ದೇಶದ ಅತಿ ದೊಡ್ಡ ಮಾಸ್ಕ್ ನಾಡಿದ್ದು ಅನಾವರಣ
ಶ್ರೀಶೈಲ ಮಲ್ಲಿಕಾರ್ಜುನ ಪಾದಯಾತ್ರೆಯಲ್ಲಿ ಕೋವಿಡ್ ಜಾಗೃತಿ
Team Udayavani, Mar 27, 2021, 3:24 PM IST
ಅಮೀನಗಡ: ಅತಿ ದೊಡ್ಡ ಮಾಸ್ಕ್ ಸಿದ್ಧಗೊಂಡಿದ್ದು, ಶ್ರೀಶೈಲ ಮಲ್ಲಿಕಾರ್ಜುನ ಪಾದಯಾತ್ರೆಯಲ್ಲಿ ಅನಾವರಣಗೊಳ್ಳಲಿದೆ. ಪಟ್ಟಣದಿಂದ ಶ್ರೀಶೈಲ ಪಾದಯಾತ್ರೆಗೆ ಹೊರಡುವ ಭಕ್ತರು ಈ ಬಾರಿ ಪಾದಯಾತ್ರೆಯಲ್ಲಿ ಕೋವಿಡ್ ಜಾಗೃತಿ ಮೂಡಿಸಲು 8 ಅಡಿ ಉದ್ದ, 6 ಅಡಿ ಅಗಲಹೊಂದಿದ ದೇಶದ ಅತಿ ದೊಡ್ಡ ಮಾಸ್ಕ್ತಯಾರಿಸಿದ್ದು, ಪಾದಯಾತ್ರೆಯುದ್ದಕ್ಕೂವಿವಿಧ ಪ್ರಮುಖ ನಗರಗಳಲ್ಲಿ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ.
ರಸ್ತೆಯುದ್ದಕ್ಕೂ ಮಾಸ್ಕ್ ವಿತರಿಸುವ ಇವರು ಸ್ಯಾನಿಟೈಸರ್ ಬಳಕೆ ಮತ್ತುಸಾಮಾಜಿಕ ಅಂತರ ಕಾಪಾಡಿಕೊಳ್ಳುವಕುರಿತಂತೆ ಮೈಕ್ ಮೂಲಕ ಕೊರೊನಾಜಾಗೃತಿ ಅಭಿಯಾನ ಕೈಗೊಳ್ಳಲು ಸಿದ್ಧತೆನಡೆಸಿದ್ದು, ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
ಬೆಂಗಳೂರಿನ ಅಮ್ಮಾ ಫೌಂಡೇಶನ್‌ಮತ್ತು ಪಟ್ಟಣದ ಶ್ರೀಶೈಲ ಭಕ್ತರು ಶ್ರೀಶೈಲಮಲ್ಲಿಕಾರ್ಜುನ ಪಾದಯಾತ್ರೆಯಲ್ಲಿಧಾರ್ಮಿಕ ಹಾಗೂ ಕೊರೊನಾ ಜಾಗೃತಿಮೂಡಿಸಲು, ಸಾಮಾಜಿಕ ಕಳಕಳಿ ಚಟುವಟಿಕೆ ಕೈಗೊಳ್ಳಲು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ.
ರಾರಾಜಿಸಲಿದೆ 108 ಅಡಿ ಮಲ್ಲಯ್ಯನ ಧ್ವಜ: ಪಟ್ಟಣದಿಂದ ಶ್ರೀಶೈಲಪಾದಯಾತ್ರೆಗೆ ಹೋಗುವ ಮಲ್ಲಯ್ಯನಭಕ್ತರು ಸುಮಾರು 108 ಅಡಿ ಉದ್ದದಮಲ್ಲಯ್ಯ ಧ್ವಜವನ್ನೂ ಸಿದ್ಧಪಡಿಸಿದ್ದು, ಪಾದಯಾತ್ರೆಯಲ್ಲಿಧಾರ್ಮಿಕ ಜಾಗೃತಿಕೈಗೊಳ್ಳಲು ವಿಶೇಷ ತಯಾರಿ ನಡೆಸಿದ್ದಾರೆ.
ಅಸ್ಲಂನ ಕೈಚಳಕ: ಮಲ್ಲಯ್ಯನ ಧ್ವಜಕ್ಕೆ ಗದಗ ಜಿಲ್ಲೆಯ ಸ್ಯಾಟಿನ್ ಬಟ್ಟೆ ಬಳಸಲಾಗಿದ್ದು, ಬಾಗಲಕೋಟೆಯ ಖ್ಯಾತ ಕಲಾವಿದ ಅಸ್ಲಂ ಕಲಾದಗಿ ಹಾಗೂ ರವೀಂದ್ರ ಬಂಡಿ ಬಟ್ಟೆಯ ಮೇಲೆ ಆಕರ್ಷಕವಾದ ಮಲ್ಲಯ್ಯನ ಚಿತ್ರ ಮತ್ತು ಮಾಸ್ಕ್ ಜಾಗೃತಿ ಸಂದೇಶ ಬಿಡಿಸಿದ್ದಾರೆ.
