾಪ್‌ಕಾಮ್ಸ್‌ ಮೂಲಕ ರೈತರ ಹಣ್ಣು-ತರಕಾರಿ ಖರೀದಿಸಿ, ಜನರಿಗೆ ತಲುಪಿಸುವ ಕಾರ್ಯ ನಡೆದಿದೆ. ಉಳಿದ ಬೆಳೆಯನ್ನು ಗುತ್ತಿಗೆದಾರರಿಂದ ಖರೀದಿ ಮಾಡಲು ಚಿಂತನೆ ನಡೆದಿದೆ.
ಗೋವಿಂದ ಕಾರಜೋಳ, ಡಿಸಿಎಂ

ಕೃಷಿಯೇ ನಮ್ಮ ಜೀವನ. ಬೆಳೆ ಬೆಳೆದು, ಅದನ್ನು ಮಾರಾಟ ಮಾಡಿ ಬದುಕುವ ನಮಗೆ ಈ ಬಾರಿ ದೊಡ್ಡ ಹಾನಿಯಾಗಿದೆ. 2 ಎಕರೆ 30 ಗುಂಟೆ ಕಲ್ಲಂಗಡಿ ಕೆಟ್ಟು ಹೋಗಿದೆ. ಕಿತ್ತು ಬದಿಗೆ ಹಾಕಿದ್ದೇವೆ. ನಮ್ಮಂತಹ ಬಡ ರೈತರ ನೆರವಿಗೆ ಸರ್ಕಾರ ಬರಬೇಕು. ಇಲ್ಲದಿದ್ದರೆ ರೈತರು ಬದುಕು ಬಹಳ ತೊಂದರೆಗೆ ಸಿಲುಕುತ್ತದೆ.
ಶಿವಲಿಂಗಪ್ಪ ಗಂಜಿಹಾಳ,
ಕದಾಂಪುರದ ರೈತ

ಜಿಲ್ಲೆಯಲ್ಲಿ 56 ಸಾವಿರ ಹೆಕ್ಟೇರ್‌ ತೋಟಗಾರಿಕೆ ಬೆಳೆಯ ಕ್ಷೇತ್ರವಿದೆ. ಸಧ್ಯ ಕಟಾವಿಗೆ ಬಂದ ವಿವಿಧ ಬೆಳೆಗಳನ್ನು ಖರೀದಿ ಮಾಡಲು ರೈತರಿಗೆ ಖರೀದಿದಾರರ ಸಂಪರ್ಕ ಸಂಖ್ಯೆ ನೀಡಲಾಗಿದೆ. ಆದರೂ, ಖರೀದಿದಾರರೂ ಮುಂದೆ ಬರುತ್ತಿಲ್ಲ. ಜಿಲ್ಲೆಯಲ್ಲಿ ತೋಟಗಾರಿಕೆ ಬೆಳೆಯ ಕ್ಷೇತ್ರ, ಹಾನಿಯಾದ ವಿವರ ಜಿಲ್ಲಾ ಧಿಕಾರಿಗಳ ಮೂಲಕ ಸರ್ಕಾರಕ್ಕೆ ತಿಳಿಸುತ್ತೇವೆ.
ಪ್ರಭುರಾಜ್‌ ಹಿರೇಮಠ,
ಉಪ ನಿರ್ದೇಶಕ, ತೋಟಗಾರಿಕೆ ಇಲಾಖೆ

ಶ್ರೀಶೈಲ ಕೆ. ಬಿರಾದಾರ

ಟಾಪ್ ನ್ಯೂಸ್

November 20: ಲಾವೋಸ್‌ನಲ್ಲಿ ಭಾರತ, ಚೀನ ರಕ್ಷಣ ಸಚಿವರ ಸಭೆ

November 20: ಲಾವೋಸ್‌ನಲ್ಲಿ ಭಾರತ, ಚೀನ ರಕ್ಷಣ ಸಚಿವರ ಸಭೆ

muslim marriage

Marriage registration ಪ್ರಮಾಣಪತ್ರ ನೀಡುವ ಅಧಿಕಾರ ವಕ್ಫ್ ಬೋರ್ಡ್‌ಗೆ ಎಲ್ಲಿದೆ?

