ಬನಹಟ್ಟಿ: ಔಷಧಿ ಅಂಗಡಿ ಬಂದ್
Team Udayavani, May 7, 2020, 2:56 PM IST
ಬನಹಟ್ಟಿ: ರಬಕವಿ ಬನಹಟ್ಟಿ ಅವಳಿ ನಗರಗಳನ್ನು ಒಂದೇ ಎಂದು ಪರಿಗಣಿಸಿ ತಾಲೂಕು ಕೇಂದ್ರವನ್ನಾಗಿ ಸರ್ಕಾರ ಘೋಷಣೆ ಮಾಡಿದ್ದರೂ ತಾಲೂಕು ಆಡಳಿತದ ನಿಯಮಗಳು ಮಾತ್ರ ಎರಡು ನಗರಗಳಿಗೆ ಬೇರೆ ಬೇರೆಯಾಗಿವೆ. ಕೇವಲ ಒಂದೇ ಕಿ.ಮೀ ದೂರದಲ್ಲಿರುವ ರಬಕವಿ, ರಾಮಪುರದಲ್ಲಿ ಬುಧವಾರ ಔಷಧ ಅಂಗಡಿಗಳು ಕಾರ್ಯ ಮಾಡಿದರೆ ಬನಹಟ್ಟಿಯಲ್ಲಿಯಲ್ಲಿ ಔಷಧ ಅಂಗಡಿಗಳು ಮುಚ್ಚಿದ್ದವು. ಇದರಿಂದ ಗ್ರಾಹಕರಿಗೆ ಮತ್ತು ಅಂಗಡಿಕಾರರಿಗೆ ಗೊಂದಲವನ್ನುಂಟು ಮಾಡಿದೆ ಎಂದು ಬನಹಟ್ಟಿ ವಕೀಲರ ಸಂಘದ ಅಧ್ಯಕ್ಷ ಬಸವರಾಜ ಪುಟಾಣಿ ಮತ್ತು ಹಿರಿಯ ವಕೀಲರ ವಿಜಯ ಹೂಗಾರ ತಿಳಿಸಿದರು.
ಬುಧವಾರ ಪತ್ರಿಕೆಯೊಂದಿಗೆ ಮಾತನಾಡಿ, ಬನಹಟ್ಟಿಯಲ್ಲಿ ಔಷಧಿ ಅಂಗಡಿಗಳು ಮುಚ್ಚಿದ್ದರಿಂದ ಬಹುತೇಕ ಜನರು ಪರದಾಡುತ್ತಿದ್ದಾರೆ. ಆಸ್ಪತ್ರೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಔಷಧಿ ಅಂಗಡಿಗಳು ಮಾತ್ರ ಕಾರ್ಯ ಮಾಡುತ್ತಿವೆ. ಆದರೆ , ಕೆಲವು ಗ್ರಾಹಕರಿಗೆ ಬೇಕಾದ ಔಷ ಧಿಗಳು ಅಲ್ಲಿ ದೊರೆಯುತ್ತಿಲ್ಲ. ಇದರಿಂದಾಗಿ ಗ್ರಾಹಕರಿಗೆ ತೊಂದರೆಯಾಗಿದೆ. ಕೆಲವು ಗ್ರಾಹಕರು ಉದ್ದರಿಯ ಸೌಲಭ್ಯದ ಮೂಲಕ ಔಷಧಿಗಳನ್ನು ನಿರ್ದಿಷ್ಟ ಅಂಗಡಿಗಳ ಮೂಲಕ ಖರೀದಿಸುತ್ತಾರೆ. ಆದರೆ, ಈಗ ಬಹಳಷ್ಟು ಜನರು ಉದ್ಯೋಗವಿಲ್ಲದೆ ಹಣದ ಸಮಸ್ಯೆ ಎದುರಿಸುತ್ತಿದ್ದಾರೆ. ತಾಲೂಕು ಆಡಳಿತ ಬನಹಟ್ಟಿಯಲ್ಲಿಯೂ ಕೂಡಾ ಔಷಧ ಅಂಗಡಿ ಆರಂಭಿಸುವಂತೆ ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.