ಬೆಂಗಳೂರಿನಿಂದಲೂ ಬರುತ್ತಾರೆ ಭಕ್ತರು: ಪಟ್ಟಣದ ಉದ್ಯಮಿ ಮಂಜುನಾಥಬಂಡಿ ರಾಜಧಾನಿ ಬೆಂಗಳೂರಿಗೂಈ ಭಕ್ತಿಯ ನಂಟು ಹಚ್ಚಿಸಿದ್ದಾರೆ.ಬೆಂಗಳೂರಿನ ಅಮ್ಮಾ ಫೌಂಡೇಶನ್ ಮತ್ತುಪಟ್ಟಣದ ಶ್ರೀಶೈಲ ಭಕ್ತರು ಕಳೆದ 7 ವರ್ಷಗಳಿಂದ ಅಮೀನಗಡದಿಂದ ಶ್ರೀಶೈಲ ಮಲ್ಲಿಕಾರ್ಜುನ ಪಾದಯಾತ್ರೆ ಮಾಡುತ್ತಾರೆ. ಪಟ್ಟಣದಿಂದಲೂ ಸುಮಾರು 200 ಭಕ್ತರುಶ್ರೀಶೈಲಕ್ಕೆ ಪಾದಯಾತ್ರೆ ಮಾಡುತ್ತಾರೆ.ದಾರಿಯುದ್ದಕ್ಕೂ ದಾಸೋಹ: ಪಟ್ಟಣದಿಂದ ಹೋಗುವ ಪಾದಯಾತ್ರೆ ಶ್ರೀಶೈಲಮಲ್ಲಿಕಾರ್ಜುನ ದೇವಸ್ಥಾನ ತಲುಪುವರೆಗೂದಾರಿಯುದ್ದಕ್ಕೂ ದಾಸೋಹ ನಡದೇಇರುತ್ತದೆ. ವಿವಿಧ ರೀತಿಯ ಸೇವೆ ಮಾಡುವಮುಖ್ಯಸ್ಥರಿಗೆ ಅಮ್ಮಾ ಫೌಂಡೇಶನ್ ಮತ್ತುಅಮೀನಗಡ ಶ್ರೀಶೈಲ ಭಕ್ತರ ಪರವಾಗಿಸನ್ಮಾನಿಸಿ ದಾಸೋಹ ಕುರಿತು ಜಾಗೃತಿ ಮಾಡಲಾಗುತ್ತಿದೆ.
ಮಾ.29ರಂದು 108 ಅಡಿ ಉದ್ದದ ಧ್ವಜ- ದೇಶದ ಅತಿ ದೊಡ್ಡ ಮಾಸ್ಕ್ ಅನಾವರಣ :
ಶ್ರೀಶೈಲ ಪಾದಯಾತ್ರೆಯಲ್ಲಿ ಧಾರ್ಮಿಕ ಹಾಗೂ ಕೊರೊನಾ ಜಾಗೃತಿ ಮೂಡಿಸಲು 108ಅಡಿ ಉದ್ದದ ಮಲ್ಲಯ್ಯನ ಧ್ವಜ ಹಾಗೂ ದೇಶದ ಅತಿ ದೊಡ್ಡ ಮಾಸ್ಕ್ ಅನಾವರಣಕಾರ್ಯಕ್ರಮ ಮಾ.29ರಂದು ಸಂಜೆ 4ಕ್ಕೆ ನಡೆಯಲಿದೆ. ಸಂಸದ ಪಿ.ಸಿ.ಗದ್ದಿಗೌಡರಅನಾವರಣಗೊಳಿಸಲಿದ್ದು, ಗಚ್ಚಿನಮಠದ ಶಂಕರರಾಜೇಂದ್ರ ಸ್ವಾಮೀಜಿ, ಶ್ರೀಶೈಲಜಗದ್ಗುರು ಪೀಠದ ಶಾಖಾಮಠ ಸಂಡೂರ ತಾಲೂಕಿನ ಅಂತಾಪುರದ ಕುಮಾರಪಂಡಿತಾರಾಧ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಬೆಂಗಳೂರಿನ ನಾಗಾರ್ಜುನವಿವಿಯ ನಿರ್ದೇಶಕ ಮನೋಹರ ಸರೋಜಿ, ರಾಷ್ಟ್ರೀಯ ಆಟಗಾರ ರೋಹಿತಕೆಂಪೇಗೌಡ, ರಾಷ್ಟ್ರೀಯ ಆಟಗಾರ್ತಿ ಪ್ರಮೀಳಾ ಗಟ್ಟಿ, ಸಂಪನ್ಮೂಲ ವ್ಯಕ್ತಿ ರಮೇಶಉಮ್ರಾಣಿ, ಜ್ಞಾನಜ್ಯೋತಿ ಕಾಲೇಜ್ ಪ್ರಾಚಾರ್ಯ ರಮೇಶ ಸೇರಿದಂತೆ ಪಟ್ಟಣದಗಣ್ಯರಿಂದ 150 ಕೆಜಿ ಹೂಗಳ ಪುಷ್ಪಾರ್ಚನೆ ಮೂಲಕ ಪಥ ಸಂಚಲನ ನಡೆಯಲಿದೆ ಎಂದು ಉದ್ಯಮಿ ಮಂಜುನಾಥ ಬಂಡಿ ತಿಳಿಸಿದ್ದಾರೆ.
-ಎಚ್.ಎಚ್.ಬೇಪಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಬೆಳಗಾವಿ: ಮಾನವ ಕಳ್ಳ ಸಾಗಾಣಿಕೆ-ಜೀತ ಪದ್ಧತಿ ದೊಡ್ಡ ಸಮಸ್ಯೆ
Belagavi: ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ
Shimoga; ವಿಜಯೇಂದ್ರರನ್ನು ಕಟ್ಟಿ ಹಾಕಲು ಕಾಂಗ್ರೆಸ್ ನಿಂದ ಸುಳ್ಳು ಆರೋಪ: ರಾಘವೇಂದ್ರ
Anandapura: ಸಾಲ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ
Shimoga: ಎಸ್ಐಟಿ ರಚನೆ ಮೂಲಕ ಕಾಂಗ್ರೆಸ್ ಹಗೆ ತೀರಿಸಿಕೊಳ್ಳುತ್ತಿದೆ: ಆರಗ ಜ್ಞಾನೇಂದ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.