ಬಾಗಲಕೋಟೆ: ಗುಳೇದಗುಡ್ಡಕ್ಕೆ ಎದ್ದೋ ಬಿದ್ದೋ ಬರ್ಬೇಕು!
Team Udayavani, Oct 29, 2024, 10:02 AM IST
ಉದಯವಾಣಿ ಸಮಾಚಾರ
ಗುಳೇದಗುಡ್ಡ: ತಾಲೂಕಿನ ಹಲವು ಗ್ರಾಮಗಳಿಗೆ ಸಂಪರ್ಕಿಸುವ ರಸ್ತೆಗಳು ಮತ್ತಷ್ಟು ಹಾಳಾಗುತ್ತಿವೆಯೇ ಹೊರತು ರಸ್ತೆಗಳ ದುರಸ್ತಿ ಕಾಣದಾಗಿದೆ. ವಿವಿಧ ಗ್ರಾಮಗಳಿಂದ ಗುಳೇದಗುಡ್ಡಕ್ಕೆ ಬರುವ ವಿವಿಧ ಗ್ರಾಮಸ್ಥರು ತಗ್ಗು ಗುಂಡಿಗಳಲ್ಲಿ ಎಧ್ದೋ
ಬಿಧ್ದೋ ಬರುವಂತಾಗಿದೆ. ಬೈಕ್ ಸವಾರರು, ಪ್ರಯಾಣಿಕರು ನಿತ್ಯವೂ ಯಮಯಾತನೆ ಪಡುವಂತಾಗಿದೆ.
ಫಲ ನೀಡದ ತೇಪೆ ಕೆಲಸ: ತಾಲೂಕಿನ ಕೊಂಕಣಕೊಪ್ಪ, ನೀರಲಕೇರಿ, ಕೆಲವಡಿ, ಹಂಗರಗಿ ಗ್ರಾಮಗಳ ರಸ್ತೆಗಳಿಗೆ
ಲೋಕೋಪಯೋಗಿ ಇಲಾಖೆ ತಗ್ಗುಗಳಿಗೆ ಕಲ್ಲಿನ ಕಡಿಗಳನ್ನು ಹಾಕಿ ತೇಪೆ ಹಚ್ಚುವ ಕೆಲಸ ಮಾಡುತ್ತಿದೆ. ಆದರೆ ಅದು ಫಲ ನೀಡುತ್ತಿಲ್ಲ. ನಿತ್ಯದ ವಾಹನ ಸಂಚಾರದಿಂದ ಕಡಿಗಳು ಸಹ ಕಿತ್ತು ಹೋಗಿ ಮತ್ತೆ ತಗ್ಗು ಬೀಳುವಂತಾಗಿದೆ.
ತಾಲೂಕಿನ ಕೆಲವಡಿ ಗ್ರಾಮದ ಪೆಟ್ರೋಲ್ ಬಂಕ್ ನಿಂದ ಆರಂಭವಾಗುವ ತಗ್ಗು ದಿನ್ನೆಗಳ ರಸ್ತೆ ನೀರಲಕೇರಿ ಹತ್ತಿರ ಘಟಪ್ರಭಾ ಬಲದಂಡೆ ಕಾಲುವೆಯವರೆಗೂ ಇದ್ದು, ಪ್ರಯಾಣಿಕರು ರಸ್ತೆ ದಾಟಬೇಕೆಂದರೆ ದೊಡ್ಡ ಸಾಹಸವೇ ಮಾಡಬೇಕಾಗುತ್ತದೆ. ಇಲ್ಲಿ ರಸ್ತೆಗಳಿಗೆ ಕಡಿಗಳನ್ನು ಹಾಕಿ ಮುಚ್ಚಲಾಗಿದೆ. ಆದರೆ ಅವು ಇತ್ತೀಚೆಗೆ ಸುರಿದ ಮಳೆಗೆ ಮತ್ತಷ್ಟು ಕಿತ್ತಿವೆ. ಇದರಿಂದ ವಾಹನ ಸವಾರರು ಕೈಯಲ್ಲಿ ಜೀವ ಹಿಡಿದುಕೊಂಡು ಚಲಾಯಿಸುವಂತಾಗಿದೆ.
