ಭರವಸೆ ಮೂಡಿಸಿದ ಬೊಮ್ಮಾಯಿ ಭೇಟಿ!
Team Udayavani, Aug 22, 2021, 6:01 PM IST
ಭರವಸೆ ಮೂಡಿಸಿದ ಬೊಮ್ಮಾಯಿ ಭೇಟಿ!ಶ್ರೀಶೈಲ ಕೆ. ಬಿರಾದಾÃಬಾಗಲಕೋಟೆ: ಮುಖ್ಯಮಂತ್ರಿಯಾದ ಬಳಿಕಮೊದಲ ಬಾರಿಗೆ ಅವಳಿ ಜಿಲ್ಲೆಯ ಮಧ್ಯೆ ಇರುವಆಲಮಟ್ಟಿ ಜಲಾಶಯಕ್ಕೆ ಬಾಗಿನ ಅರ್ಪಿಸಲುಆಗಮಿಸಿದ್ದ ಬಸವರಾಜ ಬೊಮ್ಮಾಯಿ ಅವರು,ಯುಕೆಪಿ ಯೋಜನೆ ಹಾಗೂ ಕೃಷ್ಣಾ ನದಿ ನೀರುಹಂಚಿಕೆ ಕುರಿತು ಆಡಿದ ಮಾತುಗಳು ಈ ಭಾಗದಜನರಲ್ಲಿ ಒಂದಷ್ಟು ಭರವಸೆ ಮೂಡಿಸಿವೆ.ಹೌದು, ಈ ಹಿಂದೆ ಸ್ವತಃ ಜಲ ಸಂಪನ್ಮೂಲಸಚಿವರಾಗಿದ್ದ ಬೊಮ್ಮಾಯಿ, ಕೃಷ್ಣಾ ಮೇಲ್ದಂಡೆಯೋಜನೆಯ ಆಳಗಲ ತಿಳಿದವರು.
ಅವರುಸಚಿವರಾಗಿದ್ದಾಗ ಈ ಭಾಗದ ಪುನರ್‌ವಸತಿಕೇಂದ್ರಗಳ ಸಮಗ್ರ ಅಭಿವೃದ್ಧಿಗೆ ಸುಮಾರು 197ಕೋಟಿ ಅನುದಾನ ಕೂಡ ನೀಡಿದ್ದರು.ಜತೆಗೆ ಯುಕೆಪಿ 3ನೇ ಹಂತದಯೋಜನೆಗೆ 17,208 ಕೋಟಿ ಮೊತ್ತಕ್ಕೆಅನುಮೋದನೆ ಕೂಡ ಪಡೆದಿದ್ದರು.ಆದರೆ, ಅದು ಅಂದುಕೊಂಡಂತೆಆಗಲಿಲ್ಲ. 2010ರಲ್ಲಿ ಕೈಗೊಂಡ ಆನಿರ್ಣಯ, 2021 ಬಂದರೂ ಆಗಿಲ್ಲ.17 ಸಾವಿರ ಕೋಟಿಯಲ್ಲಿ ಮುಗಿಯಬೇಕಿದ್ದಈ ಯೋಜನೆ, ಇದೀಗ 50 ಸಾವಿರ ಕೋಟಿದಾಟಿದೆ.
ಭೂಸ್ವಾಧೀನ, ಪುನರ್‌ವಸತಿ, ಪುನರ್‌ನಿರ್ಮಾಣ, ನೀರಾವರಿ ಯೋಜನೆ ಹೀಗೆ ಎಲ್ಲಹಂತದ ಕಾಮಗಾರಿಗೆ 1 ಲಕ್ಷ ಕೋಟಿ ಅನುದಾನಬೇಕಾಗುತ್ತದೆ ಎಂದು ಅಂದಾಜಿಸಲಾಗಿದೆ.ಹೀಗಾಗಿ ಸ್ಪಷ್ಟತೆ ಇಲ್ಲದೇ ಯುಕೆಪಿ ಯೋಜನೆಕುಂಟುತ್ತಲೇ ಸಾಗುತ್ತಿದೆ.ರಾಷ್ಟ್ರೀಯ ಯೋಜನೆಗೆ ಪ್ರಯತ್ನ:ದೇಶದಲ್ಲೇ ಅತಿದೊಡ್ಡ ಹಾಗೂ ಸುಮಾರು ಆರುದಶಕಗಳಿಂದ ನಿಧಾನಗತಿಯಲ್ಲಿ ನಡೆಯುತ್ತಿರುವಕೃಷ್ಣಾ ಮೇಲ್ದಂಡೆ ಯೋಜನೆಗೆ ವೇಗ ಬೇಕಿದೆ.
