ಬಕ್ರೀದ್ ಹಬ್ಬ ಶಾಂತಿಯುತವಾಗಿ ಆಚರಿಸಿ: ಎಸ್‌ಪಿ
ಸರ್ಕಾರದ ನಿಯಮ ಕಡ್ಡಾಯವಾಗಿ ಪಾಲಿಸಲು ಸೂಚನೆ ; ಶಾಂತಿ-ಸೌಹಾರ್ದತೆ ಕಾಪಾಡಿ: ಜಯಪ್ರಕಾಶ ಅಕ್ಕರಕಿ
Team Udayavani, Jul 8, 2022, 3:22 PM IST
ಲೋಕಾಪುರ: ಎಲ್ಲ ಸಮಾಜ ಬಾಂಧವರು ಶಾಂತಿ ಸೌಹಾರ್ದತೆಯ ಬದುಕು ನಡೆಸಬೇಕು. ಜನಜೀವನ ನೆಮ್ಮದಿಯನ್ನು ಕಾನೂನು ರೀತಿಯಲ್ಲಿ ಕಾಪಾಡುವುದು ಪೊಲೀಸ್ ಇಲಾಖೆ ಕರ್ತವ್ಯ. ಇದಕ್ಕೆ ಎಲ್ಲರ ಸಹಕಾರ ಮುಖ್ಯ ಎಂದು ಬಾಗಲಕೋಟೆ ನೂತನ ಎಸ್‌ಪಿ ಜಯಪ್ರಕಾಶ ಅಕ್ಕರಕಿ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಬಕ್ರೀದ್ ನಿಮಿತ್ತ ಹಮ್ಮಿಕೊಂಡಿದ್ದ ಶಾಂತಿ ಪಾಲನಾ ಸಭೆಯಲ್ಲಿ ಮಾತನಾಡಿದ ಅವರು, ನಾನು ಬಾಗಲಕೋಟೆ ನೂತನ ವರಿಷ್ಠಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿ ಭೇಟಿ ನೀಡುತ್ತಿರುವ ಮೊದಲ ಪೊಲೀಸ್ ಠಾಣೆ ಇದಾಗಿದೆ. ಬಕ್ರೀದ್ ಹಬ್ಬವನ್ನು ಶಾಂತಿಯುತವಾಗಿ ಅಚರಿಸಲು ಎಲ್ಲ ಸಮುದಾಯದವರು ಕೈ ಜೋಡಿಸಬೇಕು. ಜು. 10ರಂದು ನಡೆಯುವ ಬಕ್ರೀದ್ ಆಚರಣೆಯ ವೇಳೆಯಲ್ಲಿ ಪ್ರತಿಯೊಬ್ಬರು ಶಾಂತಿ, ಸೌಹಾ ರ್ದತೆ ಕಾಪಾಡಬೇಕು. ಮುನ್ನೆಚ್ಚರಿಕೆ ಕ್ರಮವಾಗಿ ಸರ್ಕಾರದ ನಿಯಮ ಕಡ್ಡಾಯ ಪಾಲಿಸಬೇಕಾಗಿದೆ ಎಂದರು.
ಅಂಜುಮನ್ -ಎ-ಇಸ್ಲಾಂ ಕಮೀಟಿ ಅಧ್ಯಕ್ಷ ಅಲ್ಲಾಸಾಬ ಯಾದವಾಡ ಮಾತನಾಡಿ, ಸರ್ಕಾರದ ನಿಯಮ ಪಾಲಿಸುವ ಮೂಲಕ ಬಕ್ರೀದ್ ಆಚರಿಸಲು ಎಲ್ಲರ ಸಹಕಾರವಿದೆ. ಯಾವುದೇ ಅಹಿತಕರ ಘಟನೆಗೆ ಅವಕಾಶ ನೀಡದೇ ಕಾನೂನಿನ ನಿಯಮಾವಳಿಗಳಿಗೆ ಧಕ್ಕೆಯಾಗದಂತೆ ಬಕ್ರೀದ್ ಆಚರಿಸಲಾಗುವುದು ಎಂದು ಭರವಸೆ ನೀಡಿದರು.
ಸ್ಥಳೀಯ ಮುಖಂಡ ವಸಂತಗೌಡ ಪಾಟೀಲ ಮಾತನಾಡಿ, ಪಟ್ಟಣದಲ್ಲಿ ಪೂರ್ವಜ ರಿಂದಲೂ ಎಲ್ಲ ಜಾತ್ರೆ ಹಾಗೂ ರಮಜಾನ, ಬಕ್ರೀದ್ ಹಬ್ಬವನ್ನು ಹಿಂದೂ-ಮುಸ್ಲಿಂ ಬಾಂಧವರು ಒಗ್ಗೂಡಿ ಆಚರಣೆ ಮಾಡಲಾಗುತ್ತಿದೆ. ಸಭೆ ಸಮಾರಂಭಗಳಲ್ಲಿಯೂ ಕೂಡ ಒಗ್ಗಟ್ಟಾಗಿ ಭಾಗ ವಹಿಸುವ ಮೂಲಕ ಲೋಕಾಪುರ ಭಾವೈಕ್ಯತೆಗೆ ಹೆಸರುವಾಸಿಯಾಗಿದೆ ಎಂದು ಹೇಳಿದರು.
