Bagalkote: ಧರ್ಮ ಪ್ರತಿಯೊಬ್ಬರ ಆಸ್ತಿಯಾಗಲಿ: ಸಚಿವ ತಿಮ್ಮಾಪುರ
Team Udayavani, Dec 29, 2023, 4:40 PM IST
ಗುಳೇದಗುಡ್ಡ: ಎಲ್ಲ ಮಠಗಳು ಸರ್ವಜನಾಂಗದ ಶಾಂತಿಯ ತೋಟವನ್ನಾಗಿಸುವ ಪರಿಸರ ನಿರ್ಮಾಣ ಮಾಡಬೇಕು. ಆ ಹೆಜ್ಜೆಯನ್ನು ಶ್ರೀಮಠ ಮಾಡುತ್ತಿದೆ. ಜಾತಿ ಧರ್ಮ ಮೀರಿ ಶರಣ ಧರ್ಮ ಪ್ರಸಾರ ಮಾಡುವಲ್ಲಿ ಶ್ರೀ ಗುರುಸಿದ್ದೇಶ್ವರ ಬೃಹನ್ಮಠ ಮಹೋನ್ನತ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದು ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಹೇಳಿದರು.
ಪಟ್ಟಣದ ಶ್ರೀಜಗದ್ಗುರು ಗುರುಸಿದ್ದೇಶ್ವರ ಬೃಹನ್ಮಠದಲ್ಲಿ ಶ್ರೀಜಗದ್ಗುರು ಗುರುಸಿದ್ದ ಪಟ್ಟದಾರ್ಯ ಸ್ವಾಮೀಜಿ 38ನೇ ವಾರ್ಷಿಕ
ಪುಣ್ಯಾರಾಧನೆಯ ಶರಣ ಸಂಗಮ ಸಮಾರಂಭ ಉದ್ಘಾಟಿಸಿ ಮಾತನಾಡಿ, ಶ್ರೇಣಿಕೃತ ವ್ಯವಸ್ಥೆಯ ಇಂದಿನ ದಿನಗಳಲ್ಲಿ ಮೇಲ್ಜಾತಿಯವರು ಜಾತಿ, ಧರ್ಮದಲ್ಲಿ ಮೇಲು ಕೀಳುಗಳೆನ್ನುತ್ತಿದ್ದಾರೆ. ಧರ್ಮ ಎಲ್ಲರ ಆಸ್ತಿಯಾಗಬೇಕು. ಅದು ಯಾ ವುದೊಂದು ಪಕ್ಷದ ಆಸ್ತಿಯಾಗಬಾರದು. ಇಂದು ಜಾತಿ ಧರ್ಮದ ಸಂಘರ್ಷ ಹೆಚ್ಚಾಗಿದೆ. ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ಶ್ರೀ ಗುರುಸಿದ್ದೇಶ್ವರ ಬೃಹನ್ಮಠ ಸರ್ವ ಜನಾಂಗದವರ ಶಾಂತಿಯ ತೋಟವಾಗಿದೆ ಎಂದು ಹೇಳಿದರು.
ಹಿರಿಯ ಪತ್ರಕರ್ತ ಮಲ್ಲಿಕಾರ್ಜುನ ಸಿದ್ದಣ್ಣವರ ಉಪನ್ಯಾಸ ನೀಡಿ, ಜಾತಿ, ಧರ್ಮ ಮೀರಿ ಎಲ್ಲ ಜಾತಿ ಜನಾಂಗದವರನ್ನು ಒಪ್ಪಿ ಅಪ್ಪಿಕೊಂಡು ಸುಂದರ, ಸೌಹಾರ್ದಯುತ ಸಮಾಜ ಕಟ್ಟುವ ಕಾಯಕದಲ್ಲಿ ನಿರತವಾದ ಶ್ರೀಮಠದ ಸಮಾಜಮುಖೀ, ಜಾತಿ ರಹಿತ ಕೆಲಸ ಮೆಚ್ಚುವಂತದ್ದು ಎಂದರು.
ಶಿವಶರಣ ಮಾದರ ಚೆನ್ನಯ್ಯನ ಜಯಂತಿ ಮಹೋತ್ಸವ ಆಚರಿಸಲಾಯಿತು. ಶ್ರೀ ಚಿಕ್ಕರೇವಣಸಿದ್ದ ಶಿವಶರಣ ಸ್ವಾಮೀಜಿಯವರ ಸ್ಮಾರಕ ಮಂಟಪವನ್ನು ಆಳಂದದ ಸದ್ಗುರು ರೇವಣಸಿದ್ದ ಶ್ರೀಮಠದ ಚನ್ನಬಸವ ಪಟ್ಟದೇವರು ಉದ್ಘಾಟಿಸಿದರು.
