ಅಲೆಮಾರಿ ಕುಟುಂಬಗಳಿಗೆ ಆಹಾರ ಧಾನ್ಯ-ಮಾಸ್ಕ್ ವಿತರಣೆ
Team Udayavani, Apr 7, 2020, 7:01 PM IST
ಬೀಳಗಿ: ಪಟ್ಟಣದಲ್ಲಿರುವ ಅಲೆಮಾರಿ ಕುಟುಂಬಗಳ ಜೋಪಡಿ ಸ್ಥಳಕ್ಕೆ ಸೋಮವಾರ ಜಿಪಂ ಸಿಇಒ ಗಂಗೂಬಾಯಿ ಮಾನಕರ ಭೇಟಿ ನೀಡಿ, ಎಲ್ಲ ಕುಟುಂಬಗಳಿಗೆ ಆಹಾರ ಧಾನ್ಯ, ಮಾಸ್ಕ್ ಹಾಗೂ ಐದು ಜನಕ್ಕೆ ನರೇಗಾ ಜಾಬ್ ಕಾರ್ಡ್ ಮತ್ತು ಎರಡು ಕುಟುಂಬಕ್ಕೆ ಪಡಿತರ ಚೀಟಿ ನೀಡಿದರು.
ಬಳಿಕ ಮಾತನಾಡಿದ ಅವರು, ಗುಡಿಸಲಲ್ಲಿ ವಾಸಿಸುತ್ತಿರುವ ಇಲ್ಲಿನ ಅಲೆಮಾರಿ ಕುಟುಂಬಗಳಿಗೆ ಹೆಗ್ಗೂರ ಗ್ರಾಪಂನವರು 2 ಕೆಜಿ ಅಕ್ಕಿ, 1 ಕೆಜಿ ಬ್ಯಾಳಿ ಹಾಗೂ 1 ಕೆಜಿ ಸಕ್ಕರೆ ನೀಡಿದ್ದಾರೆ. ಈಗಾಗಲೇ ಐದು ಜನರಿಗೆ ಉದ್ಯೋಗ ಖಾತ್ರಿ ಜಾಬ್ ಕಾರ್ಡ್ ನೀಡಲಾಗಿದ್ದು, ದಿನಕ್ಕೆ 275 ರೂ. ವೇತನ ದೊರೆಯಲಿದೆ. ಲಾಕ್‌ಡೌನ್ ಅವಧಿ ಮುಗಿದ ನಂತರವೂ ಮತದಾರರ ಗುರುತಿನ ಚೀಟಿ ಹಾಗೂ ಆಧಾರ್ ಹೊಂದಿರುವ ಎಲ್ಲ ಕುಟುಂಬಗಳಿಗೂ ಪಡಿತರ ಚೀಟಿ ಮತ್ತು ಯಾರು ಉದ್ಯೋಗ ಮಾಡಲು ಬಯಸುತ್ತಾರೋ ಅಂತವರಿಗೆ ನರೇಗಾ ಜಾಬ್ ಕಾರ್ಡ್ ಕೂಡ ನೀಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ತಹಶೀಲ್ದಾರ್ ಭೀಮಪ್ಪ ಅಜೂರ, ತಾಪಂ ಇಒ ಎಂ.ಕೆ. ತೊದಲಬಾಗಿ, ಪಪಂ ಮುಖ್ಯಾ ಕಾರಿ ದೇವೀಂದ್ರ ಧನಪಾಲ, ಹೆಗ್ಗೂರ ಗ್ರಾಪಂ ಅಧ್ಯಕ್ಷೆ ಇಂದ್ರವ್ವ ಮದಗುಣಕಿ, ಪಿಡಿಒ ಬಿ.ಬಿ.ಇಟಗಿ, ಆಹಾರ ಶಿರಸ್ತೇದಾರ ಡಿ.ಜಿ. ಪೂಜಾರಿ, ಗ್ರಾಪಂ ಸದಸ್ಯ ಕಿರಣ ಬಾಳಗೋಳ, ಪ್ರಕಾಶ ಲಮಾಣಿ, ಈರಣ್ಣ ಗಿಡ್ಡಪ್ಪಗೋಳ, ಮಲ್ಲಯ್ಯ ಸುರಗಿಮಠ, ವಿಠ್ಠಲ ಗಡ್ಡದ, ನಿಂಗಪ್ಪ ದಂಧರಗಿ, ಮುತ್ತು ಬೋರ್ಜಿ ಇತರರು ಇದ್ದರು. ಅಲೆಮಾರಿ ಕುಟುಂಬಗಳ ಸ್ಥಿತಿ ಕುರಿತು ಉದಯವಾಣಿಯಲ್ಲಿ ವರದಿ ಪ್ರಕಟಗೊಂಡಿತ್ತು. ವರದಿಗೆ ಸ್ಪಂದಿಸಿದ ಜಿಪಂ ಸಿಇಒ ನೆರವು ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ration Card: ಅನರ್ಹರಿಗೆ ಬಿಪಿಎಲ್ ಕಾರ್ಡ್ ಕೊಡಲ್ಲ, ಅರ್ಹರಿಗೆ ತಪ್ಪಿಸಲ್ಲ: ಸಿದ್ದರಾಮಯ್ಯ
Bagalakote: ಅನರ್ಹರ ಬಿಪಿಎಲ್ ಕಾರ್ಡ್ ಗಳು ಮಾತ್ರ ರದ್ದು: ಸಿಎಂ ಸಿದ್ದರಾಮಯ್ಯ
ಕಾಡಂಚಿನ ರೈತರ ಅರಣ್ಯರೋದನ; ಬೇರೆಯವರ ಜಮೀನಿನಲ್ಲಿ ದುಡಿಯಬೇಕಾದ ಸ್ಥಿತಿ
ಕೇವಲ 12 ರೂ.ಗೆ ಬಿಸಿ ಜುನುಕಾ ರೊಟ್ಟಿ ಊಟ:!ಶಿಕ್ಷಕ ಬಸವರಾಜ ಜಾಲೋಜಿ ನಿಸ್ವಾರ್ಥ ಸೇವೆ
ಲೋಕಾಪುರ: ಬಿಡಾಡಿ ದನಗಳ ಕಾಟಕ್ಕೆ ಜನ ಹೈರಾಣ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.