Bailhongal: ಶರಣರ ವಚನ ಸಾಹಿತ್ಯ ಇಂದಿಗೂ ಪ್ರಸ್ತುತ
ಇನ್ನೊಬ್ಬರ ಹೊಲಿಕೆ ಅಸಾಧ್ಯ, ಶರಣರಿಗೆ ಶರಣರೆ ಸಮಾನ
Team Udayavani, Nov 8, 2023, 5:05 PM IST
ಬೈಲಹೊಂಗಲ: ಶರಣ ಸಂಕುಲಕ್ಕೆ ಬೆಳಕಾಗಿ ವಚನ ಸಾಹಿತ್ಯ ರಕ್ಷಣೆಯಲ್ಲಿ ವೀರಗಣಾಚಾರಿಯಾಗಿದ್ದ 12ನೇ ಶತಮಾನದ ಮಡಿವಾಳ ಮಾಚಿದೇವರ ವಚನಗಳು ಇಂದು ಅತ್ಯಂತ ಪ್ರಸ್ತುತವಾಗಿವೆ ಎಂದು ಮಡಿವಾಳಪ್ಪ ಸಂಗೊಳ್ಳಿ ಹೇಳಿದರು.
ಸಮೀಪದ ಕಾರಿಮನಿ ಗ್ರಾಮದ ಮಡಿವಾಳ ಮಾಚಿದೇವರ ಸಮಾ ಧಿ ಸ್ಥಳದಲ್ಲಿ ಶರಣ ಸಂಗಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಮಾನವ ಕುಲಕ್ಕೆ ವಚನ ಸಾಹಿತ್ಯವನ್ನು ನೀಡಿದ ಶರಣರ ವಚನಗಳಲ್ಲಿ ಮಡಿವಾಳ ಮಾಚಿದೇವರು ಅಗ್ರಪಂಕ್ತಿಯಲ್ಲಿದ್ದವರು ಎಂದರು.
ನ್ಯಾಯವಾದಿ ಎಫ್.ಎಸ್.ಸಿದ್ದನಗೌಡರ ಮಾತನಾಡಿ, 12ನೇ ಶತಮಾನದ ದಾರ್ಶನಿಕ ಜಗಜ್ಯೋತಿ ಬಸವಣ್ಣನವರ ಪುತ್ಥಳಿ ಥೇಮ್ಸ್ ನದಿ ದಡದ ಮೇಲೆ ಸ್ಥಾಪನೆಯಾಗಿದೆ. ಶರಣರ ವಚನಗಳು ಸರ್ವೋಚ್ಚ ನ್ಯಾಯಾಲಯದ ತೀರ್ಪಿನಲ್ಲಿ ಉಲ್ಲೇಖವಾಗುವದನ್ನು ನೋಡಿದರೆ 900 ವರ್ಷಗಳ ಹಿಂದಿನ ವಚನ ಸಾಹಿತ್ಯ ಇಂದಿನ ಜನಾಂಗಕ್ಕೆ ಅತ್ಯಂತ ಅವಶ್ಯಕವಾಗಿದೆ ಎಂದರು.
ಎಚ್.ಜಿ.ಹೆಬ್ಬಳ್ಳಿ ಮತ್ತು ಸುಮಂಗಲಾ ಕರಡಿಗುದ್ದಿ ಮಾತನಾಡಿ, ಶರಣರು ಕಂಡ ಸಮಾನತೆಯ ನಾಡು ಕಟ್ಟಲು ಪಣ ತೊಡೋಣ, ಶರಣರ ಸಾಧನೆ ದೊಡ್ಡದಾಗಿದ್ದು ಅವರಿಗೆ ಇನ್ನೊಬ್ಬರ ಹೊಲಿಕೆ ಅಸಾಧ್ಯ, ಶರಣರಿಗೆ ಶರಣರೆ ಸಮಾನ ಎಂದರು.
ಸಿ.ಬಿ.ಯಡಳ್ಳಿ, ಎಫ್.ಎಸ್.ಸಿದ್ದನಗೌಡರ, ಎಮ್.ಎಸ್.ಕೊಳ್ಳಿ, ಎಸ್.ಎಸ್.ಆರಭಾಂವಿ, ಸಂಗಪ್ಪ ತಡವಲ, ರಾಜಕುಮಾರ ಮಡಿವಾಳರ, ಷಣ್ಮುಖಯ್ಯ ಪೂಜೇರಿ, ವಿರುಪಾಕ್ಷಯ್ಯ ಪೂಜೇರಿ, ನಾಗಪ್ಪ ನಾಯ್ಕರ, ಸೋಮಲಿಂಗ ಕಾರಿಮನಿ, ಬಸವರಾಜ ನರಸಣ್ಣವರ, ರಾಜಶೇಖರ ನಿಡವಣಿ ಇದ್ದರು. ಶೋಭಕ್ಕ ನಾಗನಗೌಡರ ಸ್ವಾಗತಿಸಿದರು. ಸುಧಾ ನರಸಣ್ಣವರ ನಿರೂಪಿಸಿದರು. ಚನ್ನಪ್ಪ ನರಸಣ್ಣವರ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಬಕವಿ-ಬನಹಟ್ಟಿ: ಸಚಿವರಿಂದ ಬೇಡಿಕೆ ಈಡೇರಿಸುವ ಭರವಸೆ… ತಿಂಗಳ ಬಳಿಕ ನೇಕಾರರ ಹೋರಾಟ ಅಂತ್ಯ
K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ
Politicss; 1008 ಸಾಧುಸಂತರ ಪಾದಪೂಜೆ ಮೂಲಕ ಕ್ರಾಂತಿವೀರ ಬ್ರಿಗೇಡ್ ಗೆ ಚಾಲನೆ: ಈಶ್ವರಪ್ಪ
India: ಒಂದು ದೇಶ ಒಂದು ಚುನಾವಣೆ ಜಾರಿ ಆಗಲಿ: ಪೇಜಾವರ ಸ್ವಾಮೀಜಿ
Rabkavi Banahatti: ಲೋಕ ಅದಾಲತ್ ನಲ್ಲಿ ಒಂದಾದ ದಂಪತಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Harapanahalli: ಪ್ರತಿಷ್ಠೆಯ ಕಣವಾದ ಬಿ90 ಸೊಸೈಟಿ ಚುನಾವಣೆ
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Hysteroscopy: ಸಂತಾನಹೀನತೆಯ ಪತ್ತೆ ಮತ್ತು ಚಿಕಿತ್ಸೆಗೆ ಒಂದು ಅತ್ಯವಶ್ಯಕ ಕಾರ್ಯವಿಧಾನ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ
Puttur: ತೆಂಕಿಲದಲ್ಲಿ ರಿಕ್ಷಾ ಅಪಘಾತ: ಚಾಲಕ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.