ವೀರಾಪುರ ಜೋಡೆತ್ತಿಗೆ ಚಾಂಪಿಯನ್‌ಪಟ್ಟ : ಮೋಟಗಿ ಬಸವೇಶ್ವರ ಜಾನುವಾರು ಜಾತ್ರೆ ಸಂಪನ್ನ 

Team Udayavani, Feb 23, 2022, 7:21 PM IST

ವೀರಾಪುರ ಜೋಡೆತ್ತಿಗೆ ಚಾಂಪಿಯನ್‌ಪಟ್ಟ : ಮೋಟಗಿ ಬಸವೇಶ್ವರ ಜಾನುವಾರು ಜಾತ್ರೆ ಸಂಪನ್ನ 

ಬಾಗಲಕೋಟೆ: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಿಂದ ಮೋಟಗಿ ಬಸವೇಶ್ವರ ಜಾನುವಾರು ಜಾತ್ರೆ ಅಂಗವಾಗಿ ಕಳೆದ 5 ದಿನಗಳ ಕಾಲ ನಡೆದ ವಿವಿಧ ತಳಿಯ ಜಾನುವಾರು ಪ್ರದರ್ಶನದಲ್ಲಿ ತಾಲೂಕಿನ ವೀರಾಪುರದ ಫಕೀರಪ್ಪ ಚವಡಿ ಅವರ ಜೋಡೆತ್ತುಗಳು ಜಾತ್ರಾ ಚಾಂಪಿಯನ್‌ ಪಡೆದವು. ಮಂಗಳವಾರ ನಗರದ ಹೊರವಲಯದ ಕಲಾದಗಿ ರಸ್ತೆಯ ಕೇಸನೂರ ಮಾರುಕಟ್ಟೆ ಪ್ರಾಂಗಣದಲ್ಲಿ ನಡೆದ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಜಾತ್ರಾ ಚಾಂಪಿಯನ್‌ ಪಡೆದುಕೊಂಡ ಜೋಡೆತ್ತುಗಳಿಗ 11 ತೊಲಿ ಬೆಳ್ಳಿ ಕಡೆ ಹಾಗೂ ಪ್ರಶಸ್ತಿ ಪತ್ರ ನೀಡಲಾುತು.

ಹಾಲು ಹಲ್ಲಿನ ಹೋರಿ, ಎರಡು ಹಲ್ಲಿನ ಹೋರಿ, ನಾಲ್ಕು ಹಲ್ಲಿನ ಹೋರಿ, ಆರು ಹಲ್ಲಿನ ಹೋರಿ, ಜೋಡು ಎತ್ತುಗಳು, ಖೀಲ್ಹಾರಿ ಆಕಳುಗಳಿಗೆ ಪ್ರಥಮ 10 ತೊಲಿ ಬೆಳ್ಳಿ ಖಡೆ, ದ್ವಿತೀಯ 8 ತೊಲಿ ಬೆಳ್ಳಿ ಖಡೆ, ತೃತೀಯ 6 ತೊಲಿ ಬೆಳ್ಳಿ ಖಡೆ ಮತ್ತು ಪ್ರಶಸ್ತಿ ಪತ್ರ  ನೀಡಲಾಯಿತು.

