Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ
Team Udayavani, Apr 24, 2024, 1:26 PM IST
ಬಾಗಲಕೋಟೆ: ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅಖಂಡ ವಿಜಯಪುರ ಜಿಲ್ಲೆಯ ಗೊಡ್ಡ ಎಮ್ಮೆ ಇದ್ದಂತೆ ಎಂದು ಹುನಗುಂದ ಶಾಸಕ, ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ಟೀಕಿಸಿದ್ದಾರೆ.
ಹುನಗುಂದದಲ್ಲಿ ನಡೆದ ಕಾಂಗ್ರೆಸ್ ಚುನಾವಣೆ ಪ್ರಚಾರದಲ್ಲಿ ಮಾತನಾಡಿದ ಅವರು, ಯತ್ನಾಳ ಅವರನ್ನು ಭಾಷಣದುದ್ದಕ್ಕೂ ಏಕವಚನದಲ್ಲೇ ಹರಿಹಾಯ್ದರು.
ಆ ಎಮ್ಮೆ ಹಿಂಡುವುದೇ ಇಲ್ಲ. ಗೊಡ್ಡ ಬಿದೈತಿ. ಅಂವಾ ಎಲ್ಲಾ ಜಾತಿಗೂ ಬೈತಾನ, ಯಾರಿಗೂ ಬಿಟ್ಟಿಲ್ಲ. ಬಹಳ ದಿನದಿಂದ ಎಮ್ಮಿಕರ ಒದರಾಕ ಹತ್ತೈತಿ ಎಂದರು.
ಪಂಚಮಸಾಲಿಗೆ ನೀ ಒಬ್ಬನಾ ಹುಟ್ಟಿಲ್ಲ. ನಿನ್ನ ಬಾಯಿ ಬಂದ್ ಮಾಡಿದಿ ಚೊಲೊ. ಇಲ್ಲಂದ್ರ ಈಶ್ವರಪ್ಪಗ ಬಂದ ಗತಿ ನಿನಗೂ ಬರ್ತೈತಿ ಎಂದರು.
ಈ ದೇಶ, ಜಾತಿ ಇವರಪ್ಪನ ಮನೆದಾ ? ಹೋದಲ್ಲೆಲ್ಲ ಅಲ್ಪಸಂಖ್ಯಾತರನ್ನು ಬೈತಾನೆ. ಇವನ ಗಂಡ್ಮಗ ಹಿಂದ ಜೆಡಿಎಸ್ ಗೆ ಹೋಗಿದ್ದ. ಆಗ ಟಿಪ್ಪು ಸುಲ್ತಾನ್ ಟೋಪಿ ಹಾಕಿ, ಕೈಯಾಗ ಖಡ್ಗನೂ ಹಿಡಿದಿದ್ದ. ಈಗ ಏನೇನರೆ ಮಾತಾಡ್ತಾನ. ಇದೆಲ್ಲ ಬಿಡದಿದ್ದರೆ, ನಿಮಗೇ ತೊಂದರೆ ಹೆಚ್ಚು ಎಂದು ಎಚ್ಚರಿಕೆ ನೀಡಿದರು.
ಇವನೊಬ್ಬನ ಪಂಚಮಸಾಲಿಗೆ ಹುಟ್ಟಿಬಿಟ್ಟಾನ. ಮತ್ತ್ಯಾರು ನಾವು ಪಂಚಮಸಾಲಿಗೆ ಹುಟ್ಟೆ ಇಲ್ವಾ. ಇಂವ ಎಲ್ಲಿದ್ದ ಅಂತ ಈ ಎರಡು ಜಿಲ್ಲಾಕ ಗೊತ್ತಲ್ಲೇನು. ಅದಕ್ಕ ಬಾಯಿ ಬಂದ್ ಮಾಡಿದ್ರ ಚೊಲೋ. ಇಲ್ಲ ಎಮ್ಮಿಕರದಂಗ ಒದರಿ ಒದರಿ ಸಾಯೋ ಪರಿಸ್ಥಿತಿ ಬರ್ತೈತಿ ಎಂದರು.
ಅವರ ಪಕ್ಷದವರ ಬಗ್ಗೆನೂ ಒದರತಾನ. ಬೇರೆ ಪಕ್ಷದವರು, ಬೇರೆ ಜಾತಿಯವರ ಬಗ್ಗೆನೂ ಒದರತಾನ. ಒದರುದೊಂದೆ ಕೆಲಸ, ಅದಕ್ಕ ಯಾರೂ ತಲೆ ಕೆಡಿಸಿಕೊಳ್ಳಬೇಡಿ ಎಂದು ಹೇಳಿದರು.
ರಾಜ್ಯದಲ್ಲಿ ನಮ್ಮದು ಇನ್ನು ನಾಲ್ಕು ವರ್ಷ ಮೂರು ತಿಂಗಳು ಅಧಿಕಾರ ಇದೆ. ಸಿಎಂ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ ಅವರು ಕೊಟ್ಟ ಭರವಸೆ ಈಡೇರಿಸಿದ್ದಾರೆ. ಎಲ್ಲ ಜಾತಿ ಜನಾಂಗ ರಕ್ಷಣೆ ಮಾಡ್ತೇವಿ. ರಾಜ್ಯವನ್ನು ಅಭಿವೃದ್ದಿ ಪಡಿಸುತ್ತೇವೆ ಎಂದು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ
ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು
ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್ ನಕ್ಸಲ್ ಸಾವು
ಹೊಸ ಸೇರ್ಪಡೆ
Viral Photo: ಬಾಲಿವುಡ್ ನಟ ಆಮಿರ್ ಖಾನ್ ಭೇಟಿಯಾದ ಕಿಚ್ಚ ಸುದೀಪ್; ಫ್ಯಾನ್ಸ್ ಥ್ರಿಲ್
Russia ದಿಂದ ಉಕ್ರೇನ್ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ
IFFI 2024: ತಾಲಿಯಾ..ತಾಲಿಯಾ…ಜೋರ್ ದಾರ್ ತಾಲಿಯಾ..!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.