ಕಾರ್ಖಾನೆ ಸ್ಫೋಟ: 4 ಸಾವು
Team Udayavani, Dec 17, 2018, 6:05 AM IST
ಮುಧೋಳ (ಬಾಗಲಕೋಟೆ): ಮಾಜಿ ಸಚಿವ, ಬೀಳಗಿ ಕ್ಷೇತ್ರದ ಬಿಜೆಪಿ ಶಾಸಕ ಮುರುಗೇಶ ನಿರಾಣಿ ಒಡೆತನದ ಸಕ್ಕರೆ ಕಾರ್ಖಾನೆಯ ಇಟಿಪಿ ಡಿಸ್ಟಿಲರಿ ಘಟಕದಲ್ಲಿ ಸ್ಫೋಟ ಸಂಭವಿಸಿ ನಾಲ್ವರು ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದು, ಎಂಟು ಜನರು ಗಂಭೀರವಾಗಿ ಗಾಯಗೊಂಡ ಘಟನೆ ರವಿವಾರ ಸಂಭವಿಸಿದೆ.
ಡಿಸ್ಟಿಲರಿ ಘಟಕದ ವ್ಯವಸ್ಥಾಪಕ ಶರಣಪ್ಪ ತೋಟದ (35), ಫಿಲ್ಟರ್ ನಿರ್ವಹಣೆ ಕಾರ್ಯ ಮಾಡುತ್ತಿದ್ದ ನಾಗಪ್ಪ ಬಾಳಪ್ಪ ಧರ್ಮಟ್ಟಿ (45), ಯಂತ್ರದ ಆಪರೇಟರ್‌ಗಳಾದ ಶಿವಯ್ಯ ಈರಯ್ಯ ಹೊಸಮಠ (40), ಜಗದೀಶ ಶಂಕರ ಪಟ್ಟಣಶೆಟ್ಟಿ (32) ಮೃತರಾದವರು. ಇತರ ಎಂಟು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ರಜೆ ಇದ್ದುದರಿಂದ ತಂದೆಯ ಜತೆ ಕಾರ್ಖಾನೆಗೆ ಬಂದಿದ್ದ 9ರ ಹರೆಯದ ಬಾಲಕ ಮನೋಜ ಶಿವಾನಂದ ಗಾಯಗೊಂಡಿದ್ದಾನೆ. ಈತ ಹೊರಗಡೆ ನಿಂತಿದ್ದಾಗ ಕಲ್ಲು ಬಡಿದಿತ್ತು. ಈತನ ತಂದೆ ಸ್ಫೋಟದಲ್ಲಿ ಸಾವಿಗೀಡಾಗಿದ್ದಾರೆ.
ಘಟನೆ ನಡೆದದ್ದು ಹೇಗೆ?
ಮುಧೋಳ ನಗರ ಹೊರವಲಯದಲ್ಲಿ ನಿರಾಣಿ ಸಕ್ಕರೆ ಕಾರ್ಖಾನೆ ಇದ್ದು, ಅದರ ಪಕ್ಕದಲ್ಲಿ ಡಿಸ್ಟಿಲರಿ ಕಾರ್ಖಾನೆ ಇದೆ. ಸಕ್ಕರೆ ಉತ್ಪಾದನೆ ಬಳಿಕ ಹೊರ ಬರುವ ರಾಸಾಯನಿಕ ಕಚ್ಚಾ ವಸ್ತುಗಳನ್ನು ಪ್ರತ್ಯೇಕಿಸಿ ಶುದ್ಧೀಕರಿಸುವ ಪ್ರತ್ಯೇಕ ಘಟಕವಿದೆ. ಈ ಘಟಕದಲ್ಲಿ ಸ್ಫೋಟ ಸಂಭವಿಸಿದೆ. 10 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ ಇಟಿಪಿ ಘಟಕ (ಇಪಿಲೆಂಟ್ ಥರ್ಮಿಟ್ ಪ್ಲಾಂಟ್)ದಲ್ಲಿ ಎಥೆನಾಲ್ ಪೂರೈಸುವ ಪೈಪ್‌ನಲ್ಲಿ ಗ್ಯಾಸ್ ತಟಸ್ಥಗೊಂಡ (ಬ್ಲಾಕ್) ಕಾರಣ ಈ ಸ್ಫೋಟ ಸಂಭವಿಸಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. 2 ಅಂತಸ್ತಿನ ಕಟ್ಟಡ ಪೂರ್ಣ ಕುಸಿದು ಬಿದ್ದಿದೆ.
