Bagalkote; ಅಬ್ಬರದ ಮಳೆ: ಸಿಡಿಲು ಬಡಿದು ಯುವಕ ಸಾವು
Team Udayavani, May 13, 2024, 12:22 AM IST
ಬಾಗಲಕೋಟೆ : ಜಿಲ್ಲೆಯಲ್ಲಿ ರವಿವಾರ ಗುಡುಗು, ಸಿಡಿಲು ಸಹಿತ ಮಳೆ ಸುರಿದಿದ್ದು, ಸಿಡಿಲು ಬಡಿದು ಓರ್ವ ಮೃತಪಟ್ಟು, ಇನ್ನೋರ್ವ ಗಂಭೀರವಾಗಿ ಗಾಯಗೊಂಡ ಘಟನೆ ತಾಲೂಕಿನ ಬೇವೂರ ಗ್ರಾಮದಲ್ಲಿ ಸಂಭವಿಸಿದೆ.
ಮೃತಪಟ್ಟ ವ್ಯಕ್ತಿಯನ್ನು ಮೂಲತಃ ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಗೋನಾಳ ಗ್ರಾಮದ ಪ್ರಕಾಶ ವಗ್ಗರ (21) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಶ್ರೀಶೈಲ ಕಲಗುಡಿ ಎಂಬಾತ ತೀವ್ರವಾಗಿ ಗಾಯಗೊಂಡಿದ್ದು, ಪರಿಸ್ಥಿತಿ ಚಿಂತಾಜನಕವಿದೆ. ಸಧ್ಯ ಗಾಯಾಳು ಯುವಕನನ್ನು ಬಾಗಲಕೋಟೆ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃತ ಪ್ರಕಾಶ ಮತ್ತು ಶ್ರೀಶೈಲ, ಬೇವೂರ ಗ್ರಾಮಕ್ಕೆ ಬೈಕ್ ಮೂಲಕ ತೆರಳುತ್ತಿದ್ದರು. ಗುಡುಗು ಸಹಿತ ಮಳೆ ಬರಲಾರಂಭಿಸಿದ ಕಾರಣ ರಸ್ತೆ ಪಕ್ಷದ ಮರದ ಕೆಳಗೆ ಆಸರೆ ಪಡೆದಿದ್ದರು. ಈ ವೇಳೆ ಸಿಡಿಲು ಬಡಿದು ಓರ್ವ ಯುವಕ ಸ್ಥಳದಲ್ಲೇ ಅಸುನೀಗಿದ್ದಾನೆ.
ಗೋನಾಳದ ಯುವಕ, ಬೇವೂರ ಗ್ರಾಮದಲ್ಲಿ ನೆಲೆಸಿದ್ದ ಎನ್ನಲಾಗಿದೆ. ಬಾಗಲಕೋಟೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mudhol ರನ್ನ ಸಹಕಾರಿ ಸಕ್ಕರೆ ಕಾರ್ಖಾನೆ ಆರಂಭಕ್ಕೆ ಒತ್ತಾಯಿಸಿ ಪ್ರತಿಭಟನೆ
Minister RB Timmapur ರಾಜ್ಯ ಸರ್ಕಾರ ರೈತರ ಪರವಾಗಿ ಕಾರ್ಯ ಮಾಡುತ್ತಿದೆ
ಬಾಗಲಕೋಟೆ: ಫಲಾನುಭವಿಗಳಿಗೆ ಸಾಲ ವಿಳಂಬ ಮಾಡಬೇಡಿ-ಶಶಿಧರ ಕುರೇರ
Mudhol: ತಾಯಿ-ಮಗು ಆಸ್ಪತ್ರೆ ಅನುಷ್ಠಾನಕ್ಕೆ ಕ್ರಮ: ಸಚಿವ ದಿನೇಶ್ ಗುಂಡೂರಾವ್
Congress Government: ತೈಲ, ಹಾಲಿನ ದರ ಹೆಚ್ಚಿಸಿ ಬಡವರಿಗೆ ಅನ್ಯಾಯ
MUST WATCH
ಹೊಸ ಸೇರ್ಪಡೆ
Bengaluru: ಫ್ಲೈಓವರ್ನಲ್ಲಿ ಹಿಮ್ಮುಖವಾಗಿ ಕಾರು ಓಡಿಸಿದ ಚಾಲಕನ ಸೆರೆ
Parkala: ಕೆರೆದಂಡೆ ನಾಲ್ಕನೇ ಬಾರಿ ಕುಸಿತ; ಜಿಲ್ಲಾಧಿಕಾರಿ ಭೇಟಿ, ಪರಿಶೀಲನೆ
T20 World Cup ಗೆದ್ದ ಧನ್ಯತೆಯಲ್ಲಿ ಬಾರ್ಬಡೋಸ್ ಪಿಚ್ ಮಣ್ಣು ತಿಂದ ರೋಹಿತ್ ಶರ್ಮಾ
T20 WC; ಇದು ನನ್ನ ಅದೃಷ್ಟ…..: ಟ್ರೋಫಿಯೊಂದಿಗೆ ಟೀಂ ಇಂಡಿಯಾ ತೊರೆದ ಕೋಚ್ ದ್ರಾವಿಡ್ ಮಾತು
T20 World Cup; ವಿರಾಟ್ ದಾರಿಯಲ್ಲೇ ಸಾಗಿದ ರೋಹಿತ್; ಕಪ್ ಗೆದ್ದ ಬಳಿಕ ನಿವೃತ್ತಿ ಘೋಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.