Banhatti ನನ್ನ ಮಣ್ಣು, ನನ್ನ ದೇಶದ ಬಗ್ಗೆ ಪ್ರತಿಯೊಬ್ಬರಲ್ಲಿ ಅಭಿಮಾನವಿರಲಿ: ಸವದಿ
ಬನಹಟ್ಟಿಯಲ್ಲಿ ಅಮೃತ ಕಳಶಗಳ ಭವ್ಯ ಮೆರವಣಿಗೆ
Team Udayavani, Oct 27, 2023, 7:51 PM IST
ರಬಕವಿ ಬನಹಟ್ಟಿ: ನನ್ನ ಮಣ್ಣು, ನನ್ನ ದೇಶದ ಬಗ್ಗೆ ಪ್ರತಿಯೊಬ್ಬರಲ್ಲಿ ಅಭಿಮಾನವಿರಲಿ, ಮಣ್ಣಿನ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಇದಾಗಿದೆ ಎಂದು ಶಾಸಕ ಸಿದ್ದು ಸವದಿ ತಿಳಿಸಿದರು.
ಶುಕ್ರವಾರ ಸಂಜೆ ಬನಹಟ್ಟಿಯಲ್ಲಿ ನನ್ನ ಮಣ್ಣು ನನ್ನ ದೇಶ ಕಾರ್ಯಕ್ರಮದ ಅಂಗವಾಗಿ ತೇರದಾಳ ಮತಕ್ಷೇತ್ರದಲ್ಲಿ ಸಂಗ್ರಹಿಸಲಾದ ಮಣ್ಣಿನ ಕಳಸಗಳ ಭವ್ಯ ಮೆರವಣಿಗೆಯಲ್ಲಿ ಭಾಗವಹಿಸಿ ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಆಡಳಿತಕ್ಕೆ ಬಂದ ಬಳಿಕ ನಮ್ಮ ದೇಶದ ಹೆಮ್ಮೆಯ ಸೈನಿಕರಿಗೆ ನೆಲೆ, ಬೆಲೆ ಕಲ್ಪಿಸುವ ನಿಟ್ಟಿನಲ್ಲಿ ಹಲವಾರು ಮಹತ್ವದ ನಿರ್ಣಯಗಳನ್ನು, ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಹಾಗೆಯೇ ಭಾರತದ ಸ್ವಾತಂತ್ರ‍್ಯದ ಅಮೃತ ಮಹೋತ್ಸವದ ಸಂದರ್ಭವನ್ನು ಗಮನದಲ್ಲಿ ಇರಿಸಿಕೊಂಡು ಸಹ ಅನೇಕ ಮಹತ್ವದ ನಿರ್ಣಯಗಳನ್ನು ಕಾರ್ಯರೂಪಕ್ಕೆ ತಂದಿದ್ದಾರೆ. ಇದೀಗ ನಮ್ಮ ದೇಶಕ್ಕಾಗಿ ದೇಹ ತ್ಯಾಗ ಮಾಡಿದ ಮಹಾತ್ಮ ಯೋಧರಿಗೆ ಗೌರವ ಸಲ್ಲಿಸಲು, ಜನಮಾನಸದಲ್ಲಿ ಹುತಾತ್ಮ ಯೋಧರ ಬಗ್ಗೆ ಆದರಾಭಿಮಾನಗಳನ್ನು ಹೆಚ್ಚಿಸಲು ಮಹತ್ವದ ಕಾರ್ಯವೊಂದಕ್ಕೆ ನಮ್ಮ ನೆಚ್ಚಿನ ಪ್ರಧಾನಿಗಳು ಹೆಜ್ಜೆ ಇರಿಸಿದ್ದಾರೆ.
ಹಾಗೆಯೇ ಈ ಅಭಿಯಾನದ ಮೂಲಕ ಗಿಡಗಳನ್ನು ನೆಟ್ಟು, ದೇಶವಾಸಿಗಳಿಗೆ ಹಸಿರೇ ಉಸಿರು ಎಂಬ ಸಂದೇಶವನ್ನು ಮೋದಿ ಸರಕಾರ ಸಾರಲು ಹೊರಟಿದೆ. ಆ ನಿಟ್ಟಿನಲ್ಲಿ ನಮ್ಮ ಸುತ್ತಮುತ್ತಲೀನ ಮಣ್ಣನ್ನು ಸಂಗ್ರಹಿಸಿ ನೀಡಲಾಗುತ್ತಿದೆ. ಇದೊಂದು ಅಭೂತ ಪೂರ್ವ ಕಾರ್ಯಕ್ರಮವಾಗಿದೆ ಎಂದರು.
