ಆಂಬ್ಯುಲೆನ್ಸ್ ಕೊಟ್ಟಿಲ್ಲ; ಪ್ರಚಾರಕ್ಕೆ ಬ್ಯಾಂಕ್ ಬಳಕೆ
ಲಕ್ಷ್ಮೀ ಸಹಕಾರಿ ಬ್ಯಾಂಕಿನ ಶೇರುದಾರರ ಆರೋಪ
Team Udayavani, Jun 16, 2021, 3:25 PM IST
ಗುಳೇದಗುಡ್ಡ: ಪಟ್ಟಣದ ಲಕ್ಷ್ಮೀ ಸಹಕಾರಿ ಬ್ಯಾಂಕಿನ ಶತಮಾನೋತ್ಸವ ಕಾರ್ಯಕ್ರಮ ನಡೆದು ಎರಡು ವರ್ಷ ಕಳೆದರೂ ಇದುವರೆಗೂ ಷೇರುದಾರರಿಗೆ ಬೆಳ್ಳಿ ನಾಣ್ಯ ಕೊಟ್ಟಿಲ್ಲ. ಸೇವಾ ಭಾರತಿಗೆ ಆಂಬ್ಯುಲೆನ್ಸ್ ಕೊಟ್ಟಿಲ್ಲ. ಸ್ಮರಣ ಸಂಚಿಕೆ ಹೊರತಂದಿಲ್ಲ. ಬ್ಯಾಂಕಿನ ಅಧ್ಯಕ್ಷರು, ಆಡಳಿತ ಮಂಡಳಿ ಕೇವಲ ತಮ್ಮ ಪ್ರಚಾರಕ್ಕೆ ಬ್ಯಾಂಕ್ ಬಳಸಿಕೊಂಡಂತಿದೆ ಎಂದು ಲಕ್ಷ್ಮೀ ಸಹಕಾರಿ ಬ್ಯಾಂಕಿನ ಶೇರುದಾರರಾದ ಸಂತೋಷ ನಾಯನೇಗಲಿ, ರಾಜು ಚಿತ್ತರಗಿ ದೂರಿದ್ದಾರೆ.
ಪಟ್ಟಣದಲ್ಲಿ ಮಂಗಳವಾರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಲಕ್ಷ್ಮೀ ಸಹಕಾರಿ ಬ್ಯಾಂಕ್ ಜಿಲ್ಲೆಯಲ್ಲಿಯೇ ಹಳೆಯ ಬ್ಯಾಂಕ್ ಇದಾಗಿದ್ದು, ಶತಮಾನೋತ್ಸವ ಸಮಯದಲ್ಲಿ ಸೇವಾಭಾರತಿಗೆ ಆಂಬ್ಯುಲೆನ್ಸ್ ಕೊಡುವುದಾಗಿ ಭರವಸೆ ನೀಡಿತ್ತು. ಆದರೆ, ಇದುವರೆಗೂ ಕೊಟ್ಟಿಲ್ಲ. ಕೋವಿಡ್ ಸಮಯದಲ್ಲಿ ಜನರಿಗೆ ಆಂಬ್ಯುಲೆನ್ಸ್ ಎಷ್ಟು ಉಪಯೋಗವಾಗುತ್ತಿತ್ತು, ಆದರೆ, ಆ ಕಾರ್ಯ ಮಾಡಲಿಲ್ಲ ಎಂದರು. ಬೆಳ್ಳಿ ನಾಣ್ಯ ಇಲ್ಲ: ಶತಮಾನೋತ್ಸವ ಸಮಾರಂಭದ ಸವಿನೆನಪಿಗಾಗಿ ಪ್ರತಿ ಶೇರುದಾರರಿಗೆ ಬೆಳ್ಳಿ ನಾಣ್ಯವನ್ನು ಉಡುಗೊರೆಯಾಗಿ ನೀಡುವುದಾಗಿ ಶೇರುದಾರರಿಂದ ಹಿಂದಿನ ವಾರ್ಷಿಕ ಮಹಾಸಭೆಯಲ್ಲಿ ಒಪ್ಪಿಗೆ ಪಡೆದು ಭರವಸೆ ನೀಡಿದ್ದರು. ಆದರೆ, ಇದುವರೆಗೂ ಬೆಳ್ಳಿ ನಾಣ್ಯ ಕೊಟ್ಟಿಲ್ಲ. ಅಲ್ಲದೇ ಶತಮಾನೋತ್ಸವ ಸಮಾರಂಭ ಮುಗಿದ ಬಳಿಕ ಶೇರುದಾರರಿಗೆ ಹಾಗೂ ಆಯಾ ಸಮಿತಿಯ ಪದಾ ಧಿಕಾರಿಗಳಿಗೆ ಸಂಗ್ರಹಿಸಿದ ಹಾಗೂ ಖರ್ಚು ಮಾಡಿದ ಹಣದ ಲೆಕ್ಕಪತ್ರವನ್ನು ಇಂದಿನವರೆಗೂ ನೀಡಿಲ್ಲ. ಎಲ್ಲವೂಗಳ ಬಗ್ಗೆ ಇಂದಿನ ಹಾಗೂ ಹಿಂದಿನ ಆಡಳಿತ ಮಂಡಳಿ ಉತ್ತರಿಸಬೇಕು ಎಂದರು.
