ಕೃಷ್ಣೆಯ ರೈತರಿಗೆ ನಿರಾಶೆ ತಂದ ಎಚ್‌ಡಿಕೆ 


Team Udayavani, Jan 2, 2019, 10:48 AM IST

1-january-16.jpg

ಬಾಗಲಕೋಟೆ: ರಾಜ್ಯದ ಶೇ.70 ಭೌಗೋಳಿಕ ಕ್ಷೇತ್ರ ಹೊಂದಿರುವ ಕೃಷ್ಣಾ ಮೇಲ್ದಂಡೆ ಯೋಜನೆ ಪೂರ್ಣಗೊಳಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ನೀಡಿದ ಹೇಳಿಕೆ ಈ ಭಾಗದ ರೈತ ವಲಯದಲ್ಲಿ ತೀವ್ರ ನಿರಾಶೆ ತಂದಿದೆ.

ಹೌದು, ಎರಡು ದಿನಗಳ ಹಿಂದೆ ಜಿಲ್ಲೆಗೆ ಬಂದು, ರೈತರ ಸಾಲ ಮನ್ನಾ ಯೋಜನೆಯಡಿ ಋಣಮುಕ್ತ ಪ್ರಮಾಣ ಪತ್ರ ನೀಡುವ ಕಾರ್ಯಕ್ರಮದಲ್ಲಿ ಯುಕೆಪಿ ಕುರಿತ ಪ್ರಸ್ತಾಪಿಸಿದ ಸಿಎಂ ಎಚ್‌ಡಿಕೆ, ಯೋಜನೆ ಪೂರ್ಣಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಯಾವ ಕ್ರಮ ಕೈಗೊಂಡಿದೆ ಎಂಬುದು ತಿಳಿಸಲಿಲ್ಲ. ಕನಿಷ್ಠ ಪಕ್ಷ ಯೋಜನೆ ಕುರಿತು ಬದ್ಧತೆಯೂ ತೋರಿಸಿಲ್ಲ. ಅವರಾಡಿದ ಮಾತುಗಳಿಂದ ಯುಕೆಪಿ ಯೋಜನೆ, ಇದೇ ಸರ್ಕಾರ ಪೂರ್ಣಗೊಳಿಸುತ್ತದೆ ಎಂಬ ಆಶಾಭಾವನೆಯೂ ಈ ಭಾಗದ ರೈತರಲ್ಲಿ ಬರಲಿಲ್ಲ.

ಎಚ್‌ಡಿಕೆ ಏನಂದ್ರು: ಯುಕೆಪಿ ಕುರಿತು ಸತ್ಯ ಹೇಳೆ¤àನೆ ಕೇಳಿ. ಕೃಷ್ಣಾ ನ್ಯಾಯಾಧೀಕರಣ 1ನೇ ಹಂತದಲ್ಲಿ ನೀಡಿದ ನೀರನ್ನೇ ಇನ್ನೂ ಸರಿಯಾಗಿ ಬಳಸಿಕೊಂಡಿಲ್ಲ. ಈಗ 2ನೇ ಹಂತದಲ್ಲಿ 170 ಟಿಎಂಸಿ ಅಡಿ ಲಭ್ಯವಾಗಿದೆ. ಜಲಾಶಯವನ್ನು 519.60 ಮೀಟರ್‌ ಗೆ ಎತ್ತರಿಸಿದರೆ, 20 ಹಳ್ಳಿ ಮುಳುಗುತ್ತವೆ. 1 ಲಕ್ಷಕ್ಕೂ ಹೆಚ್ಚು ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಬೇಕು. ಪರಿಹಾರಕ್ಕಾಗಿಯೇ 65 ಸಾವಿರ ಕೋಟಿ ಬೇಕು.