ಚಿತ್ರದುರ್ಗದ ಚಲವಾದಿ ಗುರುಪೀಠದ ಶ್ರೀ ಬಸವನಾಗಿದೇವ ಸ್ವಾಮೀಜಿ ಅಧ್ಯಕ್ಷತೆ ವಹಿಸಿ ಮಾತನಾಡಿ, ನಾವು ರಾಜಕೀಯ ನಾಯಕರಿಂದ, ಹಣ, ವಸ್ತ್ರ, ಮುಂತಾದವುಗಳನ್ನು ಪಡೆದು ಅವರನ್ನು ಅಭಿವೃದ್ಧಿ ಪರ ಪ್ರಶ್ನಿಸಲಾರದ ಸ್ಥಿತಿಗೆ ಬಂದಿದ್ದೇವೆ. ಇದರಿಂದ ನಮ್ಮ ಗ್ರಾಮಗಳು ಹಿಂದುಳಿಯಲು ಕಾರಣವಾಗಿವೆ. ಎಲ್ಲರೂ ನೈತಿಕ ಸದೃಢತೆ ಹೊಂದಬೇಕೆಂದರು. ಪ್ರಾಧ್ಯಾಪಕ ಡಾ| ಚಂದ್ರಶೇಖರ ಹೆಗಡೆ ಸಂಪಾದಿಸಿರುವ ಶ್ರವಣೋತ್ಸವ ಪುಸ್ತಕ ಲೋಕಾರ್ಪಣೆಗೊಂಡಿತು. ಮತ್ತು ಅಖಂಡ 15ದಿನಗಳವರೆಗೆ ಪ್ರವಚನ ನೀಡಿದ ಶ್ರೀ ಅಭಿನವ ಒಪ್ಪತ್ತೇಶ್ವರ ಶ್ರೀಗಳನ್ನು ಸನ್ಮಾನಿಸಲಾಯಿತು. ನಂತರ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.
ಶ್ರೀ ಬಸವರಾಜ ಪಟ್ಟದಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶ್ರೀ ಗುರುಬಸವ ದೇವರು, ಸ್ವಾಗತ ಸಮಿತಿ ಅಧ್ಯಕ್ಷ ಸಂಗನಬಸಪ್ಪ ಚಿಂದಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂಜಯ ಬರಗುಂಡಿ, ನಾಗೇಶಪ್ಪ ಪಾಗಿ, ಗೌರಮ್ಮ ಕಲಬುರ್ಗಿ, ಪಿಎಸ್‌ಐ ಲಕ್ಷ್ಮಪ್ಪ ಆರಿ ಮುಂತಾದವರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kulageri Cross: ಹೂಳು ತುಂಬಿದ ಕಾಲುವೆ…ಪೋಲಾಗುತ್ತಿದೆ ಮಲಪ್ರಭಾ ಎಡದಂಡೆ ಕಾಲುವೆ ನೀರು…
New year : ಬಾಗಲಕೋಟೆ ಜಿಲ್ಲೇಲಿ ಅಭಿವೃದ್ಧಿ ಬಾಗಿಲು ತೆರೆಯಲಿ-ಸ್ಥಳಾಂತರವಾಗಬೇಕಿದೆ ಐಹೊಳೆ!
Rabakavi: ಬ್ರಹ್ಮಾನಂದ ಉತ್ಸವ; ಗಮನ ಸೆಳೆದ ರೊಟ್ಟಿ ಜಾತ್ರೆ
Bagalkot : ಸಕಲ ಸರ್ಕಾರಿ ಗೌರವಗಳೊಂದಿಗೆ ಯೋಧ ಮಹೇಶ್ ಮರೆಗೊಂಡ ಅಂತ್ಯಸಂಸ್ಕಾರ
ಪತ್ನಿ ಊರಿನತ್ತ ಪ್ರಯಾಣ ಬೆಳೆಸಿದರೆ… ಸಾವಿನ ಮನೆಯ ಕದ ತಟ್ಟಿದ ಯೋಧ ನಾಗಪ್ಪ ಮರೆಗೊಂಡ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Video: ವೇದಿಕೆ ಮೇಲಿಂದ ಕೆಳಗೆ ಬಿದ್ದ ಕೇರಳ ಶಾಸಕಿ ಉಮಾ ಥಾಮಸ್… ಸ್ಥಿತಿ ಗಂಭೀರ
Kundapura: ಗ್ರಾಮ ಸಹಾಯಕಿಗೆ ಕಿರುಕುಳ; ಆರೋಪಿಗಳಿಗೆ ನಿರೀಕ್ಷಣ ಜಾಮೀನು
Fraud; ಯುವಕರು, ಸ್ತ್ರೀಯರನ್ನು ಗುರಿಯಾಗಿಸಿ ಹೂಡಿಕೆ ವಂಚನೆ: ಕೇಂದ್ರ ಎಚ್ಚರಿಕೆ
Horoscope: ಉದ್ಯೋಗ,ವ್ಯವಹಾರ ಎರಡರಲ್ಲೂ ಯಶಸ್ಸು,ಅನಾದರದ ಮಾತುಗಳಿಗೆ ಪ್ರತಿಕ್ರಿಯೆ ತೋರದಿರಿ
Kasaragod: ಯೂತ್ ಕಾಂಗ್ರೆಸ್ ಕಾರ್ಯಕರ್ತರಿಬ್ಬರ ಕೊಲೆ; ಇಂದು ಶಿಕ್ಷೆ ಪ್ರಮಾಣ ಘೋಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.