ರಬಕವಿ-ಬನಹಟ್ಟಿ: ಭಗತ್ ಸಿಂಗ್ ಯುವ ಪೀಳಿಗೆಗೆ ಸ್ಪೂರ್ತಿ: ವಿದ್ಯಾಧರ ಸವದಿ
Team Udayavani, Sep 28, 2022, 2:56 PM IST
ರಬಕವಿ- ಬನಹಟ್ಟಿ: ಕ್ರಾಂತಿವೀರ ಭಗತ್ ಸಿಂಗ್ ಇಂದಿನ ಯುವ ಪೀಳಿಗೆಗೆ ಸ್ಪೂರ್ತಿಯಾಗಿದ್ದಾರೆ ಎಂದು ಬಾಗಲಕೋಟೆ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ವಿದ್ಯಾಧರ ಸವದಿ ಹೇಳಿದರು.
ಅವರು ಸೆ.28ರ ಬುಧವಾರ ಬನಹಟ್ಟಿಯ ಸೋಮವಾರಪೇಟೆಯ ಭಗತ್ ಸಿಂಗ್ ಯುವಕ ಸಂಘದವರು ಹಮ್ಮಿಕೊಂಡ ಭಗತ್ ಸಿಂಗ್ ಅವರ 115ನೇ ಜನ್ಮದಿನೋತ್ಸವದ ಪ್ರಯುಕ್ತ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಭಗತ್ ಸಿಂಗರ ಆದರ್ಶವನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ. ನಮ್ಮ ನಾಡಿನ ಎಲ್ಲ ಯುವಕರು ಭಗತ್ ಸಿಂಗ್‌ರ ರಾಷ್ಟ್ರಪ್ರೇಮ, ರಾಷ್ಟ್ರಭಕ್ತಿಯನ್ನ ಮೈಗೂಡಿಸಿಕೊಂಡು ರಾಷ್ಟ್ರಕ್ಕಾಗಿ ಕೆಲಸ ಮಾಡಬೇಕು ಎಂದು ಹೇಳಿದರು.
ಹಿಂದೂ ಸಂಘಟನೆ ಮುಖಂಡ ಶಿವಾನಂದ ಗಾಯಕವಾಡ ಮಾತನಾಡಿ, ಭಗತ್ ಸಿಂಗ್ ದೇಶಕ್ಕಾಗಿ ಹೇಗೆ ಬದುಕಬೇಕು ಎಂಬುದನ್ನು ತೋರಿಸಿ ಕೊಟ್ಟಿದ್ದಾರೆ. ಕೇವಲ ನನ್ನ ಶರೀರವನ್ನು ಕೊಲ್ಲಬಹುದು ಆದರೆ ನನ್ನ ಆಲೋಚನೆಯನ್ನು ಅಲ್ಲ. ಅದು ಎಂದೆಂದಿಗೂ ಚಿರಾಯು ಎಂದು ಭಗತ್ ಸಿಂಗ್ ಹೇಳಿದ್ದರು ಎಂದು ಗಾಯಕವಾಡ ತಿಳಿಸಿದರು.
ಸಮಾರಂಭದ ದಿವ್ಯ ಸಾನಿದ್ಯವನ್ನು ಬನಹಟ್ಟಿಯ ಹಿರೇಮಠದ ಶರಣ ಬಸವ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಿದ್ದರು.
ಈ ಸಂದರ್ಭದಲ್ಲಿ ಬ್ರಿಜ್ ಮೋಹನ ಡಾಗಾ, ಬಸವರಾಜ ಗಾಯಕವಾಡ, ಪ್ರಶಾಂತ ಕೊಳಕಿ, ರಾಚು ಶಿರೋಳ, ಬಸವರಾಜ ಗಾಯಕವಾಡ, ರೇವಪ್ಪ ಗುಣಕಿ, , ಭಗತಸಿಂಗ ಯುವಕ ಸಂಘದ ಆನಂದ ಜಗದಾಳ, ಮಲ್ಲು ಶಿರೋಳ, ಸುನೀಲ ಬೆಂಗೂಡಗಿ, ಸದಾಶಿವ ಪರೀಟ, ರವಿ ಸಾರವಾಡ, ಶೇಖರ ಸಾರವಾಡ, ದುಂಡಪ್ಪ ಶೇಡ್ಯಾಳ, ಸೋಮು ಬೀಳಗಿ, ಮಲ್ಲು ಮರಿಜಾಡರ, ಕಾಡು ಕೋಮಾಜಿ ಸೇರಿದಂತೆ ಅನೇಕರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Politicss; 1008 ಸಾಧುಸಂತರ ಪಾದಪೂಜೆ ಮೂಲಕ ಕ್ರಾಂತಿವೀರ ಬ್ರಿಗೇಡ್ ಗೆ ಚಾಲನೆ: ಈಶ್ವರಪ್ಪ
India: ಒಂದು ದೇಶ ಒಂದು ಚುನಾವಣೆ ಜಾರಿ ಆಗಲಿ: ಪೇಜಾವರ ಸ್ವಾಮೀಜಿ
Rabkavi Banahatti: ಲೋಕ ಅದಾಲತ್ ನಲ್ಲಿ ಒಂದಾದ ದಂಪತಿಗಳು
ವಿಳಾಸ ಕೇಳುವ ನೆಪದಲ್ಲಿ ವ್ಯಕ್ತಿಯ ಕೊರಳಲ್ಲಿದ್ದ ಚಿನ್ನದ ಚೈನ್ ಕದ್ದ ಅಪರಿಚಿತ ವ್ಯಕ್ತಿ
Mudhol: ಬಸ್ ಗೆ ಡಿಕ್ಕಿ ಹೊಡೆದ ಬೈಕ್… ಸವಾರರಿಗೆ ಗಂಭೀರ ಗಾಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.