ಇನ್ನು ಕಾಲುವೆ ಕಾಮಗಾರಿಗೂ ಅನುದಾನಬೇಕು. ಇಷ್ಟೆಲ್ಲ ಕೈಗೊಂಡು, ಕನಿಷ್ಠ 1 ಲಕ್ಷ ಕೋಟಿ ಹಣ ಖರ್ಚು ಮಾಡಿದರೂ, ಮೊದಲು ನಮಗೆ ಬಳಸಿಕೊಳ್ಳಲು ಅವಕಾಶವಿಲ್ಲ. ನಮ್ಮ ರೈತರ ಹೊಲದಲ್ಲಿ ನೀರು ನಿಲ್ಲಿಸಿದರೂ, ಮೊದಲು ಆಂಧ್ರಪ್ರದೇಶಕ್ಕೆ ನೀರು ಬಿಡಬೇಕು. ತೀರ್ಪಿನಲ್ಲಿ ಈ ರೀತಿ ಇದೆ. ನಮ್ಮ ರೈತರ ಭೂಮಿಯಲ್ಲಿ ನೀರು ನಿಲ್ಲಿಸಿ, ಆಂಧ್ರಕ್ಕೆ ಕೊಡೋದು ಹೇಗೆ?. ಅದರಿಂದ ನಮಗೆ ಎಷ್ಟು ಲಾಭವಾಗುತ್ತದೆ ಎಂಬುದು ಈ ಭಾಗದ ರೈತರು ಅರ್ಥ ಮಾಡಿಕೊಳ್ಳಿ ಎಂಬುದು ಸಿಎಂ ಎಚ್‌ಡಿಕೆ ಭಾಷಣವಾಗಿತ್ತು.

ಪರಿಹಾರದ ಮಾತಿಲ್ಲ: ಯುಕೆಪಿ 2ನೇ ಹಂತದಲ್ಲಿ 9 ಉಪ ಯೋಜನೆಗಳಿವೆ. ಬಹುತೇಕ ಈ ಯೋಜನೆಗಳ ಹೆಡ್‌ವರ್ಕ (ಕಾಲುವೆಗಳು) ಕಾಮಗಾರಿ ಕೈಗೊಳ್ಳಲಾಗಿದೆ. ನಮ್ಮ ಭೂಮಿಗೂ ನೀರು ಬರುತ್ತದೆ ಎಂದು ರೈತರು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಆಲಮಟ್ಟಿ ಜಲಾಶಯ ಎತ್ತರಿಸಿ, ಹೆಚ್ಚುವರಿಯಾಗಿ ಹಂಚಿಕೆಯಾದ 100 ಟಿಎಂಸಿ ನೀರು ನಿಲ್ಲಿಸಿದಾಗ, ಮಾತ್ರ ಈ 9 ಉಪ ಯೋಜನೆಗಳ ಕಾಲುವೆಗೂ ನೀರು ಕೊಡಲು ಸಾಧ್ಯವಿದೆ. ಆದರೆ, ಸಿಎಂ ಈ ಹೇಳಿಕೆಯಿಂದ ಜಲಾಶಯದ ಗೇಟ್‌ ಎತ್ತರಿಸುವ, ಲಕ್ಷಾಂತರ ಭೂಮಿಗೆ ಪರಿಹಾರ ನೀಡಿ, ಸ್ವಾಧೀನಪಡಿಸಿಕೊಳ್ಳುವ, ನೀರು ನಿಲ್ಲಿಸಿ, ಸದ್ಬಳಕೆ ಮಾಡಿಕೊಳ್ಳುವ ಬದ್ಧತೆಯ ಮಾತು ಹೇಳಲಿಲ್ಲ. ಹೀಗೆ ಮುಂದುವರಿದರೆ 50 ವರ್ಷ ಕಳೆದರೂ ಈ ಯೋಜನೆ ಪೂರ್ಣಗೊಳಿಸಲು ಸಾಧ್ಯವಿಲ್ಲ ಎಂದು ಸ್ವತಃ ಸಿಎಂ ಹೇಳುತ್ತಾರೆಂದರೆ, ನಮ್ಮ ಭಾಗದ ನೀರಾವರಿ ಯೋಜನೆಯ ಗತಿ ಏನು ಎಂಬುದು ಈ ಭಾಗದ ಹೋರಾಟಗಾರರ ಪ್ರಶ್ನೆ.