ಇದಷ್ಟೇ ಅಲ್ಲ ಬಾಗಲಕೋಟೆಯ ಯುನಿಟ್-3 ಕಾಮಗಾರಿಯ ವಾಹನಗಳ ಸಂಚಾರ ದಟ್ಟಣೆಯಿಂದ ಪದ್ಮನಯನ ನಗರಕ್ಕೆ ಸಂಪರ್ಕ ಕಲ್ಪಿಸುವ ನೀರಲಕೇರಿ- ಬಾಗಲಕೋಟೆ ರಸ್ತೆ ಸಂಪೂರ್ಣ ಹಾಳಾಗಿ ಹೋಗಿದೆ.
ಎಲ್ಲೆಲ್ಲಿ ರಸ್ತೆ ಹಾಳು: ತಾಲೂಕಿನ ಕಟಗೇರಿ ಕ್ರಾಸ್‌ದಿಂದ ಕೊಂಕಣಕೊಪ್ಪ ಗ್ರಾಮದ ರಸ್ತೆ, ಕೆಲವಡಿ ಬಾಗಲಕೋಟೆ ರಸ್ತೆ, ಪಾದನಕಟ್ಟಿಗೆ ಸಂಪರ್ಕ ನೀಡುವ ಕಮತಗಿ ಒಳರಸ್ತೆ, ಹಂಗರಗಿ ಗ್ರಾಮದೊಳಗೆ ಪ್ರವೇಶಿಸುವ ರಸ್ತೆ, ಪರ್ವತಿ ಗ್ರಾಮದ ಪಂಚಾಯಿತಿ ಶಾಲೆಯವರೆಗಿನ ರಸ್ತೆ, ಗುಳೇದಗುಡ್ಡದಿಂದ ಕೆರೆಖಾನಾಪೂರ ಗ್ರಾಮದ ಸುಮಾರು 3 ಕಿ.ಮೀ ರಸ್ತೆ ತಗ್ಗುಗಳು ಬಿದ್ದು ಕಿತ್ತು ಹೋಗಿವೆ.
ಸಂಕೇಶ್ವರ-ಸಂಗಮ ರಾಜ್ಯ ಹೆದ್ದಾರಿಯ ಅಲ್ಲೂರ ಎಸ್.ಪಿ. ಕ್ರಾಸ್ ದಿಂದ ಹಳದೂರ ಸಮೀಪದ ಸುಮಾರು 450 ಮೀಟರ್ ರಸ್ತೆ ಬಾಕಿ ಇದೆ. ಇದು ಹಲವು ವರ್ಷಗಳ ಬೇಡಿಕೆಯಾಗಿದೆ. ಇದರ ಜತೆಗೆ ಇದೇ ಮಾರ್ಗದಲ್ಲಿ ಪಾದನಕಟ್ಟಿ ಸಂಪರ್ಕ ನೀಡುವ ಸುಮಾರು ಅರ್ಧ ಕಿ.ಮೀ.ದಷ್ಟು ರಸ್ತೆ ಹಾಳಾಗಿದೆ.
ಗುಳೇದಗುಡ್ಡದಿಂದ ಹುಲ್ಲಿಕೇರಿ ಎಸ್.ಪಿ ಗ್ರಾಮಕ್ಕೆ ಪಟ್ಟಣದಿಂದ ಸಂಪರ್ಕ ನೀಡುವ ಕೆರೆ ಖಾನಾಪೂರ ಗ್ರಾಮದವರೆಗಿನ 3 ಕಿ.ಮೀ ದೂರದ ರಸ್ತೆ ಸಂಪೂರ್ಣ ಹಾಳಾಗಿದೆ. ಇನ್ನು ಪರ್ವತಿ ಗ್ರಾಮ ಪ್ರವೇಶಿಸುವ ಮುಖ್ಯರಸ್ತೆ ಗ್ರಾಮ ಪಂಚಾಯಿತಿಯಿಂದ ಅಂಗನವಾಡಿಯವರೆಗೆ ಸಂಪೂರ್ಣ ಹದಗೆಟ್ಟು ವರ್ಷಗಳೇ ಕಳೆದರೂ ಇದುವರೆಗೂ ನಿರ್ಮಾಣವಾಗಿಲ್ಲ. ಗ್ರಾಮದ ಶಾಲೆಯಿಂದ ಮಾರುತೇಶ್ವರ ಗುಡಿಯವರೆಗೆ ರಸ್ತೆ ನಿರ್ಮಿಸಿದ್ದಾರೆ.ಆದರೆ ಪಂಚಾಯಿತಿ ಮುಂದಿನ ರಸ್ತೆ ಮಾಡಿಲ್ಲ.
