ಕರವೇಯಿಂದ ಬೂಟ್ ಪಾಲಿಶ್ ಅಭಿಯಾನ
Team Udayavani, Nov 28, 2021, 12:20 PM IST
ಇಳಕಲ್ಲ: ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ ವಿಳಂಬ ಹಾಗೂ ಸೂಕ್ತ ಅನುದಾನದ ಕೊರತೆ ಕಾರಣದಿಂದ ಹೋರಾಟ ಆರಂಭಿಸಿರುವ ಕರ್ನಾಟಕ ರಕ್ಷಣಾ ವೇದಿಕೆ ಇಳಕಲ್ಲ ಘಟಕ ಹಾಗೂ ಎಂಆಯ್‌ಎಂ ಪಕ್ಷದ ಕಾರ್ಯಕರ್ತರು ನಗರದ ಎಸ್.ಆರ್. ಕಂಠಿ ವೃತ್ತದಿಂದ ಬಸ್ ನಿಲ್ದಾಣದವರೆಗೂ ಬೂಟ್ ಪಾಲಿಶ್ ಅಭಿಯಾನ ಹಮ್ಮಿಕೊಂಡಿದ್ದರು.
ಸರಕಾರದ ವಿರುದ್ಧ ಘೋಷಣೆ ಕೂಗುತ್ತ ಸಂಚಾರಿ ಬೂಟ್ ಪಾಲಿಸ್ ಅಭಿಯಾನ ನಡೆಯಿತು.
ಕರವೇ ಜಿಲ್ಲಾಧ್ಯಕ್ಷ ರಮೇಶ ಬದ್ನೂರ, ಎಂಆಯ್‌ಎಂ ಪಕ್ಷದ ರಾಜ್ಯಾದ್ಯಕ್ಷ ಉಸ್ಮಾನಗನಿ ಹುಮನಾಬಾದ ನೇತೃತ್ವದಲ್ಲಿ ಕರವೇ ಮತ್ತು ಎಂಐಎಂ ಪಕ್ಷದ ಕಾರ್ಯಕರ್ತರು ಬೂಟ್ ಪಾಲಿಶ್ ಮಾಡಿ ಹಣ ಸಂಗ್ರಹಿಸಿದರು. ಅಭಿಯಾನದಲ್ಲಿ ಸಾಮಾಜಿ ಹೋರಾಟಗಾರ ನಾಗರಾಜ ಹೊಂಗಲ್, ರೈತ ಸಂಘದ ಮಲ್ಲನಗೌಡ ತುಂಬದ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.