ಕಾರ್ಯಾಚರಣೆ
ಘಟನೆ ಮಾಹಿತಿ ತಿಳಿಯುತ್ತಿದ್ದಂತೆ ಬೆಳಗಾವಿ ವಲಯದ ಐಪಿಜಿ ರೇವಣ್ಣ, ಜಿಲ್ಲಾಧಿಕಾರಿ ಕೆ.ಜಿ. ಶಾಂತಾರಾಂ, ಎಸ್ಪಿ ಸಿ.ಬಿ. ರಿಷ್ಯಂತ, ವಿಜಯಪುರ ಎಸ್ಪಿ ಪ್ರಕಾಶ ನಿಕ್ಕಮ್, ಜಮಖಂಡಿ ಡಿವೈಎಸ್ಪಿ ಆರ್.ಕೆ. ಪಾಟೀಲ, ಸಿಪಿಐ ಕರೆಯಪ್ಪ ಬನ್ನಿ ಸಹಿತ ಮುಧೋಳ ತಹಶೀಲ್ದಾರ್, ಅಗ್ನಿ ಶಾಮಕ ಸಿಬಂದಿ ಸ್ಥಳಕ್ಕೆ ದೌಡಾಯಿಸಿ ರಕ್ಷಣಾ ಕಾರ್ಯಾಚರಣೆ ಕೈಗೊಂಡರು. ಮೇಲ್ಛಾವಣಿ ಸಂಪೂರ್ಣ ಕುಸಿದು ಬಿದ್ದ ಪರಿಣಾಮ ಅದನ್ನು ತುಂಡರಿಸಿ ತೆಗೆಯುವ ಕಾರ್ಯ ನಡೆಯುತ್ತಿದೆ. ಅಲ್ಲದೇ ಎರಡು ಹಿಟಾಚಿ, ನಾಲ್ಕೈದು ಜೆಸಿಬಿ ಯಂತ್ರಗಳು, ಸುಮಾರು 80ಕ್ಕೂ ಹೆಚ್ಚು ವಿವಿಧ ಸಿಬಂದಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.
ಮದುವೆಗೆ ಹೊರಟವ ಕಾರ್ಖಾನೆಗೆ ಬಂದು ಮೃತಪಟ್ಟ !
ಕಾರ್ಖಾನೆಯಲ್ಲಿ ಕೆಲಸ ಮಾಡುವ ಯಡಹಳ್ಳಿ ಗ್ರಾಮದ ಶಿವಯ್ಯ ಹೊಸಮಠ ಹತ್ತಿರದ ಸಂಬಂಧಿಗಳ ಮದುವೆ ನಿಮಿತ್ತ ಕೆಲಸಕ್ಕೆ ರಜೆ ಹಾಕಿದ್ದ. ತನ್ನ ಪುತ್ರ ಮನೋಜ ಜತೆಗೆ ಬೆಳಗ್ಗೆ ಮುಧೋಳಕ್ಕೆ ಬಂದಿದ್ದ ಶಿವಯ್ಯ ಹೊಸಮಠ ಅವರೊಂದಿಗೆ ಕೆಲಸ ಮಾಡುವ ಇತರ ಕಾರ್ಮಿಕರು ಹತ್ತು ನಿಮಿಷ ಬಂದು ಹೋಗು ಎಂದು ಹೇಳಿದ್ದರಂತೆ. ತನ್ನೊಂದಿಗಿನ ಸಹ ಕಾರ್ಮಿಕರು ಕರೆದ ಹಿನ್ನೆಲೆಯಲ್ಲಿ ಪುತ್ರನೊಂದಿಗೆ ಕಾರ್ಖಾನೆಗೆ ಆಗಮಿಸಿದ್ದ ಶಿವಾನಂದ, ಪುತ್ರನನ್ನು ಹೊರಗೆ ನಿಲ್ಲಿಸಿ ತಾನು ಕಾರ್ಖಾನೆಯ ಒಳಗೆ ಹೋಗಿದ್ದ. ಇದೇ ವೇಳೆ ಘಟನೆ ನಡೆದಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ತನಿಖೆಗೆ ಸಿಎಂ ಆದೇಶ
ಬೆಂಗಳೂರು: ಮುಧೋಳ ಸ್ಫೋಟ ಘಟನೆಗೆ ಸಂಬಂಧಿಸಿದಂತೆ ಸಿಎಂ ಕುಮಾರಸ್ವಾಮಿ ತನಿಖೆಗೆ ಆದೇಶಿಸಿದ್ದಾರೆ. ಈ ಕುರಿತು ವರದಿ ನೀಡುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದು, ಘಟನೆ ಕುರಿತು ದುಃಖ ವ್ಯಕ್ತಪಡಿಸಿದ್ದಾರೆ.