ಎಲ್ಲೆಲ್ಲಿ ಹಣ ಮಂಜೂರಾಗಿದೆ: ಕೆಲವಡಿ ಪೆಟ್ರೋಲ್ ಬಂಕಿನಿಂದ ಬಾಗಲಕೋಟೆಯದ್ದು ಅಂದಾಜು 2 ಕೋಟಿ ವೆಚ್ಚದ ರಸ್ತೆ ಕಾಮಗಾರಿ ಮಂಜೂರಾಗಿದೆ. ಅದರ ಜತೆಗೆ ನೀಲಾನಗರ ಕೋಟೆಕಲ್ ಮಾರ್ಗದ ರಸ್ತೆ ಸಹ ಮರು ಡಾಂಬರೀಕರಣಕ್ಕೆ 65 ಲಕ್ಷ ರೂ. ಹಣ ಬಿಡುಗಡೆಯಾಗಿದೆ. ಖಾಜಿ ಬೂದಿಹಾಳ ಗ್ರಾಮದ ರಸ್ತೆ ನಿರ್ಮಾಣಕ್ಕೂ ಅನುದಾನ ಬಿಡುಗಡೆಯಾಗಿದೆ. 2 ಕೋಟಿ ರೂ. ವೆಚ್ಚದಲ್ಲಿ ಗುಳೇದಗುಡ್ಡದಿಂದ ಮುರುಡಿ ಗ್ರಾಮದ ರಸ್ತೆ ಅಲ್ಲದೇ ಈ ಎಲ್ಲ ರಸ್ತೆಗಳ ನಿರ್ಮಾಣಕ್ಕೆ ಶಾಸಕ ಭೀಮಸೇನ ಚಿಮ್ಮನಕಟ್ಟಿಯವರು ಮುತುವರ್ಜಿ ವಹಿಸಿ ಕಳೆದ ಎರಡು ತಿಂಗಳಲ್ಲಿ ಅನುದಾನ ಮಂಜೂರು ಮಾಡಿಸಿದ್ದಲ್ಲದೇ
ಭೂಮಿಪೂಜೆ ಸಹ ಮಾಡಿದ್ದಾರೆ. ರಸ್ತೆ ನಿರ್ಮಾಣ ಬಗ್ಗೆ ಅಧಿಕಾರಿಗಳನ್ನು ಕೇಳಿದರೆ ದೀಪಾವಳಿ ನಂತರ ಈ ಎಲ್ಲ ರಸ್ತೆಗಳ ಕಾಮಗಾರಿ ಆರಂಭವಾಗಲಿದೆ ಎನ್ನುತ್ತಾರೆ.
ಕ್ರಿಯಾ ಯೋಜನೆ: ತಾಲೂಕಿನ ಕೊಂಕಣಕೊಪ್ಪ ಗ್ರಾಮದ ರಸ್ತೆ, ಸಂಕೇಶ್ವರ ಸಂಗಮ ರಾಜ್ಯ ಹೆದ್ದಾರಿಯ ಅಲ್ಲೂರ ಎಸ್.ಪಿ. ಕ್ರಾಸ್‌ದಿಂದ ಹಳದೂರ ಸಮೀಪದ ಸುಮಾರು 450 ಮೀಟರ್ ರಸ್ತೆ, ಕೆರೆ ಖಾನಾಪೂರ ಎಸ್.ಪಿ ರಸ್ತೆ ಕ್ರಿಯಾ ಯೋಜನೆ ಸಿದ್ಧಪಡಿಸಿ ಸರಕಾರಕ್ಕೆ ಕಳುಹಿಸಲಾಗಿದೆ ಎಂಬುದು ಅಧಿಕಾರಿಗಳ ಮಾಹಿತಿ.