ಸನ್ಮಾನ: ನೂತನ ವರಿಷ್ಠಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿ ಪ್ರಥಮ ಬಾರಿಗೆ ಲೋಕಾಪುರ ಪೊಲೀಸ್ ಠಾಣೆಗೆ ಆಗಮಿಸಿದ ಜಯಪ್ರಕಾಶ ಅಕ್ಕರಕಿ ಮತ್ತು ಡಿವೈಎಸ್‌ಪಿ ಪಾಂಡುರಂಗಯ್ಯ, ಮುಧೋಳ ನೂತನ ಸಿಪಿಐ ಅಯ್ಯನಗೌಡ ಪಾಟೀಲ ಅವರನ್ನು ಪಟ್ಟಣದ ಮುಖಂಡರು ಸನ್ಮಾನಿಸಿದರು.
ಟ್ರಾಫಿಕ್ ನಿವಾರಣೆಗೆ ಎಸ್ಪಿ ಸೂಚನೆ: ಪಟ್ಟಣದಲ್ಲಿ ಶಿಸ್ತು ಬದ್ಧವಾಗಿ ಟ್ರಾಫಿಕ್ ನಿವಾರಣೆ ಮಾಡಲಾಗುತ್ತಿದೆ. ಪ್ರತಿದಿನ ರಸ್ತೆಬದಿ ವ್ಯಾಪಾರಿಗಳಿಗೂ ಮತ್ತು ಸಾರ್ವಜನಿಕರಿಗೂ ತೊಂದರೆಯಾಗದಂತೆ ಟ್ರಾಫಿಕ್ ನಿವಾರಣೆ ಮಾಡಬೇಕು. ಪ್ರತಿದಿನ ಸಂಜೆ ಜನದಟ್ಟಣೆ ನಿವಾರಣೆ ಇರುವ ಸಿಸಿಟಿವಿ ವಿಡಿಯೋ ದೃಶ್ಯವನ್ನು ನನಗೆ ಕಳುಹಿಸಬೇಕು ಎಂದು ಪಿಎಸ್‌ಐ ಶಿವಶಂಕರ ಮುಕರಿ ಅವರಿಗೆ ಸೂಚಿಸಿದರು.
ಡಿವೈಎಸ್‌ಪಿ ಪಾಂಡುರಂಗಯ್ಯ, ಸಿಪಿಐ ಅಯ್ಯನಗೌಡ ಪಾಟೀಲ, ಪಿಎಸ್‌ಐ ಶಿವಶಂಕರ ಮುಕರಿ, ತಾಪಂ ಮಾಜಿ ಸದಸ್ಯ ರಫೀಕ ಬೈರಕದಾರ, ಯಮನಪ್ಪ ಹೊರಟ್ಟಿ, ವಸಂತಗೌಡ ಪಾಟೀಲ, ಬಿ.ಎಲ್. ಬಬಲಾದಿ, ಮಹೇಶ ಹುಗ್ಗಿ, ಆನಂದ ಹವಳಖೋಡ, ಜಾಕೀರ ಅತ್ತಾರ, ಹನಮಂತ ಕುಡಚಿ, ವಿನೋದ ಘೋರ್ಪಡೆ, ಸೈಯದ್ ನದಾಫ, ಗುಲಾಬಸಾಬ ಅತ್ತಾರ, ರಮಜಾನ ನದಾಫ, ಸಂತೋಷ ದೇಶಪಾಂಡೆ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಬಕವಿ-ಬನಹಟ್ಟಿ: ಸಚಿವರಿಂದ ಬೇಡಿಕೆ ಈಡೇರಿಸುವ ಭರವಸೆ… ತಿಂಗಳ ಬಳಿಕ ನೇಕಾರರ ಹೋರಾಟ ಅಂತ್ಯ
K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ
Politicss; 1008 ಸಾಧುಸಂತರ ಪಾದಪೂಜೆ ಮೂಲಕ ಕ್ರಾಂತಿವೀರ ಬ್ರಿಗೇಡ್ ಗೆ ಚಾಲನೆ: ಈಶ್ವರಪ್ಪ
India: ಒಂದು ದೇಶ ಒಂದು ಚುನಾವಣೆ ಜಾರಿ ಆಗಲಿ: ಪೇಜಾವರ ಸ್ವಾಮೀಜಿ
Rabkavi Banahatti: ಲೋಕ ಅದಾಲತ್ ನಲ್ಲಿ ಒಂದಾದ ದಂಪತಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.