Mudhol; ಗುತ್ತಿಗೆ ನೌಕರರ ನೇಮಕಾತಿ‌ ರದ್ದತಿ; ಆರೋಗ್ಯ ಕೇಂದ್ರಕ್ಕೆ ಬೇಕಿದೆ ಅಗತ್ಯ ಸಿಬ್ಬಂದಿ

ಸಿಬ್ಬಂದಿ‌‌ ಕೊರತೆ ನಿವಾರಣೆಗೆ ಕೊನೆ ಯಾವಾಗ

Team Udayavani, Aug 9, 2024, 7:07 PM IST

Mudhol; ಗುತ್ತಿಗೆ ನೌಕರರ ನೇಮಕಾತಿ‌ ರದ್ದತಿ; ಆರೋಗ್ಯ ಕೇಂದ್ರಕ್ಕೆ ಬೇಕಿದೆ ಅಗತ್ಯ ಸಿಬ್ಬಂದಿ

ಮುಧೋಳ: ನಮ್ಮೂರಿನ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ‌‌ ಸಮಸ್ಯೆ ನಿವಾರಣೆಯಾಯಿತು ಎಂದು ಗ್ರಾಮಸ್ಥರು ನಿಟ್ಟುಸಿರು ಬಿಡುವಾಗಲೇ ಇದೀಗ ನೂತನವಾಗಿ ನೇಮಕಗೊಂಡ ಗುತ್ತಿಗೆ ಆಧಾರದ ಸಿಬ್ಬಂದಿ ಅನರ್ಹಗೊಂಡ ಬೆನ್ನಲ್ಲೆ ಹಲಗಲಿ ಪ್ರಾಥಮಿಕ‌ ಆರೋಗ್ಯ‌ ಕೇಂದ್ರದಲ್ಲಿ ಮತ್ತೆ‌ ಸಿಬ್ಬಂದಿ‌ ಸಮಸ್ಯೆ ತಲೆದೋರಿದೆ.

ಆಸ್ಪತ್ರೆ ರೋಗಿಗಳಿಗೆ ಶುಶ್ರೂಷೆ ಮಾಡಲು‌ ಮುಖ್ಯವಾಗಿ‌ ಸ್ಟಾಫ್ ನರ್ಸ್ ಗಳ ಸೇವೆ ಅಗತ್ಯವಾಗಿಬೇಕು. ಆದರೆ ಗ್ರಾಮದ ಆರೋಗ್ಯ ಕೇಂದ್ರಕ್ಕೆ ಕೆಲ ತಿಂಗಳುಗಳ ಹಿಂದೆ ಗುತ್ತಿಗೆ ಆಧಾರದಲ್ಲಿ ನಿಯುಕ್ತಿಗೊಂಡಿದ್ದ ಇಬ್ಬರ ಸ್ಟಾಫ್ ನರ್ಸ್ ಗಳ ನೇಮಕಾತಿ ರದ್ದುಗೊಂಡಿರುವ ಹಿನ್ನೆಲೆ‌ ಗ್ರಾಮದ ರೋಗಿಗಳು ಪರದಾಡುವ ಸ್ಥಿತಿ‌‌‌ ನಿರ್ಮಾಣವಾಗಿದೆ.

ಸಿಬ್ಬಂದಿ‌‌ ಕೊರತೆ ನಿವಾರಣೆಗೆ ಕೊನೆ ಯಾವಾಗ : ತಾಲೂಕು‌‌‌ ಕೇಂದ್ರದಿಂದ 30‌ ಕಿ.ಮೀ. ದೂರದಲ್ಲಿರುವ ಹಲಗಲಿ‌ ಪ್ರಾಥಮಿಕ‌ ಕೇಂದ್ರ ಸಮೀಪದ‌ ಮೆಳ್ಳಿಗೇರಿ, ಕಿಶೋರಿ, ಮಂಟೂರ ಹಾಗೂ ಬುದ್ನಿ ಪಿ.ಎಂ. ವ್ಯಾಪ್ತಿಯನ್ನು ಒಳಗೊಂಡಿದೆ. ಅದೂ ಅಲ್ಲದೆ‌ ಪಕ್ಕದ ಬೀಳಗಿ ತಾಲೂಕಿನ‌ ಅರಕೇರಿ, ಅರಕೇರಿ ತಾಂಡಾ, ಚಿಕ್ಕಾಲಗುಂಡಿ ಗ್ರಾಮದ ರೋಗಿಗಳು ಸಹ ಚಿಕಿತ್ಸೆಗಾಗಿ‌ ಇದೇ ಆರೋಗ್ಯ ಕೇಂದ್ರವನ್ನು ನೆಚ್ಚಿಕೊಂಡಿದ್ದಾರೆ.