ನಗರದ ಮುಖಂಡ ಶಿವಾನಂದ ಗಾಯಕವಾಡ ಮಾತನಾಡಿ, ವಿಶೇಷತೆಯನ್ನು ಹೊಂದಿದ ಮಣ್ಣಿನೊಂದಿಗೆ ಭಾವನಾತ್ಮಕ ಸಂಬಂಧ ಬೆಳೆಯಲಿ ಎಂಬ ಉದ್ದೇಶದಿಂದ ಪ್ರಧಾನಿ ಮೋದಿ ಅಮೃತವಾಟಿಕೆಯನ್ನು ನಿರ್ಮಾಣ ಮಾಡುತ್ತಿದ್ದಾರೆ. ಇದು ದೇಶದ ಹೆಮ್ಮೆಯ ಸೈನಿಕರಿಗೆ ನೆಲೆ, ಬೆಲೆ ಹೆಚ್ಚಿಸುವ ಕಾರ್ಯವಾಗಿದೆ. ಭಾರತದ ಸ್ವಾತಂತ್ರ‍್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಇಂಥ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬನಹಟ್ಟಿ ಹಿರೇಮಠದ ಶರಣ ಬಸವ ಶಿವಾಚಾರ್ಯರು ಮಾತನಾಡಿದರು.
ಬನಹಟ್ಟಿಯ ಶ್ರೀ ಕಾಡಸಿದ್ದೇಶ್ವರ ದೇವಸ್ಥಾನದಿಂದ ನಗರದ ಮಂಗಳವಾರ ಪೇಟೆ, ಸೋಮವಾರ ಪೇಟೆ ಮಾರ್ಗವಾಗಿ ಕುಂಭ ಹೊತ್ತ ಮಹಿಳೆಯರೊಂದಿಗೆ ಭವ್ಯ ಮೆರವಣಿಗೆ ಮೂಲಕ ಮಣ್ಣಿನ ಕಳಸಗಳನ್ನು ಜಿಲ್ಲೆಯ ಮೂಲಕ ದೆಹಲಿಗೆ ಕಳುಹಿಕೊಡಲಾಯಿತು.
ಧರೆಪ್ಪ ಉಳ್ಳಾಗಡ್ಡಿ, ಸುರೇಶ ಅಕ್ಕಿವಾಟ, ಈರಣ್ಣ ಚಿಂಚಖಂಡಿ, ಅಶೋಕ ರಾವಳ, ಸಿದ್ದನಗೌಡ ಪಾಟೀಲ, ಶ್ರೀಶೈಲ ಯಾದವಾಡ, ಆನಂದ ಕಂಪು, ಲಕ್ಕಪ್ಪ ಪಾಟೀಲ, ಮಹಾದೇವ ಕೋಟ್ಯಾಳ, ಶ್ರೀಶೈಲ ಬೀಳಗಿ, ರೇವಪ್ಪ ಗುಣಕಿ, ಮೀನಾಕ್ಷಿ ಸವದಿ, ಸವಿತಾ ಹೊಸೂರ, ಶಿವಾನಂದ ಗುಂಡಿ, ಪವಿತ್ರಾ ತುಕ್ಕನ್ನವರ, ಶಿವಾನಂದ ಕಾಗಿ, ಶಿವಾನಂದ ಬುದ್ನಿ, ಜಯಪ್ರಕಾಶ ಸೊಲ್ಲಾಪುರ, ರವಿ ಕೊರ್ತಿ, ಪಿ. ಜ. ಕಾಖಂಡಕಿ, ಮಹಾವೀರ ಕೊಕಟನೂರ, ಪುಂಡಲಿಕ ಪಾಲಬಾಂವಿ, ಪಾಂಡುರಂಗ ಸಾಲ್ಗುಡೆ, ಭೀಮಸಿ ಪಾಟೀಲ, ಚಂದ್ರಶೇಖರ ಮಿರ್ಜಿ, ಗೌರಿ ಮಿಳ್ಳಿ, ಸುವರ್ಣ ಕೊಪ್ಪದ, ವೈಷ್ಣವಿ ಬಾಗೇವಾಡಿ, ಶಶಿಕಲಾ ಸಾರವಾಡ, ವಿದ್ಯಾ ಧಬಾಡಿ, ಅನುರಾಧಾ ಹೊರಟ್ಟಿ ಸೇರಿದಂತೆ ಅನೇಕರು ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.