ಬಾಲಕ ನೀರು ಪಾಲು: ಮುಂದುವರಿದ ಶೋಧ ಕಾರ್ಯ
Team Udayavani, Oct 14, 2019, 11:23 AM IST
ಕಲಾದಗಿ: ಸ್ನಾನ ಮಾಡಲು ತೆರಳಿದ ಬಾಲಕ ಕಾಲುವೆಯಲ್ಲಿ ನೀರುಪಾಲಾದ ಘಟನಾ ಸ್ಥಳಕ್ಕೆ ಬಾಗಲಕೋಟೆ ತಹಶೀಲ್ದಾರ್ ಎಂ.ಬಿ. ನಾಗಠಾಣ ಭೇಟಿ ನೀಡಿ ಅಗ್ನಿ ಶಾಮಕ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಘಟಪ್ರಭಾ ನದಿಯಿಂದ ಕಳಸಕೊಪ್ಪ ಕೆರೆಗೆ ನೀರು ತುಂಬಿಸುವ ಜಾಕ್‌ವೆಲ್ ಪಂಪ್‌ಹೌಸ್ ಬಳಿಯ ಕಾಲುವೆಯಲ್ಲಿ ಬಾಲಕ ಶನಿವಾರ ಮಧ್ಯಾಹ್ನ ನೀರು ಪಾಲಾಗಿದ್ದ. ಬಾಲಕನಿಗಾಗಿ ಕಾಲುವೆ ನೀರಿನಲ್ಲಿ ಅಗ್ನಿ ಶಾಮಕ ಸಿಬ್ಬಂದಿ, ಮೀನುಗಾರರು ತೆಪ್ಪದ ಸಹಾಯದೊಂದಿಗೆ ಪಾತಾಳ ಗರಡಿ ನೀರಲ್ಲಿ ಬಿಟ್ಟು ಕಳೆದೆರಡು ದಿನದಿಂದ ಶೋಧ ನಡೆಯುತ್ತಿದ್ದು, ರವಿವಾರವೂ ನಡೆದ ಕಾರ್ಯಾಚರಣೆಯಲ್ಲಿ ಬಾಲಕ ಪತ್ತೆಯಾಗಿಲ್ಲ.
ಕಲಾದಗಿಯ ಮೀನುಗಾರರು ಎರಡು ದಿನದಿಂದ ಬಾಲಕನಿಗಾಗಿ 40 ಅಡಿ ಆಳದ ಕಾಲುವೆಯಲ್ಲಿ ದಣಿವರಿಯದೇ ಶೋಧ ಕಾರ್ಯ ನಡೆಸಿದ್ದು, ಮಂಜೂರ ಅಹಮ್ಮದ್ ಮುಜಾವರ್, ಯಾಶಿನ್ ಸೊಲ್ಜರ್, ಹಸನಸಾಬ ಬರಮೈ, ಹಸನಸಾಬ ಮುಜಾವರ್ ನಿರಂತರ ಅಗ್ನಿ ಶಾಮಕ ಸಿಬ್ಬಂದಿಯೊಂದಿಗೆ ಶೋಧ ಕಾರ್ಯ ನಡೆಸಿದರು.
ಕಾಲುವೆ ನೀರಿನಲ್ಲಿ ಬಾಲಕನಿಗಾಗಿ ಶೋಧ ಕಾರ್ಯ ನಡೆಯುತ್ತಿದ್ದರೆ, ಇತ್ತ ಬಾಲಕನ ತಂದೆ ಯಾಶೀನ್ ಮಕಾನದಾರ ಕಾಲುವೆ ಬಳಿ ಬಂಡೆ ಮೇಲೆ ಕುಳಿತು ಮಗನಿಗಾಗಿ ಕಣ್ಣೀರು ಸುರಿಸುತ್ತಿದ್ದಾರೆ. ಬಾಗಲಕೋಟೆ ಗ್ರೇಡ್-2 ತಹಶೀಲ್ದಾರ್ ಎಂ.ಆರ್. ಭಜಂತ್ರಿ, ಉಪತಹಶೀಲ್ದಾರ್ ಪಿ.ಬಿ. ಸಿಂಗ್ರಿ, ಗ್ರಾಮ ಲೆಕ್ಕಾಧಿಕಾರಿ ಎ.ವಿ. ಸೂರ್ಯವಂಶಿ, ಪೊಲೀಸ್ ಎಎಸೈ ವೈ. ಎಂ. ನಡುವಿನಮನಿ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಬಕವಿ-ಬನಹಟ್ಟಿ: ಸಚಿವರಿಂದ ಬೇಡಿಕೆ ಈಡೇರಿಸುವ ಭರವಸೆ… ತಿಂಗಳ ಬಳಿಕ ನೇಕಾರರ ಹೋರಾಟ ಅಂತ್ಯ
K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ
Politicss; 1008 ಸಾಧುಸಂತರ ಪಾದಪೂಜೆ ಮೂಲಕ ಕ್ರಾಂತಿವೀರ ಬ್ರಿಗೇಡ್ ಗೆ ಚಾಲನೆ: ಈಶ್ವರಪ್ಪ
India: ಒಂದು ದೇಶ ಒಂದು ಚುನಾವಣೆ ಜಾರಿ ಆಗಲಿ: ಪೇಜಾವರ ಸ್ವಾಮೀಜಿ
Rabkavi Banahatti: ಲೋಕ ಅದಾಲತ್ ನಲ್ಲಿ ಒಂದಾದ ದಂಪತಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ
Vasundhara Raje ಬೆಂಗಾವಲು ವಾಹನ ಪಲ್ಟಿ; ನಾಲ್ವರು ಪೊಲೀಸರಿಗೆ ಗಾಯ
Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.