Bagalkote: ಬಸ್ ನಿಲ್ದಾಣ ಬಂತು- ಮೂಗು ಮುಚ್ಚಿಕೊಳ್ಳಿ!
Team Udayavani, Sep 26, 2023, 4:45 PM IST
ಬಾಗಲಕೋಟೆ: ಶಕ್ತಿ ಯೋಜನೆ ಜಾರಿ ಬಳಿಕ ಪ್ರಯಾಣಿಕರಿಂದ ತುಂಬಿ ತುಳುಕುವ ನವನಗರ ಬಸ್ ನಿಲ್ದಾಣ ಗಬ್ಬೆದ್ದು ನಾರುತ್ತಿದೆ. ಪ್ರಯಾಣಿಕರು ಮೂಗು ಮುಚ್ಚಿಕೊಂಡೇ ಬಸ್ ನಿಲ್ದಾಣದೊಳಗೆ ಕಾಲಿಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬ ಆಕ್ರೋಶ ಕೇಳಿ ಬಂದಿದೆ.
ಹೌದು, ನವನಗರದ ಬಸ್ ನಿಲ್ದಾಣಕ್ಕೆ ಬರುವ ಪ್ರಯಾಣಿಕರು ಈಗ ಮೂಗು ಮುಚ್ಚಿಕೊಂಡು ನಿಲ್ದಾಣದಲ್ಲಿ ಹೆಜ್ಜೆ ಇಡಬೇಕು.
ಸ್ವತ್ಛತೆ ಕಾಪಾಡುವ ಮೂಲಕ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಬೇಕಾದ ಸಾರಿಗೆ ಸಂಸ್ಥೆಯ ಸಿಬ್ಬಂದಿ ನಿರ್ಲಕ್ಷ್ಯ ವಹಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ನವನಗರದ ಬಸ್ ನಿಲ್ದಾಣಕ್ಕೆ ಬೆಂಗಳೂರು, ಬೆಳಗಾವಿ, ರಾಯಚೂರು, ಗದಗ, ಹುಬ್ಬಳ್ಳಿ ಹಾಗೂ ವಿಜಯಪುರ ಸೇರಿದಂತೆ ಎಲ್ಲ
ಊರುಗಳಿಗೆ ಪ್ರಯಾಣ ಬೆಳೆಸಲು ನವನಗರ ಬಸ್ ನಿಲ್ದಾಣ ಪ್ರಮುಖವಾಗಿದೆ. ಆದರೆ, ಅಲ್ಲಿಗೆ ಬರುವ ಪ್ರಯಾಣಿಕರಿಗೆ ಮಾತ್ರ ಸರಿಯಾದ ಸೌಲಭ್ಯವಿಲ್ಲದಂತಾಗಿದೆ ಎಂಬ ಅಸಮಾಧಾನ ತೀವ್ರವಾಗಿದೆ.
ಗಬ್ಬೆದ್ದ ಒಳಚರಂಡಿ: ನವನಗರದ ಬಸ್ ನಿಲ್ದಾಣದಲ್ಲಿರುವ ಒಳಚರಂಡಿ ತುಂಬಿದ್ದು, ಕಸ-ಕಡ್ಡಿಗಳು ಸಿಕ್ಕು ಬ್ಲಾಕ್ ಆಗಿ ಚರಂಡಿ ನೀರೆಲ್ಲ ಹೊರಕ್ಕೆ ಹರಿಯುತ್ತಿದೆ. ಇದರಿಂದ ಬಸ್ ನಿಲ್ದಾಣದ ತುಂಬೆಲ್ಲ ದುರ್ವಾಸನೆ ಹೊಡೆಯುತ್ತಿದೆ. ಇದರಿಂದ ಸೊಳ್ಳೆಗಳು ಹೆಚ್ಚಾಗಿದ್ದು, ಬಸ್ ನಿಲ್ದಾಣ ಸೊಳ್ಳೆಗಳ ತಾಣವಾಗಿದೆ. ಆದ್ದರಿಂದ, ಒಳಚರಂಡಿ ಸ್ವಚ್ಛಗೊಳಿಸುವ ಮೂಲಕ ಬಸ್
ನಿಲ್ದಾಣದಲ್ಲಿ ಉಂಟಾಗಿರುವ ದುರ್ವಾಸನೆ ಹೋಗಲಾಡಿಸಲು ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ
ಕೇಳಿ ಬಂದಿದೆ.
ಸಾರಿಗೆ ಅಧಿಕಾರಿಗಳು ಇತ್ತ ನೋಡಲಿ:
ನವನಗರದ ಬಸ್ ನಿಲ್ದಾಣದಲ್ಲಿ ಕಳೆದ ಹಲವು ತಿಂಗಳಿಂದ ಉಂಟಾದ ಈ ಸಮಸ್ಯೆಗೆ ಪ್ರಯಾಣಿಕರು ಬೇಸತ್ತಿದ್ದಾರೆ. ಆದರೆ, ಈವರೆಗೆ ಸಾರಿಗೆ ಸಂಸ್ಥೆಯ ಅಧಿಕಾರಿಗಳು ಇತ್ತ ಗಮನಹರಿಸಿಲ್ಲ. ಇದರಿಂದ ಬಸ್ ನಿಲ್ದಾಣಕ್ಕೆ ಬರುವ ಪ್ರಯಾಣಿಕರೆಲ್ಲ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ. ಇದು ಪ್ರಯಾಣಿಕರು ಅಷ್ಟೇ ಅಲ್ಲ, ನಿತ್ಯವೂ ಕರ್ತವ್ಯ ನಿರ್ವಹಿಸುವ ಸಿಬ್ಬಂದಿ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ ಎನ್ನಲಾಗಿದೆ.
*ವಿಶೇಷ ವರದಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Australia vs Pakistan T20: ಪಾಕ್ ವಿರುದ್ಧ ಆಸೀಸ್‌ಗೆ 2-0 ಸರಣಿ ಜಯ
Sullia: ಅಪಘಾತ; ಪರಾರಿಯಾಗಿದ್ದ ಲಾರಿ ವಶಕ್ಕೆ
K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
Kasargod: ನಾಟಕ ತಂಡ ಸಂಚರಿಸುತ್ತಿದ್ದ ಬಸ್ ಮಗುಚಿ ಇಬ್ಬರು ನಟಿಯರ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.