Rabkavi Banhatti ಮಹಿಳೆಯರಿಗೆ ಶಕ್ತಿ ಯುಕ್ತಿಗೆ ಚೆನ್ನಮ್ಮ ಸಾಕ್ಷಿ: ಸಚಿವ ಶಿವಾನಂದ ಪಾಟೀಲ
Team Udayavani, Oct 29, 2023, 7:36 PM IST
ರಬಕವಿ ಬನಹಟ್ಟಿ : ಸಮಾಜದ ಪರಂಪರೆ ಇತಿಹಾಸ ಉಳಿಸಿ ಬೆಳೆಸುವದು ಅಗತ್ಯ. ಮಹಿಳೆಯರಿಗೆ ಶಕ್ತಿ ಯುಕ್ತಿಗೆ ಆಗಿನ ಕಾಲದ ರಾಣಿ ಚನ್ನಮ್ಮಳೇ ಕಾರಣವೆಂದು ಜವಳಿ, ಸಕ್ಕರೆ ಸಚಿವ ಶಿವಾನಂದ ಪಾಟೀಲ ಹೇಳಿದರು.
ಸಮೀಪದ ನಾವಲಗಿ ಗ್ರಾಮದಲ್ಲಿ ವೀರ ರಾಣಿ ಚೆನ್ನಮ್ಮ ಜಯಂತಿ, ವಿಜಯೋತ್ಸವ ಹಾಗೂ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಸಮಾಜದಲ್ಲಿರುವ ಬಡ ಕುಟುಂಬವನ್ನು ಸರ್ಕಾರಕ್ಕಿಂತಲೂ ಸಮಾಜ ಮೇಲೆತ್ತುವ ಕಾರ್ಯ ನಡೆಯಬೇಕಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿ ಬದುಕಬೇಕಾದರೆ ಆರ್ಥಿಕ ಸ್ಥಿತಿಯ ಬಲ ತುಂಬಬೇಕು ಅಂದಾಗ ಸಾಧನೆಗೆ ಸಹಕಾರಿಯಾಗುವದೆಂದರು.
ಕಾರ್ಯಕ್ರಮ ಉದ್ಘಾಟನೆಗೊಳಿಸಿ ಮಾತನಾಡಿದ ಶಾಸಕ ಸಿದ್ದು ಸವದಿ, 1857 ರ ಸ್ವಾತಂತ್ರ್ಯ ಸಂಗ್ರಾಮಕ್ಕಿಂತಲೂ ಮೊದಲು ರಾಣಿ ಚೆನ್ನಮ್ಮಳ ಕಿಚ್ಚು ಕಾರಣ. ದೇಶದ ಮಹಾನ್ ನಾಯಕರಿಗೆ ಜಾತಿ ಸೀಮಿತವಿಲ್ಲ. ಅದರಿಂದಲೇ ಇಂದಿಗೂ ಅಜರಾಮರಾಗಿ ಎಲ್ಲರ ಮನದಲ್ಲಿರುವದೇ ಸಾಕ್ಷಿಯೆಂದರು. ಪ್ರತಿಯೊಬ್ಬರೂ ಒಂದು ಜಾತಿಗೆ ಸೀಮಿತವಾಗದೆ ಧರ್ಮ ಉಳಿಸುವ ಕಾರ್ಯವಾಗಬೇಕು ಅಂದಾಗ ಮಾತ್ರ ದೇಶ ಸುಭದ್ರವಾಗುವದೆಂದರು.
ಅಧ್ಯಕ್ಷತೆ ವಹಿಸಿದ್ದ ಮಾಜಿ ಸಚಿವ ಮುರುಗೇಶ ನಿರಾಣಿ ಮಾತನಾಡಿ, ಯಾವದೇ ಸಂತ ಮಹನೀಯರನ್ನು ಜಾತಿಗೆ ಸೀಮಿತವಾಗಿ ನೋಡಬಾರದು. ಅವರೆಲ್ಲ ವಯಕ್ತಿಕ ಬದುಕು ಬಿಟ್ಟು ಸಮಾಜಕ್ಕಾಗಿ ಬದುಕಿದವರು ಎಂದರು. ರಾಣಿ ಚನ್ನಮ್ಮಳ ಆದರ್ಶ ಇಂದಿಗೂ ಮಾದರಿಯಾಗಿವೆಯೆಂದರು.
ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಮಾತನಾಡಿ, ಸಾರ್ವಜನಿಕವಾಗಿ ಬದುಕಿದವರು ತ್ಯಾಗ ಬಲಿದಾನ ಮೂಲಕ ಇಂದಿಗೂ ಮರೆಯಾಗದ ಮಾಣಿಕ್ಯರಾಗಿ ಮಿಂಚುವಲ್ಲಿ ಕಾರಣರಾಗಿದ್ದಾರೆ. ಮಹಿಳೆ ಸಬಲೆಯೆಂದು ತೋರಿಸಿಕೊಟ್ಟು ಆಂಗ್ಲರ ವಿರುದ್ಧ ಹೋರಾಡಿ ಕ್ರಾಂತಿಯ ಕಿಚ್ಚು ಹಚ್ಚಿದ ಮಹಾನ್ ನಾಯಕಿ ಚೆನ್ನಮ್ಮ ಎಂದರು.
ಆಲಗೂರ ಜಮಖಂಡಿ ಪಂಚಮಸಾಲಿ ಜಗದ್ಗುರು ಪೀಠದ ಡಾ. ಮಹಾದೇವೇಶ್ವರ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ಕುಂಚನೂರ ಜಕ್ಕನೂರ ಕಮರಿಮಠದ ಸಿದ್ಧಲಿಂಗ ದೇವರು ಉಪಸ್ಥಿತಿ ವಹಿಸಿದ್ದರು.
ಸಿದ್ದು ಕೊಣ್ಣೂರ, ಭೀಮಶಿ ಮಗದುಮ್, ಸಂಗಮೇಶ ನಿರಾಣಿ, ಶ್ರೀಶೈಲ ದಲಾಲ, ಬಾಬಾಗೌಡ ಪಾಟೀಲ, ಯಮನಪ್ಪ ಕಂಚು, ಭೀಮು ಹಿಪ್ಪರಗಿ, ಗಾಯತ್ರಿ ಆಡಬಸಪ್ಪಗೋಳ, ಮಹೇಶ ಚನ್ನಂಗಿ, ಪುಂಡಲೀಕ ಪಾಲಭಾಂವಿ, ವಿದ್ಯಾಧರ ಸವದಿ, ಸಿದ್ಧನಗೌಡ ಪಾಟೀಲ, ಧರೆಪ್ಪ ಸಾಂಗ್ಲಿಕರ, ಬಾಲು ನಂದೆಪಪನವರ, ಹಣಮಂತ ಪಾಟೀಲ, ಲಕ್ಕಪ್ಪ ಪಾಟೀಲ, ಆನಂದ ಕಂಪು, ಶೇಖರ ನೀಲಕಂಠ, ಈರಪ್ಪ ಬಿದರಿ, ಸಿದ್ದು ಗುಂಡಿ, ಶಿವಯ್ಯ ಹಿರೇಮಠ, ಮಹಾದೇವ ಮಾರಾಪುರ, ಈಶ್ವರ ಯಲ್ಲಟ್ಟಿ, ಕಾಶಪ್ಪ ನಾಯಕ, ಹನಮಂತ ಬರಗಾಲ, ದುಂಡಪ್ಪ ಪಟ್ಟಣಶೆಟ್ಟಿ, ಯೋಗಪ್ಪ ಸವದಿ ಸೇರಿದಂತೆ ಅನೇಕರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಬಕವಿ-ಬನಹಟ್ಟಿ: ಸಚಿವರಿಂದ ಬೇಡಿಕೆ ಈಡೇರಿಸುವ ಭರವಸೆ… ತಿಂಗಳ ಬಳಿಕ ನೇಕಾರರ ಹೋರಾಟ ಅಂತ್ಯ
K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ
Politicss; 1008 ಸಾಧುಸಂತರ ಪಾದಪೂಜೆ ಮೂಲಕ ಕ್ರಾಂತಿವೀರ ಬ್ರಿಗೇಡ್ ಗೆ ಚಾಲನೆ: ಈಶ್ವರಪ್ಪ
India: ಒಂದು ದೇಶ ಒಂದು ಚುನಾವಣೆ ಜಾರಿ ಆಗಲಿ: ಪೇಜಾವರ ಸ್ವಾಮೀಜಿ
Rabkavi Banahatti: ಲೋಕ ಅದಾಲತ್ ನಲ್ಲಿ ಒಂದಾದ ದಂಪತಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.