ಜಿಲ್ಲೆಯಲ್ಲಿ ಶೇ. 50 ಪಡಿತರ ವಿತರಣೆ
ಸಾಮಾಜಿಕ ಅಂತರ-ಮಾಸ್ಕ್ ಧರಿಸಿ ಪಡಿತರ ಪಡೆಯಿರಿಸರ್ಕಾರಿ ಗೋದಾಮಿಗೆ ಇಲಾಖೆ ಉಪನಿರ್ದೇಶಕರ ಭೇಟಿ
Team Udayavani, Apr 9, 2020, 1:30 PM IST
ಬಾಗಲಕೋಟೆ: ಎಪಿಎಂಸಿ ಆವರಣದಲ್ಲಿರುವ ಸರ್ಕಾರಿ ಗೋದಾಮಿಗೆ ಆಹಾರ ಇಲಾಖೆಯ ಉಪನಿರ್ದೇಶಕ ಶ್ರೀಶೈಲ ಕಂಕಣವಾಡಿ ಭೇಟಿ ನೀಡಿ ಪರಿಶೀಲಿಸಿದರು.
ಬಾಗಲಕೋಟೆ: ಜಿಲ್ಲೆಯಲ್ಲಿರುವ ಒಟ್ಟು 700 ನ್ಯಾಯಬೆಲೆ ಅಂಗಡಿಗಳ ಪೈಕಿ 674 ಅಂಗಡಿಗಳ ಮೂಲಕ ಶೇ. 50ರಷ್ಟು ಪಡಿತರ ಚೀಟಿದಾರರಿಗೆ ಆಹಾರಧಾನ್ಯ ತಲುಪಿಸಲಾಗಿದೆ ಎಂದು ಆಹಾರ ಇಲಾಖೆಯ ಉಪನಿರ್ದೇಶಕ ಶ್ರೀಶೈಲ ಕಂಕಣವಾಡಿ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 700 ನ್ಯಾಯಬೆಲೆ ಅಂಗಡಿಗಳ ಪೈಕಿ 674 ಅಂಗಡಿಗಳ ಮೂಲಕ 46,266 ಅಂತ್ಯೋದಯ ಮತ್ತು 366294 ಬಿಪಿಎಲ್ ಸೇರಿ ಒಟ್ಟು 4,12,570 ಪಡಿತರ ಚೀಟಿದಾರರ ಪೈಕಿ 1,91,122 ಪಡಿತರರಿಗೆ ಆಹಾರಧಾನ್ಯ ವಿತರಿಸಲಾಗಿದೆ. ಇಲ್ಲಿಯವರೆಗೆ ಅಂದಾಜು ಒಟ್ಟು 10 ಲಕ್ಷ ಜನರಿಗೆ ಆಹಾರ ಧಾನ್ಯ ತಲುಪಿಸುವ ಕಾರ್ಯ ಮಾಡಲಾಗಿದೆ.
ಬಾದಾಮಿ ತಾಲೂಕಿನಲ್ಲಿ ಒಟ್ಟು 70325 ಬಿಪಿಎಲ್ ಪಡಿತರ ಚೀಟಿಗಳಲ್ಲಿ 36,705, ಬಾಗಲಕೋಟೆ 56867ರಲ್ಲಿ 22638, ಬೀಳಗಿ 33254ರಲ್ಲಿ 15586, ಹುನಗುಂದ 68546 ಪೈಕಿ 33,727, ಜಮಖಂಡಿ 107017 ರಲ್ಲಿ 44,399 ಹಾಗೂ ಮುಧೋಳ ತಾಲೂಕಿನ ಒಟ್ಟು 76561ರಲ್ಲಿ 38067 ಪಡಿತರ ಚೀಟಿದಾರರಿಗೆ ಆಹಾರಧಾನ್ಯ ವಿತರಿಸಲಾಗಿದೆ.
ಜಿಲ್ಲೆಯ ಜನತೆ ಯಾವುದೇ ಆತಂಕಕ್ಕೆ ಒಳಗಾಗದೇ ನ್ಯಾಯಬೆಲೆ ಅಂಗಡಿಗೆ ಬಂದು ಸಾಮಾಜಿಕ ಅಂತರ ಕಾಯ್ದುಕೊಂಡು ಪಡಿತರ ಪಡೆಯಬೇಕು. ಅಲ್ಲದೇ ಪಡಿತರ ಪಡೆಯಲು ಬರುವಾಗಿ ಕಡ್ಡಾಯವಾಗಿ ಮಾಸ್ಕ್ ಧರಿಸಿಕೊಂಡು ಅಂಗಡಿ ಮುಂದೆ ಗುರುತಿಸಿರುವ ಚೌಕ್ ಬಾಕ್ಸ್‌ಗಳಲ್ಲಿ ನಿಂತು ಸದರಿ ಪ್ರಕಾರ ತಮ್ಮ ಹಕ್ಕಿನ ಪಡಿತರ ಧಾನ್ಯ ಪಡೆದುಕೊಳ್ಳಬಹುದಾಗಿದೆ ಎಂದು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.