ರೋಗನಿರೋಧಕ ಶಕ್ತಿ ನೀಡುವ ಕಪ್ಪು ಗೋದಿ ಬೆಳೆದ ರಾಷ್ಟ್ರಪ್ರಶಸ್ತಿ ವಿಜೇತ ರೈತ ಧರೆಪ್ಪ ಕಿತ್ತೂರ
ಬಯಲು ಸೀಮೆಯಲ್ಲಿ ಕಪ್ಪು ಸುಂದರಿ
Team Udayavani, Mar 23, 2021, 4:02 PM IST
ಬನಹಟ್ಟಿ (ಬಾಗಲಕೋಟೆ): ಕೃಷಿಯಲ್ಲಿ ಯಾರು ಮಾಡಲಾರದನ್ನು ತಾವು ಮಾಡಿ ಅದನ್ನು ಇತರರಿಗೆ ಹಂಚಿಕೊಂಡು ಅವರನ್ನು ಉತ್ತಮ ಕೃಷಿಗೆ ಪ್ರೇರೇಪಿಸುವ ಗುಣ ಹೊಂದಿರುವ ಬಾಗಲಕೊಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಸಸಾಲಟ್ಟಿಯ ರೈತ ಧರೆಪ್ಪ ಕಿತ್ತೂರ ಈಗ ಮತ್ತೊಂದು ವಿನೂತನ ಪ್ರಯತ್ನ ಮಾಡಿದ್ದು, ಬಯಲು ಸೀಮೆಯಲ್ಲಿ ಔಷಧಿ ಗುಣವುಳ್ಳ ಕಪ್ಪು ಗೋಧಿಯನ್ನು ಬೆಳೆಯುವುದರ ಉತ್ತರ ಕರ್ನಾಟಕದ ರೈತರು ಹುಬ್ಬೇರಿಸುವಂತೆ ಮಾಡಿದ್ದಾರೆ.
ಅವರು ತಮ್ಮ ಕಾಲತಿಪ್ಪಿ ರಸ್ತೆಯಲ್ಲಿರುವ ಅರ್ಧ ಏಕರೆ ಭೂಮಿಯಲ್ಲಿ ಒಂದೂವರೆ ಫೂಟ್‌ಗೆ ಸಾಲಿನಂತೆ ಕಪ್ಪು ಗೋಧಿಯನ್ನು ನಾಟಿ ಮಾಡಿದ್ದಾರೆ. ಅದಕ್ಕೂ ಮೊದಲು ತಿಪ್ಪೆಗೊಬ್ಬರ, ಎರೆಹುಳು, ಬೇವಿನಹಿಂಡಿ, ಬೀಜೋಪಚಾರ ಮಾಡಿ, ಸಾವಯವ ಕೃಷಿಯಲ್ಲಿ ಬೆಳೆ ಬೆಳೆದಿದ್ದಾರೆ. ಒಟ್ಟು 105 ರಿಂದ 110 ದಿನಗಳ ಬೆಳೆಯಾಗಿರುವ ಕಪ್ಪು ಗೋದಿಯನ್ನು ಬೆಳೆದಿದ್ದಾರೆ. ಒಂದು ತೆನೆ 30 ರಿಂದ 40 ಕಾಳುಗಳನ್ನು ಬಿಟ್ಟಿದ್ದು, ಅರ್ಧ ಎಕರೆಯಲ್ಲಿ ಐದು ಕ್ವಿಂಟಲ್ ಇಳುವರಿ ನೀಡಿದೆ.