1-libbb

Libya; 8 ವರ್ಷಗಳ ಬಳಿಕ ಲಿಬಿಯಾಕ್ಕೆ ತೆರಳಲು ಭಾರತೀಯರಿಗೆ ಅನುಮತಿ

sidda dkshi

CM-DCM ಮಹಾರಾಷ್ಟ್ರ ಚುನಾವಣ ಪ್ರಚಾರದಲ್ಲಿ ಭಾಗಿ

Iran: ಹಿಜಾಬ್‌ ನಿರಾಕರಿಸಿದರೆ ವಿಶೇಷ ಕ್ಲಿನಿಕ್‌: ಇರಾನ್‌ ತೀರ್ಮಾನಕ್ಕೆ ಆಕ್ರೋಶ

Iran: ಹಿಜಾಬ್‌ ನಿರಾಕರಿಸಿದರೆ ವಿಶೇಷ ಕ್ಲಿನಿಕ್‌: ಇರಾನ್‌ ತೀರ್ಮಾನಕ್ಕೆ ಆಕ್ರೋಶ

HDK (3)

Siddaramaiah; ಕೊಳ್ಳೆ ಹೊಡೆಯುತ್ತಿದ್ದರೂ ನಿಮ್ಮನ್ನು ಮುಟ್ಟಬಾರದಾ: ಎಚ್‌ಡಿಕೆ

1-sugama

Music; ಸುಗಮ ಸಂಗೀತಕ್ಕೆ ನವೋದಯ ಸಾಹಿತ್ಯ ಬುನಾದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಾಡಂಚಿನ ರೈತರ ಅರಣ್ಯರೋದನ; ಬೇರೆಯವರ ಜಮೀನಿನಲ್ಲಿ ದುಡಿಯಬೇಕಾದ ಸ್ಥಿತಿ

ಕಾಡಂಚಿನ ರೈತರ ಅರಣ್ಯರೋದನ; ಬೇರೆಯವರ ಜಮೀನಿನಲ್ಲಿ ದುಡಿಯಬೇಕಾದ ಸ್ಥಿತಿ

ಕೇವಲ 12 ರೂ.ಗೆ ಬಿಸಿ ಜುನುಕಾ ರೊಟ್ಟಿ ಊಟ:!ಶಿಕ್ಷಕ ಬಸವರಾಜ ಜಾಲೋಜಿ ನಿಸ್ವಾರ್ಥ ಸೇವೆ

ಕೇವಲ 12 ರೂ.ಗೆ ಬಿಸಿ ಜುನುಕಾ ರೊಟ್ಟಿ ಊಟ:!ಶಿಕ್ಷಕ ಬಸವರಾಜ ಜಾಲೋಜಿ ನಿಸ್ವಾರ್ಥ ಸೇವೆ

ಲೋಕಾಪುರ: ಬಿಡಾಡಿ ದನಗಳ ಕಾಟಕ್ಕೆ ಜನ ಹೈರಾಣ

ಲೋಕಾಪುರ: ಬಿಡಾಡಿ ದನಗಳ ಕಾಟಕ್ಕೆ ಜನ ಹೈರಾಣ

3-

Mahalingpur: 2020ರ ಪುರಸಭೆ ಗಲಾಟೆ ಪ್ರಕರಣ: ಮರು ತನಿಖೆಗೆ ಕೋರ್ಟ್ ಆದೇಶ

ಬಾಗಲಕೋಟೆ: ಸರ್ಕಾರಿ ಕಚೇರಿ-ಆಶ್ರಯ ಮನೆಗಳೂ ವಕ್ಫ್ ಆಸ್ತಿ!

ಬಾಗಲಕೋಟೆ: ಸರ್ಕಾರಿ ಕಚೇರಿ-ಆಶ್ರಯ ಮನೆಗಳೂ ವಕ್ಫ್ ಆಸ್ತಿ!

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

November 20: ಲಾವೋಸ್‌ನಲ್ಲಿ ಭಾರತ, ಚೀನ ರಕ್ಷಣ ಸಚಿವರ ಸಭೆ

November 20: ಲಾವೋಸ್‌ನಲ್ಲಿ ಭಾರತ, ಚೀನ ರಕ್ಷಣ ಸಚಿವರ ಸಭೆ

muslim marriage

Marriage registration ಪ್ರಮಾಣಪತ್ರ ನೀಡುವ ಅಧಿಕಾರ ವಕ್ಫ್ ಬೋರ್ಡ್‌ಗೆ ಎಲ್ಲಿದೆ?

1-libbb

Libya; 8 ವರ್ಷಗಳ ಬಳಿಕ ಲಿಬಿಯಾಕ್ಕೆ ತೆರಳಲು ಭಾರತೀಯರಿಗೆ ಅನುಮತಿ

sidda dkshi

CM-DCM ಮಹಾರಾಷ್ಟ್ರ ಚುನಾವಣ ಪ್ರಚಾರದಲ್ಲಿ ಭಾಗಿ

police

Kumbala: ಸಂತ್ರಸ್ತೆಯ ತಾಯಿ ಆತ್ಮಹ*ತ್ಯೆ: ಸಚಿತಾ ರೈ ವಿರುದ್ಧ ಮತ್ತೊಂದು ದೂರು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.