ಅಂದಾಜು 20ಸಾವಿರ ಜನಸಂಖ್ಯೆಗೆ ಆಧಾರ ಸ್ತಂಭವಾಗಿರುವ ಪ್ರಾಥಮಿಕ ಕೇಂದ್ರಕ್ಕೆ ಸಿಬ್ಬಂದಿ‌ ಕೊರತೆ ಇನ್ನಿಲ್ಲದಂತೆ ಬಾಧಿಸುತ್ತಿದೆ. ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಗ್ರಾಮಗಳ ಸರಹದ್ದಿಗೆ ಒಳಪಡುವ ಆರೋಗ್ಯ ಕೇಂದ್ರಕ್ಕೆ ಸಿಬ್ಬಂದಿ‌ ಕೊರತೆ ಯಾವಾಗ ನೀಗುತ್ತದೆ ಎಂಬುದೇ ಯಕ್ಷಪ್ರಶ್ನೆಯಾಗಿದೆ.

ಖಾಲಿ ಹುದ್ದೆಗಳ ಭರ್ತಿಯಾಗಲಿ : ಸದ್ಯ ಪ್ರಾಥಮಿಕ‌ ಆರೋಗ್ಯ ಕೇಂದ್ರದಲ್ಲಿ 2ಸ್ಟಾಫ್ ನರ್ಸ್, 2ಪ್ರಾಥಮಿಕ‌ ಆರೋಗ್ಯ ಕೇಂದ್ರದ ಸುರಕ್ಷತಾ ಅಧಿಕಾರಿ, 1 ಬ್ಲಾಕ್ ಹೆಲ್ತ್ ಆಫೀಸರ್, 1 ಹಿರಿಯ ಪ್ರಾಥಮಿಕ ಸುರಕ್ಷತಾ ಅಧಿಕಾರಿ (ಈ ಹುದ್ದೆ ಕಳೆದ 2ವರ್ಷಗಳಿಂದ ಡೆಪ್ಯುಟೇಶನ ಮೇಲಿದೆ) ಹೀಗೆ ಹಲವಾರು ಹುದ್ದೆಗಳು ಖಾಲಿ ಇದ್ದು ಸಂಬಂಧಿಸಿದ ಜನಪ್ರತಿನಿಧಿಗಳು‌ ಕೂಡಲೇ ಖಾಲಿ‌ ಹುದ್ದೆಗಳನ್ನು ಭರ್ತಿ ಮಾಡುವಂತೆ ಗ್ರಾಮಸ್ಥರ ಆಗ್ರಹವಾಗಿದೆ.

ಮೇಲಿನ‌ ಹುದ್ದೆಗಳ ಪೈಕಿ ಬ್ಲಾಕ್ ಹೆಲ್ತ್ ಆಫೀಸರ್ ಹುದ್ದೆ 5ವರ್ಷಗಳಿಂದ ಖಾಲಿಯಿದ್ದರೂ ಸಂಬಂಧಿಸಿದ ಅಧಿಕಾರಿಗಳು ಹುದ್ದೆ ಭರ್ತಿ‌ ಮಾಡಲು‌ ಕ್ರಮಕೈಗೊಳ್ಳದಿರುವುದು ಆಡಳಿತ ವ್ಯವಸ್ಥೆಯಲ್ಲಿ‌ ಜಾಣಕುರುಡುತನಕ್ಕೆ‌ ಹಿಡಿದ‌ ಉತ್ತಮ ನಿದರ್ಶನವಾಗಿದೆ.

