ಉಭಯ ವೈದ್ಯ ಲಿಂ| ಅಮರೇಶ್ವರ ದೇವರು
Team Udayavani, Jun 1, 2019, 12:34 PM IST
ಗುಳೇದಗುಡ್ಡ: ಗವಾಯಿಗಳ ಆಶ್ರಮದಲ್ಲಿ ಸಂಗೀತ ಅಭ್ಯಾಸ ಸಾಕೆನಿಸಿ ಆತ್ಮಜ್ಞಾನದ ಶೋಧಕ್ಕಾಗಿ ಹೊರಟ ಸಿದ್ಧರಾಮರು ಉಭಯವೈದ್ಯರಾಗಿ ಅವರೇ ಮುಂದೆ ಕಷ್ಟ ಹೇಳಿಕೊಂಡು ಬರುವ ಭಕ್ತರಿಗೆ ಅಮರೇಶ್ವರ ಶ್ರೀಗಳೆಂದು ಖ್ಯಾತರಾಗಿ ಕಷ್ಟ ಪರಿಹರಿಸುವ ಕಲಿಯುಗ ಕಾಮಧೇನುವಾದರು.
ಮೂಲತಃ ತುಮಕೂರಿನವರಾದ ಶ್ರೀ ಅಮರೇಶ್ವರ ಸ್ವಾಮಿಗಳು (ಸಿದ್ಧರಾಮಯ್ಯನವರು) ಕೋಟೆಕಲ್-ಗುಳೇದಗುಡ್ಡ ಹತ್ತಿರ 1954ರಲ್ಲಿ ಅಮರೇಶ್ವರ ಮಠ ಪ್ರತಿಷ್ಠಾಪಿಸಿದ ಲಿಂ| ಅಮರೇಶ್ವರ ಮಹಾಸ್ವಾಮಿಗಳು ಪೂರ್ವದಲ್ಲಿ ಲಾಯದಗುಂದಿ ಅಮರೇಶ್ವರ ಕೊಳ್ಳದಲ್ಲಿ ತಪಸ್ಸನ್ನಾಚರಿಸಿ ಆರ್ಯುವೇದ ಔಷಧಗಳ ಮೂಲಕ ಅಸಾಧ್ಯ ರೋಗಗಳನ್ನು ನಿವಾರಣೆ ಮಾಡುತ್ತಿದ್ದರು. ಆಧ್ಯಾತ್ಮ, ತತ್ವೋಪದೇಶ ಮೂಲಕ ಜನರಿಗೆ ಆತ್ಮ ತತ್ವವನ್ನು ಬೋಧಿಸಿ ಉಭಯ ವೈದ್ಯ, ಭಕ್ತರ ಆರಾಧ್ಯ ದೇವರೆಂದು ಪ್ರಸಿದ್ಧಿ ಪಡೆದಿದ್ದರು.
ಹಿನ್ನೆಲೆ: ಗಾನಯೋಗಿ ಪಂಚಾಕ್ಷರಿ ಗವಾಯಿಗಳು ಗಜೇಂದ್ರಗಡದಲ್ಲಿ ಸಂಗೀತ ಪಾಠಶಾಲೆ ನಡೆಸುತ್ತಿದ್ದರು. ಸಿದ್ದರಾಮಯ್ಯನವರು ಅಲ್ಲಿ ಸಂಗೀತ ಅಭ್ಯಸಿಸುತ್ತಿದ್ದರು. ಆದರೆ ಆಗ ಅಲ್ಲಿ ಪ್ಲೇಗ್ ರೋಗ ಹಬ್ಬಿತ್ತು. ಪರಿಣಾಮ ಗವಾಯಿಗಳು ತಮ್ಮ ಎಲ್ಲ ಶಿಷ್ಯರನ್ನು ತಮ್ಮ ತಮ್ಮ ಊರಿಗೆ ತೆರಳಲು ಸೂಚಿಸಿದರು. ಅದರಂತೆ ಎಲ್ಲರೂ ತೆರಳಿದರು ಆದರೆ ಸಿದ್ಧರಾಮಯ್ಯನವರು ಗಚ್ಚಪ್ಪ ಮಲ್ಲಪ್ಪ ಗೊರವರ ಅವರ ಜತೆ ಗುಳೇದಗುಡ್ಡ ಹತ್ತಿರದ ಲಾಯದಗುಂದಿ ಗ್ರಾಮಕ್ಕೆ ತೆರಳಿದರು. ನಂತರ ಎರಡು ವರ್ಷ ಸಂಗೀತಾಭ್ಯಾಸ ಮಾಡಿದರು. ಆಧ್ಯಾತ್ಮ ಕಡೆ ಹೆಚ್ಚು