ಇದನ್ನೂ ಓದಿ:ರವಿ ಪೂಜಾರಿ ಸಹಚರನ ಕೊಲೆಗೆ ಸ್ಕೆಚ್: ಮಂಗಳೂರಿನಲ್ಲಿ ನಾಲ್ವರು ರೌಡಿಶೀಟರ್ ಗಳ ಬಂಧನ
ಮಧ್ಯಪ್ರದೇಶದಿಂದ 80 ರೂ.ಗೆ ಬೀಜವನ್ನು ಖರೀದಿಸಿದ್ದು, ಸದ್ಯ ಮಾರುಕಟ್ಟೆಯಲ್ಲಿ ಕೆ.ಜಿಗೆ ರೂ. 100 ರಿಂದ 120ರವರೆಗೆ ಮಾರಾಟವಾಗುತ್ತದೆ. ಇದರಿಂದ ಅರ್ಧ ಏಕರೆಯಲ್ಲಿ 100 ದಿನಕ್ಕೆ ಸುಮಾರು 50 ಸಾವಿರ ಲಾಭಗಳಿಸಬಹುದು ಎನ್ನುತ್ತಾರೆ.
ಈ ಕಪ್ಪು ಗೋಧಿಯನ್ನು ಸದ್ಯ ಪ್ರಾಯೋಗಿಕವಾಗಿ ಬೆಳೆಯುತ್ತಿದ್ದೇವೆ. ಕಪ್ಪು ಗೋಧಿ ಪುರಾತನವಾದ ಬೆಳೆಯಾಗಿದ್ದು ಸಧ್ಯ ಮಧ್ಯ ಪ್ರದೇಶದಲ್ಲಿ ಮಾತ್ರ ಬೆಳೆಯುತ್ತಿದ್ದು, ಇದು ಔಷಧೀಯಗುಣ ಮತ್ತು ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಅಂಶ ಹೊಂದಿದೆ. ಆ್ಯಂಟಿ ಆಕ್ಸಿಡೆಂಟ್, ವಿಟಿಮಿನ್ ಬಿ, ಪಾಲಿಕ್ ಆ್ಯಸಿಡ್, ಐರನ್, ಕಾಪರ್ ಪೊಟ್ಯಾಷಿಯಂ, ಪೈಬರ್, ಜಿಂಕ್, ಮ್ಯಾಗ್ನೇಷಿಯಂ ಸೇರಿದಂತೆ ಹಲವು ಲವಣಾಂಶಗಳನ್ನ ಹೊಂದಿದೆ. ಹೀಗಾಗಿ ಬಹುತೇಕ ಪೋಷಕಾಂಶಗಳನ್ನು ಹೊಂದಿದ ಈ ಬೆಳೆಗೆ ಬಲು ಬೇಡಿಕೆ ಇದೆ. ಡಯಾಬಿಟಿಸ್ ರೋಗಿಗಳಿಗೆ, ಕ್ಯಾನ್ಸರ್, ರಕ್ತದ ಒತ್ತಡ ಹತೋಟಿಗೆ, ಬಿಪಿ ಇರುವಂತ ರೋಗಿಗಳಿಗೆ ಇದು ರಾಮಬಾಣವಾಗಿದೆ. ಇದೀಗ ಜನತೆ ಆರೋಗ್ಯದ ಕಡೆ ಹೆಚ್ಚಿನ ಗಮನ ನೀಡುತ್ತಿದ್ದು ರೋಗ ನೀರೋಧಕ ಶಕ್ತಿ ಹೊಂದಿರುವ ಕಪ್ಪು ಗೋಧಿಗೆ ಬಾರಿ ಬೇಡಿಕೆ ಬರಬಹುದು. ಅದರ ಬೇಡಿಕೆಯನ್ನು ನೋಡಿಕೊಂಡು ಮತ್ತೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಬೆಳೆ ಬೆಳೆಯಲು ನಿರ್ಧರಿಸಿದ್ದೇನೆ ಎನ್ನುತ್ತಾರೆ ಧರೆಪ್ಪ ಕಿತ್ತೂರ.