ಹಾಲು ಹಲ್ಲಿನ ಹೋರಿ ಪ್ರದರ್ಶನದಲ್ಲಿ ನಕ್ಕರಗುಂದಿ ಗ್ರಾಮದ ಪರಸಪ್ಪ ಕುರಿ ಅವರ ಹೋರಿಗೆ (ಪ್ರಥಮ), ತುಳಸಿಗೇರಿಯ ಭೀಮಣ್ಣ ಜೈನಾಪುರ (ದ್ವಿತೀಯ), ಶಿರೂರಿನ ಸಿದ್ದಪ್ಪ ಗಾಳಿ
(ತೃತೀಯ), ಎರಡು ಹಲ್ಲಿನ ಹೋರಿ ಪ್ರದರ್ಶನದಲ್ಲಿ ಬಾಗಲಕೋಟೆಯ ಸಂಗಣ್ಣ ಯಮನಾಳ (ಪ್ರಥಮ), ನಿಂಗಾಪುರದ ರಂಗಪ್ಪ ಮಾದರ (ದ್ವಿತೀಯ), ಸೀಮಿಕೇರಿಯ ತಮ್ಮಣ್ಣಪ್ಪ ಪಿಂಡರಕಿ (ತೃತೀಯ), ನಾಲ್ಕು ಹಲ್ಲಿನ ಹೋರಿ ಪ್ರದರ್ಶನದಲ್ಲಿ ಹುನಗುಂದನ ಪರಸಪ್ಪ ಆಲೂರ (ಪ್ರಥಮ), ಮುದ್ದೇಬಿಹಾಳದ ಸುಭಾಸ್‌ ಮಾದಗುಂಡಿ (ದ್ವಿತೀಯ), ನಿಂಗಾಪುರದ
ಮಹಾಂತೇಶ ಎಮ್ಮಿ ಅವರ ಹೋರಿ (ತೃತೀಯ) ಸ್ಥಾನ ಪಡೆದುಕೊಂಡವು.

ಆರು ಹಲ್ಲಿನ ಹೋರಿ ಪ್ರದರ್ಶನದಲ್ಲಿ ನಿಂಗಾಪುರದ ಸಂಗಪ್ಪ ಸಂಗಮದ ಹೋರಿ (ಪ್ರಥಮ), ಜಮ್ಮನಕಟ್ಟಿಯ ನಿಂಗಪ್ಪ ಕೋಳ್ಳಿ (ದ್ವಿತೀಯ), ತುಳಸಿಗೇರಿಯ ಮಳಿಯಪ್ಪ ಕೆಂಗಲಗುತ್ತಿ (ತೃತೀಯ), ಜೋಡು ಎತ್ತುಗಳ ಪ್ರದರ್ಶನದಲ್ಲಿ ಹಿರೇಮಾಗಿಯ ಬಾಲಪ್ಪ ಹೊಸೂರ ಎತ್ತುಗಳು (ಪ್ರಥಮ), ಶಿರೂರಿನ ನಾಗಪ್ಪ ಅಚನೂರ (ದ್ವಿತೀಯ), ದಾದನಟ್ಟಿಯ ರಮೇಶ ರಾಜನಾಳ (ತೃತೀಯ), ಖೀಲ್ಹಾರಿ ಆಕಳು ಪ್ರದರ್ಶನದಲ್ಲಿ ಹಂಚಿನಾಳಿನ ವಿಠಲ ಅಂಬಿಗೇರ  ಆಕಳು (ಪ್ರಥಮ), ಮುತ್ತಲದಿನ್ನಿಯ ಮಲ್ಲಪ್ಪ ಕಲ್ಲಾರಿ (ದ್ವಿತೀಯ) ಹಾಗೂ ಮನ್ನಿಕಟ್ಟಿ ಗ್ರಾಮದ
ಪರಸಪ್ಪ ಕೊಳಮಲಿ ಆಕಳು ತೃತೀಯ ಸ್ಥಾನ ಪಡೆದುಕೊಂಡವು.