ಒಲವು ಮೂಡಿದಾಗ ಅಮರೇಶ್ವರ ಶ್ರೀಗಳು ಗಚ್ಚಪ್ಪನವರಿಗೆ ಇಲ್ಲಿ ಎಲ್ಲಿಯಾದರೂ ಪ್ರಶಾಂತವಾದ ಸ್ಥಳವಿದೆಯೇ ಎಂದು ಕೇಳಿದಾಗ ಅಮರೇಶ್ವರ ಕೊಳ್ಳವಿದೆ ಎಂದು ಉತ್ತರಿಸಿದರು. ಆಗ ಸಿದ್ಧರಾಮಯ್ಯನವರು ಅಮರೇಶ್ವರ ಕೊಳ್ಳಕ್ಕೆ ತೆರಳಿ ಅಲ್ಲಿಯೇ ನೆಲೆಸಿ ಇಪ್ಪತ್ತು ವರ್ಷಗಳ ಕಾಲ ಕಠೊರ ತಪ್ಪಸನ್ನಾಚರಿಸಿದರು. ಮುಂದೆ ಆಯುರ್ವೇದ ಪಂಡಿತರಾಗಿ ಜನರ ರೋಗ ರುಜಿನುಗಳನ್ನು ಪರಿಹರಿಸಿದರು. ಹೀಗೆ ಭಕ್ತರ ಕಷ್ಟಗಳನ್ನು ನಿವಾರಿಸುತ್ತ ಅಮರೇಶ್ವರ ಕೊಳ್ಳದಲ್ಲಿ ನೆಲೆಸಿದ್ದರಿಂದ ಅಮರೇಶ್ವರ ಸ್ವಾಮಿಗಳೆಂದೇ ಖ್ಯಾತನಾಮರಾದರು.
ಮುಂದೆ ಕೋಟೆಕಲ್-ಗುಳೇದಗುಡ್ಡ ಭಕ್ತರ ಇಚ್ಛೆಯ ಮೇರೆಗೆ ಮಠ ಸ್ಥಾಪಿಸಿ ಹತ್ತು ಹಲವು ಲೋಕಕಲ್ಯಾಣದ ಸೇವೆ ಮಾಡುತ್ತ ಬಂದರು. ನಂತರ ತೋಗುಣಶಿ ಪುರಾಣಮಠದ ವೇ| ಸಿದ್ದಯ್ಯನವರು ಮತ್ತು ಸಾವಂತ್ರಮ್ಮನವರ ದ್ವಿತೀಯ ಪುತ್ರರಾದ ಚಂದ್ರಶೇಖರಯ್ಯನವರನ್ನು ಶ್ರೀ ಅಮರೇಶ್ವರ ಮಠದ ಉತ್ತರಾಧಿಕಾರಿಯನ್ನಾಗಿ ನೇಮಿಸಿಕೊಂಡರು. ಮುಂದೆ ಅಮರೇಶ್ವರ ಸ್ವಾಮಿಗಳು 1969ರಂದು ಲಿಂಗೈಕ್ಯರಾದಾಗ ಶ್ರೀ ಚಂದ್ರಶೇಖರಯ್ಯನವರು ಈ ಮಠದ ಪಟ್ಟಾಧ್ಯಕ್ಷರಾಗಿ 1970 ಜೂನ್ 1ರಂದು ಅಧಿಕಾರ ವಹಿಸಿಕೊಂಡರು. ಹುಬ್ಬಳ್ಳಿಯ ಹನ್ನೆರಡುಮಠದ ಮಡಿವಾಳ ಶಿವಾಚಾರ್ಯ ಸ್ವಾಮಿಗಳು ಇವರಿಗೆ ಪಟ್ಟಾಧಿಕಾರ ಅನುಗ್ರಹಿಸಿದರು. ಮುಂದೆ 19 ವರ್ಷಗಳ ಕಾಲ ಶ್ರೀಗಳವರು ಪಟ್ಟಾಧ್ಯಕ್ಷರಾಗಿದ್ದರು. ಕಾಶಿಯಲ್ಲಿ ಉನ್ನತ ವ್ಯಾಸಂಗ ಮಾಡಿದರು. ಮುಂದೆ ಇವರೇ ಕಾಶೀ ಪೀಠಕ್ಕೆ ಜಗದ್ಗುರುಗಳಾದರು. ಅವರೇ ಸದ್ಯದ ಕಾಶೀ ಜಗದ್ಗುರು ಡಾ| ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು.