ಜತೆಗೆ ಅಗತ್ಯ ಅನುದಾನವೂ ಬೇಕಿದೆ. 1 ಲಕ್ಷಕೋಟಿ ಅನುದಾನ ಒಂದೇ ಕಂತಿನಲ್ಲಿ ನೀಡುವಷ್ಟುಸಶಕ್ತ ಆರ್ಥಿಕಸಾಮರ್ಥ್ಯ ರಾಜ್ಯ ಸರ್ಕಾರಕ್ಕೂಇಲ್ಲ. ಹೀಗಾಗಿ ಇದಕ್ಕೆ ಕೇಂದ್ರಸರ್ಕಾರದಿಂದಲೂ ಆರ್ಥಿಕ ನೆರವುಬೇಕು. ಅದಕ್ಕಾಗಿ ಯುಕೆಪಿಯನ್ನುರಾಷ್ಟ್ರೀಯ ಯೋಜನೆಯನ್ನಾಗಿಘೋಷಿಸಬೇಕು. ಆಗ ಮಾತ್ರಕೇಂದ್ರ ಸರ್ಕಾರ ಅನುದಾನ ಕೊಡಲುಸಾಧ್ಯ. ಅದಕ್ಕೂ ಮುಂಚೆ ಇದನ್ನುರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸಿದರೆ,ಉತ್ತರಕರ್ನಾಟಕಕ್ಕೆ ಆಗುವ ಸಾಧಕ-ಬಾಧಕಗಳಕುರಿತು ಅಧ್ಯಯನಕ್ಕೆ ಬೊಮ್ಮಾಯಿ ಸರ್ಕಾರನಿರ್ಧರಿಸಿದ್ದು, ಇದು ಉತ್ತಮ ನಡೆ ಕೂಡ.ರಾಷ್ಟ್ರೀಯ ಯೋಜನೆ ಘೋಷಣೆಯ ಬಳಿಕಕೇಂದ್ರ ಸರ್ಕಾರವೂ ಆರ್ಥಿಕ ನೆರವು ಕೊಡಲಿದೆ.ಆದರೆ, ಕೃಷ್ಣಾ ನದಿ ನೀರು ಬಳಕೆಯ ವಿಷಯದಲ್ಲಿಕೇಂದ್ರ ಸರ್ಕಾರ, ಪ್ರತ್ಯೇಕ ಯೋಜನೆಗಳುರೂಪಿಸಿದರೆ ಅದು ಈ ಭಾಗಕ್ಕೆ ಆಗುವ ತೊಂದರೆ.ಈಗಾಗಲೇ ಯುಕೆಪಿ 3ನೇ ಹಂತದಲ್ಲಿ 9 ಉಪಯೋಜನೆಗಳಿದ್ದು, ಅವು ಪೂರ್ಣಗೊಳ್ಳಬೇಕಿದೆ.
22 ಗ್ರಾಮಗಳ ಸ್ಥಳಾಂತರ, 1.36 ಲಕ್ಷ ಎಕರೆಭೂಮಿಗೆ ಪರಿಹಾರ ಹೀಗೆ ಈಗಾಗಲೇ ಇರುವಯೋಜನೆಗಳಿಗೆ ಕೇಂದ್ರ ನೆರವಾದರೆ ಯಾವುದೇಬಾಧಕ ಇಲ್ಲ. ಅನುದಾನ ಕೊಟ್ಟ ತಕ್ಷಣ, ಹಿಡಿತಸಾಧಿಸಿದರೆ ಅದು ನಮ್ಮ ಭಾಗಕ್ಕೆ ಲಾಭಕ್ಕಿಂತತೊಂದರೆಯೇ ಹೆಚ್ಚು ಎಂಬುದು ತಜ್ಞರಅಭಿಪ್ರಾಯ.ಇದೆಲ್ಲವನ್ನೂ ಸೂಕ್ಷ್ಮವಾಗಿ ಅರಿತಿರುವ ಸಿಎಂಬೊಮ್ಮಾಯಿ, ಇದಕ್ಕಾಗಿಯೇ ತಾಂತ್ರಿಕ ಹಾಗೂನೀರಾವರಿ ತಜ್ಞರು, ಹಿರಿಯ ಅಧಿಕಾರಿಗಳಿಂದವರದಿ ತರಿಸಿಕೊಳ್ಳಲು ನಿರ್ಧರಿಸಿದ್ದು, ಅದಕ್ಕೆನಿರ್ದಿಷ್ಟ ಗಡುವು ನೀಡಿದ್ದಾರೆ.ಅವಳಿ ಜಿಲ್ಲೆಯ ಜನಪ್ರತಿನಿಧಿಗಳ ಸಭೆ: ಯುಕೆಪಿ3ನೇ ಹಂತದ ಕಾಮಗಾರಿ ಪೂರ್ಣಗೊಳಿಸಲುವಿಜಯಪುರ ಹಾಗೂ ಬಾಗಲಕೋಟೆ ಅವಳಿಜಿಲ್ಲೆಗಳ ಸಂಸದರು, ಶಾಸಕರು, ವಿಧಾನಪರಿಷತ್‌ಸದಸ್ಯರು ಒಳಗೊಂಡ ವಿಶೇಷ ಸಭೆಯನ್ನುಸ್ವತಃ ಮುಖ್ಯಮಂತ್ರಿ ಬೊಮ್ಮಾಯಿ ನೇತೃತ್ವದಲ್ಲಿನಡೆಸಲು ನಿರ್ಧರಿಸಿದ್ದಾಗಿ ಶನಿವಾರಆಲಮಟ್ಟಿಯಲ್ಲಿ ತಿಳಿಸಿದ್ದಾರೆ.