ಇದೇ ಸಂದರ್ಭದಲ್ಲಿ ಮಾತನಾಡಿದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಿಂದ ಸಹಾಯಕ ನಿರ್ದೇಶಕ ಎಸ್‌.ಎನ್‌. ಪತ್ತಾರ ಮಾತನಾಡಿ, 5 ದಿನಗಳ ಕಾಲ ಉತ್ತಮ ರೀತಿಯಲ್ಲಿ ಜಾನುವಾರು
ಜಾತ್ರೆ ನಡೆದಿದೆ. ಜಾತ್ರೆ ಹಮ್ಮಿಕೊಳ್ಳುವ ಉದ್ದೇಶ ಜಾನುವಾರುಗಳ ಸಂಪತ್ತು ಹೆಚ್ಚಿಸುವುದಾಗಿದೆ. ಇನ್ನಷ್ಟು ಜನರು ಜಾನುವಾರು ಜಾತ್ರೆಯ ಪ್ರಯೋಜನ ಪಡೆದುಕೊಳ್ಳಬೇಕು ಎಂದು ತಿಳಿಸಿದರು. ಎಪಿಎಂಸಿ ನಿರ್ದೇಶಕ ಮಲ್ಲು ದ್ಯಾವನ್ನವರ, ಮುರುಗೆಪ್ಪ ವೈಜಾಪುರ ಮಾತನಾಡಿದರು. ಮುರನಾಳ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಬಸವ್ವ ತೆಗ್ಗಿ, ಯಲ್ಲಪ್ಪ ಅಮಾತಗೌಡ್ರ, ಕೃಷ್ಣಪ್ಪ ನಾಯಕ, ನಾಗಪ್ಪ ಸೊನ್ನದ, ಶೇಖಪ್ಪ ಹೆರಕಲ್ಲ, ಎಂ.ಎಂ.ಹುಲ್ಲೂರ, ಶೀತಮ್ಮ ಮೇಟಿ, ಪ್ರಗತಿಪರ ರೈತ ಚನಬಸಪ್ಪ ಲಾಗಲೋಟಿ, ಸಂಗಮೇಶ ಯಮನಾಳ, ಶ್ರೀಶೈಲ ಗೌರಿ, ಕೋಟಿಕಲ್‌, ಪಶು ಇಲಾಖೆಯ ಸಹಾಯಕ ನಿರ್ದೇಶಕ ಪಾಗದ, ಎಪಿಎಂಸಿ ಕಾರ್ಯದರ್ಶಿ ಎನ್‌.ಎ. ಲಕ್ಕುಂಡಿ, ಸಹಾಯಕ ಕಾರ್ಯದರ್ಶಿ ಆರ್‌.ಎಸ್‌. ದಂಡಿನ, ಬಗಲಿ ಮುಂತಾದವರು
ಉಪಸ್ಥಿತರಿದ್ದರು.

ಟಾಪ್ ನ್ಯೂಸ್

Mangaluru: ಆಕಸ್ಮಿಕ ಗುಂಡು ತಗುಲಿ ವ್ಯಕ್ತಿಗೆ ಗಾಯ… ವಾಮಂಜೂರಿನಲ್ಲಿ ಘಟನೆ

Mangaluru: ಆಕಸ್ಮಿಕ ಗುಂಡು ತಗುಲಿ ವ್ಯಕ್ತಿಗೆ ಗಾಯ… ವಾಮಂಜೂರಿನಲ್ಲಿ ಘಟನೆ

Junior Doctor: ಹಾಸ್ಟೆಲ್ ಗೆ ಕರೆದು ಕಿರಿಯ ವೈದ್ಯೆಯ ಮೇಲೆ ಸಹೋದ್ಯೋಗಿಯಿಂದಲೇ ಅತ್ಯಾಚಾರ…

Junior Doctor: ಮಾತನಾಡಲು ಕರೆಸಿ ಕಿರಿಯ ವೈದ್ಯೆ ಮೇಲೆ ಸಹೋದ್ಯೋಗಿಯಿಂದಲೇ ಅತ್ಯಾಚಾರ…

Sandalwood: ಶ್ರೀರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ ಪ್ರಕಟ

Sandalwood: ಶ್ರೀರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ ಪ್ರಕಟ

Gadag: ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದ ದುರ್ಘಟನೆಗೆ ಒಂದು ವರ್ಷ…

Gadag: ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದ ದುರ್ಘಟನೆಗೆ ಒಂದು ವರ್ಷ…