ಇದನ್ನೂ ಓದಿ: ಸೂಕ್ತ ಬೆಲೆಯಿಲ್ಲದ ಕಾರಣ ಎರಡು ಎಕರೆ ಎಲೆಕೋಸಿನ ಬೆಳೆ ನಾಶ ಮಾಡಿದ ರೈತ
ಇದನ್ನು ಬೆಳೆಯುವುದರ ಜೊತೆಗೆ ಇದನ್ನು ನಾನು ಮೊದಲು ಬಳಕೆ ಮಾಡಿದ್ದೇನೆ. ಇದು ತುಂಬಾ ಉತ್ತಮವಾದ ಗೋಧಿಯಾಗಿದ್ದು, ಬೆಳೆಯನ್ನು ನಾನು ಬೆಳೆಯುವುದರ ಜೊತೆಗೆ ಇತರೆ ರೈತರಿಗೂ ಇದನ್ನು ಹಂಚಿಕೊಳ್ಳಲು ಇಚ್ಛಿಸುತ್ತೇನೆ. ಕಡಿಮೆ ಖರ್ಚಿನಲ್ಲಿ ಸಾವಯವ ಪದ್ದತಿಯಿಂದ ಗೋಧಿಯನ್ನು ಬೆಳೆದಿದ್ದೇನೆ ಎನ್ನುತ್ತಾರೆ ಧರೆಪ್ಪ.
ಇವರು ಓದಿದ್ದು, 8ನೇ ತರಗತಿ ಆದರೆ ಅವರ ಕೃಷಿಯಲ್ಲಿನ ಪಾಂಡಿತ್ಯ ಹಾಗೂ ಸಾಧಿಸಿದ ಸಾಧನೆ ಅಪಾರ. ತಮ್ಮ ಸ್ವಂತ ಅನುಭವಗಳೊಂದಿಗೆ ಕೃಷಿಯಲ್ಲಿ ಹಲವಾರು ವಿನೂತನ ಪ್ರಯೋಗಗಳನ್ನು ಮಾಡುತ್ತಾ ಸಾವಯವ ಕೃಷಿಯಲ್ಲಿ ಅತಿ ಕಡಿಮೆ ವೆಚ್ಚದಲ್ಲಿ ಲಾಭವನ್ನು ಗಳಿಸುತ್ತಿದ್ದಾರೆ. ಹಲವಾರು ರಾಷ್ಟ್ರೀಯ, ರಾಜ್ಯ ಪ್ರಶಸ್ತಿಗಳನ್ನು ಪಡೆದಿರುವ ಧರೆಪ್ಪ ಅವರ ಸಾಧನೆ ನಿಜಕ್ಕೂ ಇತರೆ ರೈತರಿಗೆ ಮಾದರಿಯಾಗಿದೆ.
ಕಿರಣ ಶ್ರೀಶೈಲ ಆಳಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ
Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ
Belagavi; ಬಹಳ ನೋವಾಗಿದೆ, ನೂರು ಸಿ.ಟಿ.ರವಿ ಬಂದರೂ ಹೆದರುವುದಿಲ್ಲ: ಲಕ್ಷ್ಮೀ ಹೆಬ್ಬಾಳಕರ
Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ
Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
You Tuber: ನೀಲಿ ಚಿತ್ರತಾರೆ ಆಗಲು ಪಿಎಚ್ ಡಿ ಕಲಿಕೆಯನ್ನೇ ತೊರೆದ ಖ್ಯಾತ ಯೂಟ್ಯೂಬರ್
UPSC ವಂಚನೆ ಪ್ರಕರಣ: ಪೂಜಾ ಖೇಡ್ಕರ್ ನಿರೀಕ್ಷಣಾ ಜಾಮೀನಿಗೆ ಹೈಕೋರ್ಟ್ ನಕಾರ
Alnavar: ಟಿಟಿ- ಕ್ಯಾಂಟರ್ ನಡುವೆ ಭೀಕರ ಅಪಘಾತ; ಸ್ಥಳದಲ್ಲಿಯೇ ಮೂವರ ಸಾವು
N.Maharajan: ವಲ್ಲರಸು ನಿರ್ದೇಶಕರ ಚಿತ್ರದಲ್ಲಿ ಶಿವಣ್ಣ ಸಿನಿಮಾ
Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.