ಬಾಗಲಕೋಟೆ: ಏಳು ದಿನಗಳಿಂದ “ಸರ್ವರ್ ಸಮಸ್ಯೆ’ ಸಂಕಟ
Team Udayavani, Jun 21, 2024, 5:28 PM IST
ಉದಯವಾಣಿ ಸಮಾಚಾರ
ಗುಳೇದಗುಡ್ಡ: ಕಳೆದ ಏಳು ದಿನಗಳಿಂದ ಕಂದಾಯ ಇಲಾಖೆಯ ನಾಡಕಚೇರಿ ವೆಬ್ ಸೈಟ್‌ಗೆ ಸರ್ವರ್ ಸಮಸ್ಯೆ ಉಂಟಾಗಿದ್ದು,
ಇದರಿಂದ ಜಾತಿ ಆದಾಯ ಪಡೆಯಲು ಶಾಲಾ ವಿದ್ಯಾರ್ಥಿಗಳು, ಪೋಷಕರು ಪರದಾಡುವಂತಾಗಿದೆ. ಸರಕಾರದ ಯಾವುದೇ ಯೋಜನೆ ಪಡೆಯಲು ಜಾತಿ-ಆದಾಯ ಕಡ್ಡಾಯ. ಆದರೆ ಜಾತಿ ಆದಾಯ ಪಡೆಯಲು ತಹಶೀಲ್ದಾರ್ ಕಚೇರಿಗೆ ತೆರಳಿದರೆ ಸರ್ವರ್ ಸಮಸ್ಯೆ ಎದುರಾಗಿದೆ. ಇದರಿಂದ ಶಾಲಾ ವಿದ್ಯಾರ್ಥಿಗಳಿಗೆ, ಪೋಷಕರಿಗೆ ದಾರಿ ತೋಚದಂತಾಗಿದೆ.
ಏಕೆ ಸಮಸ್ಯೆ: ನಾಡಕಚೇರಿಯ ವೆಬ್‌ಸೈಟ್ ಅಪ್‌ಡೇಟ್ ಮಾಡುವ ಕೆಲಸ ನಡೆಯುತ್ತಿದ್ದು, ಹೀಗಾಗಿ ಸಮಸ್ಯೆಯಾಗುತ್ತಿದೆ ಎನ್ನುತ್ತಾರೆ ಅಧಿಕಾರಿಗಳು. ಮೇಲಧಿಕಾರಿಗಳ ಗಮನಕ್ಕೂ ತರಲಾಗಿದೆ. ಸರ್ವರ್ ಒಮ್ಮೊಮ್ಮೆ ಬರುತ್ತೆ ಮತ್ತೂಮ್ಮೆ ಹೋಗುತ್ತೇ ಇದೇ ರೀತಿಯಾಗುತ್ತದೆ. ಒಂದೆರಡು ದಿನದಲ್ಲಿ ಎಲ್ಲವೂ ಸರಿಯಾಗುತ್ತದೆ ಎಂಬುದು ಅಧಿಕಾರಿಗಳ ಮಾತು.
ತಹಶೀಲ್ದಾರ್ ಕಚೇರಿಯಲ್ಲಿ ಅರ್ಜಿ ಸಲ್ಲಿಸಲು ಹೋದರೆ ಸರ್ವರ್ ಇಲ್ಲ. ಹೊರಗಡೆ ಇರುವ ನೆಟ್ ಸೆಂಟರ್‌ಗಳಿಗೆ ತೆರಳಿದರೆ ಅಲ್ಲೂ ಅದೇ ಸಮಸ್ಯೆ ಕಾಡುತ್ತಿದ್ದು, ಇದರಿಂದ ಮಕ್ಕಳಿಗೆ ಸಾಕಷ್ಟು ಸಮಸ್ಯೆಯಾಗಿದೆ.