ಜಿಲ್ಲಾ‌ ಮತ್ತು ತಾಲೂಕು ಕೇಂದ್ರದಿಂದ ದೂರ : ಮುಧೋಳ ತಾಲೂಕಿನ ಗಡಿಗ್ರಾಮವಾಗಿರುವ ಹಲಗಲಿಯು ಮುಧೋಳದಿಂದ 30 ಹಾಗೂ ಜಿಲ್ಲಾಕೇಂದ್ರ ಬಾಗಲಕೋಟೆಯಿಂದ 45 ಕಿ.ಮೀ. ಅಂತರ ದೂರದಲ್ಲಿದೆ. ಪ್ರಾಥಮಿಕ‌ ಆರೋಗ್ಯ ಕೇಂದ್ರ ಹೊಂದಿರುವ ಗ್ರಾಮವನ್ನೊಳಗೊಂಡು ಅದರ ವ್ಯಾಪ್ತಿಯ ಗ್ರಾಮಗಳಾದ ಮೆಳ್ಳಿಗೇರಿ, ಕಿಶೋರಿ ಮಂಟೂರ‌ ಗ್ರಾಮಗಳು ಯಡಹಳ್ಳಿ‌ ಚೀಂಕಾರ‌ ರಕ್ಷಿತಾರಣ್ಯಕ್ಕೆ‌ ಹೊಂದಿಕೊಂಡಿರುವುದರಿಂದ ಈ ಭಾಗದಲ್ಲಿ ಕೆಲವೊಂದು ಬಾರಿ‌ ಕಾಡುಪ್ರಾಣಿಗಳ ಹಾಗೂ ಸರಿಸೃಪಗಳ ಉಪಟಳವಿರುತ್ತದೆ. ಅಂತಹ ಅನಿವಾರ್ಯ ಸಂದರ್ಭದಲ್ಲಿ ಜನರಿಗೆ ಸೂಕ್ತ ಚಿಕಿತ್ಸೆ ದೊರೆಯದೆ ಅನೇಕ ಅವಾಂತರಗಳು ಆಗಿದ್ದುಂಟು. ಆಸ್ಪತ್ರಯಲ್ಲಿನ‌ ಸಿಬ್ಬಂದಿ ತಮ್ಮ ಇತಿಮಿತಿಯೊಳಗೆ ಅವಿರತವಾಗಿ ಕಾರ್ಯನಿರ್ವಹಿಸದರೂ ಸಿಬ್ಬಂದಿ‌ ಸಮಸ್ಯೆ ದೊಡ್ಡ ತಲೆನೋವಾಗಿ‌ ಪರಿಣಮಿಸಿದೆ.

ಹಲವಾರು ಬಾರಿ‌‌ ಇಲ್ಲಿನ ಆರೋಗ್ಯ ಕೇಂದ್ರದ‌ ಸಿಬ್ಬಂದಿ ಹಾಗೂ ರೋಗಿಗಳ‌ ಮಧ್ಯೆ ವಾಗ್ವಾದಗಳೂ‌ ನಡೆದದ್ದುಂಟು. ಕೂಡಲೇ ಸರ್ಕಾರ ಆರೋಗ್ಯ ಕೇಂದ್ರಕ್ಕೆ ಸಿಬ್ಬಂದಿ‌ ನೀಡಿದರೆ ಇಲ್ಲಿನ ಜನರಿಗೆ ಸೂಕ್ತ‌ ಚಿಕಿತ್ಸೆಗೆ ನೆರವಾಗುತ್ತದೆ.

ಉದಯವಾಣಿ ವರದಿಗೆ ಎಚ್ಚೆತ್ತು ಸಿಬ್ಬಂದಿ‌ ನೇಮಕ : ಹಲಗಲಿ ಪ್ರಾಥಮಿಕ‌‌ ಆರೋಗ್ಯ ಕೇಂದ್ರದಲ್ಲಿನ ಸಿಬ್ಬಂದಿ ಸಮಸ್ಯೆ ಕುರಿತು ಉದಯವಾಣಿ 2023 ಅಕ್ಟೋಬರ್ ನಲ್ಲಿ ಹಲಗಲಿ ಆರೋಗ್ಯ ಕೇಂದ್ರಕ್ಕೇ ಬೇಕಿದೆ ಚಿಕಿತ್ಸೆ ಹೆಸರಿನಡಿ ವಿಸ್ತೃತ ವರದಿ‌ ಪ್ರಕಟಿಸಿತ್ತು. ವರದಿಯಿಂದ ಎಚ್ಚೆತ್ತ ಸರ್ಕಾರ 2ಸ್ಟಾಫ್ ನರ್ಸ್ ಹುದ್ದೆಗಳನ್ನು ನೀಡಿ ಅಲ್ಲಿನ ಜನರಿಗೆ ಅನುಕೂಲ‌ ಕಲ್ಪಿಸಿತ್ತು. ಇದೀಗ ತಾಂತ್ರಿಕ ತೊಂದರೆಯಿಂದಾಗಿ‌ ನೇಮಕಾತಿ ರದ್ದುಗೊಳಿಸಿರುವ ಪರಿಣಾಮ ಆರೋಗ್ಯ ಕೇಂದ್ರ‌‌ ಮತ್ತೊಮ್ಮೆ‌ ಕೋಮಾ ಸ್ಥಿತಿಗೆ ತಲುಪುವಂತಾಗಿದೆ.