Bird Flu: ಹಕ್ಕಿ ಜ್ವರಕ್ಕೆ 3 ಹುಲಿ, 1 ಚಿರತೆ ಸಾವು: ಪ್ರಾಣಿಗಳಿಗೆ ಕ್ವಾರಂಟೈನ್‌

Bird Flu: ಹಕ್ಕಿ ಜ್ವರಕ್ಕೆ 3 ಹುಲಿ, 1 ಚಿರತೆ ಸಾ*ವು… ಪ್ರಾಣಿಗಳಿಗೆ ಕ್ವಾರಂಟೈನ್‌

1

540 ಅಡಿ ಆಳದ ಬೋರ್​ವೆಲ್​ಗೆ ಬಿದ್ದ ಯುವತಿ: ಯುವಕನ ಜತೆ ಮನಸ್ತಾಪದಿಂದ ಆತ್ಮಹತ್ಯೆಗೆ ಯತ್ನ?

Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ಮಧ್ಯಾಹ್ನ ದಿನಾಂಕ ನಿಗದಿ

Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ದಿನಾಂಕ ನಿಗದಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gadag: ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದ ದುರ್ಘಟನೆಗೆ ಒಂದು ವರ್ಷ…

Gadag: ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದ ದುರ್ಘಟನೆಗೆ ಒಂದು ವರ್ಷ…

ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು

ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು

Bengaluru-Techi

Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!

HDK–Siddu

Percentage War: ಮತ್ತೆ 60 ಪರ್ಸೆಂಟ್‌ ಕಮಿಷನ್‌ ಯುದ್ಧ ; ಆರೋಪ – ಪ್ರತ್ಯಾರೋಪ

DKS–Delhi

Dinner Meet: ಸಚಿವರ ಮನೆ ಔತಣಕೂಟಕ್ಕೆ ಅಪಾರ್ಥ ಕಲ್ಪಿಸುವುದು ಬೇಡ: ಡಿ.ಕೆ.ಶಿವಕುಮಾರ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Mangaluru: ಆಕಸ್ಮಿಕ ಗುಂಡು ತಗುಲಿ ವ್ಯಕ್ತಿಗೆ ಗಾಯ… ವಾಮಂಜೂರಿನಲ್ಲಿ ಘಟನೆ

Mangaluru: ಆಕಸ್ಮಿಕ ಗುಂಡು ತಗುಲಿ ವ್ಯಕ್ತಿಗೆ ಗಾಯ… ವಾಮಂಜೂರಿನಲ್ಲಿ ಘಟನೆ

Bengaluru: ಎಂಬಿಎ ವಿದ್ಯಾರ್ಥಿ 3ನೇ ಮಹಡಿಯಿಂದ ಬಿದ್ದು ಸಾವು

Bengaluru: ಎಂಬಿಎ ವಿದ್ಯಾರ್ಥಿ 3ನೇ ಮಹಡಿಯಿಂದ ಬಿದ್ದು ಸಾವು

Fraud Case: 3.25 ಕೋಟಿ ವಂಚನೆ ಕೇಸ್‌; ಐಶ್ವರ್ಯ ದಂಪತಿ ಮತ್ತೆ ಸೆರೆ

Fraud Case: 3.25 ಕೋಟಿ ವಂಚನೆ ಕೇಸ್‌; ಐಶ್ವರ್ಯ ದಂಪತಿ ಮತ್ತೆ ಸೆರೆ

Gas cylinder leakage: ಮನೆ ಛಿದ್ರ ಛಿದ್ರ, ಇಬ್ಬರಿಗೆ ಗಾಯ

Gas cylinder leakage: ಮನೆ ಛಿದ್ರ ಛಿದ್ರ, ಇಬ್ಬರಿಗೆ ಗಾಯ

Atul Subhash Case: ಪತ್ನಿ ಮೇಲಿನ ಕೇಸ್‌ ರದ್ದತಿಗೆ ನಿರಾಕರಣೆ

Atul Subhash Case: ಪತ್ನಿ ಮೇಲಿನ ಕೇಸ್‌ ರದ್ದತಿಗೆ ನಿರಾಕರಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.