ಹೈಪವರ್ ಕಮೀಟಿ ಸಭೆಗೂ ಮುನ್ನ ಈ ಸಭೆನಡೆಸಿ, ಹಲವು ಸಾಧಕ-ಬಾಧಕಗಳ ಹಾಗೂಯುಕೆಪಿ ಯೋಜನೆ ನಿರ್ದಿಷ್ಟ ಪ್ರಮಾಣದಲ್ಲಿಮುಗಿಸಲು ಕೈಗೊಳ್ಳಬೇಕಾದ ಕ್ರಮಗಳಕುರಿತು ಚರ್ಚಿಸಿ, ಮುಂದಿನ ತೀರ್ಮಾನಕೈಗೊಂಡರೆ ಅದಕ್ಕೊಂದು ಸ್ಪಷ್ಟ ರೂಪ ಬರಲಿದೆ.ಜತೆಗೆ ಇದಕ್ಕಾಗಿ ಅನುದಾನ ಹೊಂದಾಣಿಕೆಮಾಡಿಕೊಳ್ಳುವ ಕುರಿತೂ ಬೊಮ್ಮಾಯಿ, ಒಂದಷ್ಟುವಿಚಾರಗಳನ್ನು ಹಂಚಿಕೊಂಡರು.
ರಾಜ್ಯದಸಾಲದ ಸ್ಥಿತಿಗತಿ, ಬೇರೆ ಬೇರೆ ಏಜನ್ಸಿಗಳಿಂದದೊರೆಯಬಹುದಾದ ಸಾಲಗಳ ಕುರಿತೂ ಅವರುಗಂಭೀರ ಚಿಂತನೆಯಲ್ಲಿರುವುದು ಶನಿವಾರದಅವರ ಭೇಟಿಯಿಂದ ಸ್ಪಷ್ಟಗೊಂಡಿತು.ಮೋದಿ ಭೇಟಿಗೆ ನಿರ್ಧಾರ: ಕೃಷ್ಣಾ ನದಿನೀರು ಹಂಚಿಕೆ ವಿಷಯದಲ್ಲಿ ನ್ಯಾಯಾಧೀಕರಣಕಳೆದ 2010ರಲ್ಲೇ ತನ್ನ ಅಂತಿಮ ತೀರ್ಪುನೀಡಿದೆ. ಇದಕ್ಕಾಗಿ ಕೇಂದ್ರ ಸರ್ಕಾರದಿಂದಅಧಿಸೂಚನೆ ಹೊರಬಿದ್ದಿಲ್ಲ. ಅಧಿಸೂಚನೆಹೊರ ಬೀಳುವವರೆಗೂ ನೀರು ಬಳಸಿಕೊಳ್ಳಲುಕಷ್ಟಸಾಧ್ಯ. ಅಲ್ಲದೇ ಆಂದ್ರಪ್ರದೇಶದಿಂದಪ್ರತ್ಯೇಕಗೊಂಡ ತೆಲಂಗಾಣ ರಾಜ್ಯ, ಕೃಷ್ಣಾ ನದಿನೀರು ಹಂಚಿಕೆಯನ್ನು ಮರು ಪರಿಶೀಲಿಸಿ,ತೆಲಂಗಾಣಕ್ಕೂ ಪ್ರತ್ಯೇಕವಾಗಿ ನೀರು ಹಂಚಿಕೆಮಾಡಲು ಸುಪ್ರೀಂ ಕೋರ್ಟ್ ಮೊರೆ ಹೋಗಿದೆ.
ಹೀಗಾಗಿ ಅಧಿಸೂಚನೆ ತಡವಾಗಿದೆ. ಈ ಕುರಿತುಕರ್ನಾಟಕ, ಮಹಾರಾಷ್ಟ್ರ ಜಂಟಿಯಾಗಿ ಕಾನೂನುಹೋರಾಟ ನಡೆಸಲು ನಿರ್ಧರಿಸಿದ್ದು, ಈವಿಷಯದಲ್ಲಿ ಮಹರಾಷ್ಟ್ರದ ನೀರಾವರಿ ಸಚಿವರು,ಶರದ ಪವಾರ ಅವರೊಂದಿಗೆ ಸ್ವತಃ ಸಿಎಂ ಚರ್ಚೆಮಾಡಿದ್ದಾಗಿ ಹೇಳಿದ್ದಾರೆ. ಈ ನಿಟ್ಟಿನಲ್ಲಿ ರಾಜ್ಯದಿಂದಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಮಾಡಿ, ಅಧಿಸೂಚನೆ ಹೊರಡಿಸುವ ವಿಷಯದಲ್ಲಿಒತ್ತಾಯ ಮಾಡುವುದಾಗಿ ತಿಳಿಸಿದರು. ಇದು,ಯುಕೆಪಿ ನೀರಾವರಿ ವಿಷಯದಲ್ಲಿ ಉತ್ತಮಬೆಳವಣಿಗೆ ಕೂಡ.
ಶ್ರೀಶೈಲ ಕೆ. ಬಿರಾದಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.