ಗುತ್ತಿಗೆ ನೌಕರರ ನೇಮಕಾತಿ ರದ್ದು ಹಲವು ತಿಂಗಳುಗಳ ಹಿಂದೆ ಜಿಲ್ಲೆಯಲ್ಲಿ‌ 52 ಸ್ಟಾಫ್ ನರ್ಸ್, 10 ಲ್ಯಾಬ್ ಟೆಕ್ನಿಷಿಯನ್, ಆಶಾ ಸಮನ್ವಯಕಾರರು, ಎನ್ಸಿಡಿ ಕೌನ್ಸಲರ್, ಫಾರ್ಮಾಸಿಸ್ಟ್, ಎಎನ್ಎಂ, ಆರೋಗ್ಯ ಅಸಿಸ್ಟಂಟ್ ಸೇರಿದಂತೆ ಒಟ್ಟು 92 ಹುದ್ದೆಗಳನ್ನು ಗುತ್ತಿಗೆ ಆಧಾರದಲ್ಲಿ ನೇಮಕ‌‌‌ ಮಾಡಿಕೊಳ್ಳಲಾಗಿತ್ತು. ಆದರೆ ಹಲವು ಅಡಚಣೆಗಳಿಂದಾಗಿ‌ ಆ ಎಲ್ಲ ಹುದ್ದೆಗಳನ್ನು ರದ್ದುಗೊಳಿಸಲಾಗಿದೆ. ಇದರಿಂದಾಗಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ‌ ಉದ್ಬವಿಸಿರುವ ಸಿಬ್ಬಂದಿ ಸಮಸ್ಯೆಗೆ ಮೇಲಧಿಕಾರಿಗಳು‌ ಶೀಘ್ರ ಪರಿಹಾರ‌ ಕಲ್ಪಿಸಬೇಕು ಎಂಬುದು‌ ಗ್ರಾಮಸ್ಥರ ಆಗ್ರವಾಗಿದೆ.

ಹೊರಗುತ್ತಿಗೆ ನೇಮಕಾತಿ ಕಾನೂನುಬಾಹಿರವಾಗಿರುವುದರಿಂದ ರದ್ದತಿ‌‌ ಮಾಡಲಾಗಿದೆ. ಸಿಬ್ಬಂದಿ‌‌ ಕೊರತೆ ಎದುರಿಸುತ್ತಿರುವ ಆರೋಗ್ಯ ಕೇಂದ್ರಗಳಲ್ಲಿ ಅಗತ್ಯ ಸಿಬ್ಬಂದಿ‌ ಹೊಂದಾಣಿಕೆ‌‌‌ ಮಾಡಿಕೊಳ್ಳುವಂತೆ ಹಿಂದಿನ ಡಿಎಚ್ಒಗೆ ಸೂಚಿಸಲಾಗಿತ್ತು. ಅದಾಗ್ಯೂ‌‌ ಶೀಘ್ರವೇ ಮರುನೇಮಕಾತಿಗೆ ಪ್ರಕ್ರಿಯೆ ಆರಂಭಿಸಿ ಆರೋಗ್ಯ ಕೇಂದ್ರಗಳಲ್ಲಿ ಅಗತ್ಯ ಸೇವೆಗೆ ಕ್ರಮ ಕೈಗೊಳ್ಳಲಾಗುವುದು.
-ಶಶಿಧರ ಕುರೇರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಾಗಲಕೋಟೆ

ಸಿಬ್ಬಂದಿ ಕೊರತೆಯಿರುವ ಆರೋಗ್ಯ ಕೇಂದ್ರದಲ್ಲಿ‌ ಅಗತ್ಯ ಕ್ರಮ ಕೈಗೊಳ್ಳುವಂತೆ ಮೇಲಧಿಕಾರಿಗಳು ಸೂಚನೆ‌ ನೀಡಿದ್ದಾರೆ. ಈ ಹಿನ್ನೆಲೆ ಶೀಘ್ರವೇ ಹಲಗಲಿ ಪ್ರಾಥಮಿಕ‌ ಆರೋಗ್ಯ ಕೇಂದ್ರಕ್ಕೆ ಅಗತ್ಯ ಸಿಬ್ಬಂದಿ‌ ಒದಗಿಸಲಾಗುವುದು.
-ಸುವರ್ಣಾ ಕುಲಕರ್ಣಿ ಜಿಲ್ಲಾ ಆರೋಗ್ಯಾಧಿಕಾರಿ ಬಾಗಲಕೋಟೆ

-ಗೋವಿಂದಪ್ಪ ತಳವಾರ ಮುಧೋಳ

ಟಾಪ್ ನ್ಯೂಸ್

Naxal ಎನ್‌ಕೌಂಟರ್‌ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?

Naxal ಎನ್‌ಕೌಂಟರ್‌ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?