ರಾಜ್ಯದ ಬಹುದೊಡ್ಡ ಯೋಜನೆ: ಯುಕೆಪಿ, ಇದು ಬಹುದೊಡ್ಡ ನೀರಾವರಿ ಯೋಜನೆ. ಕೃಷ್ಣಾ-ಕಾವೇರಿಗೆ ಹೋಲಿಸಿದರೆ, ರಾಜ್ಯದ ಶೇ.70ರಷ್ಟು ಭೌಗೋಳಿಕ ಕ್ಷೇತ್ರ ಯುಕೆಪಿ ಹೊಂದಿದೆ. ಕೃಷ್ಣಾ ನದಿಯಲ್ಲಿ ವಾರ್ಷಿಕ 2786 ಟಿಎಂಸಿ ಅಡಿ ನೀರು ಹರಿದರೆ ಅದರಲ್ಲಿ ಮಹಾರಾಷ್ಟ್ರಕ್ಕೆ 666 ಟಿಎಂಸಿ, ಕರ್ನಾಟಕಕ್ಕೆ 907 ಟಿಎಂಸಿ ಹಾಗೂ ಆಂಧ್ರಕ್ಕೆ 1005 ಟಿಎಂಸಿ ಅಡಿ ನೀರು ಬಳಸಿಕೊಳ್ಳಲು ಕೃಷ್ಣಾ ನ್ಯಾಯಾಧೀಕರಣದ ಐತೀರ್ಪಿನಲ್ಲಿ ಅವಕಾಶ ಕಲ್ಪಿಸಲಾಗಿದೆ.

ಕೃಷ್ಣಾ ನದಿಯ ಒಟ್ಟು ಉದ್ದ 2.57 ಚದರ ಕಿ.ಮೀ ಇದ್ದು, ಇದರಲ್ಲಿ ನಮ್ಮ ರಾಜ್ಯದಲ್ಲೇ ಅತಿಹೆಚ್ಚುಉದ್ದ ಹರಿದಿದೆ. ಮಹಾರಾಷ್ಟ್ರದಲ್ಲಿ 68,800 ಚ.ಕಿ.ಮೀ, ಕರ್ನಾಟಕದಲ್ಲಿ 1,12,600 ಚ.ಕಿ.ಮೀ ಹಾಗೂ ಆಂಧ್ರಪ್ರದೇಶದಲ್ಲಿ 75,600 ಚ.ಕಿ.ಮೀ ಉದ್ದ ಹರಿದಿದೆ. ಮೂರು ರಾಜ್ಯಗಳಲ್ಲಿ ಸಂಚರಿಸಿ, ಸಮುದ್ರ ಸೇರುವ ಕೃಷ್ಣೆಯ ನೀರಿನ ಸದ್ಭಳಕೆಗೆ ಈ ವರೆಗಿನ ಯಾವ ಸರ್ಕಾರವೂ ಬದ್ಧತೆಯಿಂದ ಕೆಲಸ ಮಾಡುತ್ತಿಲ್ಲ ಎಂಬ ಅಸಮಾಧಾನ ಜನರಲ್ಲಿದೆ.

ಸಂತ್ರಸ್ತರ ಗೋಳು ಕೇಳ್ತಿಲ್ಲ
ಯಾವ ಸರ್ಕಾರ ಅಧಿಕಾರಕ್ಕೆ ಬಂದರೂ ಸಂತ್ರಸ್ತರ ಸಮಸ್ಯೆ ಆಲಿಸುತ್ತಿಲ್ಲ. ಈಗಾಗಲೇ ಸಾವಿರಾರು ಎಕರೆ ಭೂಮಿ ಸ್ವಾಧೀನಪಡಿಸಿಕೊಂಡರೂ ಅವರಿಗೆ ಸರಿಯಾದ ಪರಿಹಾರ ಸಿಕ್ಕಿಲ್ಲ. ಈಗ ಮತ್ತೆ 1.23 ಲಕ್ಷ ಎಕರೆ ಭೂಮಿ ಯುಕೆಪಿ 2ನೇ ಹಂತಕ್ಕೆ ಹೋಗುತ್ತದೆ. ಭೂಮಿ ಕಳೆದುಕೊಳ್ಳುವ ರೈತರಿಗೆ ಏಕ ರೂಪದ ಬೆಲೆ ನಿಗದಿ ಮಾಡುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳುತ್ತಿಲ್ಲ. ಈಗಿನ ಮೈತ್ರಿ ಸರ್ಕಾರ ಯುಕೆಪಿಯನ್ನು ನಿರ್ಲಕ್ಷ್ಯ  ವಹಿಸಿದೆ.
. ಪ್ರಕಾಶ ಅಂತರಗೊಂಡ,
ಸಂತ್ರಸ್ತ ರೈತ ಮುಖಂಡ

