ಬನಹಟ್ಟಿಯಿಂದ ಛತ್ತಿಸಗಡಕ್ಕೆ ತೆರಳಲು ಸಜ್ಜಾಗಿದ್ದ ಕಾರ್ಮಿಕರು! ಮನವೊಲಿಸಿದ ಅಧಿಕಾರಿಗಳು
Team Udayavani, May 7, 2020, 6:03 PM IST
ಬನಹಟ್ಟಿ: ರಬಕವಿ ಮಾರ್ಗವಾಗಿ ಇಂದು ಮುಂಜಾನೆ ನಡೆದುಕೊಂಡು ಹೊರಟ ಛತ್ತಿಸಗಡ ಮೂಲದ ಕಾರ್ಮಿಕರನ್ನು ತಡೆದ ಘಟನೆ ಇಲ್ಲಿ ನಡೆದಿದೆ. ರಬಕವಿಯ ಹಜಾರೆ ಟೆಕ್ ಸ್ಟೈಲ್ ನಲ್ಲಿ ಕಟ್ಟಡ ಕೆಲಸಕ್ಕೆ ಆಗಮಿಸಿ ಇಲ್ಲಿಯೇ ಇದ್ದ ಛತ್ತಿಸಗಡದ 28 ಜನ ಕಾರ್ಮಿಕರು ಮೂವರು ಮಕ್ಕಳು ಕೂಡಿಕೊಂಡು ಇಂದು ಊರ ಕಡೆಗೆ ಹೊರಟಿದ್ದರು.
ಈ ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ರಬಕವಿ-ಬನಹಟ್ಟಿ ಗ್ರೇಡ್ -2 ತಹಶೀಲ್ದಾರ ಎಸ್. ಬಿ. ಕಾಂಬಳೆ ಹಾಗೂ ತೇರದಾಳ ಠಾಣೆಯ ಪಿಎಸ್‌ಐ ವಿಜಯ ಕಾಂಬಳೆ ಪರೀಸಿಲಿನೆ ನಡೆಸಿದಾಗ ಯಾರೋ ಛತ್ತಿಸಗಡಕ್ಕೆ ಹೋಗಲು ರೈಲು ಪ್ರಾರಂಭವಾಗಿದೆ ಎಂದು ಹೇಳಿದ್ದರಿಂದ ರಬಕವಿ, ತೇರದಾಳ ಮಾರ್ಗವಾಗಿ ಕುಡಚಿ ರೈಲು ನಿಲ್ದಾಣಕ್ಕೆ ತೆರಳಲು ತಾವು ಕೆಲಸ ಮಾಡುತ್ತಿದ್ದ ಮಾಲೀಕರಿಗೂ ತಿಳಿಸದೇ ಒಮ್ಮೇಲೆ ನಡೆದುಕೊಂಡು ಹೊರಟಿರುವುದಾಗಿ ತಿಳಿದು ಬಂದಿದೆ. ಈ ಸಂದರ್ಭದಲ್ಲಿ ಅಧಿಕಾರಿಗಳು ಸ್ಥಳೀಯ ಹಜಾರೆ ಟೆಕ್ ಸ್ಟೈಲ್ ಮಾಲೀಕರನ್ನು ಕರೆಯಿಸಿ ಕಾರ್ಮಿಕರಿಗೆ ತಿಳುವಳಿಕೆ ಹೇಳಿ ಮತ್ತೇ ಅವರು ತಮ್ಮ ವಾಸಸ್ಥಳಕ್ಕೆ ತೆರಳುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಅಲ್ಲದೇ ಲಾಕ್ ಡೌನ್ ಮುಗಿದು ರೈಲು ಪ್ರಾರಂಭವಾದ ನಂತರ ಅವರನ್ನು ತಮ್ಮ ಸ್ವಗ್ರಾಮಕ್ಕೆ ತೆರಳಲು ತಮ್ಮ ಸ್ವಂತ ಖರ್ಚಿನಿಂದ ಎಲ್ಲ ವ್ಯವಸ್ಥೆಯನ್ನು ಮಾಡಿಕೊಡುವುದಾಗಿ ಹಜಾರೆ ಟೆಕ್ ಸ್ಟೈಲ್ ನ ಮಾಲಿಕರು ತಿಳಿಸಿದ್ದಾರೆ ಎಂದು ಗ್ರೇಡ್-2 ತಹಶೀಲ್ದಾರ ಎಸ್. ಬಿ. ಕಾಂಬಳೆ ಹೇಳಿದರು.
ಸ್ಥಳೀಯ ಹಜಾರೆ ಟೆಕ್ ಸ್ಟೈಲ್ ನ ಮಾಲಿಕರ ಹತ್ತಿರ ಕೆಲಸ ಮಾಡುತ್ತಿರುವ ಕಾರ್ಮಿಕರು ಇವರಾಗಿದ್ದು, ಯಾರೋ ಹೇಳಿದ ಮಾತನ್ನು ಕೇಳಿಕೊಂಡು ಹಜಾರೆ ಟೆಕ್ ಸ್ಟೈಲ್ ನ ಮಾಲಿಕರಿಗೂ ತಿಳಿಸದೇ ತಮ್ಮ ಸ್ವಗ್ರಾಮಕ್ಕೆ ತೆರಳಲು ಸಜ್ಜಾಗಿದ್ದರು. ಲಾಕಡೌನ ಪ್ರಾರಂಭವಾದಾಗಿನಿಂದಲೂ ವರ ಊಟ ವಸತಿ ಸೇರಿದಂತೆ ಎಲ್ಲ ವ್ಯವಸ್ಥೆಯನ್ನು ಅವರೇ ಮಾಡಿದ್ದರು. ಈಗಲೂ ಮಾಡುವಂತೆ ಸೂಚಿಸಿದ್ದೇವೆ ಎಂದು ಗ್ರೇಡ್-2 ತಹಶೀಲ್ದಾರ ಎಸ್. ಬಿ. ಕಾಂಬಳೆ ತಿಳಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.