Hebri: ಎನ್‌ಕೌಂಟರ್‌ ತನಿಖೆ ನಡೆಸುವ ಹೆಬ್ರಿ ಪೊಲೀಸ್‌ ಠಾಣೆ ಇಲ್ಲಗಳ ಆಗರ!

Hebri: ಎನ್‌ಕೌಂಟರ್‌ ತನಿಖೆ ನಡೆಸುವ ಹೆಬ್ರಿ ಪೊಲೀಸ್‌ ಠಾಣೆ ಇಲ್ಲಗಳ ಆಗರ!

ashok

CM ಸಿದ್ದರಾಮಯ್ಯ ಭ್ರಷ್ಟ ಎಂದು ನಿರೂಪಿಸಲು ಯಶಸ್ವಿ: ಆರ್‌.ಅಶೋಕ್‌

BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?

BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?

1-siddu

Congress; ಅಧಿವೇಶನಕ್ಕೆ ಮುನ್ನ ಸಂಪುಟಕ್ಕೆ ಸರ್ಜರಿ? ಸಾಧ್ಯತೆಗಳೇನು?

1-mahayu

Mahayuti ಗೆಲುವು: ಆ್ಯಕ್ಸಿಸ್‌ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ

High Court: ನಕ್ಸಲ್‌ ಚಟುವಟಿಕೆ: ಸಾವಿತ್ರಿ ಬಾಡಿ ವಾರಂಟ್‌ ಮನವಿ ಮರು ಪರಿಶೀಲನೆಗೆ ನಿರ್ದೇಶ

High Court: ನಕ್ಸಲ್‌ ಚಟುವಟಿಕೆ: ಸಾವಿತ್ರಿ ಬಾಡಿ ವಾರಂಟ್‌ ಮನವಿ ಮರು ಪರಿಶೀಲನೆಗೆ ನಿರ್ದೇಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mudhol: ಕೈಕೊಟ್ಟ ಬೆಳೆ… ಸಾಲಬಾಧೆಗೆ ಹೆದರಿ ನೇಣಿಗೆ ಶರಣಾದ ರೈತ

Mudhol: ಕೈಕೊಟ್ಟ ಬೆಳೆ… ಸಾಲಬಾಧೆಗೆ ಹೆದರಿ ನೇಣಿಗೆ ಶರಣಾದ ರೈತ

4-mudhol

Mudhol: ಟ್ರ್ಯಾಕ್ಟರ್ ಹಾಗೂ ಬೊಲೆರೋ ಮುಖಾಮುಖಿ ಡಿಕ್ಕಿ

1-bagalkote

Bagalkote: ಹೇರ್ ಡ್ರೈಯರ್ ಸ್ಪೋಟಗೊಂಡು ಮಹಿಳೆಯ ಎರಡು ಕೈ ತುಂಡು

de

Kulgeri: ಟ್ರ್ಯಾಕ್ಟರ್ ಹಿಂಬದಿಗೆ ಬೈಕ್ ಡಿಕ್ಕಿ; ಸವಾರ ಮೃತ್ಯು

8

Mudhol: ಎರಡೂ ಬಣಗಳಿಂದ ಪ್ರತಿಭಟನೆ ಬಿಸಿ; ಸ್ಥಳದಲ್ಲೇ ಬೀಡುಬಿಟ್ಟಿರುವ ಎಸ್ಪಿ; ಹೈ ಅಲರ್ಟ್

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Naxal ಎನ್‌ಕೌಂಟರ್‌ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?

Naxal ಎನ್‌ಕೌಂಟರ್‌ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?

Hebri: ಎನ್‌ಕೌಂಟರ್‌ ತನಿಖೆ ನಡೆಸುವ ಹೆಬ್ರಿ ಪೊಲೀಸ್‌ ಠಾಣೆ ಇಲ್ಲಗಳ ಆಗರ!

Hebri: ಎನ್‌ಕೌಂಟರ್‌ ತನಿಖೆ ನಡೆಸುವ ಹೆಬ್ರಿ ಪೊಲೀಸ್‌ ಠಾಣೆ ಇಲ್ಲಗಳ ಆಗರ!

ashok

CM ಸಿದ್ದರಾಮಯ್ಯ ಭ್ರಷ್ಟ ಎಂದು ನಿರೂಪಿಸಲು ಯಶಸ್ವಿ: ಆರ್‌.ಅಶೋಕ್‌

BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?

BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?

1-siddu

Congress; ಅಧಿವೇಶನಕ್ಕೆ ಮುನ್ನ ಸಂಪುಟಕ್ಕೆ ಸರ್ಜರಿ? ಸಾಧ್ಯತೆಗಳೇನು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.