ದುರ್ಘಟನೆಯಿಂದ ಮನಸ್ಸಿಗೆ ದುಃಖ ವಾಗಿದೆ. ಇದರ ಹಿಂದೆ ಕಾಣದ ಕೈಗಳ ಕೈವಾಡವಿದೆ ಎಂಬ ಶಂಕೆ ಇದೆ. ಸಮಗ್ರ ಪರಿಶೀಲನೆ ಆಗಬೇಕು. ಮೃತಪಟ್ಟವರ ಕುಟುಂಬಕ್ಕೆ ಕಾರ್ಖಾನೆಯಿಂದ ತಲಾ 5 ಲಕ್ಷ ರೂ. ಪರಿಹಾರ ನೀಡುತ್ತೇವೆ. ಗಾಯಾಳುಗಳ ವೈದ್ಯಕೀಯ ವೆಚ್ಚ ಸಂಪೂರ್ಣ ಭರಿಸಲಾಗುವುದು.
– ಮುರಗೇಶ ನಿರಾಣಿ, ಬಿಜೆಪಿ ಶಾಸಕ, ನಿರಾಣಿ ಉದ್ಯಮ ಸಮೂಹದ ಸಂಸ್ಥಾಪಕ ಅಧ್ಯಕ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
By Election: ಶಿಗ್ಗಾಂವಿ ಸವಿ ಬೊಮ್ಮಾಯಿ ಪುತ್ರನಿಗೋ, ಯಾಸಿರ್ ಪಠಾಣಗೋ?
King Cobra: “ಕಾಳಿಂಗ’ ಸರ್ಪಕ್ಕೆ ಕನ್ನಡದ್ದೇ ವೈಜ್ಞಾನಿಕ ಹೆಸರು!
By Election: ಚನ್ನಪಟ್ಟಣದಲ್ಲಿ ಎಚ್.ಡಿ.ದೇವೇಗೌಡ Vs ಡಿ.ಕೆ.ಶಿವಕುಮಾರ್ ಮೇಕೆದಾಟು ಜಟಾಪಟಿ
By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್.ಡಿ.ದೇವೇಗೌಡ
Karnataka: ಅರಣ್ಯದಲ್ಲಿ ನಿರಂತರ ಗಣಿ ಚಟುವಟಿಕೆಗೆ ಅನುಮತಿ?
MUST WATCH
ಹೊಸ ಸೇರ್ಪಡೆ
By Election: ಶಿಗ್ಗಾಂವಿ ಸವಿ ಬೊಮ್ಮಾಯಿ ಪುತ್ರನಿಗೋ, ಯಾಸಿರ್ ಪಠಾಣಗೋ?
King Cobra: “ಕಾಳಿಂಗ’ ಸರ್ಪಕ್ಕೆ ಕನ್ನಡದ್ದೇ ವೈಜ್ಞಾನಿಕ ಹೆಸರು!
Mysuru:’ಕರ್ನಾಟದಲ್ಲಿ “ಗ್ಯಾರಂಟಿ’ ಹೆಸರಲ್ಲಿ ಲೂಟಿ, ಮಹಾರಾಷ್ಟ್ರದಲ್ಲಿ ನೀವು ಘೋಷಿಸಬೇಡಿ’
By Election: ಚನ್ನಪಟ್ಟಣದಲ್ಲಿ ಎಚ್.ಡಿ.ದೇವೇಗೌಡ Vs ಡಿ.ಕೆ.ಶಿವಕುಮಾರ್ ಮೇಕೆದಾಟು ಜಟಾಪಟಿ
Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.