ಬಾಗಲಕೋಟೆ: ಆರೋಗ್ಯ-ದೇಶಪ್ರೇಮ-ಸಂಪ್ರದಾಯದ ಅರಿವು
ಹನುಮಾನ್ ಚಾಲೀಸ್ ಪಠಿಸುವ ಕುರಿತು ಸತ್ಸಂಗಗಳ ಮೂಲಕ ಜಾಗೃತಿ ಮೂಡಿಸಲಾಗುತ್ತದೆ.
Team Udayavani, May 20, 2023, 2:15 PM IST
ಬಾಗಲಕೋಟೆ: ಮಕ್ಕಳಿಗೆ ಇಂದು ಶಿಕ್ಷಣದ ಜತೆಗೆ ಆರೋಗ್ಯ, ದೇಶಪ್ರೇಮ ಹಾಗೂ ಸನಾತನ ಸಂಪ್ರದಾಯದ ಅರಿವು ಮೂಡಿಸಬೇಕಾದ ಅಗತ್ಯವಿದೆ ಎಂದು ಏಕಲ್ ಅಭಿಯಾನ ಉಪಾಧ್ಯಕ್ಷ ಸಿ.ಎಚ್. ಕಟಗೇರಿ ಹೇಳಿದರು.
ತಾಲೂಕಿನ ಬೇವಿನಮಟ್ಟಿ ಗ್ರಾಮದಲ್ಲಿ ಏಕಲ್ ಅಭಿಯಾನ ಬಾಗಲಕೋಟೆ ಸೇವಾ ಸಂಘಟನೆ ಶುಕ್ರವಾರ ಸಂಜೆ ಹಮ್ಮಿಕೊಂಡಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಏಕಲ್ ಅಭಿಯಾನ ವಾಹನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
6ರಿಂದ 14 ವರ್ಷದೊಳಗಿನ ಮಕ್ಕಳಿಗೆ ಶಾಲೆ ಅವಧಿ ನಂತರ ಪ್ರಾಥಮಿಕ ಶಿಕ್ಷಣ, ಆರೋಗ್ಯ, ಗ್ರಾಮ ವಿಕಾಸ, ಜಾಗರಣೆ ಹಾಗೂ ಸತ್ಸಂಗ ಸೇರಿ ಪಂಚಮುಖಿ ಶಿಕ್ಷಣ ನೀಡುವುದು ಏಕಲ್ ಅಭಿಯಾನದ ಮುಖ್ಯ ಉದ್ದೇಶ. ಆಯ್ದ ಗ್ರಾಮಗಳಲ್ಲಿ ರಾಮಾಯಣ, ಮಹಾಭಾರತ, ಸ್ವಾತಂತ್ರ್ಯ ಹೋರಾಟಗಾರರ ಜೀವನ ಚರಿತ್ರೆ, ದೇಶಭಕ್ತಿ ಗೀತೆ, ಸಂಸ್ಕೃತಿ ಬಗ್ಗೆ ಹೇಳಿಕೊಡಲಾಗುತ್ತದೆ. ಗೋವು, ಗಂಗೆ, ತುಳಸಿ, ದುರ್ಗಾ ಪೂಜೆ ಹಾಗೂ ಹನುಮಾನ್ ಚಾಲೀಸ್ ಪಠಿಸುವ ಕುರಿತು ಸತ್ಸಂಗಗಳ ಮೂಲಕ ಜಾಗೃತಿ
ಮೂಡಿಸಲಾಗುತ್ತದೆ.
ಇದರೊಂದಿಗೆ ಏಕಲ್ ಸ್ವಯಂ ಸೇವಕರು ಗ್ರಾಮಗಳಲ್ಲಿ ಆರೋಗ್ಯ, ಸ್ವಚ್ಛತೆ, ಸಾವಯವ ಕೃಷಿ, ಸರಕಾರದ ಯೋ ಜನೆಗಳು, ಗ್ರಾಮಗಳ ಸರ್ವಾಂಗೀಣ ಅಭಿವೃದ್ಧಿಗೆ ಯೋಜನೆ ರೂಪಿಸುವುದು, ಗುಡಿ ಕೈಗಾರಿಕೆಗಳ ತರಬೇತಿ ಬಗ್ಗೆಯೂ ತಿಳಿಸುತ್ತಾರೆ. ಗ್ರಾಮಸ್ಥರು ಈ ಕಾರ್ಯಕ್ರಮದ ಸದುಪಯೋಗ ಪಡೆಯಬೇಕು ಎಂದರು.
ಬಿಜೆಪಿ ಮುಖಂಡ ರಾಜು ನಾಯಕ ಮಾತನಾಡಿ, ಏಕಲ್ ಲಾಭ ರಹಿತ ಸಂಘಟನೆಯಾಗಿದ್ದು, ಧರ್ಮ, ಪರಿಸರ, ಗೋವುಗಳ ಸಂರಕ್ಷಣೆ ಹಾಗೂ ಮತಾಂತರ ತಡೆ ಬಗ್ಗೆ ಈ ಸಂಘಟನೆ ಮೂಲಕ ಜಾಗೃತಿ ಮೂಡಿಸಲಾಗುತ್ತದೆ. ಡಾ| ಗಿರೀಶ ಅವರು
ನಗರದ ಬನಶಂಕರಿ ಆಸ್ಪತ್ರೆಯಲ್ಲಿ 2011ರಲ್ಲಿ ಡಾ| ಗಿರೀಶ ಮಾಸೂರಕರ್, ಡಾ| ಬಾಬುರಾಜೇಂದ್ರ ನಾಯಕ, ಶಿವಕುಮಾರ ಚಿಲ್ಲಾಳ, ಪರಶುರಾಮ ಮುಳಗುಂದ ಮತ್ತಿತರರ ನೇತೃತ್ವದಲ್ಲಿ ಈ ಸಂಘಟನೆ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗಿದೆ. ಅಂದು 30 ಹಳ್ಳಿಗಳಲ್ಲಿ ಕಾರ್ಯ ಆರಂಭಿಸಲಾಗಿತ್ತು. ಸದ್ಯ ಜಿಲ್ಲೆಯ 150 ಹಳ್ಳಿಗಳಲ್ಲಿ ಸಂಘಟನೆ ಕಾರ್ಯ ನಿರ್ವಹಿಸುತ್ತಿದೆ ಎಂದರು.
ಮುಂಬೈನ ಸೂರಜ್‌ಮಲ್ ತಪಾಡಿಯಾ
ಮೆಮೋರಿಯಲ್ ಟ್ರಸ್ಟ್ ನೀಡಿದ ವಾಹನ ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಗ್ರಾಮಸ್ಥರ ನೇತೃತ್ವದಲ್ಲಿ ಬರಮಾಡಿಕೊಳ್ಳಲಾಯಿತು. ಪರಶುರಾಮ ಮುಳಗುಂದ, ರಮೇಶ ಅಂಗಡಿ, ಚಂದ್ರಶೇಖರ ದೊಡಮನಿ, ಬಾಬುರಾಜೇಂದ್ರ ನಾಯಕ, ಬೇವಿನಮಟ್ಟಿ ಗ್ರಾಮಸ್ಥರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.