ಪಡಿತರ ಅಂಗಡಿಗಳ ಪರವಾನಗಿ ರದ್ದು
ಪಡಿತರ ಫಲಾನುಭವಿಗಳಿಂದ ಹಣ ವಸೂಲಿ
Team Udayavani, Jul 21, 2019, 10:49 AM IST
ಜಮಖಂಡಿ: ನ್ಯಾಯಬೆಲೆ ಅಂಗಡಿಗಳ ದಾಖಲೆಯನ್ನು ಉಪವಿಭಾಗಾಧಿಕಾರಿ ಇಕ್ರಮ್ ಶರೀಫ್ ಪರಿಶೀಲಿಸಿದರು.
ಜಮಖಂಡಿ: ನಗರದ ನ್ಯಾಯಬೆಲೆ ಅಂಗಡಿಗಳ ಮೇಲೆ ಅನಿರೀಕ್ಷಿತ ಭೇಟಿ ನೀಡಿದ ಸಂದರ್ಭದಲ್ಲಿ ಪಡಿತರ ಫಲಾನುಭವಿಗಳಿಂದ ಹಣ ವಸೂಲಿ ಮಾಡುತ್ತಿರುವುದು ಬೆಳಕಿಗೆ ಬಂದಿದ್ದು, ಅಂಗಡಿಗಳ ಪರವಾನಗಿಯನ್ನು ಹಿಂಪಡೆದು ಅಮಾನತ್‌ಗೆ ಆದೇಶ ನೀಡಲಾಗಿದೆ ಎಂದು ಉಪವಿಭಾಗಾಧಿಕಾರಿ ಇಕ್ರಮ್ ಶರೀಫ್ ಹೇಳಿದರು.
ನಗರದಲ್ಲಿ ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ, ನಗರದ ವಾರ್ಡ್ 20 ಹಾಗೂ 24ರ ನ್ಯಾಯಬೆಲೆ ಅಂಗಡಿ ಸಂಖ್ಯೆ 10, ಅಲಉದಾ ಮಲ್ಟಿಪರಪೋಜ್ ಸೊಸೈಟಿಯಲ್ಲಿ ಪ್ರತಿ ಕಾರ್ಡ್‌ಗಳಿಗೆ ಹಣ ಪಡೆದು ಅನಧಿಕೃತವಾಗಿ ಕೊಬ್ಬರಿಎಣ್ಣೆ ವಿತರಿಸುತ್ತಿರುವುದು ಮತ್ತು ನ್ಯಾಯಬೆಲೆ ಅಂಗಡಿ ಸಂಖ್ಯೆ 8ರ ಜಿ.ಪಿ.ತೇಲಿ ಅಂಗಡಿಯಲ್ಲಿ ಪ್ರತಿ ಕಾರ್ಡ್‌ಗಳಿಗೆ ಹೆಚ್ಚಿನ ಹಣ ಪಡೆದು ಪಡಿತರ ವಿತರಿಸುತ್ತಿರುವುದು ಉಪವಿಭಾಗಾಧಿಕಾರಿಗಳ ಭೇಟಿ ಸಂದರ್ಭದಲ್ಲಿ ಬೆಳಕಿಗೆ ಬಂದಿದೆ ಎಂದರು.
ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ವಸ್ತುಗಳನ್ನು ವಿತರಿಸುವ ಮೊದಲೇ 200 ಪಡಿತರ ಚೀಟಿದಾರರ ಅನಧಿಕೃತ ಬಯೋ ಮೆಟ್ರಿಕ್ ಪಡೆದುಕೊಂಡಿದ್ದಾರೆ ತನಿಖೆ ಸಂದರ್ಭದಲ್ಲಿ ಕಂಡು ಬಂದಿದೆ. ಅಂಗಡಿಕಾರರು ಲೋಪ ಎಸಗಿರುವ ಹಿನ್ನೆಲೆಯಲ್ಲಿ ಎರಡು ಅಂಗಡಿಗಳ ಪರವಾನಗಿ ಹಿಂಪಡೆದು ಅಮಾನತು ಮಾಡಲಾಗಿದೆ ಎಂದರು. ಇದೇ ಸಂದರ್ಭದಲ್ಲಿ ಆಹಾರ ಇಲಾಖೆ ಸಹಾಯಕ ಅಧಿಕಾರಿ ಡಿ.ಬಿ.ದೇಶಪಾಂಡೆ ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.