ಶ್ರೀಶೈಲ ಕೆ. ಬಿರಾದಾರ 

ಟಾಪ್ ನ್ಯೂಸ್

Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ

Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ

1-aaaaa

Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video

Khattar

2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್

6

VIDEO: ಅಪ್ಪಿಕೊಳ್ಳಲು ಬಂದ ನಿರ್ದೇಶಕನನ್ನು ತಡೆದು ಕೆನ್ನೆಗೆ ಮುತ್ತು ಕೊಟ್ಟ ನಿತ್ಯಾ ಮೆನನ್

naksal (2)

Chhattisgarh: ಸ್ಫೋ*ಟದಲ್ಲಿ ಮೃ*ತಪಟ್ಟ 8 ಪೊಲೀಸರಲ್ಲಿ 5 ಮಂದಿ ಮಾಜಿ ನಕ್ಸಲೀಯರು

3-naxal

Naxalites ಶರಣಾಗತಿಯಲ್ಲಿ ಟ್ವಿಸ್ಟ್‌; ಚಿಕ್ಕಮಗಳೂರು ಬದಲು ಬೆಂಗಳೂರಿನಲ್ಲಿ ನಕ್ಸಲರ ಶರಣಾಗತಿ

ISRO: ಇಸ್ರೋ ನೂತನ ಅಧ್ಯಕ್ಷರಾಗಿ ವಿ.ನಾರಾಯಣನ್‌ ನೇಮಕ: ಚಿನ್ನದ ಪದಕ ವಿಜೇತ VN  ಪರಿಚಯ…

ISRO: ಇಸ್ರೋ ನೂತನ ಅಧ್ಯಕ್ಷರಾಗಿ ವಿ.ನಾರಾಯಣನ್‌ ನೇಮಕ: ಚಿನ್ನದ ಪದಕ ವಿಜೇತ VN  ಪರಿಚಯ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬಾಗಲಕೋಟೆ: ಕುಳಗೇರಿ ಕೆರೆಗೆ ಸೋಮನಕೊಪ್ಪ ಚರಂಡಿ ನೀರು!

ಬಾಗಲಕೋಟೆ: ಕುಳಗೇರಿ ಕೆರೆಗೆ ಸೋಮನಕೊಪ್ಪ ಚರಂಡಿ ನೀರು!

6-kulageri-cross

Kulageri Cross: ಹೂಳು ತುಂಬಿದ ಕಾಲುವೆ…ಪೋಲಾಗುತ್ತಿದೆ ಮಲಪ್ರಭಾ ಎಡದಂಡೆ ಕಾಲುವೆ ನೀರು…

New year : ಬಾಗಲಕೋಟೆ ಜಿಲ್ಲೇಲಿ ಅಭಿವೃದ್ಧಿ ಬಾಗಿಲು ತೆರೆಯಲಿ-ಸ್ಥಳಾಂತರವಾಗಬೇಕಿದೆ ಐಹೊಳೆ!

New year : ಬಾಗಲಕೋಟೆ ಜಿಲ್ಲೇಲಿ ಅಭಿವೃದ್ಧಿ ಬಾಗಿಲು ತೆರೆಯಲಿ-ಸ್ಥಳಾಂತರವಾಗಬೇಕಿದೆ ಐಹೊಳೆ!

9-rabakavi

Rabakavi: ಬ್ರಹ್ಮಾನಂದ ಉತ್ಸವ; ಗಮನ ಸೆಳೆದ ರೊಟ್ಟಿ ಜಾತ್ರೆ

10

Bagalkot : ಸಕಲ ಸರ್ಕಾರಿ ಗೌರವಗಳೊಂದಿಗೆ ಯೋಧ ಮಹೇಶ್ ಮರೆಗೊಂಡ ಅಂತ್ಯಸಂಸ್ಕಾರ

MUST WATCH

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

ಹೊಸ ಸೇರ್ಪಡೆ

Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ

Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ

1-aaaaa

Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video

Khattar

2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್

6

VIDEO: ಅಪ್ಪಿಕೊಳ್ಳಲು ಬಂದ ನಿರ್ದೇಶಕನನ್ನು ತಡೆದು ಕೆನ್ನೆಗೆ ಮುತ್ತು ಕೊಟ್ಟ ನಿತ್ಯಾ ಮೆನನ್

4-dandeli

Dandeli: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ : ಪೋಕ್ಸೋ ಪ್ರಕರಣದಡಿ ಓರ್ವನ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.