ಮುಂದೆ ತೆರವಾದ ಶ್ರೀಮಠಕ್ಕೆ ವಿಜಯಪುರದ ಡಾ| ಶಿವಾನಂದ ಶಿವಾಚಾರ್ಯರು ಪಟ್ಟಾಧಿಕಾರಿಗಳನ್ನಾಗಿ ಅಧಿಕಾರ ವಹಿಸಿಕೊಡಲಾಯಿತು. ಆದರೆ ಅವರು ತುಮಕೂರು ಹಿರೇಮಠದ ಪಟ್ಟಾಧ್ಯಕ್ಷರಾಗಿ ಹೋದ ನಂತರ ತೆರವಾದ ಈ ಮಠದ ಉಸ್ತುವಾರಿಯನ್ನು ಶ್ರೀ ವೇದಮೂರ್ತಿ ಬಸಯ್ಯ ಸ್ವಾಮಿಗಳೇ ನೋಡಿಕೊಳ್ಳುತ್ತಿದ್ದರು. ರಂಭಾಪುರಿ ಪೀಠದ ಶಾಖಾಮಠವಾದ ಶ್ರೀ ಅಮರೇಶ್ವರಮಠವು ಲಿಂ| ಅಮರೇಶ್ವರ ಸ್ವಾಮಿಗಳ ಸದಿಚ್ಛೆಯಂತೆ ಪುತ್ರ ವರ್ಗ ಪರಂಪರೆಗೆ ಹೊಂದಿಕೊಂಡಿದ್ದು, ಸದ್ಯ ತೋಗುಣಶಿ ಪುರಾಣಮಠದ ವೇ| ಶಂಕ್ರಯ್ಯ ಮತ್ತು ದ್ರಾಕ್ಷಾಯಿಣಿ ದಂಪತಿಯ ತೃತೀಯ ಸುಪುತ್ರ ನೀಲಕಂಠ ಸ್ವಾಮಿಗಳು ಶ್ರೀ ಅಮರೇಶ್ವರ ಮಠದ ಮಠಾಧಿಪತಿಗಳಾಗಿ ಮಠವನ್ನು ಮುನ್ನ್ನಡೆಸುತ್ತಿದ್ದಾರೆ.
•ಮಲ್ಲಿಕಾರ್ಜುನ ಕಲಕೇರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ration Card: ಅನರ್ಹರಿಗೆ ಬಿಪಿಎಲ್ ಕಾರ್ಡ್ ಕೊಡಲ್ಲ, ಅರ್ಹರಿಗೆ ತಪ್ಪಿಸಲ್ಲ: ಸಿದ್ದರಾಮಯ್ಯ
Bagalakote: ಅನರ್ಹರ ಬಿಪಿಎಲ್ ಕಾರ್ಡ್ ಗಳು ಮಾತ್ರ ರದ್ದು: ಸಿಎಂ ಸಿದ್ದರಾಮಯ್ಯ
ಕಾಡಂಚಿನ ರೈತರ ಅರಣ್ಯರೋದನ; ಬೇರೆಯವರ ಜಮೀನಿನಲ್ಲಿ ದುಡಿಯಬೇಕಾದ ಸ್ಥಿತಿ
ಕೇವಲ 12 ರೂ.ಗೆ ಬಿಸಿ ಜುನುಕಾ ರೊಟ್ಟಿ ಊಟ:!ಶಿಕ್ಷಕ ಬಸವರಾಜ ಜಾಲೋಜಿ ನಿಸ್ವಾರ್ಥ ಸೇವೆ
ಲೋಕಾಪುರ: ಬಿಡಾಡಿ ದನಗಳ ಕಾಟಕ್ಕೆ ಜನ ಹೈರಾಣ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.