ಪಿಯುಸಿಯಲ್ಲಿ ರಾಜ್ಯಕ್ಕೆ 12ನೇ, ಬಾಗಲಕೋಟೆ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ನೇಕಾರನ ಮಗ ಚೇತನ್
Team Udayavani, Jul 15, 2020, 12:51 PM IST
ಬನಹಟ್ಟಿ: ಚಿಕ್ಕದಾದ ಮನೆ, ಅದರಲ್ಲೂ ಮಗ್ಗಗಳ ಸಪ್ಪಳದಲ್ಲಿ ಓದಲು ಸಾಧ್ಯವಾಗುತ್ತಿರಲಿಲ್ಲ. ಕಾಲೇಜಿನ ಒಂದು ಕೋಣೆಯಲ್ಲಿ ಸಂಜೆಯವರೆಗೆ ಓದುಲು ಉಪನ್ಯಾಸಕರು ನನಗೆ ಅನುಕೂಲ ಮಾಡಿಕೊಟ್ಟಿದ್ದರು. ಮತ್ತೆ ಮನೆಗೆ ಬಂದು ಮಧ್ಯ ರಾತ್ರಿಯವರೆಗೆ ಓದುತ್ತಿದ್ದೆ. ಸತತ ಓದು ಸಾಧನೆ ಮಾಡಲು ಸಾಧ್ಯವಾಯಿತು ಎಂದು ರಾಜ್ಯಕ್ಕೆ ಹನ್ನೆರಡನೆ ಮತ್ತು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಚೇತನ ಕಾಡಪ್ಪ ಸಿದ್ದಾಪುರ ಹೇಳಿದರು.
ಮಂಗಳವಾರ ಪಿಯುಸಿ ಫಲಿತಾಂಶ ಪ್ರಕಟಗೊಂಡ ನಂತರ ಚೇತನ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಉದಯವಾಣಿ ಪತ್ರಿಕೆಯ ಜೊತೆಗೆ ಮಾತನಾಡಿದರು.
ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲ್ಲೂಕಿನ ಶಿಕ್ಷಣ ಸಂಘದ ಎಸ್‌ಆರ್‌ಎ ವಿಜ್ಞಾನ ವಿಭಾಗದ ವಿದ್ಯಾರ್ಥಿ ಚೇತನ ಸಿದ್ದಾಪುರ ಪಿಯುಸಿ ದ್ವಿತೀಯ ವರ್ಷದ ಪರೀಕ್ಷೆಯಲ್ಲಿ 600 ಕ್ಕೆ 585 ಅಂಕಗಳನ್ನು ಪಡೆದುಕೊಂಡಿದ್ದಾರೆ. ಕನ್ನಡ: 99, ಇಂಗ್ಲಿಷ್: 90, ಭೌತ ವಿಜ್ಞಾನ: 99, ರಸಾಯನ ವಿಜ್ಞಾನ: 89, ಗಣಿತ: 99 ಮತ್ತು ಜೀವ ವಿಜ್ಞಾನದಲ್ಲಿ 100 ಅಂಕಗಳನ್ನು ಪಡೆದುಕೊಂಡಿದ್ದಾರೆ.
ಚೇತನ್ ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ 625ಕ್ಕೆ 608 ಅಂಕಗಳನ್ನು ಪಡೆದುಕೊಂಡು ಶಾಲೆಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದರು. ಪಿಯುಸಿಯಲ್ಲೂ ಕೂಡಾ ಮತ್ತೆ ಪ್ರಥಮ ಸ್ಥಾನ ಪಡೆದುಕೊಂಡಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಗಣಿತ ಉಪನ್ಯಾಸಕ ಪ್ರೊ.ಬಿ.ನಾಗರಾಜ ತಿಳಿಸಿದರು.
ಚೇತನರ ತಂದೆ ಕಾಡಪ್ಪ ಮನೆಯಲ್ಲಿ ಎರಡು ಸ್ವಂತ ಮಗ್ಗಗಳನ್ನು ನಡೆಸುತ್ತಿದ್ದಾರೆ. ಮನೆಯಲ್ಲಿ ಬಡತನ ಪರಿಸ್ಥಿತಿ. ಅದರಲ್ಲೂ ಕೋವಿಡ್-19 ಸಂದರ್ಭದಲ್ಲಿ ಮೂರು ತಿಂಗಳಿಂದ ಮಗ್ಗದ ಚಕ್ರಗಳು ತಿರುಗಿಲ್ಲ. ಆದರೂ ಕಾಲೇಜಿನವರು ಚೇತನಗೆ ಯಾವುದೆ ರೀತಿಯ ಫೀಯನ್ನು ತೆಗೆದುಕೊಳ್ಳದೆ, ಓದಲು ಸಾಕಷ್ಟು ಪ್ರಮಾಣದಲ್ಲಿ ಪುಸ್ತಕಗಳನ್ನು ಕೂಡಾ ನೀಡಿದ್ದರು.
ಈಗ ಚೇತನ್ ಎಸ್‌ಆರ್‌ಎ ವಿಜ್ಞಾನ ವಿಭಾಗದ ಉಪನ್ಯಾಸಕರ ಸಹಾಯದಿಂದ ಬೊಗಸೆ ತುಂಬ ಅಂಕಗಳನ್ನು ಪಡೆದುಕೊಂಡಿದ್ದಾರೆ. ಮುಂದೆ ಮೆಡಿಕಲ್ ಓದಲು ಇಷ್ಟ ಪಟ್ಟಿರುವ ಚೇತನ್ ಸದ್ಯ ಸಿಇಟಿ ಮತ್ತು ನೀಟ್ ಪರೀಕ್ಷೆಯತ್ತ ತಮ್ಮ ಗಮನ ನೀಡಿದ್ದಾರೆ.