ಏನೆಲ್ಲ ಸೇವೆಗಳು ಬಂದ್?: ಸರ್ವರ್ ಸಮಸ್ಯೆಯಾಗುತ್ತಿರುವುದರಿಂದ ತಹಶೀಲ್ದಾರ್ ಕಚೇರಿಯಲ್ಲಿ ಸದ್ಯ ಜಾತಿ ಆದಾಯ, ಒಬಿಸಿ, ಕೃಷಿ ಸೇವೆಗಳಾದ ಬೋನೊಪೈಡ್ ವ್ಯವಸಾಯಗಾರರ ಪ್ರಮಾಣಪತ್ರ, ಸಣ್ಣ-ಅತಿ ಸಣ್ಣ ಹಿಡುವಳಿದಾರರ ಪ್ರಮಾಣಪತ್ರ,
ಸಾಮಾಜಿಕ ಭದ್ರತಾ ಸೇವೆಗಳು ಈ ಎಲ್ಲ ಸೇವೆಗಳು ನಾಡಕಚೇರಿ ವೆಬ್‌ಸೈಟ್‌ನಲ್ಲಿ ಬರುವುದರಿಂದ ಆ ವೆಬ್‌ಸೈಟ್ ಸರ್ವರ್
ಸಮಸ್ಯೆ ಎದುರಾಗಿರುವುದರಿಂದ ಜನರು ಪರದಾಡುವಂತಾಗಿದೆ. ಸದ್ಯ ಶಾಲೆಗಳಿಗೆ ಪ್ರವೇಶ ಪಡೆಯಲು ಜಾತಿ ಆದಾಯ ಅತಿ
ಮುಖ್ಯವಾಗಿ ಬೇಕಿದ್ದು, ಅದೇ ಸರ್ವರ್ ಇಲ್ಲದಿರುವುದರಿಂದ ಪಾಲಕರಲ್ಲಿ ಆತಂಕ ಹೆಚ್ಚಿದೆ. ತಹಶೀಲ್ದಾರ್ ಕಚೇರಿಗೆ, ನೆಟ್
ಸೆಂಟರ್‌ಗಳಿಗೆ ಜನರು ಅಲೆದಾಡುವಂತಾಗಿದೆ.
ಸರ್ವರ್ ಅಪ್‌ಡೇಟ್
ಮಾಡಲಾಗುತ್ತಿದೆ. ಎಲ್ಲ ಕಡೆಗಳಲ್ಲಿ ಸರ್ವರ್ ಸಮಸ್ಯೆಯಾಗಿದೆ. ನಡು ನಡುವೆ ಸರ್ವರ್ ಬರುತ್ತಿದೆ. ಆದರೆ ನಿರಂತರವಾಗಿ
ಬರುತ್ತಿಲ್ಲ. ಮೇಲಧಿಕಾರಿಗಳ ಗಮನಕ್ಕೂ ತರಲಾಗಿದೆ. ಈ ಸಮಸ್ಯೆ ರಾಜ್ಯದಲ್ಲಿದ್ದು, ಶೀಘ್ರ ಬಗೆಹರಿಯುತ್ತದೆ. ಸರ್ವರ್ ಬಂದ್
ಕೂಡಲೇ ಯಾವುದೇ ಜಾತಿ ಆದಾಯ ಅರ್ಜಿಗಳ ವಿಲೇವಾರಿ ವಿಳಂಬ ಮಾಡಲ್ಲ.
ಮಂಗಳಾ ಎಂ.,
ತಹಶೀಲ್ದಾರ್, ಗುಳೇದಗುಡ್ಡ
*ಮಲ್ಲಿಕಾರ್ಜುನ ಕಲಕೇರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಬಕವಿ-ಬನಹಟ್ಟಿ: ಸಚಿವರಿಂದ ಬೇಡಿಕೆ ಈಡೇರಿಸುವ ಭರವಸೆ… ತಿಂಗಳ ಬಳಿಕ ನೇಕಾರರ ಹೋರಾಟ ಅಂತ್ಯ
K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ
Politicss; 1008 ಸಾಧುಸಂತರ ಪಾದಪೂಜೆ ಮೂಲಕ ಕ್ರಾಂತಿವೀರ ಬ್ರಿಗೇಡ್ ಗೆ ಚಾಲನೆ: ಈಶ್ವರಪ್ಪ
India: ಒಂದು ದೇಶ ಒಂದು ಚುನಾವಣೆ ಜಾರಿ ಆಗಲಿ: ಪೇಜಾವರ ಸ್ವಾಮೀಜಿ
Rabkavi Banahatti: ಲೋಕ ಅದಾಲತ್ ನಲ್ಲಿ ಒಂದಾದ ದಂಪತಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.