ಪಟ್ಟಣದಿಂದ ಖಾನಾಪೂರ ಎಸ್.ಪಿ ಗ್ರಾಮದ 3 ಕಿಮೀ ರಸ್ತೆ ಹಾಳಾಗಿದ್ದು, ಇದರಿಂದ ಈ ಮಾರ್ಗದಲ್ಲಿ ಸಂಚರಿಸುವ ಹುಲ್ಲಿಕೇರಿ ಎಸ್.ಪಿ. ಖಾನಾಪೂರ ಗ್ರಾಮದ ಜನರು ಸಾಕಷ್ಟು ತೊಂದರೆ ಪಡುವಂತಾಗಿದೆ. ಆದಷ್ಟು ಬೇಗ ಈ 3 ಕಿಮೀ ರಸ್ತೆ ನಿರ್ಮಿಸಬೇಕು.
●ಪಿಂಟು ರಾಠೊಡ,
ಮುಖಂಡ ಹುಲ್ಲಿಕೇರಿ ಎಸ್.ಪಿ.
ಕೆಲವಡಿ ಪೆಟ್ರೋಲ್ ಬಂಕ್ ಮುಂದಿನ ರಸ್ತೆ, ಕೋಟೆಕಲ್-ನೀಲಾನಗರ ರಸ್ತೆ, ಮುರುಡಿ ಗ್ರಾಮದ ರಸ್ತೆಗೆ ಶಾಸಕರು ಅನುದಾನ ಮಂಜೂರು ಮಾಡಿಸಿದ್ದಾರೆ. ಅಲ್ಲದೇ ಭೂಮಿಪೂಜೆ ಮಾಡಿದ್ದಾರೆ. ದೀಪಾವಳಿ ನಂತರ ಕೆಲಸ ಆರಂಭವಾಗಲಿದೆ. ಅದರ ಜತೆಗೆ ಅಲ್ಲೂರ ಕ್ರಾಸ್‌ನ 450 ಮೀ ರಸ್ತೆ, ಖಾನಾಪೂರ ಎಸ್.ಪಿ ರಸ್ತೆಯ ಕ್ರಿಯಾಯೋಜನೆ ಮಾಡಿ ಕಳುಹಿಸಲಾಗಿದೆ.
●ಎ.ಕೆ.ಮಕಾಂದಾರ,
ಜೆಇ ಲೊಕೋಪಯೋಗಿ ಇಲಾಖೆ.
*ಮಲ್ಲಿಕಾರ್ಜುನ ಕಲಕೇರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಬಕವಿ-ಬನಹಟ್ಟಿ: ಸಚಿವರಿಂದ ಬೇಡಿಕೆ ಈಡೇರಿಸುವ ಭರವಸೆ… ತಿಂಗಳ ಬಳಿಕ ನೇಕಾರರ ಹೋರಾಟ ಅಂತ್ಯ
K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ
Politicss; 1008 ಸಾಧುಸಂತರ ಪಾದಪೂಜೆ ಮೂಲಕ ಕ್ರಾಂತಿವೀರ ಬ್ರಿಗೇಡ್ ಗೆ ಚಾಲನೆ: ಈಶ್ವರಪ್ಪ
India: ಒಂದು ದೇಶ ಒಂದು ಚುನಾವಣೆ ಜಾರಿ ಆಗಲಿ: ಪೇಜಾವರ ಸ್ವಾಮೀಜಿ
Rabkavi Banahatti: ಲೋಕ ಅದಾಲತ್ ನಲ್ಲಿ ಒಂದಾದ ದಂಪತಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.