ಬರಹಗಾರರು, ಸಾಹಿತಿ, ಕವಿಗಳಿಂದ ಲೇಖನ, ಕವಿತೆಗಳನ್ನು ಆಹ್ವಾನಿಸಿದ್ದರು. ಅಲ್ಲದೇ ಸ್ಮರಣ ಸಂಚಿಕೆ ಹೊರತರುವ ಉದ್ದೇಶದಿಂದ ಜಾಹೀರಾತು ಪ್ರಕಟಣೆ ಮುಖಾಂತರ ಸಾರ್ವಜನಿಕರು, ಸಂಘ-ಸಂಸ್ಥೆಗಳ ಮುಖಾಂತರ ಹಣ ಸಂಗ್ರಹಿಸಲಾಗಿತ್ತು. ಆದರೆ ಇದುವರೆಗೂ ಸ್ಮರಣ ಸಂಚಿಕೆ ಹೊರಬಂದಿಲ್ಲ. ಲೇಖನ ನೀಡಿದ ಬರಹಗಾರರಿಗೆ ಹಾಗೂ ಬ್ಯಾಂಕಿನ ಓದುಗ ಗ್ರಾಹಕರು ಹಾಗೂ ಶೇರುದಾರರಿಗೆ ಅವಮಾನಿಸಿದಂತಾಗಿದೆ ಎಂದರು.
ಶ್ರೀಕಾಂತ ಮಲಜಿ ಮಾತನಾಡಿ, ನೇಕಾರರ ಅಭಿವೃದ್ಧಿಗೆ, ನೇಕಾರರ ಆರ್ಥಿಕ ಸದೃಢತೆಗಾಗಿ ಶೇ. 3ರ ಬಡ್ಡಿದರದಲ್ಲಿ ಸಾಲ ನೀಡುವ ಸರ್ಕಾರದ ಯೋಜನೆ ಜಾರಿಗೆ ತರಲಿಲ್ಲ. ಕೋವಿಡ್ ಸಮಯದಲ್ಲಿ ಬ್ಯಾಂಕಿನ ಬಡ ಶೇರುದಾರರಿಗೆ ಸಹಾಯ ಮಾಡಲಿಲ್ಲ ಎಂದರು. ಸುದ್ದಿಗೋಷ್ಠಿಯಲ್ಲಿ ಸುಧಿಧೀರ ಗುಡ್ಡದ, ರಾಘು ಪತ್ತಾರ, ಪ್ರಕಾಶ ಮದ್ದಾನಿ, ಸಚಿನ ರಾಂಪುರ, ವಿನಾಯಕ ಕತ್ತಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kulageri Cross: ಹೂಳು ತುಂಬಿದ ಕಾಲುವೆ…ಪೋಲಾಗುತ್ತಿದೆ ಮಲಪ್ರಭಾ ಎಡದಂಡೆ ಕಾಲುವೆ ನೀರು…
New year : ಬಾಗಲಕೋಟೆ ಜಿಲ್ಲೇಲಿ ಅಭಿವೃದ್ಧಿ ಬಾಗಿಲು ತೆರೆಯಲಿ-ಸ್ಥಳಾಂತರವಾಗಬೇಕಿದೆ ಐಹೊಳೆ!
Rabakavi: ಬ್ರಹ್ಮಾನಂದ ಉತ್ಸವ; ಗಮನ ಸೆಳೆದ ರೊಟ್ಟಿ ಜಾತ್ರೆ
Bagalkot : ಸಕಲ ಸರ್ಕಾರಿ ಗೌರವಗಳೊಂದಿಗೆ ಯೋಧ ಮಹೇಶ್ ಮರೆಗೊಂಡ ಅಂತ್ಯಸಂಸ್ಕಾರ
ಪತ್ನಿ ಊರಿನತ್ತ ಪ್ರಯಾಣ ಬೆಳೆಸಿದರೆ… ಸಾವಿನ ಮನೆಯ ಕದ ತಟ್ಟಿದ ಯೋಧ ನಾಗಪ್ಪ ಮರೆಗೊಂಡ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Protest: ಆಶಾ ಕಾರ್ಯಕರ್ತೆಯರು ಪ್ರತಿಭಟಿಸದಂತೆ ಮನವೊಲಿಸುವ ಹೊಣೆ ಜಿಲ್ಲಾಧಿಕಾರಿಗಳಿಗೆ
Convention: ಮೊಗವೀರರ ಬೇಡಿಕೆ ಮುಂದಿನ ಬಜೆಟ್‌ನಲ್ಲಿ ಈಡೇರಿಸಲು ಬದ್ಧ: ಸಿದ್ದರಾಮಯ್ಯ
Kerala: ಬಾಲಕಿ ಮೇಲೆ ಅತ್ಯಾಚಾ*ರ: ಕೇರಳ ಯುವಕನಿಗೆ 87 ವರ್ಷ ಶಿಕ್ಷೆ
Kundapura: ಗೋಸಾಗಾಟ ತಡೆದ ಸಿಸಿಟಿವಿ ವೀಕ್ಷಣೆ
Horoscope: ಈ ರಾಶಿಯ ಅವಿವಾಹಿತರಿಗೆ ಯೋಗ್ಯ ಸಂಗಾತಿ ಸಿಗುವ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.