ನಾವು ಓದಿದ್ದು ಕಡಿಮೆರಿ. ಚೇತನನ ಪ್ರಯತ್ನ ಬಹಳ ದೊಡ್ಡದರಿ. ಎಲ್ಲಕ್ಕಿಂತ ಮುಖ್ಯವಾಗಿ ಅವನ ಕಾಲೇಜಿನ ಉಪನ್ಯಾಸಕರ ಬಹಳ ಸಹಾಯ ಮಾಡಿದಿರಿ ಎಂದು ತಾಯಿ ವಿಜಯಲಕ್ಷ್ಮಿ ಸಂತಸದ ಕಣ್ಣೀರು ಹಾಕುತ್ತ ಉದಯವಾಣಿ ಪತ್ರಿಕೆಗೆ ತಿಳಿಸಿದರು.
ಫಲಿತಾಂಶ ತೃಪ್ತಿ ತಂದಿದೆ, ಮುಂದೆ ವೈದ್ಯಕೀಯ ಮಾಡುವ ಆಸೆ. ನಿತ್ಯ 5 ರಿಂದ 7 ಗಂಟೆಗಳ ಕಾಲ ಅಭ್ಯಾಸ, ಅಭ್ಯಾಸಕ್ಕಾಗಿ ರಾತ್ರಿ ಸಮಯ ಮೀಸಲಿಟ್ಟುಕೊಂಡಿದ್ದೆ ಸತತ ಹಾಗೂ ಕಠಿಣ ಅಭ್ಯಾಸದ ಪರಿಣಾಮ ಉತ್ತಮ ಅಂಕ ದೊರಕಿದೆ. ಅಧ್ಯಯನಕ್ಕಾಗಿ ಪಠ್ಯಪುಸ್ತಕಕ್ಕೆ ಹೆಚ್ಚಿನ ಆಧ್ಯತೆ ನೀಡುತ್ತಿದ್ದೆ, ಸ್ನೇಹಿತರ ಜೊತೆ ವಿಷಯ ಚರ್ಚೆ ಮಾಡುವುದರ ಮೂಲಕ ಅಭ್ಯಾಸಕ್ಕೆ ನೆರವಾಯಿತು. ಬಿಡುವಿನ ಸಮಯದಲ್ಲಿ ಮನೆಯಲ್ಲಿ ನೇಕಾರಿಕೆಗೆ ಕೈ ಜೋಡಿಸುವ ಜೊತೆಗೆ ಪರಿಶ್ರಮ ಅಧ್ಯಯನ ನಡೆಸಿದ್ದೇನೆ. ಎಲ್ಲ ಉಪನ್ಯಾಸಕರ ಮತ್ತು ತಂದೆ ತಾಯಿ ಸಹೋದರಿ ಪ್ರೇರಣೆಯಿಂದ ಉತ್ತಮ ಅಂಕ ಗಳಿಸಲು ಸಹಕಾರವಾಯಿತು ಎನ್ನುತ್ತಾನೆ ವಿದ್ಯಾರ್ಥಿ ಚೇತನ ಕಾಡಪ್ಪ ಸಿದ್ದಾಪೂರ.
ಕಿರಣ ಶ್ರೀಶೈಲ ಆಳಗಿ, ಬನಹಟ್ಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bagalkot : ಸಕಲ ಸರ್ಕಾರಿ ಗೌರವಗಳೊಂದಿಗೆ ಯೋಧ ಮಹೇಶ್ ಮರೆಗೊಂಡ ಅಂತ್ಯಸಂಸ್ಕಾರ
ಪತ್ನಿ ಊರಿನತ್ತ ಪ್ರಯಾಣ ಬೆಳೆಸಿದರೆ… ಸಾವಿನ ಮನೆಯ ಕದ ತಟ್ಟಿದ ಯೋಧ ನಾಗಪ್ಪ ಮರೆಗೊಂಡ
Mahalingpur: ಇಂದು ಮೃತ ಯೋಧ ಮಹೇಶ ಅಂತ್ಯಕ್ರಿಯೆ; ಯೋಧನ ಮನೆಗೆ ಸಚಿವ ತಿಮ್ಮಾಪುರ ಭೇಟಿ
Mudhola: ಸಿಲಿಂಡರ್ ಸ್ಫೋಟ: ಹೊತ್ತಿ ಉರಿದ ಮನೆ
Banahatti: ತಾಂತ್ರಿಕ ಸೌಲಭ್ಯಗಳನ್ನು ನೀಡುವ ನಿಟ್ಟಿನಲ್ಲಿ ಬದ್ಧಳಾಗಿದ್ದೇನೆ: ಉಮಾಶ್ರೀ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ
Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ
KMF: ಸಂಕ್ರಾಂತಿ ಬಳಿಕ ಹಾಲಿನ ದರ ಪರಿಷ್ಕರಣೆ ಸರಕಾರದಿಂದ ನಿರ್ಧಾರ: ಭೀಮಾ ನಾಯ್ಕ
Accidental Prime Minister: ದ ಮೇಕಿಂಗ್ ಆ್ಯಂಡ್ ಅನ್‌ಮೇಕಿಂಗ್ ಆಫ್ ಡಾ.ಸಿಂಗ್
Mangaluru: ವಿಚ್ಛೇದಿತ ಮಹಿಳೆಯನ್ನು ಹಿಂಬಾಲಿಸಿದ ಇಬ್ಬರು ವಶಕ್ಕೆ; ಪ್ರಕರಣ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.